DMK -Congress: ರಾಜ್ಯಸಭಾ ಉಪಚುನಾವಣೆ: ಮೈತ್ರಿ ಪಕ್ಷ ಕಾಂಗ್ರೆಸ್​ಗೆ ಇಲ್ಲ ಅವಕಾಶ​; ಅಭ್ಯರ್ಥಿಗಳ ಘೋಷಿಸಿದ ಡಿಎಂಕೆ

ಡಿಎಂಕೆ ಪಕ್ಷದ ಮೂಲಗಳು ಸಿಎನ್ ಎನ್ ನ್ಯೂಸ್ 18 ಗೆ ಹೇಳುವಂತೆ ಇದು ಉಪ ಚುನಾವಣೆ ಮತ್ತು ಎರಡು ಪಕ್ಷಗಳ ನಡುವೆ ಸೀಟು ಹಂಚಿಕೊಳ್ಳಲು ಯಾವುದೇ ಒಪ್ಪಂದವಾಗಿಲ್ಲ. ಮುಂದೆ ಅಂದರೆ ಕಾಂಗ್ರೆಸ್ ಡಿಎಂಕೆ ಮೈತ್ರಿ ಲೋಕಸಭೆ (Lok Sabha) ಹಾಗೂ ವಿಧಾನಸಭೆ ಚುನಾವಣೆಗಳಿಗೆ ಮಾತ್ರ ಎಂದು ಮೂಲಗಳು ತಿಳಿಸಿವೆ.

ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್​

ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್​

  • Share this:
    ಮುಂಬರುವ ರಾಜ್ಯಸಭಾ (Rajya Sabha) ಉಪಚುನಾವಣೆಗೆ ಡಿಎಂಕೆ ಪಕ್ಷವು (DMK party) ಅಕ್ಟೋಬರ್ 4 ರಂದು ತನ್ನ ಇಬ್ಬರು ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಬೆಳವಣಿಗೆಯಿಂದ ಗುಲಾಂ ನಬಿ ಆಜಾದ್ ಅಥವಾ ಪ್ರವೀಣ್ ಚಕ್ರವರ್ತಿ (Ghulam Nabi Azad or Praveen Chakravarty) ಅವರನ್ನು ಕಣಕ್ಕಿಳಿಸಲಾಗುವುದು ಎನ್ನುವ ಊಹಾಪೋಹಗಳಿಗೆ ತೆರೆಬಿದ್ದಿದ್ದು. ಸಂದಿಗ್ಧತೆಗೆ ಸಿಲುಕಿದ್ದ ಕಾಂಗ್ರೆಸ್‌ ಪಕ್ಷಕ್ಕೆ ತನ್ನ ಮಿತ್ರ ಪಕ್ಷದಿಂದ ನಿರಾಸೆಯಾಗಿದ್ದು ಚುನಾವಣೆಗೂ ಮೊದಲೆ ಸ್ಪರ್ದೆಯಿಂದ ಹೊರ ಬಿದ್ದಿದೆ.

    ಅಭ್ಯರ್ಥಿಗಳಲ್ಲಿ ಒಬ್ಬರು ಕೇಂದ್ರದ ಮಾಜಿ ಸಚಿವ ಎನ್​ವಿಎನ್​ ಸೋಮು ಅವರ ಮಗಳು ಕನಿಮೊಳಿ ಸೋಮು (Kanimozhi Somu) ಮತ್ತು ಪಕ್ಷದ ನಾಮಕ್ಕಲ್-ಪೂರ್ವ ಜಿಲ್ಲಾ ಘಟಕದ ಕಾರ್ಯದರ್ಶಿ ಕೆಆರ್ ಎನ್ ರಾಜೇಶ್​ ಕುಮಾರ್ (KRN Rajeshkumar)​ ಅವರನ್ನು ಕಣಕ್ಕೆ ಇಳಿಸಿದೆ.

    ಒಂದು ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂದು ಕಾಂಗ್ರೆಸ್ ಅನ್ನು ಕೇಳಲಾಗುತ್ತದೆ ಎನ್ನುವ ಚರ್ಚೆ ಮುನ್ನೆಲೆಗೆ ಬಂದಿತ್ತು.


    ಡಿಎಂಕೆ ಪಕ್ಷದ ಮೂಲಗಳು ಸಿಎನ್ ಎನ್ ನ್ಯೂಸ್ 18 ಗೆ ಹೇಳುವಂತೆ ಇದು ಉಪ ಚುನಾವಣೆ ಮತ್ತು ಎರಡು ಪಕ್ಷಗಳ ನಡುವೆ ಸೀಟು ಹಂಚಿಕೊಳ್ಳಲು ಯಾವುದೇ ಒಪ್ಪಂದವಾಗಿಲ್ಲ. ಮುಂದೆ ಅಂದರೆ ಕಾಂಗ್ರೆಸ್ ಡಿಎಂಕೆ ಮೈತ್ರಿ ಲೋಕಸಭೆ (Lok Sabha) ಹಾಗೂ ವಿಧಾನಸಭೆ ಚುನಾವಣೆಗಳಿಗೆ ಮಾತ್ರ ಎಂದು ಮೂಲಗಳು ತಿಳಿಸಿವೆ.

    ಇಬ್ಬರು ಎಐಎಡಿಎಂಕೆ (AIADMK) ಸಂಸದರಾದ ಕೆಪಿ ಮುನುಸಾಮಿ ಮತ್ತು ಆರ್ ವೈತಿಲಿಂಗಂ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರು, ಹೀಗಾಗಿ ಈ ಹುದ್ದೆಗಳನ್ನು ತೆರವಾಗಿದ್ದವು. ಆದ ಕಾರಣ ಈ ಉಪಚುನಾವಣೆ ನಡೆಯುತ್ತಿದೆ.
    ತಮಿಳುನಾಡು ವಿಧಾನಸಭೆಯು 234 ಸ್ಥಾನಗಳನ್ನು ಹೊಂದಿದೆ, ಇವುಗಳಲ್ಲಿ 125 ರಲ್ಲಿ ಆಡಳಿತಾರೂಡ DMK ಡಿಎಂಕೆ ಪಕ್ಷ ಗೆದ್ದು ಆಡಳಿತ ನಡೆಸುತ್ತಿದೆ, 18 ಕಾಂಗ್ರೆಸ್ ಮತ್ತು 65 ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆ ಹೊಂದಿದೆ.


    ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್​ ಮತ್ತು ಡಿಎಂಕೆ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದವು. ತಮಿಳುನಾಡಿನಲ್ಲಿ ಅಧಿಕಾರ ಹಿಡಿದ ಈ ಮೈತ್ರಿಯು ಮುಂದಿನ ಲೋಕಸಭಾ ಚುನಾವಣೆಗೂ ಸಹ ಮುಂದುವರೆಯಲಿದೆ ಎಂದು ಎರಡೂ ಪಕ್ಷದ ಮೂಲಗಳು ಹೇಳಿವೆ.




    ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ಸಾಕಷ್ಟು ಪ್ರಮುಖ ಪಾತ್ರ ವಹಿಸಲಿದೆ. ಅಟಲ್​ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಹೊತ್ತಿನಲ್ಲಿ ಎಐಡಿಎಂಕೆ ಪಕ್ಷದ ನಾಯಕಿಯಾಗಿದ್ದ ಜಯಲಲಿತಾ ಅವರು ಕೇಂದ್ರ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿ ಸರ್ಕಾರ ಒಂದಷ್ಟು ದಿನಗಳ ಕಾಲ ಸುಭದ್ರವಾಗಿರುವಂತೆ ನೋಡಿಕೊಂಡಿದ್ದರು.








    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.


    Published by:HR Ramesh
    First published: