HOME » NEWS » National-international » NO SCIENTIFIC WAY TO FIND OUT IF VACCINES WERE FAKE OR NOT KVD

ನಕಲಿ ವ್ಯಾಕ್ಸಿನೇಷನ್ ಹಗರಣ: ಲಸಿಕೆ ನಕಲಿಯೇ ಎಂದು ಕಂಡು ಹಿಡಿಯಲು ವೈಜ್ಞಾನಿಕ ವಿಧಾನವೇ ಇಲ್ಲ!

390ಕ್ಕೂ ಹೆಚ್ಚು ಮಂದಿಗೆ ನೀಡಿರುವ ಲಸಿಕೆ ಅಸಲಿಯೋ, ನಕಲಿಯೋ ಎಂದು ತಿಳಿಯಲು ಸಾಧ್ಯವಿಲ್ಲ ಎಂಬ ಕಾರ್ಯದರ್ಶಿ ಪ್ರದೀಪ್​ ವೈಸಾ ಹೇಳಿಕೆ ಅಚ್ಚರಿ ಮೂಡಿಸಿದೆ.

Kavya V | news18-kannada
Updated:June 22, 2021, 3:46 PM IST
ನಕಲಿ ವ್ಯಾಕ್ಸಿನೇಷನ್ ಹಗರಣ: ಲಸಿಕೆ ನಕಲಿಯೇ ಎಂದು ಕಂಡು ಹಿಡಿಯಲು ವೈಜ್ಞಾನಿಕ ವಿಧಾನವೇ ಇಲ್ಲ!
ಸಾಂದರ್ಭಿಕ ಚಿತ್ರ
  • Share this:
ಮುಂಬೈ: ಹೌಸಿಂಗ್​ ಸೊಸೈಟಿಯಲ್ಲಿ ಆಯೋಜಿಸಿದ್ದ ನಕಲಿ ಲಸಿಕಾ ಶಿಬಿರ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ಆರೋಗ್ಯ ಇಲಾಖೆ ಕಾರ್ಯದರ್ಶಿ ಲಸಿಕೆ ನಕಲಿಯೇ ಎಂದು ತಿಳಿಯಲು ನಮ್ಮ ಬಳಿ ವೈಜ್ಞಾನಿಕ ವಿಧಾನವೇ ಇಲ್ಲ ಎಂದಿದ್ದಾರೆ. 390ಕ್ಕೂ ಹೆಚ್ಚು ಮಂದಿಗೆ ನೀಡಿರುವ ಲಸಿಕೆ ಅಸಲಿಯೋ, ನಕಲಿಯೋ ಎಂದು ತಿಳಿಯಲು ಸಾಧ್ಯವಿಲ್ಲ ಎಂಬ ಕಾರ್ಯದರ್ಶಿ ಪ್ರದೀಪ್​ ವೈಸಾ ಹೇಳಿಕೆ ಅಚ್ಚರಿ ಮೂಡಿಸಿದೆ. ಇತ್ತೀಚೆಗೆ ಮುಂಬೈ ಕಾನ್ಡಿವೇಲಿ ಪ್ರದೇಶದಲ್ಲಿರುವ ಹೌಸಿಂಗ್ ಸೊಸೈಟಿ ನಿವಾಸಿಗಳಿಗೆ ನಕಲಿ ಕೊರೊನಾ ಲಸಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ  3 ಎಫ್​ಐಆರ್​ಗಳು ದಾಖಲಾಗಿವೆ.

ಈ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರದೀಪ್​​ ವೈಸಾ, ಸ್ಥಳೀಯರಿಗೆ ನೀಡಿರುವ ಲಸಿಕೆ ಅಸಲಿಯೋ ನಕಲಿಯೋ ತಿಳಿಯುವುದು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಸೆರೋ ಸರ್ವೇ ಮಾಡಲಾಗುವುದು ಆದರೆ ಸೆರೋ ಸರ್ವೆಯಿಂದ ಲಸಿಕೆ ಅಸಲಿತನ ಸಾಬೀತಾಗದು. ಅಸಲಿ ಲಸಿಕೆ ಪಡೆದಿದ್ದಲ್ಲಿ ದೇಹದಲ್ಲಿ ಆ್ಯಂಟಿಬಾಡಿಗಳು ಇರಬೇಕು. ಆದರೆ ಕೊರೊನಾದಿಂದ ಗುಣಮುಖರಾದವರಲ್ಲೂ ಆ್ಯಂಟಿಬಾಡಿಗಳು ಉತ್ಪತಿಯಾಗಿರುತ್ತದೆ. ಹೀಗಾಗಿ ಆರೋಪಿಗಳ ವಿಚಾರಣೆಯಿಂದಷ್ಟೇ ಸತ್ಯ ಹೊರ ಬರಬೇಕಿದೆ ಎಂದಿದ್ದಾರೆ.

ಕೊರೊನಾ ಲಸಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಮಧ್ಯಪ್ರದೇಶದ ಕರೀಮ್ ಎಂಬುವವರು ಈ ನಕಲಿ ಲಸಿಕೆಯ ಪ್ರಮುಖ ಆರೋಪಿಯಾಗಿದ್ದು ಈತ ಲಸಿಕೆ ಸರಬರಾಜು ಮಾಡಿರುವ ಗುಮಾನಿಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈತ ನೀಡಿದ ಮಾಹಿತಿ ಮೇರೆಗೆ ಇತರ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಮೇ 30 ರಂದು ಮುಂಬೈನ ಹಿರಾನಂದಾನಿ ಸಮುಚ್ಚಯದಲ್ಲಿ 390 ಮಂದಿಗೆ ಲಸಿಕೆ ಹಾಕಲಾಗಿದ್ದು, ಲಸಿಕೆ ಪಡೆದವರಿಗೆ ಯಾವ ಕಂಪೆನಿಯ ವ್ಯಾಕ್ಸಿನ್ ನೀಡಲಾಗಿದೆ, ಯಾವ ಆಸ್ಪತ್ರೆಯಿಂದ ಹಾಕಲಾಗಿದೆ. ಲಸಿಕೆಯ ಅವಧಿ ಏನು ಎಂಬುದರ ಬಗ್ಗೆ ಯಾವುದೇ ಮಾಹಿತಿ ಸಿಗದಿರುವುದರಿಂದ ಇದೊಂದು ನಕಲಿ ಲಸಿಕೆ ಜಾಲ ಎಂದು ತಿಳಿದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಕಲಿ ಲಸಿಕೆ ಶಿಬಿರಗಳು 9 ಕಡೆ ನಡೆಸಿದ್ದರೂ ಪೊಲೀಸರು ಕೇವಲ 3 ಎಫ್​ಐಆರ್​ಗಳನ್ನು ಮಾತ್ರ ದಾಖಲಿಸಿದ್ದಾರೆ. ನಾಲ್ವರು ಬಂಧಿಸಿದ್ದರು, ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: Kavya V
First published: June 22, 2021, 3:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories