ಸತತ 12 ವರ್ಷಗಳಿಂದ ತಮ್ಮ ವೇತನ ಹೆಚ್ಚಿಸಿಕೊಳ್ಳದ ಮುಕೇಶ್​ ಅಂಬಾನಿ; ಕಾರಣವೇನು ಗೊತ್ತೆ?

ಮುಕೇಶ್​​ ಅಂಬಾನಿ 2008ರಿಂದಲೂ ತಮ್ಮ ವೇತನವನ್ನು ಹೆಚ್ಚಿಕೊಂಡಿಲ್ಲ. ಸುಮಾರು 12 ವರ್ಷಗಳಿಂದಲೂ ಇವರ ವಾರ್ಷಿಕ ವೇತನ ಆದಾಯ 15 ಕೋಟಿ. ರೂ ಇದೆ. ಇವರು ಪ್ರತೀ ವರ್ಷ ತಮ್ಮ ವೇತನವನ್ನಿ ಹೆಚ್ಚಿಸಿಕೊಂಡಿದ್ದರೆ ಇಂದಿಗೆ 24 ಕೋಟಿ ರೂ.ಗಳಷ್ಟು ವಾರ್ಷಿಕ ವೇತನ ಪಡೆಯುತ್ತಿದ್ದರು.

ಮುಕೇಶ್ ಅಂಬಾನಿ.

ಮುಕೇಶ್ ಅಂಬಾನಿ.

 • Share this:
  ನವದೆಹಲಿ(ಜೂ.24): ಭಾರತವನ್ನು ಮಾರಕ ಕೊರೋನಾ ವೈರಸ್​​ ಬೆಂಬಿಡದೇ ಕಾಡುತ್ತಿದೆ. ಇದರಿಂದ ದೇಶದ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಹೀಗಾಗಿ ಹೋಟೆಲ್​​​, ಎಂಎನ್​​ಸಿ ಕಂಪನಿಗಳು, ಟಿಲಿಕಾಂ ಸೇರಿದಂತೆ ಎಲ್ಲಾ ವಲಯದ ಕಂಪನಿಗಳು ಭಾರೀ ನಷ್ಟಕ್ಕೊಳಗಾಗಿವೆ. ಇದರಿಂದ ದೇಶದ ಆರ್ಥಿಕತೆ ಕುಸಿತವಾಗಿದೆ. ಹೀಗಿರುವಾಗ ಭಾರತದ ಅತೀ ಶ್ರೀಮಂತ ವ್ಯಕ್ತಿ, ರಿಲಯನ್ಸ್​ ಇಂಡಸ್ಟ್ರೀಸ್​​ನ ಅಧ್ಯಕ್ಷ ಮುಕೇಶ್​ ಅಂಬಾನಿ ಸತತ 12ನೇ ವರ್ಷದಲ್ಲಿಯೂ ತಮ್ಮ ವೇತನ ಹೆಚ್ಚಿಸಿಕೊಂಡಿಲ್ಲ.

  ಹೌದು, ಮುಕೇಶ್​​ ಅಂಬಾನಿ 2008ರಿಂದಲೂ ತಮ್ಮ ವೇತನವನ್ನು ಹೆಚ್ಚಿಕೊಂಡಿಲ್ಲ. ಸುಮಾರು 12 ವರ್ಷಗಳಿಂದಲೂ ಇವರ ವಾರ್ಷಿಕ ವೇತನ ಆದಾಯ 15 ಕೋಟಿ. ರೂ ಇದೆ. ಇವರು ಪ್ರತೀ ವರ್ಷ ತಮ್ಮ ವೇತನವನ್ನಿ ಹೆಚ್ಚಿಸಿಕೊಂಡಿದ್ದರೆ ಇಂದಿಗೆ 24 ಕೋಟಿ ರೂ.ಗಳಷ್ಟು ವಾರ್ಷಿಕ ವೇತನ ಪಡೆಯುತ್ತಿದ್ದರು. ಆದರೆ, ಭಾರತದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ವೇತನ ಹೆಚ್ಚಿಸಿಕೊಂಡಿಲ್ಲ. ಬದಲಿಗೆ ತಮ್ಮ ವೇತನದಲ್ಲಿ ಕೊರೋನಾ ವಿರುದ್ಧದ ಹೋರಾಟಕ್ಕೆ ನೆರವು ನೀಡುತ್ತಿದ್ದಾರೆ.

  ಅಷ್ಟೇ ಅಲ್ಲದೇ, ಏಪ್ರಿಲ್​ 1 ರಿಂದ ಅನ್ವಯವಾಗುವಂತೆ ರಿಲಯನ್ಸ್​ ಕಂಪನಿಯ ನಿರ್ದೇಶಕರು, ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಹಿರಿಯ ನಾಯಕತ್ವದ ಸ್ಥಾನದಲ್ಲಿರುವವರು ತಮ್ಮ ವೇತನದಲ್ಲಿ ಶೇ.30-50 ರಷ್ಟು ನೀಡಲು ಮುಂದಾಗಿದ್ದಾರೆ.

  ನೇರ ರೈಲು ಮಾರ್ಗಕ್ಕೆ ವರ್ಷಾಂತ್ಯದಳೊಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭ; ಚಿತ್ರದುರ್ಗ ಡಿಸಿ ವಿನೋತ್ ಪ್ರಿಯಾ

  ಈ ಹಿಂದೆಯೇ ಮಹಾರಾಷ್ಟ್ರ ಸಿಎಂ ಪರಿಹಾರ ನಿಧಿಗೆ ಮುಕೇಶ್ ಅಂಬಾನಿ ಐದು ಕೋಟಿ ರೂ. ಸಹಾಯ ಧನ ನೀಡಿದ್ದರು. ಇದರ ಬೆನ್ನಲ್ಲೇ ಮುಂಬೈ ಮಹಾನಗರ ಪಾಲಿಕೆಯ ನೆರವಿನೊಂದಿಗೆ ಹೆಚ್.ಎನ್​​ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯನ್ನು ನಿರ್ಮಿಸಿದರು. ಮುಂಬೈನ ಸೆವೆನ್ ಹಿಲ್ಸ್ ಏರಿಯಾದಲ್ಲಿ ಕೇವಲ ಎರಡು ವಾರದ ಸಮಯದಲ್ಲೇ ಆಸ್ಪತ್ರೆಯೊಂದನ್ನು ನಿರ್ಮಿಸುವ ಮೂಲಕ ಕೊರೋನಾ ವೈರಸ್ ವಿರುದ್ಧದ ಭಾರತದ ಹೋರಾಟಕ್ಕೆ ಖ್ಯಾತ ಉದ್ಯಮಿ ಮುಕೇಶ್​ ಅಂಬಾನಿ ಕೈ ಜೋಡಿಸಿದ್ದಾರೆ.

  ಈ ವಿಶೇಷ ಆಸ್ಪತ್ರೆ ಒಟ್ಟು 200 ಬೆಡ್ ಗಳ ಸಾಮರ್ಥ್ಯ ಹೊಂದಿದೆ. ಅಲ್ಲದೆ ನೆಗೆಟಿವ್ ಪ್ರೆಶರ್ ಕೊಠಡಿಯಂತಹ ಸೌಲಭ್ಯವೂ ಇದೆ. ಇದರೊಂದಿಗೆ ರಿಲಯನ್ಸ್ ಅಗತ್ಯವಿರುವ ಮಾಸ್ಕ್​​ಗಳ ತಯಾರಿಕೆಯಲ್ಲಿ ಕೂಡಾ ತೊಡಗಿಕೊಂಡಿದೆ. ಪ್ರತಿದಿನ ಒಂದು ಲಕ್ಷಕ್ಕೂ ಅಧಿಕ ಮಾಸ್ಕ್ ತಯಾರಿಸುವ ಕಾಯಕವನ್ನು ಈ ಸಂಸ್ಥೆ ಮಾಡುತ್ತಿದೆ.

   
  First published: