ಶ್ರೀನಗರ: ಬಿಜೆಪಿ (BJP) ನೇತೃತ್ವದ ಕೇಂದ್ರ ಸರ್ಕಾರ ಸುಳ್ಳನ್ನು ಹಬ್ಬಿಸುತ್ತಿದೆ. 2016 ರ ಸರ್ಜಿಕಲ್ ಸ್ಟ್ರೈಕ್ ಮತ್ತು 2019 ರ ಪುಲ್ವಾಮಾ (Pulwama) ಭಯೋತ್ಪಾದಕ ದಾಳಿಯ ಬಗ್ಗೆ ಕೇಂದ್ರವು ಸಂಸತ್ತಿನಲ್ಲಿ ಇಲ್ಲಿಯವರೆಗೂ ಯಾವುದೇ ವರದಿಯನ್ನು ಸಲ್ಲಿಸಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ (Senior Congress leader Digvijaya Singh) ಹೇಳಿದ್ದಾರೆ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 2019 ರಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ (Jaish-e-Mohammad) ನಡೆಸಿದ ಭಯೋತ್ಪಾದಕ ದಾಳಿಯಲ್ಲಿ ನಮ್ಮ 40 ಸಿಆರ್ಪಿಎಫ್ (CPRF) ಯೋಧರು ಪುಲ್ವಾಮಾದಲ್ಲಿ ಹುತಾತ್ಮರಾಗಿದ್ದರು.
#WATCH | J&K: They (Centre) talk about surgical strikes and that they have killed so many of them but there is no proof: Congress leader Digvijaya Singh pic.twitter.com/3ovyecOpT9
— ANI (@ANI) January 23, 2023
ಪುಲ್ವಾಮಾ ದಾಳಿ ಬಗ್ಗೆ ಒಂದು ವರದಿನೂ ಸಂಸತ್ತಿನಲ್ಲಿ ಸಲ್ಲಿಸಿಲ್ಲ
ಸಿಆರ್ಪಿಎಫ್ ಅಧಿಕಾರಿಗಳು ಸಿಬ್ಬಂದಿಯನ್ನು ಏರ್ಲಿಫ್ಟ್ ಮಾಡಬೇಕು ಎಂದು ಪ್ರಧಾನಿ ಮೋದಿಗೆ ಮನವಿ ಮಾಡಿದ್ದರು ಆದರೆ ಪ್ರಧಾನಿ ಮೋದಿ ಇದಕ್ಕೆ ಒಪ್ಪಲಿಲ್ಲ. ಇಂತಹ ಅನಾಹುತ ಹೇಗೆ ನಡೆಯಿತು? ಈವರೆಗೆ ಪುಲ್ವಾಮಾ ದಾಳಿಯ ಕುರಿತು ಒಂದೇ ಒಂದು ವರದಿಯನ್ನೂ ಸಂಸತ್ತಿನ ಮುಂದೆ ಇಟ್ಟಿಲ್ಲ ಎಂದು ಕಿಡಿಕಾರಿದರು.
ಸರ್ಜಿಕಲ್ ಸ್ಟ್ರೆಕ್ ಬಗ್ಗೆ ಯಾವುದೇ ಪುರಾವೆ ತೋರಿಸಿಲ್ಲ
ಪುಲ್ವಾಮಾ ದಾಳಿ ಬಳಿಕ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದೆ ಎಂದು ಹೇಳುತ್ತಾರೆ. ಆದರೆ ಅದಕ್ಕೆ ಯಾವುದೇ ಪುರಾವೆಗಳನ್ನೇ ತೋರಿಸಿಲ್ಲ. ಕೇವಲ ಸುಳ್ಳನ್ನು ಹಬ್ಬಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
370 ನೇ ವಿಧಿ ರದ್ದುಗೊಳಿಸಿದ ನಂತರವೂ ಕಾಶ್ಮೀರದಲ್ಲಿ ಭಯೋತ್ಪಾದನೆ ಜೀವಂತ
370 ನೇ ವಿಧಿಯನ್ನು ರದ್ದುಗೊಳಿಸಿದರೂ ಕಣಿವೆಯಲ್ಲಿ ಭಯೋತ್ಪಾದನೆ ಇನ್ನೂ ಜೀವಂತವಾಗಿದೆ ಎಂದು ಪ್ರತಿಪಾದಿಸಿದ ಅವರು, 370ನೇ ವಿಧಿ ರದ್ದಾದ ನಂತರ ಇಲ್ಲಿನ ಪರಿಸ್ಥಿತಿ ಬೆಳಕಿಗೆ ಬರುತ್ತಿಲ್ಲ. ಉದ್ದೇಶಿತ ಹತ್ಯೆ ಹಾಗೂ ಬಾಂಬ್ ಸ್ಫೋಟಗಳು ಮತ್ತೆ ಶುರುವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಮ್ಮುವಿನ ನರ್ವಾಲ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸುತ್ತೇನೆ
ಮೊದಲನೆಯದಾಗಿ, ರಜೌರಿಯ ಧಂಗ್ರಿ ಮತ್ತು ಜಮ್ಮುವಿನ ನರ್ವಾಲ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ನಾನು ಖಂಡಿಸುತ್ತೇವೆ. ಆರ್ಟಿಕಲ್ 370 ರದ್ದಾದ ನಂತರ ಜಮ್ಮು ಕಾಶ್ಮೀರದಲ್ಲಿನ ಪರಿಸ್ಥಿತಿಯನ್ನು ಪ್ರಚಾರ ಮಾಡಲಾಗುತ್ತಿಲ್ಲ. ಉದ್ದೇಶಿತ ಮತ್ತು ಆಯ್ದ ಹತ್ಯೆಗಳು ಮತ್ತು ಬಾಂಬ್ ಸ್ಫೋಟಗಳು ಮತ್ತೊಮ್ಮೆ ಪ್ರಾರಂಭವಾಗಿವೆ ಎಂದು ತಿಳಿಸಿದರು.
ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ದಿಗ್ವಿಜಯ್ ಸಿಂಗ್
ಜಮ್ಮು-ಕಾಶ್ಮೀರದಲ್ಲಿ ನಡೆದ 129 ನೇ ದಿನದ ಭಾರತ್ ಜೋಡೋ ಯಾತ್ರೆಯಲ್ಲಿ ದಿಗ್ವಿಜಯ ಸಿಂಗ್, ಕೆ ಸಿ ವೇಣುಗೋಪಾಲ್, ಜೈರಾಮ್ ರಮೇಶ್, ಜೆ-ಕೆ ಕಾಂಗ್ರೆಸ್ ಮುಖ್ಯಸ್ಥ ವಿಕಾರ್ ರಸೂಲ್ ವಾನಿ, ಅವರ ಹಿಂದಿನ ಜಿಎ ಮಿರ್, ಕಾರ್ಯಾಧ್ಯಕ್ಷ ರಮಣ್ ಭಲ್ಲಾ ಮತ್ತು ಮಾಜಿ ಸಚಿವ ತಾರಿಕ್ ಹಮೀದ್ ಕರ್ರಾ ಪಾಲ್ಗೊಂಡಿದ್ದರು. ಭಾರತ್ ಜೋಡೋ ಯಾತ್ರೆಯು ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭಗೊಂಡು ಜನವರಿ 30 ರಂದು ಶ್ರೀನಗರದಲ್ಲಿ ಅಂತ್ಯಗೊಳ್ಳಲಿದೆ.
2019ರಂದು ಫೆಬ್ರವರಿ 14 ರಂದು ನಡೆದಿದ್ದ ಪುಲ್ವಾಮಾ ದಾಳಿ
2019ರಂದು ಫೆಬ್ರವರಿ 14 ರಂದು, ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭದ್ರತಾ ಸಿಬ್ಬಂದಿಯನ್ನು ಸಾಗಿಸುವ ವಾಹನಕ್ಕೆ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್ಪೊರದಲ್ಲಿ (ಅವಾಂತಿಪೋರಾ ಬಳಿ) ಆತ್ಮಹತ್ಯಾ ಬಾಂಬರ್ ವಾಹನದಿಂದ ದಾಳಿ ಮಾಡಲಾಯಿತು.
ಇದನ್ನೂ ಓದಿ: ಪಾಕ್ ಮೇಲೆ ಭಾರತದ ಸರ್ಜಿಕಲ್ ಸ್ಟ್ರೈಕ್ಗೆ ಜೈಹೋ ಎಂದ ಸೆಲೆಬ್ರಿಟಿಗಳು
ಈ ದಾಳಿಯಿಂದಾಗಿ ಕೇಂದ್ರ ಮೀಸಲು ಪೊಲೀಸ್ ಪಡೆಯ 40 ಮಂದಿ ಯೋಧರು ಹುತಾತ್ಮರಾಗಿದ್ದರು. ದಾಳಿಯ ಜವಾಬ್ದಾರಿಯನ್ನು ಪಾಕಿಸ್ತಾನ ಮೂಲದ ಇಸ್ಲಾಮ್ ಉಗ್ರಗಾಮಿ ಗುಂಪು ಜೈಷ್–ಎ ಮೊಹಮದ್ ಹೊತ್ತುಕೊಂಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ