ಸುಪ್ರೀಂಕೋರ್ಟ್​ನಲ್ಲೂ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂಗಿಲ್ಲ ರಿಲೀಫ್​; ಅ.17ರವರೆಗೂ ಜೈಲೇ ಗತಿ

ಜಾರಿ ನಿರ್ದೇಶನಾಲಯ ಅಕ್ರಮ ಹಣಕಾಸು ವಹಿವಾಟು ಪ್ರಕರಣವನ್ನು 2017ರಲ್ಲಿ ದಾಖಲಿಸಿತ್ತು. ಯಾವುದೇ ಕಾರಣಕ್ಕೂ ಆರೋಪಿಗೆ ಜಾಮೀನು ನೀಡಬಾರದು ಎಂದು ಸಿಬಿಐ ನ್ಯಾಯಾಲಯದಲ್ಲಿ ಬಲವಾಗಿ ವಾದಿಸಿದ ಪರಿಣಾಮ ಚಿದಂಬರಂ ಅವರಿಗೆ ಈವರೆಗೂ ಜಾಮೀನು ಸಿಕ್ಕಿಲ್ಲ.

HR Ramesh | news18-kannada
Updated:October 3, 2019, 4:51 PM IST
ಸುಪ್ರೀಂಕೋರ್ಟ್​ನಲ್ಲೂ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂಗಿಲ್ಲ ರಿಲೀಫ್​; ಅ.17ರವರೆಗೂ ಜೈಲೇ ಗತಿ
ಪಿ.ಚಿದಂಬರಂ
  • Share this:
ನವದೆಹಲಿ: ಐಎನ್​ಎಕ್ಸ್​ ಮೀಡಿಯಾ ಪ್ರಕರಣ ಸಂಬಂಧ ಸೆಪ್ಟೆಂಬರ್ 5ರಿಂದ ನ್ಯಾಯಾಂಗ ಬಂಧನದಲ್ಲಿರುವ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ ಎರಡು ವಾರಗಳ ಕಾಲ ವಿಸ್ತರಿಸಲಾಗಿದೆ. ಹೀಗಾಗಿ ಕಾಂಗ್ರೆಸ್​ ಹಿರಿಯ ಮುಖಂಡ ಅಕ್ಟೋಬರ್​ 17ರವರೆಗೂ ತಿಹಾರ್​ ಜೈಲಿನಲ್ಲೇ ಇರಬೇಕಾಗಿದೆ.

ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಚಿದಂಬರಂ ಅವರು ಗುರುವಾರ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ಇದೇ ಪ್ರಕರಣ ಸಂಬಂಧ ಚಿದಂಬರಂ ಅವರು ಪ್ರಭಾವಿಯಾಗಿರುವ ಕಾರಣ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಲಿದ್ದಾರೆ ಎಂದು ದೆಹಲಿ ಹೈಕೋರ್ಟ್​ ಕೂಡ ಜಾಮೀನು ನೀಡಲು ನಿರಾಕರಿಸಿತ್ತು.

ಚಿದಂಬರಂ ಅವರು ಕೇಂದ್ರದಲ್ಲಿ ಹಣಕಾಸು ಸಚಿವರಾಗಿದ್ದಾಗ ಐಎನ್​ಎಕ್ಸ್​ ಮೀಡಿಯಾ ಗ್ರೂಪ್​ಗೆ ಅಕ್ರಮವಾಗಿ ಎಫ್​ಐಪಿಬಿ ಕ್ಲಿಯರೆನ್ಸ್ ನೀಡಲು 305 ಕೋಟಿ ಲಂಚ ಪಡೆದಿದ್ದಾರೆ ಎಂಬ ಆರೋಪ ಮೇಲೆ ಸಿಬಿಐ ಚಿದಂಬರಂ ಅವರ ಮೇಲೆ 2017ರ ಮೇ 15ರಂದು ಎಫ್​ಐಆರ್​ ದಾಖಲಿಸಿತ್ತು. ಎಫ್​ಐಆರ್​ ದಾಖಲಾದ ಎರಡು ವರ್ಷಗಳ ಬಳಿಕ ಅಂದರೆ ಆಗಸ್ಟ್​ 21ರಂದು ಚಿದಂಬರಂ ಅವರನ್ನು ವಶಕ್ಕೆ ಪಡೆಯಲಾಗಿತ್ತು.

ಇದನ್ನು ಓದಿ: ಒಬ್ಬರ ಬಳಿಕ ಒಬ್ಬರಂತೆ ಗೃಹ ಬಂಧನದಲ್ಲಿರುವ ಕಾಶ್ಮೀರಿ ನಾಯಕರ ಬಿಡುಗಡೆ; ಮುಫ್ತಿ, ಒಮರ್​ ಅಬ್ದಲ್ಲಾಗೆ ಸದ್ಯಕ್ಕಿಲ್ಲ ಅವಕಾಶ

ಆ ಬಳಿಕ ಜಾರಿ ನಿರ್ದೇಶನಾಲಯ ಅಕ್ರಮ ಹಣಕಾಸು ವಹಿವಾಟು ಪ್ರಕರಣವನ್ನು 2017ರಲ್ಲಿ ದಾಖಲಿಸಿತ್ತು. ಯಾವುದೇ ಕಾರಣಕ್ಕೂ ಆರೋಪಿಗೆ ಜಾಮೀನು ನೀಡಬಾರದು ಎಂದು ಸಿಬಿಐ ನ್ಯಾಯಾಲಯದಲ್ಲಿ ಬಲವಾಗಿ ವಾದಿಸಿದ ಪರಿಣಾಮ ಚಿದಂಬರಂ ಅವರಿಗೆ ಈವರೆಗೂ ಜಾಮೀನು ಸಿಕ್ಕಿಲ್ಲ.

First published:October 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading