ಇದೊಂದು ವಿಚಿತ್ರ ಘಟನೆ ಎಂದೆನಿಸಿದರೂ ತನ್ನಷ್ಟಕ್ಕೆ ತಾನೆ ವಿಶೇಷವಾಗಿದೆ. ತಮಿಳುನಾಡಿನ ಚೆನ್ನೈ ಹೈಕೋರ್ಟ್ನಲ್ಲಿ ( Chennai High Court) ತರುಣ್ (ಹೆಸರು ಬದಲಿಸಲಾಗಿದೆ) ಎಂಬ 42ರ ಪ್ರಾಯದ ವ್ಯಕ್ತಿಯೊಬ್ಬರು ತನ್ನ ಇಬ್ಬರು ಮಕ್ಕಳ ಪಾಸ್ಪೋರ್ಟ್ನಲ್ಲಿ(passport) ತನ್ನ ಹೆಸರೂ ಸಹ ಬರುವಂತೆ ಅನುಕೂಲವಾಗಲು ಪಾಸ್ಪೋರ್ಟ್ ಅರ್ಜಿಯಲ್ಲಿ (Appealed) ನಿರ್ದಿಷ್ಟವಾಗಿ ಪುಲ್ಲಿಂಗ ಹಾಗೂ ಸ್ತ್ರೀಲಿಂಗ ಸ್ಪಷ್ಟೀಕರಿಸುವ 'ಅಪ್ಪ', 'ಅಮ್ಮ' ಭರ್ತಿ ಮಾಡುವ ಬದಲು ಲಿಂಗ-ತಟಸ್ಥವಾದ (Gender-neutral) 'ಪೋಷಕ' ಪದ ಸೇರಿಸುವಂತೆ ಮನವಿ ಮಾಡಿ ಡಿಸೆಂಬರ್ 13ರಂದು ಅರ್ಜಿ ಸಲ್ಲಿಸಿರುವ ಘಟನೆ ವರದಿಯಾಗಿದೆ.
ಇಬ್ಬರು ಅಪ್ಪ ಭರ್ತಿಗೂ ಅವಕಾಶವಿಲ್ಲ
ತರುಣ್ ಹೇಳುವಂತೆ, "ನನ್ನ ಮೊದಲಿನ ಹೆಸರನ್ನು ಏನಾದರೂ ಪಾಸ್ಪೋರ್ಟ್ನಲ್ಲಿ ಹಾಕಿದರೆ ನನ್ನ ಮಕ್ಕಳಿಗೆ ಈ ಬಗ್ಗೆ ವಿವರಣೆ ನೀಡಲು ನನ್ನಿಂದಾಗದು ಅಲ್ಲದೇ ಕಸ್ಟಮ್ ಅಧಿಕಾರಿಗಳಿಗೂ ನಾನು ವಿವರಣೆ ನೀಡಲು ಸಾಧ್ಯವಾಗುವುದಿಲ್ಲ. ಪಾಸ್ಪೋರ್ಟ್ನಲ್ಲಿ ಇಬ್ಬರು ಅಪ್ಪ ಭರ್ತಿಗೂ ಅವಕಾಶವಿಲ್ಲ, ಹಾಗಾಗಿ ಅಪ್ಪ ಅಥವಾ ಅಮ್ಮ ಬದಲು ಕೇವಲ ಪೋಷಕ ಎಂದು ತುಂಬಲು ಸಾಧ್ಯವಾದರೆ ನನಗೆ ಯಾವ ತೊಂದರೆ ಇರುವುದಿಲ್ಲ" ಎಂದು ಹೇಳುತ್ತಾನೆ ತರುಣ್.
ಇದನ್ನೂ ಓದಿ: E SHRAM Card: ಮೈಸೂರಿನಲ್ಲಿ ಮೊದಲ ಬಾರಿಗೆ ತೃತೀಯ ಲಿಂಗಿಗಳಿಗೆ ಇ-ಶ್ರಮ್ ಕಾರ್ಡ್ ವಿತರಣೆ
ಈ ಮೂಲಕ 4 ದಶಕಗಳ ಕಾಲ, ಮದುವೆ ಹಾಗೂ ಇಬ್ಬರು ಮಕ್ಕಳು ಎಂದು ತನ್ನ ಪಾಲಿನ 'ಕಷ್ಟದ' ಕಾಲ ಕಳೆದಿದ್ದ ತರುಣ್ ಈಗ ಸಾರ್ವಜನಿಕವಾಗಿ ತಾನು ಸಹ ಪುರುಷನೆಂದು ಗುರುತಿಸಿಕೊಳ್ಳುವುದಕ್ಕೆ ಹೋರಾಡಲು ಮುಂದೆ ಬಂದಿರುವ ವ್ಯಕ್ತಿಯಾಗಿದ್ದಾನಾದರೂ ಅವನ ಹೋರಾಟ ಇನ್ನೂ ಸುದೀರ್ಘವಾಗಬಹುದಾದ ಸಾಧ್ಯತೆಯಿದೆ.
ಪುರುಷ ಲಕ್ಷಣಗಳ ಹೊಂದಿದ್ದ ತರಣ್
ತರುಣ್ ಹುಟ್ಟಿದಾಗ ಹೆಣ್ಣಾಗಿ ಹುಟ್ಟಿದ್ದನಾದರೂ ಪುರುಷ ಲಕ್ಷಣಗಳನ್ನು ಹೊಂದಿದ್ದ. ತನ್ನ ತಾಯಿಯ ಬಳಿ ಬಂದು ತಾನು ಅವರ ಮಗನಾಗಿದ್ದೇನೆ ಹೊರತು ಮಗಳಲ್ಲ ಎಂದು ಯಾವಾಗಲೂ ಹೇಳುತ್ತಿದ್ದ. ಆದರೆ ಆತನ ತಾಯಿ ಅದನ್ನು ಎಂದಿಗೂ ಗಂಭೀರವಾಗಿ ಪರಿಗಣಿಸದೆ ಅದು ಕೇವಲ ಅವನ ಕಲ್ಪನೆಯಾಗಿದೆ ಎಂದು ಹೇಳಿ ನಿರ್ಲಕ್ಷಿಸುತ್ತಿದ್ದರು. ಹೆಣ್ಣು ಮಕ್ಕಳ ಯುನಿಫಾರ್ಮ್ ಧರಿಸುವುದು, ಹೆಣ್ಣುಮಕ್ಕಳ ಶೌಚಾಲಯ ಬಳಸುವುದು ತರುಣ್ ಮೇಲೆ ಭಾರಿ ಮಾನಸಿಕ ಪರಿಣಾಮ ಬೀರಿದ್ದವು. ಇದರಿಂದ ಮಾನಸಿಕವಾಗಿ ತರುಣ್ ಎಷ್ಟೊಂದು ನೊಂದಿದ್ದನೆಂದರೆ ಹೊಟ್ಟೆ ಸಂಬಂಧಿ ಅನಾರೋಗ್ಯ ಬೆಳೆಸಿಕೊಂಡು ಒಂದುವರೆ ವರ್ಷ ಶಾಲೆಗೆ ಹೋಗುವುದನ್ನೇ ಬಿಡಬೇಕಾಯಿತು.
ತರುಣ್ 13 ವರ್ಷದವನಾಗಿದ್ದಾಗ ಮುಟ್ಟನ್ನು ಅನುಭವಿಸಬೇಕಾಯಿತು. ಅದರ ಅನುಭವ ತರುಣ್ನನ್ನು ಮತ್ತಷ್ಟು ಕುಸಿಯುವಂತೆ ಮಾಡಿತು. ತರುಣ್ ಹೇಳುವಂತೆ ಆ ಸಮಯದಲ್ಲಿ ಆತ ಮುಂಬೈ ಅಸ್ಪತ್ರೆಯಲ್ಲಿ ಲಿಂಗ ಬದಲಿಸುವ ಸೌಲಭ್ಯವಿದೆಯೆಂದು ಗೊತ್ತಾದಾಗ ಆ ಬಗ್ಗೆ ತನ್ನ ತಾಯಿಯ ಬಳಿ ಬಂದು ತಾನೂ ಈ ಚಿಕಿತ್ಸೆಗೆ ಒಳಗಾಗುವುದಾಗಿ ಹೇಳಿದ್ದನಂತೆ. ಅದಕ್ಕೆ ಅವನ ತಾಯಿ ಇದಕ್ಕೆ ಅನುಮತಿ ನೀಡದೆ ಈ ಕುರಿತು ಮತ್ತೆ ಪ್ರಶ್ನಿಸಬೇಡವೆಂದು ಹೇಳಿದ್ದರಂತೆ.
ಲೈಂಗಿಕ ದೌರ್ಜನ್ಯ
ನನಗೆ ಬೇರೆ ಆಯ್ಕೆಯಿಲ್ಲದ ಕಾರಣ ನನ್ನನ್ನು ನಾನು ಅಭ್ಯಾಸದಲ್ಲಿ ತೊಡಗಿಸಿಕೊಂಡೆ, ನನ್ನ ಅಪ್ಪನ ಉದ್ಯಮ ಹಾನಿಯಲ್ಲಿ ನಡೆಯುತ್ತಿತ್ತು, ಹಾಗಾಗಿ ನನ್ನ ಕುಟುಂಬಕ್ಕೆ ಸಹಾಯ ಒದಗಿಸಲು ನಾನು ನಾಲ್ಕನೇ ತರಗತಿಯಲ್ಲಿದ್ದಾಗಲೇ ಟ್ಯೂಷನ್ ತೆಗೆದುಕೊಳ್ಳಲು ಪ್ರಾರಂಭಿಸಿದೆ. ವಿದ್ಯಾರ್ಥಿವೇತನದ ಮೂಲಕವೇ ನಾನು ನನ್ನ ವಿದ್ಯಾಭ್ಯಾಸ ಮುಗಿಸಿದೆ. ಎಷ್ಟೋ ಬಾರಿ ನೆರೆಹೊರೆಯವರು ನನಗೆ ಲೈಂಗಿಕವಾಗಿ ದೌರ್ಜನ್ಯ ಮಾಡಿದಾಗ ಆ ಬಗ್ಗೆ ತಾಯಿಗೆ ಹೇಳಿದರೂ ಪ್ರಯೋಜನವಾಗಿರಲಿಲ್ಲ. ನನ್ನ ಸಹೋದರರ ಮದುವೆಯಾಯಿತು. ಇದು ನಾನು ಸಹ ಮದುವೆಯಾಗುವಂತೆ ಮನೆಯಲ್ಲಿ ಒತ್ತಡದ ಪರಿಸ್ಥಿತಿ ನಿರ್ಮಿಸಿತು. ನಾನು ಎಷ್ಟೇ ಪ್ರಯತ್ನಿಸಿದರೂ ನನ್ನ ಪುರುಷನೇ ಆಗಿರುವ ಭಾವನೆಗೆ ಮನ್ನಣೆ ಸಿಗಲಿಲ್ಲ. ಕೊನೆಗೆ ನಾನು ಪರಿಸ್ಥಿತಿಗೆ ಶರಣಾಗಿ ಪಾಲಕರು ಹೇಳಿದಂತೆ ಮಾಡಿದೆ" ಎಂದೂ ತರುಣ್ ಹೇಳುತ್ತಾರೆ.
ಬಹಳ ದಿನ ಗುಟ್ಟಾಗಿ ಉಳಿಯಲಿಲ್ಲ
26 ವಯಸ್ಸಿಗೆ ಮದುವೆಯಾದ ತರುಣ್ ತನ್ನ ಎರಡು ಬದುಕನ್ನು ಜೀವಿಸಲು ಪ್ರಾರಂಭಿಸಿದ. ಆನ್ಲೈನ್ನಲ್ಲಿ ಮಾತ್ರ ತರುಣ್ ತನ್ನ ನೈಜ ಸ್ಥಿತಿಯನ್ನು ತೋರಿಸುತ್ತಿದ್ದ. 31ನೇ ವಯಸ್ಸಿಗೆ ಮೊದಲ ಮಗು ಹಾಗೂ 35ನೇ ವಯಸ್ಸಿಗೆ ಎರಡನೇ ಮಗು ಪಡೆದಿರುವ ತರುಣ್ ಪೋಷಕತ್ವದ ಅನುಭವವನ್ನೂ ಆನಂದಿಸಿದ್ದಾನೆ. ಆದರೆ, ತರುಣ್ ಎರಡು ಬಗೆಯ ಬಾಳು ಬದುಕುತ್ತಿದ್ದುದು ಬಹಳ ದಿನ ಗುಟ್ಟಾಗಿ ಉಳಿಯಲಿಲ್ಲ. 2017ರಲ್ಲಿ ಇನ್ನು ಈ ರೀತಿಯ ಬದುಕು ಸಾಕೆಂದು ತೀರ್ಮಾನಿಸಿದ ತರುಣ್ ಇದ್ದ ವಿಷಯ ತನ್ನ ಗಂಡನಿಗೆ ತಿಳಿಸಿದ. ಮೊದಲಿಗೆ ಇದನ್ನು ನಂಬದ ಗಂಡ ಕೊನೆಗೆ ಈ ಕುರಿತು ಅರ್ಥ ಮಾಡಿಕೊಂಡ.
ಇದನ್ನೂ ಓದಿ: Transgender: ತೃತೀಯ ಲಿಂಗಿಗಳನ್ನು ನೇಮಕ ಮಾಡಿಕೊಳ್ಳಲು ಮುಂದಾದ ಕರ್ನಾಟಕ ಪೊಲೀಸ್ ಇಲಾಖೆ
ನ್ಯಾಯಾಲಯದ ಮೆಟ್ಟಿಲು ಏರಿದ್ದಾನೆ
ತದನಂತರ ಇಬ್ಬರೂ ಸೇರಿ ಪರಸ್ಪರ ಒಮ್ಮತದ ಮೂಲಕ ವಿಚ್ಛೇದನ ಪಡೆದುಕೊಂಡರು. ಈಗ ತರುಣ್ ತನ್ನ ನೈಜ ಭಾವನೆಯಿಂದಲೇ ಬದುಕಬೇಕೆಂದಿದ್ದು ಆ ಬಗ್ಗೆ ಈಗಾಗಲೇ ಜೆಂಡರ್ ಅಫರ್ಮೇಟಿವ್ ಶಸ್ತ್ರ ಚಿಕಿತ್ಸೆಗಳನ್ನೆಲ್ಲ ಮಾಡಿಸಿಕೊಂಡಿದ್ದಾನೆ. ಅವನ ಪಾನ್, ಆಧಾರ್ ಕಾರ್ಡುಗಳಲ್ಲಿ ಅವನ ಪುರುಷ ಹೆಸರೇ ಇದೆ. ಹಾಗಾಗಿ ಪಾಸ್ಪೋರ್ಟ್ ಅರ್ಜಿಯಲ್ಲಿ ಮಾತ್ರ ತನ್ನ ಗುರುತನ್ನು ನೈಜವಾಗಿ ನಮೂದಿಸಲು ಸಾಧ್ಯವಾಗದ ಕಾರಣ 'ಅಪ್ಪ' ಅಥವಾ ' ಅಮ್ಮ' ಬದಲು ಪೋಷಕ ಪದ ಸೇರಿಸುವಂತೆ ಕೋರಿ ಈಗ ನ್ಯಾಯಾಲಯದ ಮೆಟ್ಟಿಲು ಏರಿದ್ದಾನೆ. ಈ ಕುರಿತು ವಿಚಾರಣೆ ನಡೆಸಿರುವ ಹೈಕೋರ್ಟ್ ಇನ್ನೆಂಟು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಪಾಸ್ಪೋರ್ಟ್ ಕಚೇರಿಗೆ ಸೂಚನೆ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ