1965,1971ರ ಇತಿಹಾಸದಿಂದ ಪಾಠ ಕಲಿಯದಿದ್ದರೆ ಪಾಕಿಸ್ತಾನವನ್ನು ಯಾರಿಂದಲೂ ರಕ್ಷಿಸುವುದು ಸಾಧ್ಯವಿಲ್ಲ; ರಾಜ್​ನಾಥ್​ ಸಿಂಗ್ ಖಡಕ್​ ಎಚ್ಚರಿಕೆ!

ಪಾಕ್​ನಲ್ಲಿನ ಬಲೂಚಿಸ್ತಾನ್ ಫಸ್ತೂನ್​ ಪ್ರಾಂತ್ಯಗಳಲ್ಲಿ ದಿನನಿತ್ಯ ಮಾನಹ ಹಕ್ಕುಗಳ ಉಲ್ಲಂಘನೆ ನಡೆಯುತ್ತಲೇ ಇದೆ. ಇದು ಹೀಗೆ ಮುಂದುವರೆದರೆ ಪಾಕಿಸ್ತಾನ ಎಂಬ ದೇಶ ಮತ್ತಷ್ಟು ತುಂಡುಗಳಾಗಿ ವಿಂಗಡನೆಯಾಗುವುದನ್ನು ಯಾರಿಂದಲೂ ತಡೆಯುವುದು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜ್​ನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

MAshok Kumar | news18-kannada
Updated:September 22, 2019, 6:55 PM IST
1965,1971ರ ಇತಿಹಾಸದಿಂದ ಪಾಠ ಕಲಿಯದಿದ್ದರೆ ಪಾಕಿಸ್ತಾನವನ್ನು ಯಾರಿಂದಲೂ ರಕ್ಷಿಸುವುದು ಸಾಧ್ಯವಿಲ್ಲ; ರಾಜ್​ನಾಥ್​ ಸಿಂಗ್ ಖಡಕ್​ ಎಚ್ಚರಿಕೆ!
ರಕ್ಷಣಾ ಸಚಿವ ರಾಜ್​ನಾಥ್​ ಸಿಂಗ್.
  • Share this:
ಪಾಟ್ನಾ (ಸೆಪ್ಟೆಂಬರ್.22); 1965 ಹಾಗೂ 1971ರಲ್ಲಿ ಮಾಡಿದ ತಪ್ಪುಗಳಿಂದ ಪಾಕಿಸ್ತಾನ ಪಠ ಕಲಿಯದಿದ್ದರೆ, ಆ ದೇಶವನ್ನು ಯಾರಿಂದಲೂ ರಕ್ಷಣೆ ಮಾಡುವುದು ಸಾಧ್ಯವಿಲ್ಲ. ಅಲ್ಲದೆ, ಪಾಕಿಸ್ತಾನ ಮತ್ತಷ್ಟು ತುಂಡುಗಳಾಗಿ ವಿಭಜನೆಯಾಗಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜ್​ನಾಥ್​ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

ಭಾನುವಾರ ಪಾಟ್ನಾ ನಗರದಲ್ಲಿ ಬಿಜೆಪಿ ಪಕ್ಷ ಆಯೋಜಿಸಿದ್ದ ಜನ ಜಾಗೃತಿ ಸಭೆಯಲ್ಲಿ ಮಾತನಾಡಿದ ರಾಜ್​ನಾಥ್ ಸಿಂಗ್, “ಪಾಕಿಸ್ತಾನ ಸರ್ಕಾರ ಈಗಾಗಲೇ ಕೇಂದ್ರ ಸರ್ಕಾರದ ನಡೆಯಿಂದಾಗಿ ಬೆದರಿದೆ. ಸ್ವತಃ ಪಾಕಿಸ್ತಾನದ ಪ್ರಧಾನಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿ ತಮ್ಮ ದೇಶವಾಸಿಗಳಿಗೆ ಭಾರತ-ಪಾಕ್ ಗಡಿಗೆ ಹೋಗಬೇಡಿ ಎಂದು ಹೇಳುತ್ತಿದ್ದಾರೆ. ಪಾಕಿಸ್ತಾನಿಗಳು ಹೀಗೆ ಮಾಡುವುದೇ ಒಳಿತು. ಏಕೆಂದರೆ ಅವರು ಒಮ್ಮೆ ಗಡಿ ಪ್ರದೇಶಕ್ಕೆ ಪ್ರವೇಶಿಸಿದರೆ ಮತ್ತೆ ಪಾಕಿಸ್ತಾನಕ್ಕೆ ಮರಳುವುದು ಸಾಧ್ಯವಾಗುವುದಿಲ್ಲ” ಎಂದು ಪಾಕ್ ಬೆಂಬಲಿತ ಉಗ್ರಗಾಮಿಗಳಿಗೆ ಅವರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ

ಪಾಕಿಸ್ತಾನ ಸರ್ಕಾರ 1965 ಮತ್ತು 1971ರಲ್ಲಿ ಮಾಡಿದ ತಪ್ಪುಗಳನ್ನು ಪುನರಾವರ್ತಿಸುವುದರ ಕುರಿತು ಎಚ್ಚರಿಕೆ ನೀಡಿದ ರಾಜ್​ನಾಥ್ ಸಿಂಗ್, “ಪಾಕಿಸ್ತಾನ ತನ್ನ ಇತಿಹಾಸವನ್ನು ಒಮ್ಮೆ ತಿರುಗಿ ನೋಡಿಕೊಳ್ಳಲಿ ಹಿಂದಿನ ತಪ್ಪುಗಳಿಂದ ಪಾಠ ಕಲಿಯಲಿ. ಅಕಸ್ಮಾತ್ ಅದೇ ತಪ್ಪುಗಳು ಮತ್ತೆ ಪುನರಾವರ್ತೆನೆಯಾದರೆ ಪಾಕಿಸ್ತಾನ್ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಏನಾಗಬಹುದು ಎಂದು ಯೋಚಿಸುವುದು ಒಳ್ಳೆಯದು.

ಅಲ್ಲದೆ, ಪಾಕ್​ನಲ್ಲಿನ ಬಲೂಚಿಸ್ತಾನ್ ಫಸ್ತೂನ್​ ಪ್ರಾಂತ್ಯಗಳಲ್ಲಿ ದಿನನಿತ್ಯ ಮಾನಹ ಹಕ್ಕುಗಳ ಉಲ್ಲಂಘನೆ ನಡೆಯುತ್ತಲೇ ಇದೆ. ಇದು ಹೀಗೆ ಮುಂದುವರೆದರೆ ಪಾಕಿಸ್ತಾನ ಎಂಬ ದೇಶ ಮತ್ತಷ್ಟು ತುಂಡುಗಳಾಗಿ ವಿಂಗಡನೆಯಾಗುವುದನ್ನು ಯಾರಿಂದಲೂ ತಡೆಯುವುದು ಸಾಧ್ಯವಾಗುವುದಿಲ್ಲ” ಎಂದಿದ್ದಾರೆ.

ಪಾಕಿಸ್ತಾನದ ಜೊತೆಗಿನ ಶಾಂತಿ ಮಾತುಕತೆ ಕುರಿತು ಮಾಹಿತಿ ನೀಡಿದ ಅವರು, “ಪಾಕ್ ಸರ್ಕಾರ ಭಯೋತ್ಪಾದನೆಯನ್ನು ಉತ್ತೇಜಿಸುವ ತನ್ನ ನಿಲುವಿನಿಂದ ವಿಮುಕ್ತವಾಗುವ ಹೊರತಾಗಿ ಪಾಕಿಸ್ತಾನದೊಂದಿಗಿನ ಮಾತುಕತೆ ಪುನರಾರಂಭಗೊಳ್ಳುವುದು ಅಸಾಧ್ಯ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಕೇಂದ್ರ ಸರ್ಕಾರ ಪಾಕ್ ಆಕ್ರಮಿತ ಕಾಶ್ಮೀರವನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆಯೂ ಚಿಂತನೆ ನಡೆಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಕುರಿತು ಮಾತನಾಡಿದ ಅವರು, “370 ನೇ ವಿಧಿ ಕ್ಯಾನ್ಸರ್ ನಂತೆ ಕಣಿವೆ ರಾಜ್ಯದ ರಕ್ತಸ್ರಾವಕ್ಕೆ ಕಾರಣವಾಗಿತ್ತು. ಹೀಗಾಗಿ ಅಲ್ಲಿನ ನಿವಾಸಿಗಳ ಪೈಕಿ ನಾಲ್ಕರಲ್ಲಿ ಮೂರು ಭಾಗದಷ್ಟು ಜನ ಬಿಜೆಪಿ ನಿಲುವನ್ನು ಬೆಂಬಲಿಸಿದ್ದಾರೆ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ : ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನಕ್ಕೆ ತೆರೆ; ರಾಜ್ಯಸಭೆಯಲ್ಲಿ ಐತಿಹಾಸಿಕ ಪ್ರಸ್ತಾವನೆ ಮಂಡಿಸಿದ ಅಮಿತ್ ಶಾ!
First published:September 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ