ಎಂಎಸ್‌ಎಂಇ ನಂತರ ಚೀನಾ ವಸ್ತುಗಳ ಬಳಕೆ ನಿಷೇಧಿಸಲು ಮುಂದಾದ ಇಂಧನ ಇಲಾಖೆ

ಸದ್ಯ ಭಾರತದ ಇಂಧನ ಕ್ಷೇತ್ರಕ್ಕೆ 71,000 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಈ ಪೈಕಿ ಚೀನಾ ಒಂದರಿಂದಲೇ 21,000 ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ಆಮದಾಗುತ್ತಿದೆ. ಇದನ್ನು ತಡೆಯಬೇಕು ಎಂದು ಆರ್.ಕೆ. ಸಿಂಗ್ ಹೇಳಿದರು

news18-kannada
Updated:July 3, 2020, 2:02 PM IST
ಎಂಎಸ್‌ಎಂಇ ನಂತರ ಚೀನಾ ವಸ್ತುಗಳ ಬಳಕೆ ನಿಷೇಧಿಸಲು ಮುಂದಾದ ಇಂಧನ ಇಲಾಖೆ
ಕೇಂದ್ರ ಇಂಧನ ಸಚಿವ ಆರ್​​.ಕೆ ಸಿಂಗ್​
  • Share this:
ನವದೆಹಲಿ(ಜು.03): ಚೀನಾ ವಸ್ತುಗಳ ಬಳಕೆ ನಿಷೇಧ ಹಿನ್ನೆಲೆಯಲ್ಲಿ ಈಗ ಭಾರೀ ಚರ್ಚೆ ನಡೆಯುತ್ತಿದೆ. ಪೂರಕವಾಗಿ ಚೀನಾದ 59 ಆ್ಯಪ್​​ಗಳನ್ನು ನಿಷೇಧಿಸಿದ ಮೇಲೆ ಈಗ ಮತ್ತೊಂದು ಹೆಜ್ಜೆ ಇಟ್ಟಿದೆ. ಇಂಧನ ಕ್ಷೇತ್ರದಲ್ಲಿ ಚೀನಾ ವಸ್ತುಗಳ ಬಳಕೆಗೂ ನಿಷೇಧ ಹೇರಲು ಮುಂದಾಗಿದೆ.

ಕೇಂದ್ರ ಇಂಧನ‌ ಸಚಿವ ಆರ್.ಕೆ‌ ಸಿಂಗ್ ಅವರು, ಇಂದು ಈ ವಿಷಯವನ್ನು ತಿಳಿಸಿದ್ದಾರೆ. ಎಲ್ಲಾ ರಾಜ್ಯಗಳ ಇಂಧನ ಸಚಿವರ ಸಭೆ ನಡೆಸಿದ ಅವರು ಆರ್.ಕೆ ಸಿಂಗ್, ಸಭೆಯಲ್ಲಿ ಮುಂದೆ ಇಂಧನ ಕ್ಷೇತ್ರದಲ್ಲಿ ಚೀನಾದ ಉತ್ಪನ್ನಗಳನ್ನು ನಿಷೇಧಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದರು.

ಸದ್ಯ ಭಾರತದ ಇಂಧನ ಕ್ಷೇತ್ರಕ್ಕೆ 71,000 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಈ ಪೈಕಿ ಚೀನಾ ಒಂದರಿಂದಲೇ 21,000 ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ಆಮದಾಗುತ್ತಿದೆ. ಇದನ್ನು ತಡೆಯಬೇಕು ಎಂದು ಆರ್.ಕೆ. ಸಿಂಗ್ ಹೇಳಿದರು.

ಇದನ್ನೂ ಓದಿ: Coronavirus Vaccine: ಕೋವಿಡ್​​-19 ತಡೆಗೆ ಸ್ವದೇಶಿ ಮದ್ದು: ಆಗಸ್ಟ್​​ 15ಕ್ಕೆ ಭಾರತದ ಮೊದಲ ಲಸಿಕೆ ಬಿಡುಗಡೆ

.ಇದಕ್ಕೂ ಮೊದಲು ಅತಿಸಣ್ಣ, ಸಣ್ಣ ಮತ್ತು‌ ಮಾಧ್ಯಮ ಇಲಾಖೆ ಕೂಡ ತಮ್ಮ ಕ್ಷೇತ್ರದಲ್ಲೂ ಚೀನಾ ಉತ್ಪನ್ನಗಳನ್ನು‌ ಬಳಸದಿರಲು ನಿರ್ಧರಿಸಲಾಗಿತ್ತು. ಈಗ ಇಂಧನ ಇಲಾಖೆ ಅಂತಹ ಕ್ರಮಕ್ಕೆ ಮುಂದಾಗಿದೆ.
First published: July 3, 2020, 1:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading