ಎಲೆಕ್ಟ್ರಿಕ್​ ವಾಹನ ಬಳಸಿ, ಇಂಧನ ಉಳಿಸಿ; ಇ-ವಾಹನ ಬಳಕೆಗೆ ಪರ್ಮಿಟ್ ವ್ಯವಸ್ಥೆ ರದ್ದುಪಡಿಸಿದ ಸಚಿವ ನಿತಿನ್​ ಗಡ್ಕರಿ

news18
Updated:September 6, 2018, 4:57 PM IST
ಎಲೆಕ್ಟ್ರಿಕ್​ ವಾಹನ ಬಳಸಿ, ಇಂಧನ ಉಳಿಸಿ; ಇ-ವಾಹನ ಬಳಕೆಗೆ ಪರ್ಮಿಟ್ ವ್ಯವಸ್ಥೆ ರದ್ದುಪಡಿಸಿದ ಸಚಿವ ನಿತಿನ್​ ಗಡ್ಕರಿ
news18
Updated: September 6, 2018, 4:57 PM IST
ನ್ಯೂಸ್​18 ಕನ್ನಡ

ನವದೆಹಲಿ (ಸೆ. 6): ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆಯಿಂದ ವಾಹನಗಳನ್ನು ಮನೆಯಿಂದ ಹೊರತೆಗೆಯಲು ಜನರು ಯೋಚಿಸುವಂತಾಗಿದೆ. ಇಂಧನದ ದರ ಹೆಚ್ಚಳದಿಂದ ಮಧ್ಯಮ ಮತ್ತು ಕೆಳವರ್ಗದವರ ಮೇಲೆ ಹೆಚ್ಚುವರಿ ಹೊರೆ ಬೀಳುತ್ತಿದೆ. ಅದಕ್ಕೆಂದೇ ನಗರದಲ್ಲಿ ಸಂಚರಿಸಲು ಕಮರ್ಷಿಯಲ್ ಎಲೆಕ್ಟ್ರಿಕ್​ ವಾಹನಗಳ ಬಳಕೆಯನ್ನು ಉತ್ತೇಜಿಸಲು ಹೊಸ ನಿಯಮ ಜಾರಿಗೆ ತಂದಿದೆ.

ಎಲೆಕ್ಟ್ರಿಕ್​ ವಾಹನಗಳನ್ನು ಜನರು ಹೆಚ್ಚೆಚ್ಚು ಬಳಸುವ ಮೂಲಕ ಇಂಧನವನ್ನೂ ಉಳಿಸಬಹುದು, ಮಾಲಿನ್ಯವನ್ನೂ ತಡೆಗಟ್ಟಬಹುದು ಎಂಬ ಕಾರಣಕ್ಕೆ ನಮ್ಮ ದೇಶದಲ್ಲಿ ಈ ವಾಹನಗಳನ್ನು ಓಡಿಸಲು ಅಡಚಣೆಯಾಗಿರುವ ಎಲ್ಲ ಪರ್ಮಿಟ್​ಗಳನ್ನು ರದ್ದುಗೊಳಿಸುತ್ತಿರುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಅಧಿಕೃತವಾಗಿ ಘೋಷಿಸಿದ್ದಾರೆ.

ಬಯೋ ಇಂಧನ, ಎಥನಾಲ್​, ಮೆಥನಾಲ್​ ಇಂಧನಗಳ ಮೂಲಕ ಚಲಿಸುವ ವಾಹನಗಳಿಗೆ ಯಾವುದೇ ಕಮರ್ಷಿಯಲ್​ ಪರ್ಮಿಟ್​ಗಳ ಅಗತ್ಯವಿರುವುದಿಲ್ಲ. ಈ ಮೂಲಕ ಎಲೆಕ್ಟ್ರಿಕ್​ ವಾಹನಗಳ ಬಳಕೆಗೆ ಪ್ರೋತ್ಸಾಹ ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ಗಡ್ಕರಿ ತಿಳಿಸಿದ್ದಾರೆ.

ಇದಕ್ಕೆ ಪೂರಕವಾಗಿ, ಓಲಾ ಮುಂತಾದ ಕ್ಯಾಬ್​ ಸಂಸ್ಥೆಗಳ ಮೂಲಕ ಇನ್ನು ಒಂದು ವರ್ಷದಲ್ಲಿ 10 ಸಾವಿರ ಎಲೆಕ್ಟ್ರಿಕ್​ ವಾಹನಗಳನ್ನು ರಸ್ತೆಗಿಳಿಸಲು ಯೋಚಿಸಲಾಗಿದೆ. ಈ ಮೊದಲು ಎಲೆಕ್ಟ್ರಿಕ್ ವಾಹನಗಳನ್ನು ಕೊಳ್ಳಲು ಅಪೇಕ್ಷಿಸಿದವರು ಅನುಮತಿ ಮತ್ತು ಪರವಾನಗಿ ಪಡೆಯಲು ಸುದೀರ್ಘ ಪ್ರಕ್ರಿಯೆಯಿದ್ದ ಕಾರಣದಿಂದ ಹಿಂಜರಿಯುತ್ತಿದ್ದರು. ಈಗ ಆ ಪ್ರಕ್ರಿಯೆಗಳನ್ನು ಸರಳಗೊಳಿಸಿರುವುದರಿಂದ ಅಂಥವರಿಗೆ ಅನುಕೂಲವಾಗಲಿದೆ.

 
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...