ಬ್ಯಾಂಕ್ ವಿಲೀನದಿಂದಾಗಿ ಉದ್ಯೋಗ ಕಳೆದುಕೊಳ್ಳುವ ಭೀತಿ ಬೇಡ; ಬ್ಯಾಂಕ್ ನೌಕರರ ಉದ್ಯೋಗ ಭದ್ರತೆಗೆ ಖಾತರಿ ನೀಡಿದ ಸೀತಾರಾಮನ್

ಇಂಡಿಯನ್ ಬ್ಯಾಂಕ್ ಅಲಹಾಬಾದ್ ಬ್ಯಾಂಕಿನೊಂದಿಗೆ ವಿಲೀನಗೊಳ್ಳುವ ಮೂಲಕ ಇಂಡಿಯನ್ ಬ್ಯಾಂಕ್​ನಲ್ಲಿರುವ ಎಲ್ಲಾ ನೌಕರರು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಬ್ಯಾಂಕ್ ನೌಕರರ ವರ್ಗ ಆತಂಕ ಹೊರಹಾಕಿತ್ತು. ಈ ಆತಂಕ ಎಲ್ಲಾ ಬ್ಯಾಂಕ್​ ನೌಕರರನ್ನು ಕಾಡಿತ್ತು.

MAshok Kumar | news18-kannada
Updated:September 2, 2019, 10:50 AM IST
ಬ್ಯಾಂಕ್ ವಿಲೀನದಿಂದಾಗಿ ಉದ್ಯೋಗ ಕಳೆದುಕೊಳ್ಳುವ ಭೀತಿ ಬೇಡ; ಬ್ಯಾಂಕ್ ನೌಕರರ ಉದ್ಯೋಗ ಭದ್ರತೆಗೆ ಖಾತರಿ ನೀಡಿದ ಸೀತಾರಾಮನ್
ನಿರ್ಮಲಾ ಸೀತಾರಾಮನ್
  • Share this:
ಚೆನ್ನೈ (ಸೆಪ್ಟೆಂಬರ್.01); ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನ ಮಾಡುವ ಮೂಲಕ ಬ್ಯಾಂಕ್ ನೌಕರರ ಉದ್ಯೋಗಕ್ಕೆ ಕತ್ತರಿ ಹಾಕುವುದಿಲ್ಲ. ಬ್ಯಾಂಕುಗಳು ಒಗ್ಗೂಡಿದ ನಂತರವೂ ಒಬ್ಬೇ ಒಬ್ಬ ಉದ್ಯೋಗಿಯನ್ನು ಕೆಲಸದಿಂದ ತೆಗೆದುಹಾಕುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳೆದ ಆಗಸ್ಟ್.23 ರಂದು ದೇಶದ ಆರ್ಥಿಕತೆಯನ್ನು ವೃದ್ಧಿಸುವ ಸಲುವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಫ್ಟ್ ಕ್ರಮವನ್ನು ಘೋಷಿಸಿದ್ದರು. ಅದರಂತೆ ಜಾಗತಿಕ ಮಟ್ಟದಲ್ಲಿ ಬಲವಾದ ಸಾಲಗಾರರನ್ನು ಸೃಷ್ಟಿಸುವ ಸಲುವಾಗಿ ಶುಕ್ರವಾರ ಸಾರ್ವಜನಿಕ ವಲಯದ 10 ಬ್ಯಾಂಕ್​ಗಳನ್ನು ವಿಲೀನಗೊಳಿಸುವ ಮೆಗಾ ಯೋಜನೆಯನ್ನು ಅನಾವರಣಗೊಳಿಸಿದ್ದರು.

ಇಂಡಿಯನ್ ಬ್ಯಾಂಕ್ ಅಲಹಾಬಾದ್ ಬ್ಯಾಂಕಿನೊಂದಿಗೆ ವಿಲೀನಗೊಳ್ಳುವ ಮೂಲಕ ಇಂಡಿಯನ್ ಬ್ಯಾಂಕ್​ನಲ್ಲಿರುವ ಎಲ್ಲಾ ನೌಕರರು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಬ್ಯಾಂಕ್ ನೌಕರರ ವರ್ಗ ಆತಂಕ ಹೊರಹಾಕಿತ್ತು. ಈ ಆತಂಕ ಎಲ್ಲಾ ಬ್ಯಾಂಕ್​ ನೌಕರರನ್ನು ಕಾಡಿತ್ತು.

ನೌಕರರ ಈ ಆತಂಕಕ್ಕೆ ಇಂದು ಚೆನ್ನೈನಲ್ಲಿ ತೆರೆ ಎಳೆದಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, “ಬ್ಯಾಂಕ್ ವಿಲೀನ ಯೋಜನೆ ಉದ್ಯೋಗ ನಷ್ಟಕ್ಕೆ ಕಾರಣವಾಗಬಹುದು ಎಂಬ ಕಾರಣಕ್ಕೆ ಬ್ಯಾಂಕ್ ನೌಕರರ ಸಂಘಗಳು ಕೇಂದ್ರ ಸರ್ಕಾರ ಯೋಜನೆಯನ್ನು ವಿರೋಧಿಸುತ್ತಿವೆ. ಆದರೆ, ಬ್ಯಾಂಕುಗಳ ವಿಲೀನದ ಬಗ್ಗೆ ನಾವು ಚರ್ಚೆ ಆರಂಭಿಸಿದಾಗ ಯಾವ ಉದ್ಯೋಗಿಯನ್ನು ಕೆಲಸದಿಂದ ತೆಗೆಯಬಾರದು ಎಂದು ನಾನು ಒತ್ತಿ ಹೇಳಿದ್ದೇನೆ.

ಆರ್ಥಿಕತೆಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ಎಲ್ಲಾ ಬ್ಯಾಂಕುಗಳಿಗೆ ಹೆಚ್ಚುವರಿಯಾಗಿ ಹಣ ಬಿಡುಗಡೆ ಮಾಡಿ ಉತ್ತೇಜಿಸುತ್ತಿದೆ. ಹೀಗಾಗಿ ಯಾರೂ ಸಹ ಉದ್ಯೋಗ ಕಳೆದುಕೊಳ್ಳುವ ಭೀತಿಗೆ ಒಳಗಾಗುವ ಅಗತ್ಯವಿಲ್ಲ. ಇದಲ್ಲದೆ, ಉದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮತ್ತಷ್ಟು ಉದ್ಯೋಗ ಸೃಷ್ಟಿಗೂ ಸರ್ಕಾರ ಮುಂದಾಗಿದೆ” ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : Bank Merger: ಬ್ಯಾಂಕುಗಳ ವಿಲೀನ; ಗ್ರಾಹಕರು ತಿಳಿಯಲೇ ಬೇಕಾದ ವಿಷಯಗಳು

First published:September 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ