HOME » NEWS » National-international » NO ONE SHOULD BE AFRAID OF CAA ON 1ST VISIT TO DELHI AS CM UDDHAV TELLS MODI NPR WILL BE CONDUCTED IN MAHA RH

ಸಿಎಎ ಬಗ್ಗೆ ಯಾರೊಬ್ಬರಿಗೂ ಭಯ ಬೇಡ; ಸಿಎಂ ಆದ ಬಳಿಕ ಮೊದಲ ಬಾರಿಗೆ ಪ್ರಧಾನಿ ಭೇಟಿಯಾದ ಠಾಕ್ರೆ ಹೇಳಿಕೆ

ಮಹಾರಾಷ್ಟ್ರದಲ್ಲಿ ಎನ್​ಪಿಆರ್ ನಡೆಸುವುದಾಗಿ ಸಿಎಂ ಠಾಕ್ರೆ ಇದೇ ವೇಳೆ ಮತ್ತೊಮ್ಮೆ ಪುನರುಚ್ಚರಿಸಿದ್ದರು. ಇದರಿಂದ ಮಹಾ ಅಗಾಡಿ ನಡುವೆ ಘರ್ಷಣೆ ಉದ್ಭವವಾಗುವುದನ್ನು ನಿರಾಕರಿಸಿದರು. ಜೊತೆಗೆ ಈ ಸರ್ಕಾರ ಮಹಾರಾಷ್ಟ್ರದಲ್ಲಿ ಐದು ವರ್ಷ ಪೂರೈಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

news18-kannada
Updated:February 21, 2020, 8:53 PM IST
ಸಿಎಎ ಬಗ್ಗೆ ಯಾರೊಬ್ಬರಿಗೂ ಭಯ ಬೇಡ; ಸಿಎಂ ಆದ ಬಳಿಕ ಮೊದಲ ಬಾರಿಗೆ ಪ್ರಧಾನಿ ಭೇಟಿಯಾದ ಠಾಕ್ರೆ ಹೇಳಿಕೆ
ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಸಿಎಂ ಉದ್ಧವ್ ಠಾಕ್ರೆ, ಮತ್ತು ಆದಿತ್ಯ ಠಾಕ್ರೆ.
  • Share this:
ನವದೆಹಲಿ: ಸಿಎಎ ಮತ್ತು ಎನ್​ಪಿಆರ್​ ಬಗ್ಗೆ ಯಾರೊಬ್ಬರೂ ಭಯ ಪಡುವ ಅಗತ್ಯವಿಲ್ಲ. ಈ ಕಾಯ್ದೆಗಳಿಂದ ದೇಶದಿಂದ ಒಬ್ಬರೇ ಒಬ್ಬರನ್ನು ಹೊರಗೆ ಕಳುಹಿಸಲಾಗುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪ್ರಧಾನಿ ಮೋದಿ ಭೇಟಿ ಬಳಿಕ ಹೇಳಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ಮೈತ್ರಿಯಾಗಿ ಚುನಾವಣೆ ಎದುರಿಸಿತ್ತು. ಬಹುಮತ ಪಡೆದ ಈ ಮೈತ್ರಿಯಲ್ಲಿ ಅಧಿಕಾರ ಹಂಚಿಕೆ ವಿಚಾರವಾಗಿ ಮನಸ್ತಾಪ ಉಂಟಾಗಿ ಶಿವಸೇನೆ ಬಿಜೆಪಿ ಮೈತ್ರಿ ಕಡಿದುಕೊಂಡು, ಎನ್​ಸಿಪಿ ಹಾಗೂ ಕಾಂಗ್ರೆಸ್​ನೊಂದಿಗೆ ಕೈಜೋಡಿಸಿ, ಮಹಾ ವಿಕಾಸ್ ಅಗಡಿ ಹೆಸರಲ್ಲಿ ಸರ್ಕಾರ ರಚಿಸಿದೆ.

ಇಂದು ಪ್ರಧಾನಿ ಮೋದಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉದ್ಧವ್ ಠಾಕ್ರೆ, ಮಹಾರಾಷ್ಟ್ರ ವಿಚಾರವಾಗಿ ಪ್ರಧಾನಿಯೊಂದಿಗೆ ಅತ್ಯುತ್ತಮ ಚರ್ಚೆಯಾಗಿದೆ. ಇದೇ ವೇಳೆ ಪ್ರಧಾನಿಯೊಂದಿಗೆ ನಾನು ಸಿಎಎ, ಎನ್​ಪಿಆರ್ ಮತ್ತು ಎನ್​ಆರ್​ಸಿ ವಿಚಾರವಾಗಿಯೂ ಮಾತನಾಡಿದೆ. ಸಿಎಎ ಬಗ್ಗೆ ಯಾರೊಬ್ಬರೂ ಭಯ ಪಡುವ ಅಗತ್ಯವಿಲ್ಲ. ಎನ್​ಪಿಆರ್​ ಕಾನೂನು ಒಬ್ಬ ನಾಗರಿಕನನ್ನು ದೇಶದಿಂದ ಹೊರಗೆ ಹಾಕುವುದಿಲ್ಲ ಎಂದು ಹೇಳಿದರು.

ಇದನ್ನು ಓದಿ: ಟ್ರಂಪ್ ಭಾರತದ ಭೇಟಿ, ವ್ಯಾಪಾರ ವೃದ್ಧಿಗೆ ಮಾತುಕತೆ; ದೇಶದ ಡೈರಿ ಉತ್ಪನ್ನಗಳಿಗೆ ತೆರೆಯಲಿದೆಯೇ ಅಮೆರಿಕ ಬಾಗಿಲು?


ಮಹಾರಾಷ್ಟ್ರದಲ್ಲಿ ಎನ್​ಪಿಆರ್ ನಡೆಸುವುದಾಗಿ ಸಿಎಂ ಠಾಕ್ರೆ ಇದೇ ವೇಳೆ ಮತ್ತೊಮ್ಮೆ ಪುನರುಚ್ಚರಿಸಿದ್ದರು. ಇದರಿಂದ ಮಹಾ ಅಗಾಡಿ ನಡುವೆ ಘರ್ಷಣೆ ಉದ್ಭವವಾಗುವುದನ್ನು ನಿರಾಕರಿಸಿದರು. ಜೊತೆಗೆ ಈ ಸರ್ಕಾರ ಮಹಾರಾಷ್ಟ್ರದಲ್ಲಿ ಐದು ವರ್ಷ ಪೂರೈಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.



ಎನ್​ಪಿಆರ್​ ಮತ್ತು ಸಿಎಎ ವಿಚಾರವಾಗಿ ಸಿಎಂ ಠಾಕ್ರೆ ನಿಲುವನ್ನು ಕಾಂಗ್ರೆಸ್ ಮತ್ತು ಎನ್​ಸಿಪಿ ನಿರಾಕರಿಸಿರುವುದಾಗಿ ವರದಿಯಾಗಿದೆ.
First published: February 21, 2020, 8:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories