Death Case: ಕರಣ್ ಜೋಸೆಫ್‌ನನ್ನು ಯಾರೂ ಕೊಂದಿಲ್ಲ! ಹಾಗಾದರೆ ಸತ್ತಿದ್ದು ಹೇಗೆ?

2017ರಿಂದ ಇಷ್ಟು ವರ್ಷಗಳ ಕಾಲ ನಡೆದಿದ್ದ ತನಿಖೆ ಇದೀಗ ಮುಕ್ತಾಯವಾಗಿದೆ. 12ನೇ ಮಹಡಿಯಿಂದ ಆ ಯುವ ಸಂಗೀತಗಾರ ಜಿಗಿದು ಸತ್ತಿದ್ದು ಏಕೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹಾಗಿದ್ರೆ ಕರಣ್ ಜೋಸೆಫ್ ಸತ್ತಿದ್ದು ಹೇಗೆ?

ಮೃತ ಕರಣ್ ಜೋಸೆಫ್

ಮೃತ ಕರಣ್ ಜೋಸೆಫ್

  • Share this:
ಮುಂಬೈ: ಯುವ ಸಂಗೀತಗಾರ (Young Musician) ಕೀಬೋರ್ಡ್ ಪ್ಲೇಯರ್ (Keyboard Player) ಕರಣ್ ಜೋಸೆಫ್ (Karan Joseph) ಸಾವಿನ ಪ್ರಕರಣಕ್ಕೆ (Death Case) ಅಂತ್ಯ ಸಿಕ್ಕಿದೆ. 2017, ಸೆಪ್ಟೆಂಬರ್ 9ರಂದು ಮುಂಬೈನ (Mumbai) ಬಾಂದ್ರಾದಲ್ಲಿ (Bandra) ನಿವಾಸದಿಂದ ಜಿಗಿದು ಕರಣ್ ಜೋಸೆಫ್ ಮೃತಪಟ್ಟಿದ್ದ. ಆದರೆ ಇದನ್ನು ಕೊಲೆ ಎನ್ನಲಾಗಿತ್ತು. ಹೀಗಾಗಿ ಸುಮಾರು 5 ವರ್ಷಗಳ ಕಾಲ ಸುದೀರ್ಘ ತನಿಖೆ ನಡೆಯಿತು. ಇದೀಗ ಕರಣ್ ಜೋಸೆಫ್ ಸಾವಿನ ಪ್ರಕರಣದ ಕುರಿತಂತೆ ಮುಂಬೈ ಕ್ರೈಂ ಬ್ರ್ಯಾಂಚ್ (Mumbai Crime Branch) ಪೊಲೀಸರು (Police) ತನಿಖೆ ಪೂರ್ಣಗೊಳಿಸಿದ್ದಾರೆ. ಹಾಗಾದರೆ ಖ್ಯಾತ ಕೀಬೋರ್ಡ್ ವಾದಕ, ಯುವ ಸಂಗೀತಗಾರನಾಗಿದ್ದ ಕರಣ್ ಜೋಸೆಫ್ ಸತ್ತಿದ್ದು ಹೇಗೆ? ಆತನದ್ದು ಕೊಲೆಯೋ? ಅಥವಾ ಆತನೇ ಆತ್ಮಹತ್ಯೆ ಮಾಡಿಕೊಂಡನೋ ಎಂಬ ಅನೇಕ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದೆ. ಕರಣ್ ಜೋಸೆಫ್‌ನನ್ನು ಯಾರೂ ಕೊಂದಿಲ್ಲ ಅಂತ ಮುಂಬೈ ಪೊಲೀಸರು ಹೇಳಿದ್ದಾರೆ. ಹಾಗಿದ್ರೆ ಕರಣ್ ಸತ್ತಿದ್ದು ಹೇಗೆ ಅಂತ ಈ ಸ್ಟೋರಿ ಓದಿ…

ಬಹುಮಹಡಿ ಮೇಲಿಂದ ಜಿಗಿದಿದ್ದ ಕರಣ್ ಜೋಸೆಫ್

2017, ಸೆಪ್ಟೆಂಬರ್‌ 9ರಂದು ಕರಣ್ ಮುಂಬೈನ ಬಾಂದ್ರಾದಲ್ಲಿ ಸಾವನ್ನಪ್ಪಿದ್ದ. ತನ್ನ ಸ್ನೇಹಿತ ಮತ್ತು ಸಂಗೀತ ನಿರ್ಮಾಪಕ ರಿಷಿ ಶಾ ಅವರ 12 ನೇ ಮಹಡಿಯ ಫ್ಲಾಟ್‌ನಿಂದ ಹಾರಿ, ಕರಣ್ ಪ್ರಾಣಬಿಟ್ಚಿದ್ದ. ಕರಣ್ ಸಾಯುವ ಕೆಲವೇ ಕ್ಷಣಗಳ ಹಿಂದೆ, ರಿಷಿ ಶಾ ಅವರ ಮನೆಯಲ್ಲಿ ಬೌನ್ಸರ್‌ಗಳು ಅವರನ್ನು ಥಳಿಸಿದ್ದಾರೆ ಎನ್ನಲಾಗಿತ್ತು.

ಕರಣ್ ತಂದೆಯಿಂದ ದೂರು

ತಮ್ಮ ಮಗ 12ನೇ ಮಹಡಿಯಿಂದ ಕೆಳಕ್ಕೆ ಹಾರಿ ಸತ್ತಿದ್ದಾನೆ ಎನ್ನುವುದು ನಿಜ. ಆದರೆ ಅವನ ಸಾವಿನ ಬಗ್ಗೆ ನನಗೆ ಅನುಮಾನವಿದೆ. ಹೀಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಅಂತ ಕರಣ್ ಜೋಸೆಫ್ ತಂದೆ ಬಾಂದ್ರಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಇದನ್ನೂ ಓದಿ: Crime News: ನಾದಿನಿ ಜೊತೆ ಭಾವನ ರಾಸಲೀಲೆ! ನೋಡಬಾರದ್ದು ನೋಡಿದ ಪಾಪದ ಪತ್ನಿ ಏನಾದಳು?

ರಿಶಿ ಶಾ ವಿರುದ್ಧ ಆರೋಪ

ಕರಣ್ ಜೋಸೆಫ್ ಸಾವಿನ ಪ್ರಕರಣದಲ್ಲಿ ಆತನ ಸ್ನೇಹಿತ ಹಾಗೂ ಸಂಗೀತ ನಿರ್ದೇಶಕ ರಿಶಿ ಶಾ ವಿರುದ್ಧವೂ ಆರೋಪ ಕೇಳಿಬಂದಿತ್ತು. ಬೇರೆ ಯಾರ ಬಳಿಯೂ ಕೆಲಸ ಮಾಡದಂತೆ ಒತ್ತಡ ಹೇರುತ್ತಿದ್ದಾನೆ ಎನ್ನಲಾಗಿತ್ತು.  ಕರಣ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪವೂ ರಿಶಿ ಮೇಲೆ ಕೇಳಿ ಬಂದಿತ್ತು. ಕರಣ್ ಸಾಯುವ ಮೊದಲು, ಶಾ ಅವರ ಫ್ಲಾಟ್‌ನಲ್ಲಿ ಬೌನ್ಸರ್‌ಗಳು ಥಳಿಸಿದ್ದಾರೆ ಅಂತ ಖುದ್ದು ಕರಣ್ ಅವರೇ ನಮಗೆ ಹೇಳಿದ್ದಾರೆ ಅಂತ ಆಪ್ತರು, ಸ್ನೇಹಿತರು ಹೇಳಿಕೆ ನೀಡಿದ್ದರು.

ನಿರಂತರ 5 ವರ್ಷಗಳ ಕಾಲ ತನಿಖೆ

ಪ್ರಕರಣ ಜಟಿಲವಾಗುತ್ತಲೇ ಪೊಲೀಸರಿಗೆ ತಲೆನೋವಾಯಿತು. ಹೀಗಾಗಿ ಬಾಂದ್ರಾ ಪೊಲೀಸ್ ಠಾಣೆಯಿಂದ ಮುಂಬೈ ಕ್ರೈಂ ಬ್ರ್ಯಾಂಚ್ ಠಾಣೆಗೆ ಕೇಸ್ ವರ್ಗಾವಣೆಯಾಯ್ತು. ಕರಣ್ ಕೇಸ್‌ನಲ್ಲಿ ಕುಟುಂಬಸ್ಥರು, ಆಪ್ತರು, ರಿಶಿ ಶಾ, ಆತನ ಸ್ನೇಹಿತರು, ಕೆಲಸಗಾರರು ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಯ್ತು.

ಇದನ್ನೂ ಓದಿ: Crime News: ನೆರೆಮನೆಯವಳನ್ನೇ ಅತ್ಯಾಚಾರ ಮಾಡಿದ ಪತಿ, ವಿಡಿಯೋ ಮಾಡಿಕೊಂಡಳು ಪತ್ನಿ!

“ಕರಣ್‌ನನ್ನು ಯಾರೂ ಕೊಂದಿಲ್ಲ” ಎಂದ ಪೊಲೀಸರು

ಅಂತಿಮವಾಗಿ ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ತನಿಖೆ ರಿಪೋರ್ಟ್ ಸಲ್ಲಿಸಿದ್ದಾರೆ. “ನಾವು ಮೃತ ಕರಣ್ ಜೋಸೆಫ್ ಹಾಗೂ ರಿಶಿ ಶಾ ಅವರ ವಾಟ್ಸಾಪ್ ಚಾಟ್‌ಗಳನ್ನು ಪರಿಶೀಲಿಸಿದ್ದೇವೆ, ಆದರೆ ಅವರ ನಡುವೆ ಏನೋ ತಪ್ಪಾಗಿದೆ ಎಂದು ಸೂಚಿಸಲು ಯಾವುದೇ ದೋಷಾರೋಪಣೆ ಕಂಡುಬಂದಿಲ್ಲ. ಕರಣ್ ಅವರನ್ನು ಕೊಲೆ ಮಾಡಲಾಗಿದೆ ಎಂಬ ಆರೋಪಕ್ಕೆ ಯಾವುದೇ ಸಾಕ್ಷ್ಯವೂ ಸಿಕ್ಕಿಲ್ಲ ಅಂತ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
Published by:Annappa Achari
First published: