ಪೌರತ್ವ ಕಾಯ್ದೆ ಬಳಸಿ ಹೊಸದಾಗಿ ವಲಸೆ ಬರುವ ಬಾಂಗ್ಲಾ ಮಂದಿಗೆ ಪ್ರವೇಶ ಇಲ್ಲ: ಅಸ್ಸಾಮ್ ಸಿಎಂ

ಪೌರತ್ವ ಕಾಯ್ದೆ ಅಡಿ ಪೌರತ್ವಕ್ಕಾಗಿ ಅರ್ಜಿಗಳು ಸಲ್ಲಿಸುವ ಪ್ರಕ್ರಿಯೆ ಮುಗಿದ ಬಳಿಕ ಆ ಎಲ್ಲಾ ವಿವರಗಳನ್ನು ಬಹಿರಂಗಪಡಿಸಲಾಗುವುದು. ಇಂಥ ಪೌರತ್ವ ಅರ್ಜಿಗಳ ಪ್ರಮಾಣ ತೀರಾ ಕಡಿಮೆಯೇ ಇರಲಿದೆ. ಈ ಪ್ರಮಾಣದಷ್ಟು ಮಂದಿಗೆ ಪೌರತ್ವ ನೀಡಿದರೆ ಅಸ್ಸಾಮ್​ನ ಸಾಮಾಜಿಕ ವ್ಯವಸ್ಥೆಗೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ಸೊನೋವಾಲ್ ಸ್ಪಷ್ಟಪಡಿಸಿದ್ದಾರೆ.

Vijayasarthy SN | news18
Updated:December 20, 2019, 2:07 PM IST
ಪೌರತ್ವ ಕಾಯ್ದೆ ಬಳಸಿ ಹೊಸದಾಗಿ ವಲಸೆ ಬರುವ ಬಾಂಗ್ಲಾ ಮಂದಿಗೆ ಪ್ರವೇಶ ಇಲ್ಲ: ಅಸ್ಸಾಮ್ ಸಿಎಂ
ಸರ್ಬಾನಂದ್ ಸೊನೋವಾಲ್
  • News18
  • Last Updated: December 20, 2019, 2:07 PM IST
  • Share this:
ಗುವಾಹತಿ(ಡಿ. 20): ಪೌರತ್ವ ಕಾಯ್ದೆಯಿಂದಾಗಿ ಬಾಂಗ್ಲಾದೇಶದಿಂದ ಅಸ್ಸಾಮ್​ಗೆ ಹೊಸದಾಗಿ ವಲಸೆ ಬರುವವರ ಪ್ರಮಾಣ ಹೆಚ್ಚಾಗುತ್ತದೆ ಎಂಬ ಆತಂಕಗಳನ್ನು ಅಸ್ಸಾಮ್ ಮುಖ್ಯಮಂತ್ರಿ ಸರ್ಬಾನಂದ ಸೊನೋವಾಲ್ ತಳ್ಳಿಹಾಕಿದರು. ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ದಶಕಗಳ ಹಿಂದೆ ಅಸ್ಸಾಮ್ ರಾಜ್ಯಕ್ಕೆ ವಲಸೆ ಬಂದವರು ಮಾತ್ರ ಭಾರತೀಯ ಪೌರತ್ವ ಪಡೆಯಲು ಸಾಧ್ಯವಿದೆ. ಹೊಸದಾಗಿ ವಲಸೆ ಬಂದವರಿಗೆ ಪೌರತ್ವ ಸಿಗುವುದಿಲ್ಲ ಎಂದು ಸೊನೋವಾಲ್ ಸ್ಪಷ್ಟಪಡಿಸಿದರು.

ಇಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಪೌರತ್ವ ತಿದ್ದುಪಡಿ ಕಾಯ್ದೆ ಬಳಸಿಕೊಂಡು ಒಬ್ಬನೇ ಬಾಂಗ್ಲಾ ವ್ಯಕ್ತಿಗೂ ಅಸ್ಸಾಮ್ ಪ್ರವೇಶ ಸಿಗುವುದಿಲ್ಲ” ಎಂದು ಹೇಳಿದರು.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಗೂಢಚಾರಿಕೆ: ಆಂಧ್ರದಲ್ಲಿ 7 ಭಾರತೀಯ ನೌಕಾಪಡೆ ಸಿಬ್ಬಂದಿ ಬಂಧನ

ಅಸ್ಸಾಮ್​ನಲ್ಲಿ ಈಗಾಗಲೇ ಎನ್​ಆರ್​ಸಿ ಅಥವಾ ರಾಷ್ಟ್ರೀಯ ಪೌರತ್ವ ನೊಂದಣಿಯ ಅಂತಿಮ ಪಟ್ಟಿ ಪ್ರಕಟವಾಗಿದೆ. ಪಟ್ಟಿಯಲ್ಲಿ ಇಲ್ಲದ ವ್ಯಕ್ತಿಗಳು ತಮ್ಮ ಪೌರತ್ವ ಸಾಬೀತುಪಡಿಸಲು ಕಾಲಾವಕಾಶ ನೀಡಲಾಗಿದೆ. ಇದಕ್ಕಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಇದೇ ವೇಳೆಯಲ್ಲಿ ಈಗ ಪೌರತ್ವ ತಿದ್ದುಪಡಿ ಕಾಯ್ದೆ ತರಲಾಗಿದೆ. ಇದರಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಲ್ಲಿ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ವಲಸೆ ಬಂದಿರುವ ಆ ದೇಶಗಳ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ಪಡೆದುಕೊಳ್ಳಲು ಈ ಕಾಯ್ದೆ ಅವಕಾಶ ಕೊಡುತ್ತದೆ. ಈ ಹಿನ್ನೆಲೆಯಲ್ಲಿ ಅಸ್ಸಾಮ್​ನಲ್ಲಿ ಈ ಕಾಯ್ದೆ ಬಳಸಿಕೊಂಡು ಬಾಂಗ್ಲಾದೇಶದಿಂದ ಜನರು ವಲಸೆ ಬಂದು ಪೌರತ್ವ ಗಿಟ್ಟಿಸಬಹುದು ಎಂಬ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅಸ್ಸಾಮ್ ಮುಖ್ಯಮಂತ್ರಿಗಳು ಈ ಮೇಲಿನ ಸ್ಪಷ್ಟೀಕರಣ ನೀಡಿದರು.

ಇದನ್ನೂ ಓದಿ: 10 ದಿನದ ಬಳಿಕ ಅಸ್ಸಾಂನಲ್ಲಿ ಮತ್ತೆ ಇಂಟರ್​ನೆಟ್​ ಸೇವೆ ಆರಂಭ

ಪೌರತ್ವ ಕಾಯ್ದೆ ಅಡಿ ಪೌರತ್ವಕ್ಕಾಗಿ ಅರ್ಜಿಗಳು ಸಲ್ಲಿಸುವ ಪ್ರಕ್ರಿಯೆ ಮುಗಿದ ಬಳಿಕ ಆ ಎಲ್ಲಾ ವಿವರಗಳನ್ನು ಬಹಿರಂಗಪಡಿಸಲಾಗುವುದು. ಇಂಥ ಪೌರತ್ವ ಅರ್ಜಿಗಳ ಪ್ರಮಾಣ ತೀರಾ ಕಡಿಮೆಯೇ ಇರಲಿದೆ. ಈ ಪ್ರಮಾಣದಷ್ಟು ಮಂದಿಗೆ ಪೌರತ್ವ ನೀಡಿದರೆ ಅಸ್ಸಾಮ್​ನ ಸಾಮಾಜಿಕ ವ್ಯವಸ್ಥೆಗೆ ಯಾವುದೇ ಧಕ್ಕೆ ಆಗುವುದಿಲ್ಲ. ಅಸ್ಸಾಮ್ ಒಪ್ಪಂದದ ನಿಯಮಾವಳಿಗಳು ಸ್ಥಳೀಯರ ಸಾಂಸ್ಕೃತಿಕ, ಸಾಮಾಜಿಕತೆಗೆ ರಕ್ಷಣೆ ಒದಗಿಸುತ್ತವೆ. ಜನರು ತಪ್ಪು ಮಾಹಿತಿಗೆ ಒಳಗಾಗಬಾರದು. ಸರ್ಕಾರವು ಅಸ್ಸಾಮ್ ಜನರ ರಕ್ಷಣೆಗೆ ಕಟಿಬದ್ಧವಾಗಿದೆ ಎಂದು ಸರ್ಬಾನಂದ ಸೋನೋವಾಲ್ ತಿಳಿಸಿದರು.

“ಪೌರತ್ವ ಕಾಯ್ದೆ ವಿರೋಧಿ ಹೋರಾಟದ ಮುಂಚೂಣಿಯಲ್ಲಿರುವ ನಾಯಕರು ಇದರ ಬಗ್ಗೆ ಚರ್ಚೆಗೆ ಬರುವಂತೆ ಕೋರಿದ್ದೇನೆ. ಎಲ್ಲದಕ್ಕೂ ಪರಿಹಾರ ಇರುತ್ತದೆ. ಒಟ್ಟಿಗೆ ಕೂತು ಮಾತಾಡಿ ಒಂದು ಪರಿಹಾರ ಹುಡುಕಬಹುದು” ಎಂದು ಅಸ್ಸಾಮ್ ಸಿಎಂ ಸಲಹೆ ನೀಡಿದರು.ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

Published by: Vijayasarthy SN
First published: December 20, 2019, 2:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading