ಭಾರತದಲ್ಲಿ ಹೊಸ ಸ್ವರೂಪದ ಕೊರೋನಾ ವೈರಸ್ ಪತ್ತೆಯಾಗಿಲ್ಲ; ಆತಂಕ ಬೇಡ ಎಂದ ತಜ್ಞರು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಈ ಹೊಸ ಸ್ವರೂಪದ ಕೊರೋನಾ ವೈರಸ್ ಹರಡುವಿಕೆ ಪ್ರಮಾಣ ಹೆಚ್ಚಿದೆ. ಆದರೆ ಸಾವು ಹೆಚ್ಚಾಗುವ ಬಗ್ಗೆ ಪುರಾವೆಗಳಿಲ್ಲ.  ಸದ್ಯ ಲಭ್ಯವಿರುವ ವ್ಯಾಕ್ಸಿನ್ ಗಳು ನಿಷ್ಪ್ರಯೋಜಕ ಎನ್ನುವಂತಿಲ್ಲ. ಪ್ರತಿಕಾಯಗಳ ಸೃಷ್ಟಿಯಲ್ಲಿ ವ್ಯತಾಸಗಳಾಗಬಹುದು. ಆದರೆ ವ್ಯರ್ಥ ಎನ್ನಲು ಸಾಧ್ಯವಿಲ್ಲ ಎಂದು ವ್ಯಾಕ್ಸಿನ್ ಗೊಂದಲಗಳ ಬಗ್ಗೆ ವೈಜ್ಞಾನಿಕ ಮತ್ತು ಸಂಶೋಧನಾ ಮಂಡಳಿ ಮಹಾ ನಿರ್ದೇಶಕ ಶೇಖರ್ ಮಾಂಡೆ ಸ್ಪಷ್ಟನೆ ನೀಡಿದ್ದಾರೆ.

ಮುಂದೆ ಓದಿ ...
  • Share this:

    ನವದೆಹಲಿ(ಡಿ.22): ಬ್ರಿಟನ್​ನಲ್ಲಿ ಕಾಣಿಸಿಕೊಂಡಿರುವ ಕೊರೋನಾ ಹೊಸ ಪ್ರಬೇಧ ಭಾರತದಲ್ಲಿ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ಈಗಾಗಲೇ ಬ್ರಿಟನ್ ಜನರಲ್ಲಿ ಆತಂಕ ಮೂಡಿಸಿರುವ ಕೊರೋನಾ ಹೊಸ ಸ್ವರೂಪ ಬೇರೆ ರಾಷ್ಟ್ರಗಳಿಗೂ ಹರಡುವ ಭೀತಿ ಶುರುವಾಗಿದೆ. ಭಾರತದಲ್ಲೂ ಈ ಕೊರೊನಾ ಹೊಸ ಪ್ರಬೇಧ ಹರಡುತ್ತದೆ ಎಂಬ ಭಯ ಜನರನ್ನು ಕಾಡುತ್ತಿದೆ. ಆದರೆ ಭಾರತದಲ್ಲಿ ಈವರೆಗೆ ಒಂದು ಪ್ರಕರಣವೂ ಪತ್ತೆಯಾಗಿಲ್ಲ ಎಂದು ವೈಜ್ಞಾನಿಕ ಮತ್ತು ಕೈಗಾರಿಗಾ ಸಂಶೋಧನಾ ಮಂಡಳಿಯ ಅಧ್ಯಯನ ತಿಳಿಸಿದೆ.


    ಭಾರತದಲ್ಲಿ ಕೊರೋನಾ ಹೊಸ ರೂಪಾಂತರದ ಬಗ್ಗೆ ಅಧ್ಯಯನ ಮಾಡಲಾಗಿತ್ತು. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಈ ಅಧ್ಯಯನ ಕೈಗೊಂಡಿತ್ತು. ಮಂಡಳಿಯ ಮಹಾ ನಿರ್ದೇಶದ ಶೇಖರ್ ಮಾಂಡೆಯವರ ಪ್ರಕಾರ,  ಅಧ್ಯಯನಯಲ್ಲಿ ಈವರೆಗೂ ಹೊಸ ವೈರಸ್ ಪತ್ತೆಯಾಗಿಲ್ಲ. ಭಾರತದ ಸಂಸ್ಥೆಗಳು ಕೊರೋನಾ ವೈರಸ್‌ನ 4 ಸಾವಿರದಷ್ಟು ಜೀನೊಮ್‌ಗಳನ್ನು ಗುರುತಿಸಿವೆ.  ಎಲ್ಲಾ ಮಾಹಿತಿಯನ್ನೂ ‘ಗ್ಲೋಬಲ್ ಇನಿಷಿಯೇಟಿವ್ ಆನ್ ಶೇರಿಂಗ್ ಆಲ್ ಇನ್‌ಫ್ಲುಯೆಂಜಾ ಡೇಟಾಗೆ (ಜಿಐಎಸ್‌ಎಐಡಿ) ಸಲ್ಲಿಸಿವೆ.  ಹೊಸದಾಗಿ ಕಾಣಿಸಿಕೊಂಡಿರುವ ರೂಪಾಂತರಿತ ವೈರಸ್‌ ಭಾರತದಲ್ಲಿ ಇಲ್ಲ ಎಂದು ಹೇಳಿದ್ದಾರೆ.


    Petrol Diesel Price: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು?


    ಜೊತೆಗೆ ಕೊರೋನಾ ಹೊಸ ಸ್ವರೂಪದ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಕೊರೋನಾಗೆ ಸಿದ್ದವಾಗುತ್ತಿರುವ ವ್ಯಾಕ್ಸಿನ್​ ರೂಪಾಂತರಿತ ವೈರಸ್ ವಿರುದ್ಧವೂ ಹೋರಾಡಲಿದೆ. ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್​ಐಆರ್)​​ ತಿಳಿಸಿದೆ.


    ಬ್ರಿಟನ್​ನಲ್ಲಿ ಕೊರೋನಾ ವೈರಸ್​ ರೂಪಾಂತರ ಪಡೆದು ಆತಂಕ ಸೃಷ್ಟಿಸಿರುವ ಹೊತ್ತಲ್ಲಿ ಭಾರತದಲ್ಲಿ ಸಿಎಸ್​ಐಆರ್​ ಅಭಯ ನೀಡಿದೆ.  ಸಿದ್ದವಾಗುತ್ತಿರುವ ಕೊರೋನಾ ವ್ಯಾಕ್ಸಿನ್ ರೂಪಾಂತರ ವೈರಸ್ ವಿರುದ್ಧವೂ ಹೋರಾಡಲಿದೆ. ಬದಲಾದ ಎನ್501ವೈ ವೈರಸ್ ವಿರುದ್ಧವೂ ಪ್ರತಿಕಾಯಗಳನ್ನು ಸೃಷ್ಠಿಸಬಲ್ಲದು ಎಂದು ಹೇಳಿದೆ.


    ಈ ಹೊಸ ಸ್ವರೂಪದ ಕೊರೋನಾ ವೈರಸ್ ಹರಡುವಿಕೆ ಪ್ರಮಾಣ ಹೆಚ್ಚಿದೆ. ಆದರೆ ಸಾವು ಹೆಚ್ಚಾಗುವ ಬಗ್ಗೆ ಪುರಾವೆಗಳಿಲ್ಲ.  ಸದ್ಯ ಲಭ್ಯವಿರುವ ವ್ಯಾಕ್ಸಿನ್ ಗಳು ನಿಷ್ಪ್ರಯೋಜಕ ಎನ್ನುವಂತಿಲ್ಲ. ಪ್ರತಿಕಾಯಗಳ ಸೃಷ್ಟಿಯಲ್ಲಿ ವ್ಯತಾಸಗಳಾಗಬಹುದು. ಆದರೆ ವ್ಯರ್ಥ ಎನ್ನಲು ಸಾಧ್ಯವಿಲ್ಲ ಎಂದು ವ್ಯಾಕ್ಸಿನ್ ಗೊಂದಲಗಳ ಬಗ್ಗೆ ವೈಜ್ಞಾನಿಕ ಮತ್ತು ಸಂಶೋಧನಾ ಮಂಡಳಿ ಮಹಾ ನಿರ್ದೇಶಕ ಶೇಖರ್ ಮಾಂಡೆ ಸ್ಪಷ್ಟನೆ ನೀಡಿದ್ದಾರೆ.

    Published by:Latha CG
    First published: