ಸಿಎಎ ವಿರೋಧಿ ಹೋರಾಟಗಾರರ ವಿರುದ್ಧ ಬ್ಯಾನರ್; ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಛೀಮಾರಿ ಹಾಕಿದ ಸುಪ್ರೀಂ

ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ವಿಧ್ವಂಸಕ ಆರೋಪದವರ ಪೋಸ್ಟರ್​ಗಳನ್ನು ತೆಗೆದುಹಾಕುವಂತೆ ರಾಜ್ಯ ಆಡಳಿತಾಧಿಕಾರಿಗೆ ಮಾರ್ಚ್9 ರಂದು ಅಲಹಾಬಾದ್ ಹೈಕೋರ್ಟ್ ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿಸಿ ಉತ್ತರಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

ಯೋಗಿ ಆದಿತ್ಯನಾಥ್.

ಯೋಗಿ ಆದಿತ್ಯನಾಥ್.

  • Share this:
ನವ ದೆಹಲಿ (ಮಾರ್ಚ್​ 12); ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ಗುರುತಿಸುವ ಮತ್ತು ಅವರನ್ನು ಅವಮಾನಿಸುವಂತಹ ಹೋರ್ಡಿಂಗ್​ಗಳನ್ನು ಹಾಕುವ ಉತ್ತರಪ್ರದೇಶ ಸರ್ಕಾರದ ಆದಿತ್ಯನಾಥ್ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ಅಲ್ಲದೆ, "ಇಂತಹ ನಿರ್ಧಾರಗಳಿಗೆ ಕಾನೂನಿನಲ್ಲಿ ಯಾವುದೇ ಬೆಂಬಲವಿಲ್ಲ" ಎಂದು ಸ್ಪಷ್ಟಪಡಿಸಿದೆ. ಆದರೆ, ಸುಪ್ರೀಂ ಕೋರ್ಟ್ ಈ ಕುರಿತು ಯಾವುದೇ ಮಧ್ಯಂತರ ಆದೇಶವನ್ನು ಹೊರಡಿಸಿಲ್ಲ. ಬದಲಾಗಿ ಮುಂದಿನ ವಾರ ಈ ವಿಷಯವನ್ನು ಮೂರು ನ್ಯಾಯಾಧೀಶರ ಪೀಠ ಈ ಕುರಿತು ವಿಚಾರಣೆ ನಡೆಸಲಿದೆ ಎಂದು ತಿಳಿಸಿದೆ.

ಸಿಎಎ ವಿರೋಧಿ ಹೋರಾಟಗಾರರು ಪ್ರತಿಭಟನೆ ನಡೆಸುವ ಸ್ಥಳದಲ್ಲಿ ಅವರನ್ನು ಗುರುತಿಸುವ ಸಲುವಾಗಿ ಪೋಸ್ಟರ್ ಮತ್ತು ಬ್ಯಾನರ್​ಗಳನ್ನು ಹಾಕಬೇಕು ಎಂದು ಉತ್ತರಪ್ರದೇಶ ಸರ್ಕಾರ ಮನವಿ ಸಲ್ಲಿಸಿತ್ತು.

ಈ ಪ್ರಕರಣವನ್ನು ನ್ಯಾಯಮೂರ್ತಿಗಳಾದ ಲಲಿತ್ ಮತ್ತು ಅನಿರುದ್ಧ ಬೋಸ್ ವಿಚಾರಣೆ ತೆಗೆದುಕೊಂಡರು. ಉತ್ತರಪ್ರದೇಶ ಸರಕಾರದ ಪರ ಸಾಲಿಟರ್ ಜನರಲ್ ತುಷಾರ್ ಮೆಹ್ತಾ ಹಾಜರಾಗಿದ್ದರು. ಈ ವೇಳೆ ತುಷಾರ್ ಮೆಹ್ತಾ ಅವರಿಗೆ ಪ್ರಶ್ನೆ ಮಾಡಿರುವ ನ್ಯಾಯಮೂರ್ತಿಗಳು “ಪೋಸ್ಟರ್​ಗಳನ್ನು ಹಾಕುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆಯೇ?” ಎಂದು ಖಾರವಾಗಿ ಪ್ರಶ್ನಿಸಿದರು.

ಆದರೂ, “ಗಲಭೆಕೋರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಗಲಭೆಗೆ ಕಾರಣವಾಗುವವರಿಗೆ ಶಿಕ್ಷೆಯಾಗಬೇಕು ಈ ವಿಚಾರದಲ್ಲಿ ಯಾವುದೇ ಅನುಮಾನವಿಲ್ಲ” ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ವಿಧ್ವಂಸಕ ಆರೋಪದವರ ಪೋಸ್ಟರ್​ಗಳನ್ನು ತೆಗೆದುಹಾಕುವಂತೆ ರಾಜ್ಯ ಆಡಳಿತಾಧಿಕಾರಿಗೆ ಮಾರ್ಚ್9 ರಂದು ಅಲಹಾಬಾದ್ ಹೈಕೋರ್ಟ್ ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿಸಿ ಉತ್ತರಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

ಈ ಕುರಿತು ವಿಚಾರಣೆಯ ವೇಳೆ ಇಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಸಿಎಎ ವಿರೋಧಿ ಹೋರಾಟಗಾರರಿಗೆ ಸಂಬಂಧಿಸಿದಂತೆ ಪೋಸ್ಟರ್ ಮತ್ತು ಬ್ಯಾನರ್ ಹಾಕಲು ಕಾನೂನಿನಲ್ಲಿ ಯಾವುದೇ ಅವಕಾಶ ಇಲ್ಲ” ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ : ಕೊನೆಗೂ ಸಕ್ರೀಯ ರಾಜಕಾರಣಕ್ಕೆ ಕಾಲಿಟ್ಟ ತಲೈವಾ; ರಜನಿಕಾಂತ್​ ರಾಜಕೀಯ ಪ್ರವೇಶ ಸೃಷ್ಟಿಸುತ್ತಾ ಹೊಸ ಅಲೆ?
First published: