ಭೀಮಾ ಕೋರೆಗಾಂವ್​ ಪ್ರಕರಣ; ಮಹಾರಾಷ್ಟ್ರ ಪೊಲೀಸರಿಗೆ ಭಾರೀ ಹಿನ್ನಡೆ: ಬಂಧಿತರಿಗೆ ಸೆ.6ರವರೆಗೆ ಗೃಹ ಬಂಧನ


Updated:August 29, 2018, 5:50 PM IST
ಭೀಮಾ ಕೋರೆಗಾಂವ್​ ಪ್ರಕರಣ; ಮಹಾರಾಷ್ಟ್ರ ಪೊಲೀಸರಿಗೆ ಭಾರೀ ಹಿನ್ನಡೆ: ಬಂಧಿತರಿಗೆ ಸೆ.6ರವರೆಗೆ ಗೃಹ ಬಂಧನ

Updated: August 29, 2018, 5:50 PM IST
ನ್ಯೂಸ್​ 18 ಕನ್ನಡ

ನವದೆಹಲಿ (ಆ.29): ಭೀಮಾ ಕೋರೆಗಾಂವ್​ ಹಿಂಸಾತ್ಮಕ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಬಂಧಿಸಲಾಗಿರುವ ಐವರು ಹೋರಾಟಗಾರರನ್ನು ಸೆ.6ರವರೆಗೆ ಗೃಹಬಂಧನದಲ್ಲಿ ಇರಿಸಬೇಕು ಎಂದು ಸುಪ್ರೀಂ ಕೋರ್ಟ್​ ಮಧ್ಯಂತರ ಆದೇಶ ನೀಡಿದೆ.

ಈ ಐವರ ಬಂಧನ ಪ್ರಶ್ನಿಸಿ ಹಿರಿಯ ವಕೀಲ ಪ್ರಶಾಂತ್​ ಭೂಷಣ್​ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ  ಸುಪ್ರೀಂ ಕೋರ್ಟ್​ ಮಧ್ಯಂತರ ಆದೇಶ ನೀಡಿದೆ. ಮುಂದಿನ ವಿಚಾರಣೆ ವರರೆಗೂ  ಅವರನ್ನು ಗೃಹ  ಬಂಧನದಲ್ಲಿ ಇರಿಸಬೇಕು ಎಂದು ದೀಪಕ್​ ಮಿಶ್ರಾ ಅವರನ್ನು ಒಳಗೊಂಡ ತ್ರಿ ಸದಸ್ಯ ಪೀಠ ಆದೇಶ ಮಾಡಿದೆ.

ಕ್ರಾಂತಿಕಾರಿ ಕವಿ ವರವರ ರಾವ್, ಅರುಣ್ ಫೆರೇರಾ, ಹೋರಾಟಗಾರ್ತಿ ಸುಧಾ ಭಾರದ್ವಾಜ್, ವರ್ನಾನ್ ಗೊನ್ಸಾಲ್ವಿಸ್, ಗೌತಮ್ ನವಲಖಾ ಅವರಿಗೆ ನಕ್ಸಲ್​ ಸಂಪರ್ಕವನ್ನು ಹೊಂದಿದ್ದಾರೆ. ಅವರು ಯಾವುದೊ ಷಡ್ಯಂತ್ರ ರೂಪಿಸಿದ್ದಾರೆ. ಅದು ಯಾವುದು ಎಂದು ತಿಳಿದುಬಂದಿಲ್ಲ ಎಂದು ಪುಣೆ ಪೊಲೀಸರು ತಿಳಿಸಿದ್ದಾರೆ.

ಇಷ್ಟೇ ಅಲ್ಲದೇ ಕೇಂದ್ರ ಹಾಗೂ ಮಹಾರಾಷ್ಟ್ರ ಸರ್ಕಾರ ಬಂಧಿತ ಹೋರಾಟಗಾರರು, ವಕೀಲರ ಗೃಹ ಬಂಧನ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ನೀಡಬೇಕು ಎಂದು ಸೂಚನೆ ನೀಡಿದೆ.

ಪ್ರಶ್ನಿಸುವುದು ಪ್ರಜಾಪ್ರಭುತ್ವದ ರಕ್ಷಣೆಯಾಗಿದ್ದು, ಜನರಿಂದ ನೀವು ಟೀಕೆಗಳನ್ನು ಎದುರಿಸದಿದ್ದರೆ ಪ್ರಜಾಪ್ರಭುತ್ವ ನಾಶವಾಗುತ್ತದೆ ಎಂದು ಸುಪ್ರೀಂಕೋರ್ಟ್​ ತಿಳಿಸಿದೆ.

ಐವರು ಹೋರಾಟಗಾರರನ್ನು ಬಂಧಿಸಿದ್ದ ಕ್ರಮ ಪ್ರಶ್ನಿಸಿ ಸುಪ್ರೀಂ ಕೋರ್ಟ್​  ಮಹಾರಾಷ್ಟ್ರ ಮತ್ತು ಕೇಂದ್ರ ಸರ್ಕಾರಕ್ಕೆ ನೋಟೀಸ್​ ಜಾರಿ ಮಾಡಿತ್ತು. ಬುಧವಾರ ಈ ಕುರಿತು ಅರ್ಜಿ ಸಲ್ಲಿಸಲಾಗಿತ್ತು. ಈ ಕುರಿತು ಮಧ್ಯಂತರ ವಿರಾಮ ನೀಡಿದ ಸುಪ್ರೀಂ ಕೋರ್ಟ್​ ಗೃಹ ಬಂಧನದ ಆದೇಶ ನೀಡಿದೆ.
Loading...

ಐವರ ಪರವಾಗಿ ಸುಪ್ರೀಂ ಕೋರ್ಟ್​ನಲ್ಲಿ ವಾದ ಮಾಡಿದ ವಕೀಲ ಅಭಿಷೇಕ ಸಿಂಘ್ವಿ ಬಂಧಿತ ಐವರ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿಲ್ಲ ಎಂದರು.

ಭೀಮಾ ಕೋರೆಗಾಂವ್​ ಹಿಂಸಾತ್ಮಕ ಪ್ರಕರಣದಲ್ಲಿ ಈ ಐವರು ಪಾತ್ರವನ್ನು ಹೊಂದಿದ್ದಾರೆ ಎಂದು ಮಂಗಳವಾರ ದೇಶದ ವಿವಿಧೆಡೆ ಪ್ರಸಿದ್ದ ಹೋರಾಟಗಾರರ ಮನೆ ಮೇಲೆ ದಾಳಿ ನಡೆಸಿ ಅವರನ್ನು ಪುಣೆ ಪೊಲೀಸರು ವಶಕ್ಕೆ ಪಡೆದಿದ್ದರು.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ