'ಮಾನಸಿಕ ಆರೋಗ್ಯಕ್ಕೆ ವಿಮಾ ರಕ್ಷಣೆ ಏಕಿಲ್ಲ?'; ಕೇಂದ್ರ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದ ಸುಪ್ರೀಂ ಕೋರ್ಟ್

ಮಾನಸಿಕ ಆರೋಗ್ಯ ಕಾಯ್ದೆ 2017 ರ ಪ್ರಕಾರ, ಮಾನಸಿಕ ಅಸ್ವಸ್ಥತೆಯಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಎಲ್ಲಾ ಆರೋಗ್ಯ ವಿಮಾ ಪಾಲಿಸಿಗಳಲ್ಲಿ ದೈಹಿಕ ಕಾಯಿಲೆ ಇರುವ ವ್ಯಕ್ತಿಗಳಿಗೆ ಸಮಾನರೆಂದು ಪರಿಗಣಿಸಬೇಕು ಎಂದು ಸೂಚಿಸಲಾಗಿದೆ.

ಸುಪ್ರೀಂ ಕೋರ್ಟ್​​

ಸುಪ್ರೀಂ ಕೋರ್ಟ್​​

  • Share this:
ನವ ದೆಹಲಿ (ಜೂನ್‌ 16); ಮಾನಸಿಕ ಅಸ್ವಸ್ಥತೆಗಳಿಗೂ ಆರ್ಥಿಕ ರಕ್ಷಣೆಯನ್ನು ವಿಸ್ತರಿಸುವಂತೆ ಕೋರಿ ಸಲ್ಲಿಸಿದ ಮನವಿಯ ಕುರಿತು ಇಂದು ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, “ಮಾನಸಿಕ ಆರೋಗ್ಯಕ್ಕೆ ವಿಮಾ ರಕ್ಷಣೆ ಏಕಿಲ್ಲ?” ಎಂದು ಪ್ರಶ್ನಿಸಿ ಕೇಂದ್ರ ಸರ್ಕಾರ ಮತ್ತು ವಿಮಾ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರಕ್ಕೆ (Insurance Regulatory Development Authority) ನೊಟೀಸ್ ಜಾರಿ ಮಾಡಿದೆ.

ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಪ್ಪಿದ ಸುಪ್ರೀಂ ಕೋರ್ಟ್ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರಿಗೆ ವಿಮಾ ರಕ್ಷಣೆಯನ್ನು ಏಕೆ ವಿಸ್ತರಿಸಬೇಕು? ಎಂಬುದರ ಕುರಿತು ವಿವರಣೆ ಕೇಳಿದೆ. ಅಲ್ಲದೆ, ಮುಂದಿನ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.

ಮಾನಸಿಕ ಆರೋಗ್ಯದ ಕುರಿತು ಸುಪ್ರೀಂ ಕೋರ್ಟ್‌ ವಿಚಾರಣೆ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಮುಕ್ತ ಚರ್ಚೆಗೆ ಪ್ರೇರೇಪಿಸಿದೆ. ವಿಶೇಷವಾಗಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಇದು ಬಹು ಮುಖ್ಯವಾದ ಕ್ರಮ ಎಂದು ವಿಶ್ಲೇಷಿಸಲಾಗುತ್ತಿದೆ.

ಇನ್ಶ್ಯೂರೆನ್ಸ್ ಪಾಲಿಸಿಗಳಲ್ಲಿ ಮಾನಸಿಕ ಅಸ್ವಸ್ಥತೆಯನ್ನು ಸರಿದೂಗಿಸಲು ಅವಕಾಶ ಕಲ್ಪಿಸುವಂತೆ ವಿಮಾ ಕಂಪನಿಗಳಿಗೆ 2018 ರಲ್ಲಿ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ನಿರ್ದೇಶನ ನೀಡಿತ್ತು.

ಚಾಲ್ತಿಯಲ್ಲಿದ್ದ “ಮಾನಸಿಕ ಆರೋಗ್ಯ ಕಾಯ್ದೆ 2017” ಅನ್ನು ಉಲ್ಲೇಖಿಸಿದ್ದ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ, “ಪ್ರತಿಯೊಬ್ಬ ವಿಮಾದಾರನು ದೈಹಿಕ ಅಸ್ವಸ್ಥತೆಯ ಚಿಕಿತ್ಸೆಗೆ ಲಭ್ಯವಿರುವ ಅದೇ ಆಧಾರದ ಮೇಲೆ ಮಾನಸಿಕ ಅಸ್ವಸ್ಥತೆಯ ಚಿಕಿತ್ಸೆಗಾಗಿ ವೈದ್ಯಕೀಯ ವಿಮೆಯನ್ನು ಒದಗಿಸಬೇಕು” ಎಂದು ಮೇ 2018 ರಂದು ಸೂಚನೆ ನೀಡಿತ್ತು.

ಇದನ್ನೂ ಓದಿ : ‘ಕೋವಿಡ್​​-19 ಮರಣ ಪ್ರಮಾಣದಲ್ಲೂ ಗುಜರಾತ್​​ ಮಾಡೆಲ್​​‘ - ರಾಹುಲ್​​ ಗಾಂಧಿ ಲೇವಡಿ

ಮಾನಸಿಕ ಆರೋಗ್ಯ ಕಾಯ್ದೆ 2017 ರ ಪ್ರಕಾರ, ಮಾನಸಿಕ ಅಸ್ವಸ್ಥತೆಯಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಎಲ್ಲಾ ಆರೋಗ್ಯ ವಿಮಾ ಪಾಲಿಸಿಗಳಲ್ಲಿ ದೈಹಿಕ ಕಾಯಿಲೆ ಇರುವ ವ್ಯಕ್ತಿಗಳಿಗೆ ಸಮಾನರೆಂದು ಪರಿಗಣಿಸಬೇಕು ಎಂದು ಸೂಚಿಸಲಾಗಿದೆ.
First published: