ಒಂದು ಮತ್ತು 2ನೇ ತರಗತಿ ಮಕ್ಕಳಿಗೆ ಹೋಮ್​​ ವರ್ಕ್​ ನೀಡಿದರೆ ಹುಷಾರ್​: ಮದ್ರಾಸ್​ ಹೈಕೋರ್ಟ್​

ಪುಟ್ಟ ಮಕ್ಕಳ ಹೆಗಲ ಮೇಲಿದ್ದ ಹೋಮ್​ವರ್ಕ್​ ಭಾರವನ್ನು ಮದ್ರಾಸ್​ ಹೈಕೋರ್ಟ್​ ಇಳಿಸಿದೆ

news18
Updated:August 20, 2018, 4:39 PM IST
ಒಂದು ಮತ್ತು 2ನೇ ತರಗತಿ ಮಕ್ಕಳಿಗೆ ಹೋಮ್​​ ವರ್ಕ್​ ನೀಡಿದರೆ ಹುಷಾರ್​: ಮದ್ರಾಸ್​ ಹೈಕೋರ್ಟ್​
ಸಾಂದರ್ಭಿಕ ಕಾರ್ಟೂನ್​
news18
Updated: August 20, 2018, 4:39 PM IST
- ಚೆನ್ನೈ (ಆಗಸ್ಟ್​ 20): ಒಂದು ಮತ್ತು ಎರಡನೇ ತರಗತಿ ಸಿಬಿಎಸ್​ಇ ವಿದ್ಯಾರ್ಥಿಗಳಿಗೆ ಹೋಮ್​ ವರ್ಕ್​ ನೀಡದಂತೆ ಮದ್ರಾಸ್​ ಹೈಕೋರ್ಟ್​ ಮಹತ್ವದ ಆದೇಶ ಹೊರಡಿಸಿದೆ. ಕೋರ್ಟ್​ ಆದೇಶವನ್ನು ಮೀರಿದ್ದೇ ಆದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೈಕೋರ್ಟ್​ ಎಚ್ಚರಿಕೆ ನೀಡಿದೆ. ಬೆಳೆಯುವ ಮಕ್ಕಳಿಗೆ ಹೋಮ್​ ವರ್ಕ್​ ಹೇರಿಕೆಗೆ ಈ ಮೂಲಕ ದೇಶವ್ಯಾಪಿಯಾಗಿ ಕೋರ್ಟ್​ ತಡೆ ಹೇರಿದೆ.

ಸೋಮವಾರವಾದ ಇಂದು ಮದ್ರಾಸ್​ ಹೈಕೋರ್ಟ್​ ಈ ತೀರ್ಪನ್ನು ಪ್ರಕಟಿಸಿದೆ. ಜತೆಗೆ ಸಿಬಿಎಸ್​ಇ ಮಂಡಳಿಗೆ ಖಡಕ್​ ಸೂಚನೆ ನೀಡಿದೆ. ಜತೆಗೆ ಸಿಬಿಎಸ್​ಇ ಶೀಘ್ರದಲ್ಲೇ ಎಲ್ಲಾ ಪ್ರಮುಖ ದಿನಪತ್ರಿಕೆಗಳಲ್ಲೂ 1 ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಮ್​ ವರ್ಕ್​ ರದ್ದುಗೊಳಿಸಿರುವ ಬಗ್ಗೆ ಪ್ರಕಟಣೆ ಹೊರಡಿಸಬೇಕು ಎಂದು ಕೋರ್ಟ್​ ಆದೇಶಿಸಿದೆ.

ಸಿಬಿಎಸ್​ಇ ಮಂಡಳಿಯಿಂದ ಮಾನ್ಯತೆ ಪಡೆದಿರುವ ಎಲ್ಲಾ ವಿದ್ಯಾ ಸಂಸ್ಥೆಗಳಿಗೂ ತುರ್ತಾಗಿ ಈ ಆದೇಶವನ್ನು ತಲುಪಿಸಬೇಕು ಎಂದು ಕೋರ್ಟ್​​ ತಾಕೀತು ಮಾಡಿದೆ. ಇಷ್ಟು ದಿನಗಳ ಕಾಲ 1 ಮತ್ತು 2ನೇ ತರಗತಿ ಮಕ್ಕಳಿಗೆ ಹೋಮ್​ ವರ್ಕ್​ ಕೊಡಲಾಗುತ್ತಿತ್ತು. ಚಿಕ್ಕ ವಯಸ್ಸಿನ ಮಕ್ಕಳ ಮೇಲೆ ವಿಪರೀತ ಹೋಮ್​ ವರ್ಕ್​ ನೀಡುವುದು ಶಿಕ್ಷೆಯಂತೆ ಭಾಸವಾಗುತ್ತಿತ್ತು. ಈ ಸಂಬಂಧದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಮದ್ರಾಸ್​ ಹೈಕೋರ್ಟ್​ ಸ್ವಾಗತಾರ್ಹ ತೀರ್ಪು ನೀಡಿದೆ.
First published:August 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ