• Home
  • »
  • News
  • »
  • national-international
  • »
  • Gujarat: ಮುಂದಿನ 5 ದಿನ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ರೂ ದಂಡ ಹೇರುವಂತಿಲ್ಲ, ಸರ್ಕಾರದ ಆದೇಶ!

Gujarat: ಮುಂದಿನ 5 ದಿನ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ರೂ ದಂಡ ಹೇರುವಂತಿಲ್ಲ, ಸರ್ಕಾರದ ಆದೇಶ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Gujarat Traffic Police: ದೀಪಾವಳಿ ಹಬ್ಬದಂದು ಗುಜರಾತ್ ಸರ್ಕಾರ ಜನರಿಗೆ ಭರ್ಜರಿ ರಿಲೀಫ್ ನೀಡಿದೆ. ಅಕ್ಟೋಬರ್ 21 ರಿಂದ 27 ರವರೆಗೆ ಯಾವುದೇ ಸಂಚಾರ ಪೊಲೀಸರು ನಾಗರಿಕರಿಂದ ಯಾವುದೇ ದಂಡವನ್ನು ಸಂಗ್ರಹಿಸುವುದಿಲ್ಲ ಎಂದು ಗುಜರಾತ್ ಗೃಹ ಸಚಿವರು ಘೋಷಿಸಿದರು.

  • News18 Kannada
  • Last Updated :
  • Gujarat, India
  • Share this:

ಅಹಮದಾಬಾದ್(ಅ.22): ಗುಜರಾತ್​ನಲ್ಲಿ ವಿಧಾನಸಭಾ ಚುನಾವಣೆಯಿಂದಾಗಿ (Gujarat Assembly Elections) ರಾಜಕೀಯ ಕಾವು ಏರಿದೆ. ಸಾರ್ವಜನಿಕರನ್ನು ಓಲೈಸಲು ಪಕ್ಷಗಳು ವಿಭಿನ್ನ ತಂತ್ರಗಳನ್ನು ಅನುಸರಿಸುತ್ತಿವೆ. ಕೆಲವರು ಹಳೆ ಪಿಂಚಣಿ (Pension Scheme) ಯೋಜನೆ ಮರುಸ್ಥಾಪಿಸುವುದಾಗಿ ಭರವಸೆ ನೀಡಿದರೆ, ಇನ್ನು ಕೆಲವರು ರೈತರಿಗೆ ಪರಿಹಾರ ನೀಡುವ ಬಗ್ಗೆ ಮಾತನಾಡುತ್ತಿದ್ದಾರೆ. ಈ ನಡುವೆ ಆಡಳಿತಾರೂಢ ಬಿಜೆಪಿ (BJP) ರಾಜ್ಯದ ಜನತೆಗೆ ಭರ್ಜರಿ ದೀಪಾವಳಿ ಉಡುಗೊರೆ ನೀಡಿದೆ. ಅಕ್ಟೋಬರ್ 27 ರವರೆಗೆ ರಾಜ್ಯದ ಸಂಚಾರ ಪೊಲೀಸರು ನಾಗರಿಕರಿಂದ ಯಾವುದೇ ದಂಡವನ್ನು ಸಂಗ್ರಹಿಸುವಂತಿಲ್ಲ ಎಂದು ಗುಜರಾತ್ ಗೃಹ ಸಚಿವ ಹರ್ಷ ಸಾಂಘ್ವಿ ಘೋಷಿಸಿದ್ದಾರೆ.


ಹರ್ಷ ಸಾಂಘ್ವಿ ಘೋಷಣೆ


ಇಂದು ಅಂದರೆ ಅಕ್ಟೋಬರ್ 21 ರಿಂದ ಅಕ್ಟೋಬರ್ 27 ರವರೆಗೆ ಸಂಚಾರಿ ಪೊಲೀಸರು ಯಾವುದೇ ವ್ಯಕ್ತಿಗೆ ಟ್ರಾಫಿಕ್ ನಿಯಮ ಉಲ್ಲಂಘನೆ ಸಂಬಂಧ ದಂಡ ವಿಧಿಸುವಂತಿಲ್ಲ ಎಂದು ಗೃಹ ಸಚಿವ ಹರ್ಷ ಸಾಂಘ್ವಿ ಹೇಳಿದ್ದಾರೆ. ಇದರರ್ಥ ಸಾರ್ವಜನಿಕರು ಸಂಚಾರ ನಿಯಮ ಪಾಲಿಸಬಾರದು ಎಂದಲ್ಲ, ಅವರು ನಿಯಮಗಳನ್ನು ಅನುಸರಿಸಬೇಕು. ಆದರೆ ತಿಳಿಯದೇ ನಿಯಮಗಳನ್ನು ಉಲ್ಲಂಘಿಸಿದರೂ ಪೊಲೀಸರು ದಂಡ ವಿಧಿಸಬಾರದು ಎಂದಿದ್ದಾರೆ.


ಇದನ್ನೂ ಓದಿ: Bengaluru Lakes: ಕಾಣದಂತೆ ಮಾಯವಾಯ್ತಣ್ಣ ಬೆಂಗಳೂರು ಕೆರೆಗಳು! ಜೀವಸೆಲೆಯ ನೆಲೆ ಮೇಲೆ ತಲೆ ಎತ್ತಿದ ಲೇಔಟ್‌ಗಳು!


ಎಎಪಿಯಿಂದಲೂ ಪ್ರಮುಖ ಘೋಷಣೆ


ಏತನ್ಮಧ್ಯೆ, ವರ್ಷಾಂತ್ಯದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೆ ರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು (OPS) ಮರುಸ್ಥಾಪಿಸುವ ತನ್ನ ಚುನಾವಣಾ ಭರವಸೆಯನ್ನು ಆಮ್ ಆದ್ಮಿ ಪಕ್ಷ (ಎಎಪಿ) ಶುಕ್ರವಾರ ಮತ್ತೆ ನೆನಪಿಸಿದೆ. ಪಂಜಾಬ್‌ನಲ್ಲಿ ಒಪಿಎಸ್ ಅನ್ನು ಪುನಃಸ್ಥಾಪಿಸುವ ಎಎಪಿ ಸರ್ಕಾರದ ಘೋಷಣೆಯನ್ನು ಉಲ್ಲೇಖಿಸಿದ ಗುಜರಾತ್ ಎಎಪಿ ಅಧ್ಯಕ್ಷ ಗೋಪಾಲ್ ಇಟಾಲಿಯಾ, ಗುಜರಾತ್‌ನಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ, ಪಕ್ಷವು ಇಲ್ಲಿಯೂ ಅದೇ ರೀತಿ ಮಾಡುತ್ತದೆ ಎಂದು ಹೇಳಿದರು.


ಹಳೆಯ ಪಿಂಚಣಿ ಯೋಜನೆ ಪ್ರಾರಂಭ


ಇಟಾಲಿಯಾ ಹೇಳಿಕೆಯಲ್ಲಿ, 'ಪಂಜಾಬ್‌ನಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವುದು ಎಎಪಿಯ ಐತಿಹಾಸಿಕ ನಿರ್ಧಾರವಾಗಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನಿರ್ಧಾರದಿಂದ ಸಾವಿರಾರು ಉದ್ಯೋಗಿಗಳು ಪ್ರಯೋಜನ ಪಡೆಯಲಿದ್ದಾರೆ. ಎಎಪಿ ಅಧಿಕಾರಕ್ಕೆ ಬಂದ ನಂತರ ಗುಜರಾತ್‌ನಲ್ಲೂ ಹಳೆಯ ಪಿಂಚಣಿ ಯೋಜನೆಯನ್ನು ಪ್ರಾರಂಭಿಸಲಿದೆ ಎಂದರು.


ಟ್ರಾಫಿಕ್‌ನಲ್ಲಿ ಕಾರು ಸಿಲುಕಿ ಪರದಾಟ, ರೋಗಿ ಉಳಿಸಲು ಆಸ್ಪತ್ರೆಗೆ ಓಡಿಕೊಂಡೇ ಬಂದ ಡಾಕ್ಟರ್!


ಬೆಂಗಳೂರು ನಗರ ಹೇಗೆ ಜಗತ್ಪ್ರಸಿದ್ಧವೋ ಹಾಗೆಯೇ ಇಲ್ಲಿನ ಟ್ರಾಫಿಕ್ ಕೂಡ ಅಷ್ಟೇ ಕುಖ್ಯಾತಿ ಪಡೆದಿದೆ. ಜಗತ್ತಿನಲ್ಲಿ ಪ್ರತಿನಿತ್ಯ ಟ್ರಾಫಿಕ್ ಸಮಸ್ಯೆಗಳಿಂದ ತತ್ತರಿಸುವ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಇದೀಗ ಇಂತಹ ದಟ್ಟ ಟ್ರಾಫಿಕ್‌ ಸಮಸ್ಯೆಯಿಂದ ಬೆಂಗಳೂರಿನ ವೈದ್ಯರೊಬ್ಬರು ಪರದಾಡಿದ್ದಾರೆ.


ಇದನ್ನೂ ಓದಿ: Brand Bengaluru: ಬೆಂಗಳೂರನ್ನು ಟ್ರೋಲ್ ಮಾಡುವವರಿಗೆ ತಪರಾಕಿ, ಕನ್ನಡಿಗರು ಹೇಳ್ತಿದ್ದಾರೆ ಬೆಂಗಳೂರು ಬಿಟ್ಟು ತೊಲಗಿ!


ತುರ್ತಾಗಿ ಆಸ್ಪತ್ರೆ ತಲುಪಬೇಕಿದ್ದ ವೈದ್ಯ


ಬೆಂಗಳೂರಿನ ಖ್ಯಾತ ಗ್ಯಾಸ್ಟ್ರೋಎಂಟರಾಲಜಿ ಶಸ್ತ್ರಚಿಕಿತ್ಸಕ ಡಾ. ಗೋವಿಂದ್ ನಂದಕುಮಾರ್ ಅವರೇ ಟ್ರಾಫಿಕ್‌ನಲ್ಲಿ ಸಿಲುಕಿ ಒದ್ದಾಡಿದ ವೈದ್ಯ. ಅವರು ತುರ್ತು ಲ್ಯಾಪರೊಸ್ಕೋಪಿಕ್ ಪಿತ್ತಕೋಶದ ಶಸ್ತ್ರಚಿಕಿತ್ಸೆ ಮಾಡಲು ಸರ್ಜಾಪುರದ ಮಣಿಪಾಲ್ ಆಸ್ಪತ್ರೆಗೆ ತೆರಳುತ್ತಿದ್ದರು. ಅವರು ತಮ್ಮ ಕಾರಿನಲ್ಲಿ ತುರ್ತಾಗಿ ಆಸ್ಪತ್ರೆಗೆ ತೆರಳುತ್ತಿದ್ದರು. ಈ ವೇಳೆ ಅವರ ಕಾರು ಭಾರೀ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದೆ.


ರೋಗಿಯ ಆಪರೇಷನ್‌ಗಾಗಿ ಓಡಿಕೊಂಡೇ ಆಸ್ಪತ್ರೆ ತಲುಪಿದ ಡಾಕ್ಟರ್


ಡಾ. ಗೋವಿಂದ್ ನಂದಕುಮಾರ್ ಅವರು ಕಾರನ್ನು ಇಳಿದು ಸರ್ಜಾಪುರ-ಮಾರತಹಳ್ಳಿ ಮಾರ್ಗದಲ್ಲಿ ಓಡಲು ನಿರ್ಧರಿಸಿದ್ದಾರೆ. ಕೂಡಲೇ ತಡಮಾಡದೇ ಸುಮಾರು 3 ಕಿಲೋ ಮೀಟರ್‌ ಓಡಿಕೊಂಡೇ ಆಸ್ಪತ್ರೆ ತಲುಪಿದ್ದಾರೆ. “ನನಗೆ ಚಾಲಕನಿದ್ದಾನೆ, ಆದ್ದರಿಂದ ನಾನು ಕಾರನ್ನು ಅಲ್ಲೇ ಬಿಡಲು ಸಾಧ್ಯವಾಯಿತು. ನಾನು ನಿಯಮಿತವಾಗಿ ಜಿಮ್ ಮಾಡಿದ್ದರಿಂದ ನನಗೆ ಓಡುವುದು ಕಷ್ಟವಾಗಲಿಲ್ಲ. ನಾನು ಆಸ್ಪತ್ರೆಗೆ ಮೂರು ಕಿ.ಮೀ ಓಡಿಬಂದು ಶಸ್ತ್ರಚಿಕಿತ್ಸೆಗೆ ಸಮಯಕ್ಕೆ ತಲುಪಿದ್ದೇನೆ ”ಎಂದು ಅವರು ಹೇಳಿದ್ದಾರೆ.

Published by:Precilla Olivia Dias
First published: