ಮುರಿದ ಸಂಪ್ರದಾಯ; ಸ್ವಾತಂತ್ರ್ಯದಿನದಂದು ಗಡಿಯಲ್ಲಿ ಭಾರತೀಯ ಸೈನಿಕರೊಂದಿಗೆ ಸಿಹಿ ಹಂಚಿಕೊಳ್ಳದ ಪಾಕ್​ ಯೋಧರು

ಪ್ರತಿಬಾರಿ ಪಾಕಿಸ್ತಾನದ ಸ್ವಾತಂತ್ರ್ಯದಿನದಂದು ಪಾಕ್​ ಯೋಧರು ಅಟ್ಟಾರಿ ವಾಘಾ ಬಳಿ ಸಿಹಿ ಹಂಚಿಕೊಂಡು ಈದ್​ ಶುಭಾಶಯ ಹಂಚಿಕೊಳ್ಳುತ್ತಾರೆ. ಆದರೆ, ಇದೇ ಮೊದಲ ಬಾರಿ ಪಾಕ್​ ಯೋಧರು ಇದೇ ಮೊದಲ ಬಾರಿ ಸಿಹಿ ಸಂಭ್ರಮ ಹಂಚಿಕೊಂಡಿಲ್ಲ.

Seema.R | news18-kannada
Updated:August 14, 2019, 4:55 PM IST
ಮುರಿದ ಸಂಪ್ರದಾಯ; ಸ್ವಾತಂತ್ರ್ಯದಿನದಂದು ಗಡಿಯಲ್ಲಿ ಭಾರತೀಯ ಸೈನಿಕರೊಂದಿಗೆ ಸಿಹಿ ಹಂಚಿಕೊಳ್ಳದ ಪಾಕ್​ ಯೋಧರು
ವಾಘಾ ಗಡಿ
  • Share this:
ಇಂದು ಪಾಕಿಸ್ತಾನ ಸ್ವಾತಂತ್ರ್ಯದಿನ. ಪ್ರತಿಬಾರಿ ಸ್ವಾತಂತ್ರ್ಯದಿನದಂದು ಎರಡು ದೇಶಗಳ ಗಡಿಯಾದ ಅಟ್ಟರಿ-ವಾಘಾ ಗಡಿ ಬಳಿ ಪಾಕ್​ ಸೈನಿಕರು ಭಾರತೀಯ ಯೋಧರೊಂದಿಗೆ ಸಿಹಿ ಹಂಚಿಕೊಳ್ಳುತ್ತಿದ್ದರು. ಆದರೆ, ಇದೇ ಮೊದಲ ಬಾರಿ ಈ ಸಂಪ್ರದಾಯವನ್ನು ಪಾಕ್​ ಯೋಧರು ಮುರಿದಿದ್ದಾರೆ.

ಪ್ರತಿಬಾರಿ ಪಾಕಿಸ್ತಾನದ ಸ್ವಾತಂತ್ರ್ಯದಿನದಂದು ಪಾಕ್​ ಯೋಧರು ಅಟ್ಟಾರಿ ವಾಘಾ ಬಳಿ ಸಿಹಿ ಹಂಚಿಕೊಂಡು ಈದ್​ ಶುಭಾಶಯ ಹಂಚಿಕೊಳ್ಳುತ್ತಾರೆ. ಆದರೆ, ಇದೇ ಮೊದಲ ಬಾರಿ ಪಾಕ್​ ಯೋಧರು ಸಿಹಿ ಸಂಭ್ರಮ ಹಂಚಿಕೊಂಡಿಲ್ಲ. ಅಲ್ಲದೇ ಈದ್​ ಶುಭಾಶಯ ವಿನಿಮಯ ಮಾಡಿಕೊಂಡಿಲ್ಲ.

ಇದನ್ನು ಓದಿ: ವಾಘಾ ಗಡಿಯಲ್ಲಿ ನಿಂತ ಸಂಜೋತಾ ಎಕ್ಸ್​ಪ್ರೆಸ್​; ಭಾರತಕ್ಕೆ ಕಾಲಿಡಲ್ಲ ಎಂದ ಪಾಕ್​ ರೈಲು ಸಿಬ್ಬಂದಿ

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ ಕಲಂ 370 ರದ್ದು ಮಾಡಿದ ಕೇಂದ್ರ ಸರ್ಕಾರದ ಕ್ರಮವನ್ನು ಪಾಕಿಸ್ತಾನ ಖಂಡಿಸಿತು. ಇದರ ಬೆನ್ನ ಹಿಂದೆಯೇ ಭಾರತದೊಂದಿಗಿನ ವಾಣಿಜ್ಯ ಸಂಬಂಧ ಕಡಿದುಕೊಳ್ಳಲು ಮುಂದಾಗಿತ್ತು. ಜೊತೆಗೆ ಪಾಕ್​ನಲ್ಲಿದ್ದ ಭಾರತ ರಾಯಭಾರಿಯನ್ನು ವಾಪಸ್ಸು ಕಳುಹಿಸಿ, ಇಲ್ಲಿದ್ದ ಪಾಕ್​ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡಿತು. ಅಲ್ಲದೆ ಎರಡು ದೇಶಗಳ ಮಧ್ಯೆ ಸೌಹರ್ದಯುತವಾಗಿ ಚಲಿಸುತ್ತಿದ್ದ ಸಂಜೋತಾ ಎಕ್ಸ್​ಪ್ರೆಸ್​ ರೈಲನ್ನು ಭಾರತದ ಗಡಿ ಪ್ರದೇಶದಲ್ಲಿ ತಂದು ನಿಲ್ಲಿಸಿ ಭಾರತ ಚಾಲಕರೆ ಚಲಾಯಿಸುವಂತೆ ತಿಳಿಸಿತು.

First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ