Nitish Kumar: ಕಳ್ಳಬಟ್ಟಿ ಕುಡಿದು ಸತ್ತವರಿಗೆ ಪರಿಹಾರ ಕೊಡಲ್ಲ: ನಿತೀಶ್ ಕುಮಾರ್

ಮುಖ್ಯಮಂತ್ರಿ ನಿತೀಶ್​ ಕುಮಾರ್

ಮುಖ್ಯಮಂತ್ರಿ ನಿತೀಶ್​ ಕುಮಾರ್

"ಕಳ್ಳಬಟ್ಟಿ ಸೇವಿಸಿ ಸತ್ತವರಿಗೆ ಪರಿಹಾರ ನೀಡುವುದಿಲ್ಲ" ಎಂದು ಬಿಹಾರ ಸಿಎಂ ಹೇಳಿದ್ದಾರೆ. "ನಾವು ಕುಡಿಯಬೇಡಿ ಎಂದು ಮನವಿ ಮಾಡುತ್ತಿದ್ದೇವೆ. ಕುಡಿದರೆ ನೀವೇ ಸಾಯುತ್ತೀರಾ ಎಂದೂ ಹೇಳುತ್ತಿದ್ದೇವೆ. ಆದರೂ ಕುಡಿದು ಸತ್ತವರಿಗೆ ಪರಿಹಾರ ನೀಡುವುದಿಲ್ಲ" ಎಂದು ನಿತೀಶ್​ ಕುಮಾರ್ ತಿಳಿಸಿದ್ದಾರೆ.

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • New Delhi, India
  • Share this:

ಬಿಹಾರ: ಬಿಹಾರದಲ್ಲಿ (Bihar) ಮದ್ಯ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಿದ ಬಳಿಕ ಅಕ್ರಮ ಮದ್ಯ (Illigal Liquor) ಸೇವಿಸಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ.  ಇದೀಗ ಬಿಹಾರದ ಸಿವಾನ್ (Siwan) ಜಿಲ್ಲೆಯ ಭಗವಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಕಲಿ ಮದ್ಯ ಸೇವಿಸಿ ಮತ್ತೆ ಅನೇಕ ಮಂದಿ ಸಾವನ್ನಪ್ಪುತ್ತಿರುವ ವಿಚಾರ ಆತಂಕ ಸೃಷ್ಟಿಸಿದೆ. ಈ  ನಡುವೆ ಕಳ್ಳಬಟ್ಟಿ ಸೇವಿಸಿ ಸತ್ತವರಿಗೆ ಪರಿಹಾರ ನೀಡುವುದಿಲ್ಲ. ನಾವು ಕುಡಿಯಬೇಡಿ ಎಂದು ಮನವಿ ಮಾಡುತ್ತಿದ್ದೇವೆ. ಕುಡಿದರೆ ಸಾಯುತ್ತೀರಾ ಎಂದು ಹೇಳುತ್ತಿದ್ದೇವೆ. ಆದರೆ ಕುಡಿತದ ಪರವಾಗಿ ಮಾತನಾಡುವವರು ನಿಮಗೆ ಒಳ್ಳೆಯದನ್ನು ಮಾಡುವುದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ರಾಜ್ಯ ವಿಧಾನಸಭೆಯಲ್ಲಿ ಹೇಳಿದ್ದಾರೆ.



ಕುಡಿದರೆ ನೀವೇ ಸಾಯುತ್ತೀರಾ ಎಂದು ಹೇಳುತ್ತಿದ್ದೇವೆ


ಹೌದು, ಕಳ್ಳಬಟ್ಟಿ ಸೇವಿಸಿ ಸತ್ತವರಿಗೆ ಪರಿಹಾರ ನೀಡುವುದಿಲ್ಲ. ನಾವು ಕುಡಿಯಬೇಡಿ ಎಂದು ಮನವಿ ಮಾಡುತ್ತಿದ್ದೇವೆ. ಕುಡಿದರೆ ನೀವೇ ಸಾಯುತ್ತೀರಾ ಎಂದು ಹೇಳುತ್ತಿದ್ದೇವೆ. ಆದರೂ ಕುಡಿದು ಸತ್ತವರಿಗೆ ಪರಿಹಾರ ನೀಡುವುದಿಲ್ಲ ಎಂದು ನಿತೀಶ್​ ಕುಮಾರ್ ತಿಳಿಸಿದ್ದಾರೆ.


ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು, ಜನರು ಜಾಗರೂಕರಾಗಿರಬೇಕು. ಮದ್ಯ ಸೇವಿಸುವವರು ಸಾಯುತ್ತಾರೆ (ಲೋಗೋ ಕೋ ಸ್ಯಾಚೇತ್ ರೆಹನಾ ಚಾಹಿಯೇ, ಜೋ ಶರಬ್ ಪಿಯೇಗಾ ವೋ ಮರೇಗಾ) ಎಂದು ಹೇಳಿದ್ದರು.


types of liquor made by grains
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ


ರಾಜ್ಯದಲ್ಲಿ ಮದ್ಯ  ನಿಷೇಧದಿಂದ ಹಲವರಿಗೆ ಪ್ರಯೋಜನ


ಬಿಹಾರದಲ್ಲಿ ಮದ್ಯ ನಿಷೇಧಿಸಿರುವ ಬಗ್ಗೆ ಸಮರ್ಥಿಸಿಕೊಂಡ ಅವರು, ರಾಜ್ಯದಲ್ಲಿ ಮದ್ಯ  ನಿಷೇಧ ನೀತಿಯು ಹಲವಾರು ಜನರಿಗೆ ಪ್ರಯೋಜನಕಾರಿಯಾಗಿದೆ ಮತ್ತು ಈ ಕ್ರಮಗಳಿಂದ ಹೆಚ್ಚಿನ ಸಂಖ್ಯೆಯ ಜನರು ಮದ್ಯಪಾನ ಸೇವಿಸುವುದನ್ನು ಬಿಟ್ಟಿದ್ದಾರೆ ಎಂದಿದ್ದಾರೆ.


ಬಿಹಾರದ ಛಪ್ರಾ ಹೂಚ್ ದುರಂತದಲ್ಲಿ ಸಾವಿನ್ನಪ್ಪಿದವರ ಸಂಖ್ಯೆ 50 ಕ್ಕೇರಿಕೆಯಾಗಿದೆ. ಇನ್ನೂ ಸರನ್ ಜಿಲ್ಲೆಯಲ್ಲಿ ಕಳ್ಳ ಬಟ್ಟಿ ಸೇವಿಸಿ ಸುಮಾರು 11 ಮಂದಿ ಸಾವನ್ನಪ್ಪಿದ್ದಾರೆ. ಮಂಗಳವಾರ ರಾತ್ರಿ ಈ ಘಟನೆ ಸಂಭವಿಸುತ್ತಿದ್ದಂತೆಯೇ ಮರ್ಹೌರಾ ಉಪವಿಭಾಗೀಯ ಪೊಲೀಸ್ ಅಧಿಕಾರಿ ಯೋಗೇಂದ್ರ ಕುಮಾರ್ ಅವರ ಶಿಫಾರಸಿನ ಮೇರೆಗೆ ಮಸ್ರಖ್ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ರಿತೇಶ್ ಮಿಶ್ರಾ ಮತ್ತು ಕಾನ್‌ಸ್ಟೆಬಲ್ ವಿಕೇಶ್ ತಿವಾರಿ ಅವರನ್ನು ಅಮಾನತುಗೊಳಿಸಲಾಗಿದೆ.


ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ


ಏಪ್ರಿಲ್ 2016 ರಿಂದ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ಬಿಹಾರದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಿದೆ. ಹೀಗಾಗಿ ಮದ್ಯದ ಚಟಕ್ಕೆ ದಾಸರಾಗಿದ್ದ ಕೆಲ ಮಂದಿ ಕಳ್ಳಬಟ್ಟಿ ಸಾರಾಯಿ ಸೇವಿಸಿ ಗುರುವಾರ ಸಾವನ್ನಪ್ಪಿದ್ದಾರೆ. ಇನ್ನೂ ಈ ಸುದ್ದಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕೋಲಾಹಲ ಸೃಷ್ಟಿಸಿದೆ.


ಯಾರು ಮದ್ಯ ಸೇವಿಸುತ್ತಾರೋ ಅವರೇ ಸಾಯುತ್ತಾರೆ


ಗುರುವಾರ ರಾಜ್ಯಸಭೆಯಲ್ಲಿ ಈ ವಿಚಾರವಾಗಿ ಬಿಜೆಪಿ ಸಂಸದರು ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇನ್ನೂ ಇದೇ ವಿಚಾರವಾಗಿ ಮಾಧ್ಯಮವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿತೀಶ್ ಕುಮಾರ್ ಅವರು, ಯಾರು ಮದ್ಯ ಸೇವಿಸುತ್ತಾರೋ ಅವರೇ ಸಾಯುತ್ತಾರೆ ಎಂದು ಹೇಳಿದ್ದರು.


ಇದನ್ನೂ ಓದಿ: Nitish Kumar: ಕಳ್ಳಬಟ್ಟಿ ಸೇವಿಸಿ 38 ಮಂದಿ ಸತ್ತ ಬಗ್ಗೆ ಲಘು ಹೇಳಿಕೆ, ಕುಡಿದವರು ಸಾಯುತ್ತಾರೆ ಎಂದ ನಿತೀಶ್ ಕುಮಾರ್!


ಜೊತೆಗೆ, ಮದ್ಯ ನಿಷೇಧದಿಂದ ಹಲವಾರು ಮಂದಿಗೆ ಅನುಕೂಲವಾಗಿದೆ. ಸಾಕಷ್ಟು ಜನ ಮದ್ಯ ಸೇವಿಸುವುದನ್ನು ಬಿಟ್ಟಿದ್ದಾರೆ. ಇದು ಒಳ್ಳೆಯ ವಿಚಾರ. ಇದನ್ನು ಹಲವಾರು ಮಂದಿ ಸಂತೋಷದಿಂದ ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಆದರೆ ತೊಂದರೆ ಕೊಡಲೆಂದೇ ಕೆಲವರು ಇದ್ದಾರೆ. ನಿಜವಾಗಿಯೂ ತೊಂದರೆ ಕೊಡುವವರು ಯಾರೆಂದು ಕಂಡು ಹಿಡಿದು, ಬಂಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.


those who drink alcohol will die, says Bihar CM Nitish Kumar
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್


ನಡೆಸಿದ ಬಿಜೆಪಿ ಸದಸ್ಯರನ್ನು ಕುಡುಕರು ಎಂದಿದ್ದ ನಿತೀಶ್ ಕುಮಾರ್


ಬಿಹಾರದಲ್ಲಿನ ಕಳ್ಳಬಟ್ಟಿ ದುರಂತದಲ್ಲಿನ ಸಾವಿನ ಪ್ರಕರಣಗಳ ಕುರಿತಂತೆ ಇತ್ತೀಚೆಗಷ್ಟೇ ಪ್ರತಿಭಟನೆ ನಡೆಸಿದ ಬಿಜೆಪಿ ಸದಸ್ಯರನ್ನು 'ಕುಡುಕರು' ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕರೆದಿದ್ದರು.


ಇದನ್ನೂ ಓದಿ: Drinking Water: ಚಳಿಗಾದಲ್ಲಿ ನೀರು ಕುಡಿಯೋದನ್ನು ಕಡಿಮೆ ಮಾಡಿದ್ದೀರಾ? ಈ ಸುದ್ದಿ ತಪ್ಪದೇ ಓದಿ


2016ರಿಂದಲೂ ಮದ್ಯ ನಿಷೇಧ ಮಾಡಿರುವ ರಾಜ್ಯದಲ್ಲಿ ಪದೇ ಪದೇ ಕಳ್ಳಬಟ್ಟಿ ದುರಂತ ಘಟನೆಗಳು ನಡೆಯುತ್ತಿದ್ದು, ಇದರ ಬಗ್ಗೆ ವಿಧಾನಸಭೆಯಲ್ಲಿ ವಿರೋಧ ಪಕ್ಷ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿತ್ತು. ಇದರಿಂದ ಕೋಪಗೊಂಡ ನಿತೀಶ್ ಕುಮಾರ್, ಏನಾಗಿದೆ? ಸುಮ್ಮನಿರಿ. ಅವರನ್ನು ಸದನದಿಂದ ಹೊರಗೆ ಹಾಕಿ" ಎಂದು ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿಗರ ಮೇಲೆ ಹರಿಹಾಯ್ದಿದರು. ನೀವು ಕುಡಿದು ಬಂದಿದ್ದೀರಾ ಎಂದು ಆಕ್ರೋಶ ಹೊರ ಹಾಕಿದ್ದರು.

Published by:Monika N
First published: