Petrol Price| ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಸ್ಥಿರ; ಇಂದು ನಿರ್ಧಾರವಾಗಲಿದೆ ಪೆಟ್ರೋಲ್ ಜಿಎಸ್​ಟಿ ಹಣೆಬರಹ!

GST Council Meeting; ಇಂದು ಲಕ್ನೋದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ 45 ನೇ ಜಿಎಸ್‌ಟಿ ಕೌನ್ಸಿಲ್ ಸಭೆ ನಡೆಯಲಿದೆ. ಈ ಸಭೆಯಲ್ಲಿ ತೈಲವನ್ನೂ ಸಹ ಜಿಎಸ್​ಟಿ ವ್ಯಾಪ್ತಿಗೆ ತರುವ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು (ಸೆಪ್ಟೆಂಬರ್​ 16); ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ (Petrol and Diesel Prices) ಇಂದು ಯಾವುದೇ ಬದಲಾವಣೆ ಇಲ್ಲ. ಗುರುವಾರ ಬೆಂಗಳೂರಿನಲ್ಲಿ (Bengaluru City) ಒಂದು ಲೀಟರ್ ಪೆಟ್ರೋಲ್​ ಅನ್ನು 104.70 ರೂ.ಗೆ ಮಾರಾಟ ಮಾಡಲಾಗಿತ್ತು ಮತ್ತು ಡೀಸೆಲ್ ಅನ್ನು ಲೀಟರ್​ಗೆ 94.04 ರೂ.ಗೆ ಮಾರಾಟ ಮಾಡಲಾಗಿತ್ತು. ಬೆಲೆ ಏರಿಕೆಯಾಗದ ಕಾರಣ ಇಂದೂ ಸಹ ಇದೇ ಬೆಲೆಗೆ ತೈಲಗಳು ಲಭ್ಯವಾಗಲಿವೆ. ಆದರೆ, ಮಂಗಳವಾರ ತೆರಿಗೆ ವ್ಯತ್ಯಾಸದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್​ ಬೆಲೆಯಲ್ಲಿ ಅಲ್ಪ ಕುಸಿತ ಕಂಡಿತ್ತು. ಹೀಗಾಗಿ ಇಂದೂ ಸಹ ಅದೇ ಬೆಲೆಗೆ ಪೆಟ್ರೋಲ್-ಡೀಸೆಲ್​ ಮಾರಾಟ ಮಾಡಲಾಗುತ್ತಿದೆ. ಆದರೆ, ದೇಶದ ವಿವಿಧ ಮಹಾನಗರಗಳಲ್ಲಿನ ಬೆಲೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಚೆನ್ನೈ(Chennai)-ಹೈದ್ರಾಬಾದ್ (Hydrabad)-ಮುಂಬೈ (Mumbai)-ನೋಡ್ಡಾದಲ್ಲೂ (Noida) ಸಹ ತೈಲ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿದುಬಂದಿದೆ.

  ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 98.96 ರೂ ಇದ್ದರೆ ಡೀಸೆಲ್​ ಬೆಲೆ 93.26 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅದರಂತೆ ಹೈದ್ರಾಬಾದ್​ನಲ್ಲಿ ಪೆಟ್ರೋಲ್​ ಬೆಲೆ 87.24 ರೂ ಆಗಿದ್ದರೆ, ಡೀಸೆಲ್​ ಬೆಲೆ 80.21 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ನೋಡ್ಡಾದಲ್ಲಿ ಒಂದು ಲೀಟರ್​ ಪೆಟ್ರೋಲ್ ಬೆಲೆ 98.52 ರೂ ಆಗಿದ್ದರೆ, ದೆಹಲಿಯಲ್ಲಿ 101.62 ರೂ ಮತ್ತು ಮಹಾರಾಷ್ಟ್ರದಲ್ಲಿ 107.26 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ರಾಜಸ್ಥಾನದ ಜೈಪುರದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 108.56 ರೂ ಇದೆ. ಇದು ದೇಶದಲ್ಲೇ ಅತ್ಯಂತ ಹೆಚ್ಚಿನ ಬೆಲೆ ಎಂದು ಗುರುತಿಸಿಕೊಂಡಿದೆ.

  ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ

  ಬಾಗಲಕೋಟೆ - 104.98 ರೂ.
  ಬೆಂಗಳೂರು - 104.70 ರೂ.
  ಬೆಂಗಳೂರು ಗ್ರಾಮಾಂತರ -104.77ರೂ.
  ಬೆಳಗಾವಿ - 105.39 ರೂ.
  ಬಳ್ಳಾರಿ - 106.35 ರೂ.
  ಬೀದರ್ - 105.01 ರೂ.
  ಬಿಜಾಪುರ - 104.91 ರೂ.
  ಚಾಮರಾಜನಗರ - 105.22 ರೂ.
  ಚಿಕ್ಕಬಳ್ಳಾಪುರ - 104.44 ರೂ.
  ಚಿಕ್ಕಮಗಳೂರು - 107.05ರೂ.
  ಚಿತ್ರದುರ್ಗ - 105.96 ರೂ.
  ದಕ್ಷಣ ಕನ್ನಡ - 104.15ರೂ.
  ದಾವಣಗೆರೆ - 106.55 ರೂ.
  ಧಾರವಾಡ - 104.42 ರೂ.
  ಗದಗ - 105 ರೂ.
  ಗುಲಬರ್ಗ - 105.02 ರೂ.
  ಹಾಸನ – 104.93 ರೂ.
  ಹಾವೇರಿ - 105.43 ರೂ.
  ಕೊಡಗು – 105.94 ರೂ.
  ಕೋಲಾರ - 104.91 ರೂ.
  ಕೊಪ್ಪಳ- 106.04 ರೂ.
  ಮಂಡ್ಯ – 104.57 ರೂ.
  ಮೈಸೂರು – 104.63 ರೂ.
  ರಾಯಚೂರು – 104.52 ರೂ.
  ರಾಮನಗರ – 105.06 ರೂ.
  ಶಿವಮೊಗ್ಗ – 106.18 ರೂ.
  ತುಮಕೂರು – 105.14 ರೂ.
  ಉಡುಪಿ - 105.14 ರೂ.
  ಉತ್ತರಕನ್ನಡ – 105.74 ರೂ.
  ಯಾದಗಿರಿ – 105.39 ರೂ.

  ಭಾರತದಲ್ಲಿ ಪೆಟ್ರೋಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 06:00 ಗಂಟೆಗೆ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜಾಗತಿಕ ತೈಲ ಬೆಲೆಯಲ್ಲಿ ಒಂದು ನಿಮಿಷದ ವ್ಯತ್ಯಾಸವನ್ನು ಇಂಧನ ಬಳಕೆದಾರರು ಮತ್ತು ವಿತರಕರಿಗೆ ರವಾನಿಸಬಹುದು ಎಂದು ಇದು ಖಚಿತಪಡಿಸುತ್ತದೆ. ಇಂಧನದ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಅನ್ನು ಒಳಗೊಂಡಿದೆ. ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.

  ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟ ಬೆಲೆ ದ್ವಿಗುಣಗೊಳ್ಳುತ್ತದೆ. ವಿವಿಧ ಅಂಶಗಳು ಇಂಧನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ಇವುಗಳಲ್ಲಿ ರೂಪಾಯಿಗಳಿಂದ ಯುಎಸ್ ಡಾಲರ್ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ಸೂಚನೆಗಳು, ಇಂಧನದ ಬೇಡಿಕೆ ಇತ್ಯಾದಿಗಳು ಸೇರಿವೆ. ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಹೆಚ್ಚಾದಾಗ ಭಾರತದಲ್ಲೂ ಸಾಮಾನ್ಯವಾಗಿ ಬೆಲೆ ಏರಿಕೆಯಾಗುವುದು ವಾಡಿಕೆಯಾಗಿದೆ.

  ಜಿಎಸ್​ಟಿಗೆ ಪೆಟ್ರೋಲ್-ಡೀಸೆಲ್​?

  ಪೆಟ್ರೋಲ್​- ಡಿಸೇಲ್​ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಕಾರಣ ಅಗತ್ಯ ವಸ್ತಗಳ ಬೆಲೆಯೂ ಸಹ ಗಗನ ಮುಖಿಯಾಗಿದೆ. ಇದರಿಂದಾಗಿ ಜನ ಸಾಮಾನ್ಯರು ಜೀವನ ನಡೆಸುವುದೇ ಕಷ್ಟ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ತೈಲ ಬೆಲೆ ಇಳಿಕೆಗೆ ಅದನ್ನೂ ಸಹ ಜಿಎಸ್​ಟಿ ವ್ಯಾಪ್ತಿಗೆ ತರಬೇಕು ಎಂಬ ಕೂಗು ಕೇಳಿ ಬರುತ್ತಿದೆ.

  ಇದನ್ನೂ ಓದಿ : ಎಐಎಡಿಎಂಕೆ ಮಾಜಿ ಸಚಿವನಿಗೆ ಸೇರಿದ Rolls Royce, 34 ಲಕ್ಷ ಹಣ, 5 ಕೆಜಿ Gold, Diamonds ಜಪ್ತಿ!

  ಹೀಗಾಗಿ ಇಂದು ಲಕ್ನೋದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ 45 ನೇ ಜಿಎಸ್‌ಟಿ ಕೌನ್ಸಿಲ್ ಸಭೆ ನಡೆಯಲಿದೆ. ಈ ಸಭೆಯಲ್ಲಿ ತೈಲವನ್ನೂ ಸಹ ಜಿಎಸ್​ಟಿ ವ್ಯಾಪ್ತಿಗೆ ತರುವ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ ತೈಲ ಬೆಲೆ ಜಿಎಸ್​ಟಿ ವ್ಯಾಪ್ತಿಗೆ ಬಂದರೆ ಟೆಟ್ರೋಲ್ ಮತ್ತು ಡೀಸೆಲ್ ಮೇಲಿನ ದರ ಕನಿಷ್ಟ 20 ರಿಂದ 30 ರೂ.ವರೆಗೆ ಇಳಿಕೆ ಯಾಗುವ ಸಾಧ್ಯತೆಗಳಿಗೆ. ಗರಿಷ್ಠ ಶೇ.28 ರಷ್ಟು ತೆರಿಗೆ ಮಾತ್ರ ತೈಲಗಳ ಮೇಲೆ ಅನ್ವಯವಾಗಲಿದೆ ಎನ್ನಲಾಗಿದೆ.
  Published by:MAshok Kumar
  First published: