Petrol Prices| ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಸ್ಥಿರ, ರಾಜ್ಯದ ಹಲವೆಡೆ ಅಲ್ಪ ಇಳಿಕೆ; ನಿಮ್ಮ ಊರಿನಲ್ಲಿ ಇಂದಿನ ತೈಲ ಬೆಲೆ ಎಷ್ಟು?

ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟ ಬೆಲೆ ದ್ವಿಗುಣಗೊಳ್ಳುತ್ತದೆ. ವಿವಿಧ ಅಂಶಗಳು ಇಂಧನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
    ಬೆಂಗಳೂರು (ಸೆಪ್ಟೆಂಬರ್​ 14); ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು (Petrol and Diesel Prices) ಇಂದು ಬೆಂಗಳೂರು ನಗರ ಭಾಗದಲ್ಲಿ ಸ್ಥಿರವಾಗಿದ್ದರೂ ಸಹ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಲ್ಪ ಕುಸಿತ ಕಂಡಿದೆ. ಸೋಮವಾರ ಬೆಂಗಳೂರಿನಲ್ಲಿ (Bengaluru City) ಒಂದು ಲೀಟರ್ ಪೆಟ್ರೋಲ್​ ಅನ್ನು 104.70 ರೂ.ಗೆ ಮಾರಾಟ ಮಾಡಲಾಗಿತ್ತು ಮತ್ತು ಡೀಸೆಲ್ ಅನ್ನು ಲೀಟರ್​ಗೆ 94.04 ರೂ.ಗೆ ಮಾರಾಟ ಮಾಡಲಾಗಿತ್ತು. ಬೆಲೆ ಏರಿಕೆಯಾಗದ ಕಾರಣ ಇಂದೂ ಸಹ ಇದೇ ಬೆಲೆಗೆ ತೈಲಗಳು ಲಭ್ಯವಾಗಲಿವೆ. ಆದರೆ, ಇತರೆಡೆ ಬೆಲೆಯಲ್ಲಿ ವ್ಯತ್ಯಾಸವನ್ನು ಕಾಣಬಹುದಾಗಿದೆ. ಆದರೆ, ದೇಶದ ವಿವಿಧ ಮಹಾನಗರಗಳಲ್ಲಿನ ಬೆಲೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಚೆನ್ನೈ(Chennai)-ಹೈದ್ರಾಬಾದ್ (Hydrabad)-ಮುಂಬೈ (Mumbai)-ನೋಡ್ಡಾದಲ್ಲೂ (Noida) ಸಹ ತೈಲ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿದುಬಂದಿದೆ.

    ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 98.96 ರೂ ಇದ್ದರೆ ಡೀಸೆಲ್​ ಬೆಲೆ 93.26 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅದರಂತೆ ಹೈದ್ರಾಬಾದ್​ನಲ್ಲಿ ಪೆಟ್ರೋಲ್​ ಬೆಲೆ 87.24 ರೂ ಆಗಿದ್ದರೆ, ಡೀಸೆಲ್​ ಬೆಲೆ 80.21 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ನೋಡ್ಡಾದಲ್ಲಿ ಒಂದು ಲೀಟರ್​ ಪೆಟ್ರೋಲ್ ಬೆಲೆ 98.52 ರೂ ಆಗಿದ್ದರೆ, ದೆಹಲಿಯಲ್ಲಿ 101.62 ರೂ ಮತ್ತು ಮಹಾರಾಷ್ಟ್ರದಲ್ಲಿ 107.26 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ರಾಜಸ್ಥಾನದ ಜೈಪುರದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 108.56 ರೂ ಇದೆ. ಇದು ದೇಶದಲ್ಲೇ ಅತ್ಯಂತ ಹೆಚ್ಚಿನ ಬೆಲೆ ಎಂದು ಗುರುತಿಸಿಕೊಂಡಿದೆ.

    ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿರುವ ಪೆಟ್ರೋಲ್  ದರ ವಿವರ

    ಬಾಗಲಕೋಟೆ -  104.98 ರೂ.
    ಬೆಂಗಳೂರು - 104.70 ರೂ.
    ಬೆಂಗಳೂರು ಗ್ರಾಮಾಂತರ -104.77ರೂ.
    ಬೆಳಗಾವಿ  - 105.39 ರೂ.
    ಬಳ್ಳಾರಿ - 106.35 ರೂ.
    ಬೀದರ್  - 105.01 ರೂ.
    ಬಿಜಾಪುರ - 104.91 ರೂ.
    ಚಾಮರಾಜನಗರ - 105.22 ರೂ.
    ಚಿಕ್ಕಬಳ್ಳಾಪುರ - 104.44 ರೂ.
    ಚಿಕ್ಕಮಗಳೂರು - 107.05ರೂ.
    ಚಿತ್ರದುರ್ಗ - 105.96 ರೂ.
    ದಕ್ಷಣ ಕನ್ನಡ  - 104.15ರೂ.
    ದಾವಣಗೆರೆ - 106.55 ರೂ.
    ಧಾರವಾಡ - 104.42 ರೂ.
    ಗದಗ 105 - ರೂ.
    ಗುಲಬರ್ಗ - 105.02 ರೂ.
    ಹಾಸನ – 104.93 ರೂ.
    ಹಾವೇರಿ - 105.43 ರೂ.
    ಕೊಡಗು – 105.94 ರೂ.
    ಕೋಲಾರ - 104.91 ರೂ.
    ಕೊಪ್ಪಳ- 106.04 ರೂ.
    ಮಂಡ್ಯ – 104.57 ರೂ.
    ಮೈಸೂರು – 104.63 ರೂ.
    ರಾಯಚೂರು – 104.52 ರೂ.
    ರಾಮನಗರ – 105.06 ರೂ.
    ಶಿವಮೊಗ್ಗ – 106.18 ರೂ.
    ತುಮಕೂರು – 105.14 ರೂ.
    ಉಡುಪಿ - 105.14 ರೂ.
    ಉತ್ತರಕನ್ನಡ – 105.74 ರೂ.
    ಯಾದಗಿರಿ – 105.39 ರೂ.

    ಭಾರತದಲ್ಲಿ ಪೆಟ್ರೋಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 06:00 ಗಂಟೆಗೆ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜಾಗತಿಕ ತೈಲ ಬೆಲೆಯಲ್ಲಿ ಒಂದು ನಿಮಿಷದ ವ್ಯತ್ಯಾಸವನ್ನು ಇಂಧನ ಬಳಕೆದಾರರು ಮತ್ತು ವಿತರಕರಿಗೆ ರವಾನಿಸಬಹುದು ಎಂದು ಇದು ಖಚಿತಪಡಿಸುತ್ತದೆ. ಇಂಧನದ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಅನ್ನು ಒಳಗೊಂಡಿದೆ. ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.

    ಇದನ್ನೂ ಓದಿ: Explained: ಕಂಟೇನರ್ ಕೊರತೆ ಉಂಟಾಗಿರುವುದಕ್ಕೆ ಪ್ರಮುಖ ಕಾರಣವೇನು? ಇಲ್ಲಿದೆ ಸಂಪೂರ್ಣ ವಿವರ...

    ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟ ಬೆಲೆ ದ್ವಿಗುಣಗೊಳ್ಳುತ್ತದೆ. ವಿವಿಧ ಅಂಶಗಳು ಇಂಧನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ಇವುಗಳಲ್ಲಿ ರೂಪಾಯಿಗಳಿಂದ ಯುಎಸ್ ಡಾಲರ್ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ಸೂಚನೆಗಳು, ಇಂಧನದ ಬೇಡಿಕೆ ಇತ್ಯಾದಿಗಳು ಸೇರಿವೆ. ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಹೆಚ್ಚಾದಾಗ ಭಾರತದಲ್ಲೂ ಸಾಮಾನ್ಯವಾಗಿ ಬೆಲೆ ಏರಿಕೆಯಾಗುವುದು ವಾಡಿಕೆಯಾಗಿದೆ.
    Published by:MAshok Kumar
    First published: