Petrol Price| ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ; ಕೊನೆಗೂ ತೈಲ ಬೆಲೆ ಜಿಎಸ್​ಟಿ ವ್ಯಾಪ್ತಿಯಿಂದ ಹೊರಗೆ

ಕೇಂದ್ರ ಹಣಕಾಸು ಸಚಿವೆ ಮತ್ತು ಎಲ್ಲಾ ರಾಜ್ಯಗಳ ಹಣಕಾಸು ಸಚಿವರ ಉಪಸ್ಥಿತಿಯಲ್ಲಿ ನಿನ್ನೆ ನೆಡದ ಜಿಎಸ್​ಟಿ ಸಭೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲು ಮಂಡಳಿ ನಿರ್ಧರಿಸಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
    ಬೆಂಗಳೂರು (ಸೆಪ್ಟೆಂಬರ್​ 18); ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ (Petrol and Diesel Prices) ಇಂದು ಯಾವುದೇ ಬದಲಾವಣೆ ಇಲ್ಲ. ಶುಕ್ರವಾರ ಬೆಂಗಳೂರಿನಲ್ಲಿ (Bengaluru City) ಒಂದು ಲೀಟರ್ ಪೆಟ್ರೋಲ್​ ಅನ್ನು 104.70 ರೂ.ಗೆ ಮಾರಾಟ ಮಾಡಲಾಗಿತ್ತು ಮತ್ತು ಡೀಸೆಲ್ ಅನ್ನು ಲೀಟರ್​ಗೆ 94.04 ರೂ.ಗೆ ಮಾರಾಟ ಮಾಡಲಾಗಿತ್ತು. ಬೆಲೆ ಏರಿಕೆಯಾಗದ ಕಾರಣ ಇಂದೂ ಸಹ ಇದೇ ಬೆಲೆಗೆ ತೈಲಗಳು ಲಭ್ಯವಾಗಲಿವೆ. ಆದರೆ, ಮಂಗಳವಾರ ತೆರಿಗೆ ವ್ಯತ್ಯಾಸದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್​ ಬೆಲೆಯಲ್ಲಿ ಅಲ್ಪ ಕುಸಿತ ಕಂಡಿತ್ತು. ಹೀಗಾಗಿ ಇಂದೂ ಸಹ ಅದೇ ಬೆಲೆಗೆ ಪೆಟ್ರೋಲ್-ಡೀಸೆಲ್​ ಮಾರಾಟ ಮಾಡಲಾಗುತ್ತಿದೆ. ಆದರೆ, ದೇಶದ ವಿವಿಧ ಮಹಾನಗರಗಳಲ್ಲಿನ ಬೆಲೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಚೆನ್ನೈ(Chennai)-ಹೈದ್ರಾಬಾದ್ (Hydrabad)-ಮುಂಬೈ (Mumbai)-ನೋಡ್ಡಾದಲ್ಲೂ (Noida) ಸಹ ತೈಲ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿದುಬಂದಿದೆ.

    ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 98.96 ರೂ ಇದ್ದರೆ ಡೀಸೆಲ್​ ಬೆಲೆ 93.26 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅದರಂತೆ ಹೈದ್ರಾಬಾದ್​ನಲ್ಲಿ ಪೆಟ್ರೋಲ್​ ಬೆಲೆ 87.24 ರೂ ಆಗಿದ್ದರೆ, ಡೀಸೆಲ್​ ಬೆಲೆ 80.21 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ನೋಡ್ಡಾದಲ್ಲಿ ಒಂದು ಲೀಟರ್​ ಪೆಟ್ರೋಲ್ ಬೆಲೆ 98.52 ರೂ ಆಗಿದ್ದರೆ, ದೆಹಲಿಯಲ್ಲಿ 101.62 ರೂ ಮತ್ತು ಮಹಾರಾಷ್ಟ್ರದಲ್ಲಿ 107.26 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ರಾಜಸ್ಥಾನದ ಜೈಪುರದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 108.56 ರೂ ಇದೆ. ಇದು ದೇಶದಲ್ಲೇ ಅತ್ಯಂತ ಹೆಚ್ಚಿನ ಬೆಲೆ ಎಂದು ಗುರುತಿಸಿಕೊಂಡಿದೆ.

    ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ

    ಬಾಗಲಕೋಟೆ - 104.98 ರೂ.
    ಬೆಂಗಳೂರು - 104.70 ರೂ.
    ಬೆಂಗಳೂರು ಗ್ರಾಮಾಂತರ -104.77ರೂ.
    ಬೆಳಗಾವಿ - 105.39 ರೂ.
    ಬಳ್ಳಾರಿ - 106.35 ರೂ.
    ಬೀದರ್ - 105.01 ರೂ.
    ಬಿಜಾಪುರ - 104.91 ರೂ.
    ಚಾಮರಾಜನಗರ - 105.22 ರೂ.
    ಚಿಕ್ಕಬಳ್ಳಾಪುರ - 104.44 ರೂ.
    ಚಿಕ್ಕಮಗಳೂರು - 107.05ರೂ.
    ಚಿತ್ರದುರ್ಗ - 105.96 ರೂ.
    ದಕ್ಷಣ ಕನ್ನಡ - 104.15ರೂ.
    ದಾವಣಗೆರೆ - 106.55 ರೂ.
    ಧಾರವಾಡ - 104.42 ರೂ.
    ಗದಗ - 105 ರೂ.
    ಗುಲಬರ್ಗ - 105.02 ರೂ.
    ಹಾಸನ – 104.93 ರೂ.
    ಹಾವೇರಿ - 105.43 ರೂ.
    ಕೊಡಗು – 105.94 ರೂ.
    ಕೋಲಾರ - 104.91 ರೂ.
    ಕೊಪ್ಪಳ- 106.04 ರೂ.
    ಮಂಡ್ಯ – 104.57 ರೂ.
    ಮೈಸೂರು – 104.63 ರೂ.
    ರಾಯಚೂರು – 104.52 ರೂ.
    ರಾಮನಗರ – 105.06 ರೂ.
    ಶಿವಮೊಗ್ಗ – 106.18 ರೂ.
    ತುಮಕೂರು – 105.14 ರೂ.
    ಉಡುಪಿ - 105.14 ರೂ.
    ಉತ್ತರಕನ್ನಡ – 105.74 ರೂ.
    ಯಾದಗಿರಿ – 105.39 ರೂ.

    ಭಾರತದಲ್ಲಿ ಪೆಟ್ರೋಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 06:00 ಗಂಟೆಗೆ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜಾಗತಿಕ ತೈಲ ಬೆಲೆಯಲ್ಲಿ ಒಂದು ನಿಮಿಷದ ವ್ಯತ್ಯಾಸವನ್ನು ಇಂಧನ ಬಳಕೆದಾರರು ಮತ್ತು ವಿತರಕರಿಗೆ ರವಾನಿಸಬಹುದು ಎಂದು ಇದು ಖಚಿತಪಡಿಸುತ್ತದೆ. ಇಂಧನದ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಅನ್ನು ಒಳಗೊಂಡಿದೆ. ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.

    ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟ ಬೆಲೆ ದ್ವಿಗುಣಗೊಳ್ಳುತ್ತದೆ. ವಿವಿಧ ಅಂಶಗಳು ಇಂಧನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ಇವುಗಳಲ್ಲಿ ರೂಪಾಯಿಗಳಿಂದ ಯುಎಸ್ ಡಾಲರ್ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ಸೂಚನೆಗಳು, ಇಂಧನದ ಬೇಡಿಕೆ ಇತ್ಯಾದಿಗಳು ಸೇರಿವೆ. ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಹೆಚ್ಚಾದಾಗ ಭಾರತದಲ್ಲೂ ಸಾಮಾನ್ಯವಾಗಿ ಬೆಲೆ ಏರಿಕೆಯಾಗುವುದು ವಾಡಿಕೆಯಾಗಿದೆ.

    ಇದನ್ನೂ ಓದಿ: Karnataka No.1: ಮೋದಿ ಹುಟ್ಟುಹಬ್ಬಕ್ಕೆ ವ್ಯಾಕ್ಸಿನೇಶನ್ ದಾಖಲೆ; ರೇಸ್​ನಲ್ಲಿ ಗೆದ್ದ ಕರ್ನಾಟಕ

    ಪೆಟ್ರೋಲ್-ಡೀಸೆಲ್ ಬೆಲೆ ಜಿಎಸ್​ಟಿ ಯಿಂದ ಹೊರಕ್ಕೆ:

    ಶುಕ್ರವಾರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಜಿಎಸ್​ಟಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಪೆಟ್ರೋಲ್-ಡೀಸೆಲ್​ ಅನ್ನು ಜಿಎಸ್​ಟಿ ವ್ಯಾಪ್ತಿಗೆ ತರುವ ಚರ್ಚೆಗಳು ನಡೆದಿದ್ದವು. ತೈಲ ಬೆಲೆಗಳೂ ಸಹ ಜಿಎಸ್​ಟಿ ವ್ಯಾಪ್ತಿಗೆ ಸೇರಿಸಲ್ಪಟ್ಟರೆ ಪೆಟ್ರೋಲ್-ಡೀಸೆಲ್ ಬೆಲೆ ಒಮ್ಮೆಲೆ ಇಳಿಕೆಯಾಗುವ ಸಾಧ್ಯತೆ ಇರುತ್ತದೆ. ಇದರ ಅನುಕೂಲ ನೇರವಾಗಿ ಗ್ರಾಹಕರಿಗೆ ಸಿಗುತ್ತದೆ.

    ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಹೆಂಡತಿಯನ್ನ ಕೊಂದು ಸಾವಿರಾರು ತುಂಡುಗಳಾಗಿ ಕತ್ತರಿಸಿದ ಗಂಡ: ಪೊಲೀಸರ ರೋಚಕ ತನಿಖೆ ಓದಲೇಬೇಕು

    ಆದರೆ,   ಕೇಂದ್ರ ಹಣಕಾಸು ಸಚಿವೆ ಮತ್ತು ಎಲ್ಲಾ ರಾಜ್ಯಗಳ ಹಣಕಾಸು ಸಚಿವರ ಉಪಸ್ಥಿತಿಯಲ್ಲಿ ನಿನ್ನೆ ನೆಡದ ಜಿಎಸ್​ಟಿ ಸಭೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲು ಮಂಡಳಿ ನಿರ್ಧರಿಸಿದೆ. ಏಕೆಂದರೆ ಪ್ರಸ್ತುತ ಅಬಕಾರಿ ಸುಂಕ ಮತ್ತು ವ್ಯಾಟ್ ಅನ್ನು ಒಂದು ರಾಷ್ಟ್ರೀಯ ದರಕ್ಕೆ ಇಳಿಸುವುದು ರಾಜ್ಯಗಳ ಆದಾಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಇಂತಹ ಮಹತ್ವದ ನಿರ್ಧಾರಕ್ಕೆ ಬರಲಾಗಿದೆ.
    Published by:MAshok Kumar
    First published: