ಇತ್ತೀಚೆಗೆ ಅಲೋಪತಿ ಔಷಧೀಯ ಪದ್ದತಿ ಕುರಿತು ಯೋಗ ಗುರು ಬಾಬಾ ರಾಮ್ದೇವ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. "ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಅಲೋಪಥಿಕ್ ಔಷಧಿಗಳಿಂದಾಗಿ ಲಕ್ಷಾಂತರ ಜನರು ಸತ್ತಿದ್ದಾರೆ. ಇದು ಅವಿವೇಕಿಗಳ ವಿಜ್ಞಾನ" ಎಂಬ ಅವರ ವಿವಾದಾತ್ಮಕ ಹೇಳಿಕೆ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಯೋಗಗುರು ಬಾಬಾ ರಾಮದೇವ್ ವಿರುದ್ಧ ಮಾನನಷ್ಟ ನೋಟಿಸ್ ಜಾರಿ ಮಾಡಿತ್ತು. ಅಲ್ಲದೆ, ರಾಮ್ದೇವ್ 15 ದಿನಗಳಲ್ಲಿ ಕ್ಷಮೆಯಾಚಿಸಬೇಕು, ಇಲ್ಲವಾದರೆ, 1000 ಕೋಟಿ ರೂ. ಮಾನಹಾನಿ ಪರಿಹಾರವನ್ನು ನೀಡಬೇಕಾಗುತ್ತದೆ ಮತ್ತು ಬಂಧನವನ್ನು ಎದುರಿಸಬೇಕಾಗುತ್ತದೆ ಎಂದು ಉತ್ತರಾಖಂಡ ಐಎಂಎ ಎಚ್ಚರಿಕೆಯೊಂದನ್ನೂ ನೀಡಿತ್ತು. ಆದರೆ, ಈ ಎಲ್ಲಾ ಎಚ್ಚರಿಕೆಗೆ ಯೋಗಗುರು ರಾಮ್ದೇವ್ ಡೋಂಟ್ ಕೇರ್ ಎಂಬದರ್ಥದಲ್ಲಿ ಮಾತಾಡಿರುವ ವಿಡಿಯೋ ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
“Not even their father can arrest Ramdev haha”- Baba Ramdev himself says.
No wonder all the illegal dealings being carried out smoothly.
pic.twitter.com/bXLm9vgFgR
— Saurav Das (@OfficialSauravD) May 26, 2021
"ಅವರು ಕೇವಲ ಸದ್ದು ಮಾಡುತ್ತಾರೆಯೇ ಹೊರತು, ನನ್ನನ್ನು ಬಂಧಿಸಲು ಸಾಧ್ಯವಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ದಿನ ಒಂದೊಂದು ಹ್ಯಾಟ್ಟ್ಯಾಗ್ ಟ್ರೆಂಡ್ ಮಾಡುತ್ತಾರೆಯೇ ವಿನಃ ಬೇರೆ ಏನೂ ಮಾಡಲು ಸಾಧ್ಯವಿಲ್ಲ"ಎಂದಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಮಂದಿ ಹಂಚಿಕೊಂಡಿದ್ದು ಬಾಬಾ ವಿರುದ್ಧ ಟೀಕಾಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ.
ಐಎಂಎ (ಉತ್ತರಾಖಂಡ) ಕಾರ್ಯದರ್ಶಿ ಅಜಯ್ ಖನ್ನಾ ಅವರ ಪರವಾಗಿ ನೀಡಲಾದ ಆರು ಪುಟಗಳ ನೋಟೀಸ್ನಲ್ಲಿ, ’ರಾಮದೇವ್ ಹೇಳಿಕೆಗಳಿಂದ ಅಲೋಪತಿ ವೈದ್ಯಕೀಯ ಕ್ಷೇತ್ರದ ಗೌರವ ಮತ್ತು ಘನತೆಗೆ ಹಾನಿಯಾಗಿದೆ. ಜೊತೆಗೆ ಈ ಕ್ಷೇತ್ರದ ಸುಮಾರು 2 ಸಾವಿರ ವೈದ್ಯರಿಗೆ ಅಪಮಾನವಾಗಿದೆ ಎಂದು ದೂರಿದ್ದಾರೆ.
ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಭಾರತೀಯ ವೈದ್ಯಕೀಯ ಸಂಘ (IMA) ರಾಮದೇವ್ ವಿರುದ್ಧ ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಿ, 15 ದಿನಗಳಲ್ಲಿ ರಾಮದೇವ್ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದೆ. ಬಾಬಾ ರಾಮ್ದೇವ್ ಕ್ಷಮೆ ಕೇಳದಿದ್ದರೇ ಯೋಗ ಗುರುಗಳಿಂದ 1,000 ಕೋಟಿ ರೂಪಾಯಿ ಮಾನನಷ್ಟ ಪರಿಹಾರ ಕೋರಿ ಮೊಕದ್ದಮೆ ನೋಟಿಸ್ ನೀಡಿದೆ.
ಇದನ್ನೂ ಓದಿ: Rahul Gandhi: ಲಕ್ಷದ್ವೀಪ ಭವಿಷ್ಯದ ಬೆದರಿಕೆಯಾಗಿ ಬದಲಾಗುತ್ತಿದೆ; ಪ್ರಧಾನಿಗೆ ರಾಹುಲ್ ಗಾಂಧಿ ಪತ್ರ
ಅಲ್ಲದೆ, ಭಾರತೀಯ ವೈದ್ಯಕೀಯ ಸಂಘ (ಐಎಂಎ) ಈ ಹಿಂದೆ ರಾಮ್ದೇವ್ ಅವರ ಟೀಕೆಗಳನ್ನು ಖಂಡಿಸಿ ಹೇಳಿಕೆಯನ್ನು ಪ್ರಕಟಿಸಿತ್ತು. "ಕೇಂದ್ರ ಆರೋಗ್ಯ ಸಚಿವರು, ಆರೋಪಗಳನ್ನು ಸ್ವೀಕರಿಸಿ ಸಮಕಾಲೀನ ವೈದ್ಯಕೀಯ ಸಂಸ್ಥೆಯನ್ನು ಕೈ ಬಿಡಬೇಕು ಅಥವಾ ಬಾಬಾ ರಾಮ್ದೇವ್ ಅವರನ್ನು ವಿಚಾರಣೆಗೆ ಒಳಪಡಿಸಿ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು" ಎಂದು ಒತ್ತಾಯಿಸಿತ್ತು. ಜೊತೆಗೆ ದೇಶದ್ರೋಹ ಕಾನೂನಿನಡಿಯಲ್ಲಿ ಬಾಬಾ ರಾಮ್ದೇವ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದೆ.
ಇದರ ಬೆನ್ನಲ್ಲೇ ಐಎಂಎ ಉಪಾಧ್ಯಕ್ಷ ಡಾ.ನವಜೋತ್ ಸಿಂಗ್ ದಾಹಿಯಾ ಅವರು ಯೋಗ ಗುರುಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಜಲಂಧರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ಮೊಕದ್ದಮೆಯಲ್ಲಿ "ಬಾಬಾ ರಾಮದೇವ್ ಅವರ ವಿರುದ್ಧ ವೈದ್ಯರ ಬಗ್ಗೆ ಮಾನನಷ್ಟ ಮಾಡಿದ್ದಾರೆ ಮತ್ತು ಅವಹೇಳನಕಾರಿ ಭಾಷೆ ಬಳಸಿದ್ದಾರೆ'' ಎಂದು ದಹಿಯಾ ಆರೋಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ