18 ಸ್ಥಾನ ಗೆದ್ದರೂ ಬಂಗಾಳಕ್ಕಿಲ್ಲ ಕ್ಯಾಬಿನೆಟ್​ ದರ್ಜೆ, ಈಶಾನ್ಯದ್ದೂ ಇದೇ ಕಥೆ; ನಿರ್ಲಕ್ಷಕ್ಕೆ ಗುರಿಯಾದ ಸಪ್ತ ಸಹೋದರಿಯರ ನಾಡು?

MAshok Kumar | news18
Updated:May 31, 2019, 1:56 PM IST
18 ಸ್ಥಾನ ಗೆದ್ದರೂ ಬಂಗಾಳಕ್ಕಿಲ್ಲ ಕ್ಯಾಬಿನೆಟ್​ ದರ್ಜೆ, ಈಶಾನ್ಯದ್ದೂ ಇದೇ ಕಥೆ; ನಿರ್ಲಕ್ಷಕ್ಕೆ ಗುರಿಯಾದ ಸಪ್ತ ಸಹೋದರಿಯರ ನಾಡು?
ಅಮಿತ್ ಶಾ, ನರೇಂದ್ರ ಮೋದಿ.
MAshok Kumar | news18
Updated: May 31, 2019, 1:56 PM IST
ಕೋಲ್ಕತಾ (ಮೇ.31); ಲೋಕಸಭೆ ಚುನಾವಣೆ 2019ರ ಕಣದಲ್ಲಿ ಇಡೀ ದೇಶದ ತೂಕ ಒಂದೆಡೆಯಾದರೆ, ಪಶ್ಚಿಮ ಬಂಗಾಳ ಚುನಾವಣೆಯೇ ಮತ್ತೊಂದು ತೂಕ ಎಂಬಂತೆ ಬಿಂಬಿಸಲಾಗಿತ್ತು. 7 ಹಂತದ ಚುನಾವಣೆಯ ಉದ್ದಕ್ಕೂ ಪ್ರಧಾನಿ ಮೋದಿ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನಡುವೆ ಬಡಿದಾಟ ಮುಂದುವರೆದಿತ್ತು. ಕೊನೆಗೂ ಸತತ ಪ್ರಯತ್ನದಿಂದಾಗಿ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಎರಡಂಕಿ ಗಡಿ ದಾಟಿದ ಸಾಧನೆ ಮಾಡಿತ್ತು. 44 ಲೋಕಸಭಾ ಕ್ಷೇತ್ರಗಳ ಪೈಕಿ ಸುಮಾರು 18 ಸ್ಥಾನಗಳನ್ನು ಗೆದ್ದು ಅಚ್ಚರಿಯ ಫಲಿತಾಂಶ ನೀಡಿತ್ತು.

ಬಂಗಾಳದ ರಾಜಕಾರಣದಲ್ಲಿ ನಿಜಕ್ಕೂ ಇದು ಇತಿಹಾಸವೇ ಸರಿ. ಮುಂದಿನ ಚುನಾವಣೆಯಲ್ಲಿ ಇಲ್ಲಿ ಇನ್ನಷ್ಟು ಸ್ಥಾನಗಳನ್ನು ಗೆಲ್ಲುವ ಉದ್ದೇಶ ಬಿಜೆಪಿಗೆ ಇದೆ. 2021 ಬಂಗಾಳದ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈಗಾಗಲೇ ಇದರ ಮೇಲೆ ಕಣ್ಣಿಟ್ಟು ಬಿಜೆಪಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಬಂಗಾಳ ರಾಜ್ಯಕ್ಕೆ ಅಧಿಕ ಸಚಿವ ಸ್ಥಾನ ನೀಡಲಾಗುವುದು ಎಂದೇ ಭಾವಿಸಲಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟದಲ್ಲಿ ಒಬ್ಬೇ ಒಬ್ಬ ಸಂಸದರಿಗೂ ಕ್ಯಾಬಿನೆಟ್​ ದರ್ಜೆಯ ಸಚಿವ ಸ್ಥಾನ ನೀಡದಿರುವುದು ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ : ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮಾಣ ವಚನ ಸ್ವೀಕರಿಸಿದ 58 ಸಂಪುಟ ಸದಸ್ಯರ ಪಟ್ಟಿ

ಪ.ಬಂಗಾಳಕ್ಕಿಲ್ಲ ಸಚಿವ ಸ್ಥಾನ!:

2104ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಕೇವಲ 4 ಸ್ಥಾನವನ್ನಷ್ಟೆ ಗಳಿಸಿತ್ತು. ಆದರೂ, ಅಸನ್ಸೋಲ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಹಿನ್ನೆಲೆ ಗಾಯಕ ಬಾಬುಲ್ ಸುಪ್ರಿಯೋ ಅವರಿಗೆ ಕ್ಯಾಬಿನೆಟ್​ ದರ್ಜೆಯ ಬೃಹತ್ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಖಾತೆ ನೀಡಲಾಗಿತ್ತು.

ಆದರೆ, 2019ರ ಚುನಾವಣೆಯಲ್ಲಿ ಇದೇ ಕೋಲ್ಕತಾದಲ್ಲಿ ಬಿಜೆಪಿ ದಾಖಲೆಯ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಸ್ಥಳೀಯ ನಾಯಕರು ಸಹ ತಮ್ಮ ರಾಜ್ಯಕ್ಕೆ ಅಧಿಕ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದರು. ಆದರೂ ಸಹ ಪ್ರಧಾನಿ ನರೇಂದ್ರ ಮೋದಿ ನೆಪಕ್ಕೂ ಇಲ್ಲಿನ ಒಬ್ಬೇ ಒಬ್ಬ ಸಂಸದರಿಗೂ ಕ್ಯಾಬಿನೆಟ್​ ದರ್ಜೆಯ ಸಚಿವ ಸ್ಥಾನ ನೀಡಲು ಮನಸ್ಸು ಮಾಡಿಲ್ಲ.
Loading...

ಬದಲಾಗಿ ಅಸನ್ಸೋಲ್ ಕ್ಷೇತ್ರದ ಸಂಸದ ಬಾಬುಲ್ ಸುಪ್ರಿಯೋ ಅವರಿಗೆ ಪರಿಸರ, ಅರಣ್ಯ, ಹವಾಮಾನ ರಾಜ್ಯ ಖಾತೆ ಹಾಗೂ ಮೊದಲ ಬಾರಿಗೆ ರಾಯ್​ಗಂಜ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ದೇಬೋಶ್ರೀ ಚೌಧರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ರಾಜ್ಯ ಖಾತೆ ನೀಡಿ ಮೋದಿ ಕೈ ತೊಳೆದುಕೊಂಡಿದ್ದಾರೆ. ಪಶ್ಚಿಮ ಬಂಗಾಳಕ್ಕೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡದಿರುವುದರ ಹಿಂದೆ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಮೇಲಿನ ವೈಮನಸ್ಸೆ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ರಾಷ್ಟ್ರ ರಾಜಕಾರಣದಲ್ಲಿ ಮತ್ತೆ ಸೇಡಿನ ವಾಸನೆ ಬೀಸುತ್ತಿದೆ.

ಇದನ್ನೂ ಓದಿ : ರಾಜ್ಯದ ನಾಲ್ವರು ಸಂಸದರಿಗೆ ರಸಗೊಬ್ಬರ, ಹಣಕಾಸು, ಗಣಿ, ರೈಲ್ವೆ ಮಹತ್ವ ಖಾತೆಗಳ ಜವಾಬ್ದಾರಿ

ಈಶಾನ್ಯ ಭಾರತಕ್ಕೂ ಸಿಗದ ಸ್ಥಾನಮಾನ:

ಪಶ್ಚಿಮ ಬಂಗಾಳದ ಕಥೆ ಒಂದೆಡೆಯಾದರೆ, ಈಶಾನ್ಯ ಭಾರತದ ಕಥೆ ಮತ್ತೂ ಚಿಂತಾಜನಕ. ಅಸ್ಸಾಂ, ಒಡಿಶಾ, ನಾಗಾಲ್ಯಾಂಡ್, ಹಿಮಾಚಲಪ್ರದೇಶ, ತ್ರಿಪುರ, ಮಣಿಪುರ, ಅರುಣಾಚಲ ಪ್ರದೇಶ ಸೇರಿದಂತೆ 7 ರಾಜ್ಯಗಳನ್ನು ಹೊಂದಿರುವ ಈಶಾನ್ಯ ಭಾರತ ದೇಶದಲ್ಲೇ ತೀರಾ ಹಿಂದುಳಿದಿರುವ ರಾಜ್ಯಗಳ ಪೈಕಿ ಅಗ್ರಸ್ಥಾನದಲ್ಲಿವೆ.

ಈ ರಾಜ್ಯಗಳಲ್ಲಿ ಒಟ್ಟಾರೆ ಬಿಜೆಪಿ 44 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ಒಟ್ಟು ಗಳಿಸಿರುವ 303 ಸ್ಥಾನಗಳ ಪೈಕಿ ಈಶಾನ್ಯದಿಂದಲೇ 44 ಕ್ಷೇತ್ರಗಳು ಹರಿದುಬಂದಿವೆ. ಇದು ಸಹ ಈಶಾನ್ಯ ಭಾಗದಲ್ಲಿನ ಬಿಜೆಪಿಯ ಈವರೆಗಿನ ಅತ್ಯತ್ತಮ ಸಾಧನೆ ಎನ್ನಲಾಗಿದೆ. ಹೀಗಾಗಿ ಈಶಾನ್ಯ ಭಾಗದ ಅಭಿವೃದ್ಧಿಗಾಗಿ ಬಿಜೆಪಿ ಅಧಿಕ ಸಚಿವ ಸ್ಥಾನ ನೀಡಲಿದೆ ಎಂದೇ ಅಂದಾಜಿಸಲಾಗಿತ್ತು. ಆದರೆ ಕಳೆದ ಅವಧಿಯಲ್ಲಿ ಪೆಟ್ರೋಲಿಯಂ ಖಾತೆಯನ್ನು ನಿಭಾಯಿಸಿದ ಒಡಿಶಾ ಸಂಸದ ದರ್ಮೇಂದ್ರ ಪ್ರಧಾನ್​ಗೆ ಮಾತ್ರ ಈ ಬಾರಿಯೂ ಅದೇ ಖಾತೆ ನೀಡಲಾಗಿದೆ. ಕೇಂದ್ರ ಸರ್ಕಾರದ ಈ ನಡೆ ಸ್ವಾಭಾವಿಕವಾಗಿ ಈಶಾನ್ಯ ಭಾಗದ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

First published:May 31, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...