Lakhimpur Kheri Violence| ಲಖೀಂಪುರ್​ ಖೇರಿ ಹತ್ಯಾಕಾಂಡ; ಸಾಕ್ಷಿ ಇಲ್ಲದೆ ಯಾರ ಮೇಲೂ ಕ್ರಮವಿಲ್ಲ; ಯೋಗಿ ಆದಿತ್ಯನಾಥ್

ಸಚಿವರ ಮಗ ಆಶೀಶ್ ಮಿಶ್ರಾ ವಿರುದ್ಧ ಯಾವುದೇ ವಿಡಿಯೋ ಸಾಕ್ಷ್ಯ ಇಲ್ಲ. ಅಂತಹ ಯಾವುದಾದರೂ ಸಾಕ್ಷ್ಯಗಳು ಯಾರ ಬಳಿಯಾದರೂ ಇದ್ದರೇ, ಅವರು ಅದನ್ನು ಅಪ್ಲೋಡ್ ಮಾಡಬಹುದು. ಆದರೆ, ಯಾವುದೇ ಒತ್ತಡದಿಂದ ಯಾರ ಮೇಲೂ ಕ್ರಮ ಕೈಗೊಳ್ಳುವುದಿಲ್ಲ ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

ಯುಪಿ ಸಿಎಂ ಯೋಗಿ.

ಯುಪಿ ಸಿಎಂ ಯೋಗಿ.

  • Share this:
    ಲಖ್ನೋ (ಅಕ್ಟೋಬರ್ 09); 9 ಜನರ ಸಾವಿಗೆ ಕಾರಣವಾದ ಲಖೀಪುರ್ ಖೇರಿ ಹತ್ಯಾಕಾಂಡದಲ್ಲಿ  ಸಚಿವ ಅಜಯ್ ಮಿಶ್ರಾ ಮತ್ತು ಅವರ ಮಹ ಆಶೀಶ್ ಮಿಶ್ರಾ ಪಾತ್ರ ಪ್ರಮುಖವಾದದ್ದು. ಇದೇ ಕಾರಣಕ್ಕೆ ಇವರ ವಿರುದ್ಧ ಕಠಿಣ ಕ್ರಮಕ್ಕೆ ವರುಣ್ ಗಾಂಧಿ ಸೇರಿದಂತೆ ಹಿರಿಯ ಬಿಜೆಪಿ ನಾಯಕರೇ ಆಗ್ರಹಿಸಿದ್ದಾರೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, "ಪ್ರಕರಣದಲ್ಲಿ ಯಾವುದೇ ಒತ್ತಡದಿಂದ ಯಾರ ವಿರುದ್ಧವೂ ಕ್ರಮ ಕೈಗೊಳ್ಳುವುದಿಲ್ಲ. ಸಾಕ್ಷಿ ಸಿಕ್ಕ ಬಳಿಕ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ. ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತು ಅವರ ಮಗ ಆಶಿಶ್ ಮಿಶ್ರಾನನ್ನು ಬಂಧಿಸುವಂತೆ ಪ್ರತಿಪಕ್ಷಗಳು ಆಗ್ರಹಿಸಿದ ಹಿನ್ನೆಲೆಯಲ್ಲಿ, ಹತ್ಯಾಕಾಂಡ ನಡೆದು ಆರು ದಿನಗಳ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪ್ರತಿಕ್ರಿಯೆ ನೀಡಿದ್ದಾರೆ.

    "ಲಖೀಂಪುರ್ ಖೇರಿ ಹತ್ಯಾಕಾಂಡದಲ್ಲಿ ನಾಲ್ವರು ರೈತರು ಸೇರಿದಂತೆ ಒಟ್ಟು 9 ಜನರು ಮೃತಪಟ್ಟಿದ್ದಾರೆ. ಈ ಘಟನೆ ದುರದೃಷ್ಟಕರ ಎಂದಿರುವ ಯೋಗಿ ಆದಿತ್ಯನಾಥ್, ಸರ್ಕಾರವು ಘಟನೆಯ ವಿವರಗಳನ್ನು ಆಳವಾಗಿ ಪರಿಶೀಲಿಸುತ್ತಿದೆ. ಅಲ್ಲದೆ, ಘಟನೆಯನ್ನು ನ್ಯಾಯಾಂಗ ತನಿಖೆಗೂ ಒಳಪಡಿಸಲಾಗಿದೆ" ಎಂದು ತಿಳಿಸಿದ್ದಾರೆ.

    ಪತ್ರಕರ್ತರ ಜೊತೆಗೆ ಮಾತನಾಡಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, "ಕಾನೂನು ಪ್ರತಿಯೊಬ್ಬರಿಗೂ ಭದ್ರತೆ ನೀಡುವ ಭರವಸೆ ನೀಡುವಾಗ, ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಯಾವುದೇ ಸ್ಥಾನವಿಲ್ಲ. ಅವರು ಯಾರೇ ಆಗಿರಲಿ ಕಾನೂನು ಕೈಗೆ ತೆಗೆದುಕೊಳ್ಳುವ ಅಗತ್ಯವಿಲ್ಲ. ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.

    ಈ ಪ್ರಕರಣದಲ್ಲಿ ಸಚಿವರ ಮಗ ಆಶಿಶ್ ಮಿಶ್ರಾ ಅವರನ್ನು ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿರುವ ಆದಿತ್ಯನಾಥ್, "ಅಂತಹ ಯಾವುದೇ ವಿಡಿಯೋ ಇಲ್ಲ. ನಾವು ದೂರವಾಣಿ ಸಂಖ್ಯೆಗಳನ್ನು ನೀಡಿದ್ದೇವೆ. ಅಂತಹ ಯಾವುದಾದರೂ ಸಾಕ್ಷ್ಯಗಳು ಯಾರ ಬಳಿಯಾದರೂ ಇದ್ದರೇ, ಅವರು ಅದನ್ನು ಅಪ್ಲೋಡ್ ಮಾಡಬಹುದು. ಎಲ್ಲವೂ ಸ್ಪಷ್ಟವಾಗಿದೆ. ಯಾರೊಂದಿಗೂ ಅನ್ಯಾಯವಾಗುವುದಿಲ್ಲ. ಕಾನೂನನ್ನು ಕೈಗೆ ತೆಗೆದುಕೊಳ್ಳಲು ಯಾರಿಗೂ ಅವಕಾಶವಿಲ್ಲ. ಆದರೆ, ಯಾವುದೇ ಒತ್ತಡದಿಂದ ಯಾರ ಮೇಲೆಯೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ" ಎಂದಿದ್ದಾರೆ.

    "ಬಿಜೆಪಿ ಶಾಸಕರಾಗಿರಲಿ, ಪ್ರತಿಪಕ್ಷದ ಶಾಸಕರಾಗಿರಲಿ ಅಥವಾ ಯಾವುದೇ ಹುದ್ದೆಯಲ್ಲಿರುವವರಾಗಿರಲಿ. ನಾವು ಕ್ರಮ ಕೈಗೊಳ್ಳಲು ಎಂದಿಗೂ ಹಿಂಜರಿದಿಲ್ಲ. ಲಖಿಂಪುರ್ ಖೇರಿ ಘಟನೆಯಲ್ಲೂ ಸರ್ಕಾರ ಅದೇ ಕೆಲಸ ಮಾಡುತ್ತಿದೆ. ಸರ್ಕಾರದಿಂದ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ)ಮತ್ತು ನ್ಯಾಯಾಂಗ ಆಯೋಗವನ್ನೂ ರಚಿಸಲಾಗಿದೆ" ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

    ಸದ್ಯ ಈ ಪ್ರಕರಣದಲ್ಲಿ ಲುವಕುಶ್ ಮತ್ತು ಆಶಿಶ್ ಪಾಂಡೆ ಎಂಬುವವರನ್ನು ಬಂಧಿಸಲಾಗಿದ್ದು, ಪೊಲೀಸರು ಶುಕ್ರವಾರ ಸಚಿವರ ಪುತ್ರ ಆಶಿಶ್ ಮಿಶ್ರಾಗೆ ಸಮನ್ಸ್ ನೀಡಿದ್ದರೂ, ಅವರು ವಿಚಾರಣೆಗೆ ಹಾಜರಾಗಿಲ್ಲ.

    ಇದನ್ನೂ ಓದಿ: Lakhimpur Kheri Violence| ಲಖೀಂಪುರ್​ ಖೇರಿ ಹಿಂಸಾಚಾರ; 11 ಗಂಟೆಯ ಒಳಗೆ ಪೊಲೀಸರ ಎದುರು ಆರೋಪಿ ಆಶೀಶ್ ಮಿಶ್ರಾ ಹಾಜರ್

    ಇತ್ತ, ಆರೋಪಿಗಳನ್ನು ಇನ್ನು ಬಂಧಿಸಿರದ ಕುರಿತು ರೈತ ಸಂಘಟನೆ ಎಸ್‌ಕೆಎಂ ಆಕ್ರೋಶ ವ್ಯಕ್ತಪಡಿಸಿದೆ. ಘಟನೆ ನಡೆದು ಐದು ದಿನಗಳಾಗಿವೆ. ಆರೋಪಿ ಆಶಿಶ್ ಮಿಶ್ರಾ ರೈತರು ಕೊಲೆಯಾದ ಘಟನೆಯ ಸ್ಥಳದಲ್ಲಿ ಇರದಿದ್ದರೆ, ಬೇರೆ ಎಲ್ಲಿದ್ದರು ಎಂದು ಇದುವರೆಗೂ ಏಕೆ ಸಾಬೀತುಪಡಿಸಿಲ್ಲ ಎಂದು ರೈತರು ಪ್ರಶ್ನಿಸಿದ್ದಾರೆ. ಲಖಿಂಪುರ್ ಖೇರಿ ಘಟನೆಯಲ್ಲಿ ಆಶಿಶ್ ಮಿಶ್ರಾ ಕೈವಾಡವಿಲ್ಲದಿದ್ದರೆ, ಆತನು ನೇಪಾಳಕ್ಕೆ ಏಕೆ ಓಡಿಹೋಗಿದ್ದಾನೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಪ್ರಶ್ನಿಸಿದೆ.
    Published by:MAshok Kumar
    First published: