ಯಾವ 56 ಕೂಡ ನಿಮಗೆ ಏನೂ ಮಾಡಲಾಗುವುದಿಲ್ಲ: ಜನ್ಮದಿನದಂದು ಪಿ ಚಿದಂಬರಮ್​ಗೆ ಪತ್ರದ ಮೂಲಕ ಧೈರ್ಯ ತುಂಬಿದ ಮಗ ಕಾರ್ತಿ

ಪಿ. ಚಿದಂಬರಮ್ ಅವರು ಜೈಲಿಗೆ ಹೋದ ನಂತರ ಭಾರತದಲ್ಲಾಗಿರುವ ಕೆಲ ಬದಲಾವಣೆಗಳನ್ನೂ ಕಾರ್ತಿ ಅವರು ಪತ್ರದಲ್ಲಿ ಬಹಳ ಸೂಚ್ಯವಾಗಿ ಬರೆದಿದ್ದಾರೆ.

Vijayasarthy SN | news18
Updated:September 16, 2019, 5:37 PM IST
ಯಾವ 56 ಕೂಡ ನಿಮಗೆ ಏನೂ ಮಾಡಲಾಗುವುದಿಲ್ಲ: ಜನ್ಮದಿನದಂದು ಪಿ ಚಿದಂಬರಮ್​ಗೆ ಪತ್ರದ ಮೂಲಕ ಧೈರ್ಯ ತುಂಬಿದ ಮಗ ಕಾರ್ತಿ
ಕಾರ್ತಿ ಮತ್ತು ಪಿ. ಚಿದಂಬರಮ್
  • News18
  • Last Updated: September 16, 2019, 5:37 PM IST
  • Share this:
ನವದೆಹಲಿ(ಸೆ. 16): ಐಎನ್​ಎಕ್ಸ್ ಮೀಡಿಯಾ ಅವ್ಯವಹಾರ ಪ್ರಕರಣದಲ್ಲಿ ಸಿಬಿಐ ಕಸ್ಟಡಿಗೊಳಪಟ್ಟು ತಿಹಾರ್ ಜೈಲಲ್ಲಿರುವ ಪಿ. ಚಿದಂಬರಮ್ ಅವರಿಗೆ ಇಂದು 74ನೇ ಜನ್ಮದಿನ. ಈ ವಿಶೇಷ ಸಂದರ್ಭದಲ್ಲಿ ಅವರಿಗೆ ಮಗ ಕಾರ್ತಿ ಚಿದಂಬರಮ್ ಪತ್ರದ ಮೂಲಕ ಜನ್ಮದಿನದ ಶುಭಾಶಯ ಹಾಗೂ ದೈರ್ಯ ತುಂಬಿದ್ದಾರೆ. ತನ್ನ 2 ಪುಟಗಳ ಪತ್ರದಲ್ಲಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ನೀವು 74 ವರ್ಷದ ವಯಸ್ಸಿನವರಾಗಿದ್ದೀರಿ. ಯಾವ 56!!! ಕೂಡ ನಿಮ್ಮನ್ನು ತಡೆಯಲಾಗುವುದಿಲ್ಲ” ಎಂದು ಕಾರ್ತಿ ಚಿದಂಬರಮ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ. 56 ಎಂಬ ಅಂಕಿ ಬಳಕೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನ ಟೀಕಿಸಿದ್ದಾರೆ. ನರೇಂದ್ರ ಮೋದಿ ಅವರು ತಮ್ಮ ಧೈರ್ಯಶಾಲಿತನಕ್ಕೆ ಸಂಕೇತವಾಗಿ ತಮ್ಮದು 56 ಇಂಚಿನ ಎದೆ ಎಂದು ಹೇಳಿಕೊಂಡಿದ್ದುಂಟು. ಆಗಲಿಂದಲೂ ವಿಪಕ್ಷಗಳು ನರೇಂದ್ರ ಮೋದಿ ಅವರನ್ನು ಕುಟುಕಲು ಈ 56 ಅಂಕಿಯನ್ನ ಬಳಕೆ ಮಾಡುತ್ತವೆ. ಕಾರ್ತಿ ಚಿದಂಬರಮ್ ಅವರು ಇದೇ ಅಂಕಿ ಬಳಕೆ ಮಾಡಿ ಕೇಂದ್ರ ಸರ್ಕಾರವನ್ನು ತಮ್ಮ ಪತ್ರದಲ್ಲಿ ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್​, ಡಿಸೇಲ್ ಬೆಲೆ 5 ರಿಂದ 6 ರೂ ಏರಿಕೆ ಸಾಧ್ಯತೆ; ಸಾಮಾನ್ಯರ ಜೇಬಿಗೆ ಬೀಳಲಿದೆ ಮತ್ತಷ್ಟು ಕತ್ತರಿ

ಪಿ. ಚಿದಂಬರಮ್ ಅವರು ಜೈಲಿಗೆ ಹೋದ ನಂತರ ಭಾರತದಲ್ಲಾಗಿರುವ ಕೆಲ ಬದಲಾವಣೆಗಳನ್ನೂ ಕಾರ್ತಿ ಅವರು ಪತ್ರದಲ್ಲಿ ಬಹಳ ಸೂಚ್ಯವಾಗಿ ಬರೆದಿದ್ದಾರೆ.

“ನೀವು ಯಾವತ್ತೂ ದೊಡ್ಡ ಆಚರಣೆಗಳಿಗೆ ಮುಂದಾಗಿದ್ದಿಲ್ಲ. ಆದರೆ, ಇತ್ತೀಚೆಗೆ ದೇಶದಲ್ಲಿ ಪ್ರತಿಯೊಂದು ಸಣ್ಣ ವಿಷಯಕ್ಕೂ ಭವ್ಯ ಆಚರಣೆ ಮಾಡಲಾಗುತ್ತಿದೆ. ನೀವು ನಮ್ಮೊಂದಿಗಿಲ್ಲದ ಜನ್ಮದಿನವೇ ಬೇರೆ. ನೀವಿಲ್ಲದೇ ಇರುವುದು ನಮ್ಮನ್ನು ಚುಚ್ಚುತ್ತಿದೆ. ನೀವು ಮನೆಗೆ ಬಂದು ನಮ್ಮೊಂದಿಗೆ ಕೇಕ್ ಕತ್ತರಿಸಬೇಕಿತ್ತು ಎಂಬುದು ನಮ್ಮ ಬಯಕೆ” ಎಂದು ಕಾರ್ತಿ ಚಿದಂಬರಮ್ ಆಶಿಸಿದ್ದಾರೆ.

ಇದನ್ನೂ ಓದಿ: ಜಲ್ಲಿಕಟ್ಟು ಒಂದು ಹೋರಾಟವಷ್ಟೇ, ಮಾತೃಭಾಷೆಯ ವಿಚಾರಕ್ಕೆ ಬಂದರೆ ಯುದ್ಧವೇ ಜರುಗಲಿದೆ; ಕೇಂದ್ರವನ್ನು ಎಚ್ಚರಿಸಿದ ಕಮಲಹಾಸನ್

ಅವರು ತಮ್ಮ ಪತ್ರದ ಎರಡೂ ಪುಟಗಳನ್ನ ಲಗತ್ತಿಸಿ ಟ್ವೀಟ್ ಮಾಡಿದ್ದಾರೆ. ಈ ಪತ್ರದಲ್ಲಿ 56 ಇಂಚಿನ ಎದೆಯ ಜೊತೆಗೆ ಕೇಂದ್ರಕ್ಕೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅಪಹಾಸ್ಯ ಮಾಡಿದ್ದಾರೆ.

ಪಿಯೂಶ್ ಗೋಯಲ್ ಅವರ ಗುರುತ್ವಾಕರ್ಷಣ ಸಂಬಂಧಿತ ಹೇಳಿಕೆ; ಜಿಡಿಪಿ ಶೇ. 5ಕ್ಕೆ ಕುಸಿದಿರುವುದು; ಆಟೊಮೊಬೈಲ್ ಉದ್ಯಮದ ಹಿನ್ನಡೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ಲೇಷಣೆ ಇತ್ಯಾದಿ ಬೆಳವಣಿಗೆಗಳ ಬಗ್ಗೆ ಕಾರ್ತಿ ಚಿದಂಬರಮ್ ಅವರು ವ್ಯಂಗ್ಯ ಮಾಡಿ ಬಣ್ಣಿಸಿದ್ದಾರೆ.

ಇದನ್ನೂ ಓದಿ: 7ನೇ ಮದುವೆಯಾಗಲು ಹೋಗಿ ಸಿಕ್ಕಿಬಿದ್ದ ಚೆನ್ನೈನ ನಕಲಿ ಎನ್​ಕೌಂಟರ್​ ಸ್ಪೆಷಲಿಸ್ಟ್​

ಕಾಶ್ಮೀರದಲ್ಲಿ ಸೇಬು ಬೆಳೆಗಾರರಿಂದ ನೇರ ಖರೀದಿ ಮಾಡಿ ಹಣವನ್ನು ರೈತರ ಅಕೌಂಟ್​ಗೆ ಹಾಕುವ ಕೇಂದ್ರದ ನಿರ್ಧಾರವನ್ನೂ ಅವರು ಲೇವಡಿ ಮಾಡಿದ್ದಾರೆ. ಇಡೀ ಕಾಶ್ಮೀರವನ್ನು 40 ದಿನಗಳ ಕಾಲ ಲಾಕ್​ಡೌನ್ ಮಾಡಿರುವಾಗ ಕೇಂದ್ರ ಸರ್ಕಾರವು ಸೇಬುಗಳಿಗೆ ಸ್ವಾತಂತ್ರ್ಯ ನೀಡಿದೆ. ಮುಂದೇನು? ಕಾರ್ಪೆಟ್​ಗಳಾ? ಕಾಶ್ಮೀರಿಗಳಂತೆಯೇ ನೀವು ಕೂಡ ಅನ್ಯಾಯವಾಗಿ ಬಂಧಿತರಾಗಿರುವುದರಿಂದ ನಿಮಗೆ ಮಾತ್ರ ಕಾಶ್ಮೀರಿಗಳ ನಿಜವಾದ ಪರಿಸ್ಥಿತಿ ಅರ್ಥವಾಗಬಲ್ಲುದು ಎಂದು ಕಾರ್ತಿ ಚಿದಂಬರಂ ಈ ಪತ್ರದಲ್ಲಿ ತಿಳಿಸಿದ್ದಾರೆ.

ಐಎನ್​ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಪಿ. ಚಿದಂಬರಮ್ ಅವರು ಸೆ. 19ರವರೆಗೂ ಸಿಬಿಐ ಕಸ್ಟಡಿಯಲ್ಲಿರುತ್ತಾರೆ. ರೋಸ್ ಅವೆನ್ಯೂ ಸಿಬಿಐ ವಿಶೇಷ ನ್ಯಾಯಾಯಲಯವು ಸೆ. 19ರಂದು ಈ ಪ್ರಕರಣದಲ್ಲಿ ಚಿದಂಬರಮ್ ಅವರ ಮುಂದಿನ ಹಣೆಬರಹ ಬರೆಲಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:September 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading