ಲಾಕ್​​ಡೌನ್​​ ವೇಳೆ ಮಗನಿಗಾಗಿ ತಾಯಿಯಿಂದ 1,400 km ಬೈಕ್ ಸವಾರಿ: ಈಗ Ukraineನಲ್ಲಿ ಸಿಲುಕಿರುವ ಪುತ್ರ!

ರಜಿಯಾ ಅವರ 19 ವರ್ಷದ ಮಗ ನಿಜಾಮುದ್ದೀನ್‌ ಅಮಾನ್ ಈಶಾನ್ಯ ಉಕ್ರೇನ್‌ನಲ್ಲಿರುವ ಸುಮಿ ಎಂಬ ನಗರದಲ್ಲಿ ಸಿಲುಕಿಕೊಂಡಿದ್ದಾನೆ. ಲಾಕ್​​ಡೌನ್​ ವೇಳೆ ಮಗನನ್ನು ಮನೆಗೆ ಕರೆತರಲು ಇದೇ ತಾಯಿ 1,400 ಕಿ.ಮೀ ಬೈಕ್​ ಚಲಾಯಿಸಿ ಸುದ್ದಿಯಾಗಿದ್ದರು. ಈಗ ಮತ್ತೆ ಮಗ ಸಂಕಷ್ಟದಲ್ಲಿ ಸಿಲುಕಿದ್ದಾನೆ. ಈ ತಾಯಿಯ ಪರದಾಟಕ್ಕೆ ಕೊನೆಯುಂಟೇ..!

ಪುತ್ರನೊಂದಿಗೆ ತಾಯಿ ರಜಿಯಾ

ಪುತ್ರನೊಂದಿಗೆ ತಾಯಿ ರಜಿಯಾ

 • Share this:
  ಕೊರೋನಾ (Corona) ಸಂದರ್ಭದಲ್ಲಿ ಬೇರೆ ಊರಿನಲ್ಲಿ ಲಾಕ್ ಆಗಿದ್ದ ಮಗನನ್ನು ಮನೆಗೆ ಕರೆತರಲು 1400 ಕಿ.ಮೀ ಬೈಕ್ ಓಡಿಸಿ ಸುದ್ದಿಯಾಗಿದ್ದ ಮಹಿಳೆ ಈಗ ಮತ್ತೊಮ್ಮೆ ಮಗನಿಗಾಗಿ ಪರದಾಡುವಂತಾಗಿದೆ. ಹೌದು ಉಕ್ರೇನ್‌ನಲ್ಲಿರುವ (Ukraine) ಮಗನಿಗಾಗಿ (Son) ತಾಯಿ (Mother) ಕಣ್ಣೀರಿಡುತ್ತಿದ್ದಾಳೆ. ಉಕ್ರೇನ್-ರಷ್ಯಾ ಯುದ್ಧದ ಬಿಸಿ ಪರೋಕ್ಷವಾಗಿ ಎಲ್ಲರಿಗೂ ತಟ್ಟಿದೆ. ಭಾರತೀಯ ಪ್ರಜೆಗಳು, ವಿದ್ಯಾರ್ಥಿಗಳು ಸೇರಿ ಸಾವಿರಾರು ಸಂಖ್ಯೆಯಲ್ಲಿ ಉಕ್ರೇನ್‌ನಲ್ಲಿಇದ್ದಾರೆ. ಯುದ್ಧ ಹಿನ್ನೆಲೆ ಎಲ್ಲರನ್ನೂ ಕೇಂದ್ರ ಸರ್ಕಾರ ಭಾರತಕ್ಕೆ ಕರೆಸಿಕೊಳ್ಳುವ ಸಲುವಾಗಿ ಅವಿರತ ಹೋರಾಟ ನಡೆಸುತ್ತಿದೆ. ಈಗಾಗ್ಲೇ 8 ಸಾವಿರಕ್ಕಿಂತ ಹೆಚ್ಚು ಜನರನ್ನು ಭಾರತಕ್ಕೆ ಕರೆಸಿಕೊಳ್ಳಲಾಗಿದೆ. ಇನ್ನು ಉಳಿದಿರುವವರ ವಾಪಸಾತಿಗೆ ಪ್ರಯತ್ನಿಸುತ್ತಿದೆ. ಆದರೆ ಮಕ್ಕಳ ಹಿಂದಿರುಗುವಿಕೆ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿರುವ ಪೋಷಕರು ಮಕ್ಕಳು ಹೇಗಿದ್ದಾರೆ, ಯಾವಾಗ ಬರುತ್ತಾರೆ ಎಂದು ತೀವ್ರ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಮಕ್ಕಳನ್ನು ಆದಷ್ಟು ಬೇಗ ಕರೆಸಿಕೊಳ್ಳಿ ಎಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.

  ಇದನ್ನೂ ಓದಿ: Viral News: 9 ತಿಂಗಳ ಗರ್ಭಿಣಿಯಂತಿದೆ ಈತನ ಹೊಟ್ಟೆ, ಇದ್ಯಾಕೆ ಹೀಗೆ?

  ಆಗ ಕೊರೊನಾ.. ಈಗ ಯುದ್ಧ..! 

  ಇವೆಲ್ಲದರ ಮಧ್ಯೆ ತೆಲಂಗಾಣದ ರಜಿಯಾ ಬೇಗಂ ಎಂಬ ಮಹಿಳೆ ಸಹ ತನ್ನ ಮಗನಿಗಾಗಿ ಪರಿತಪಿಸುತ್ತಿದ್ದಾರೆ. ಉಕ್ರೇನ್‌ನ ಸುಮಿ ನಗರದಲ್ಲಿ ತನ್ನ ಮಗ ನಿಜಾಮುದಿನ್ ಅಮಾನ್ 500 ವಿದ್ಯಾರ್ಥಿಗಳೊಂದಿಗೆ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಅವರನ್ನು ಕರೆತರುವಂತೆ ಮನವಿ ಮಾಡುತ್ತಿದ್ದಾರೆ. ಈ ಹಿಂದೆ ಲಾಕ್‌ಡೌನ್‌ ಸಂದರ್ಭದಲ್ಲಿ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಸಿಕ್ಕಿಬಿದ್ದ ಮಗನನ್ನು ಕರೆತರಲು ದ್ವಿಚಕ್ರ ವಾಹನದಲ್ಲಿ 1,400 ಕಿಲೋಮೀಟರ್ ಪ್ರಯಾಣಿಸುವ ಮೂಲಕ ಕೋವಿಡ್-19 ಸಾಂಕ್ರಾಮಿಕ ರೋಗದ ಮೊದಲ ಅಲೆಯ ಸಮಯದಲ್ಲಿ ಈ ಮಹಿಳೆ ರಜಿಯಾ ಸುದ್ದಿಯಾಗಿದ್ದರು. ತೆಲಂಗಾಣದ ನಿಜಾಮಾಬಾದ್‌ನ ಶಾಲಾ ಶಿಕ್ಷಕಿಯಾಗಿರುವ ರಜಿಯಾ ಬೇಗಂ ಈಗ ಮತ್ತದೇ ಸಂಕಟದಲ್ಲಿ ಸಿಲುಕಿದ್ದಾರೆ. ರಜಿಯಾ ಅವರ ಮಗ ಉಕ್ರೇನ್‌ನಲ್ಲಿ ಸಿಲುಕಿರುವ ಅಸಂಖ್ಯಾತ ಭಾರತೀಯ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದು ಮಗನ ಬರುವಿಕೆಗಾಗಿ ತಾಯಿ ಹವಣಿಸುತ್ತಿದ್ದಾರೆ.

  ಈಶಾನ್ಯ ಉಕ್ರೇನ್‌ನಲ್ಲಿ ಸಿಲುಕಿರುವ ಪುತ್ರ 

  ರಜಿಯಾ ಅವರ 19 ವರ್ಷದ ಮಗ ನಿಜಾಮುದ್ದೀನ್‌ ಅಮಾನ್ ಈಶಾನ್ಯ ಉಕ್ರೇನ್‌ನಲ್ಲಿರುವ ಸುಮಿ ಎಂಬ ನಗರದಲ್ಲಿ ಸಿಲುಕಿಕೊಂಡಿದ್ದಾನೆ. ಹೀಗಾಗಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್, ಗೃಹ ಸಚಿವ ಮೊಹಮ್ಮದ್ ಅಲಿ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ತನ್ನ ಮಗನನ್ನು ಭಾರತಕ್ಕೆ ಸ್ಥಳಾಂತರಿಸಲು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

  ಇದನ್ನೂ ಓದಿ: Ukraine Crisis: ಬಿಳಿ ಧ್ವಜ ಹಿಡಿದು ಕೆಲವು ಅಗತ್ಯ ರಷ್ಯಾ ಪದಗಳನ್ನು ಕಲಿತುಕೊಳ್ಳಿ, ಉಕ್ರೇನ್​ನಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

  ಉಕ್ರೇನ್‌ನಲ್ಲಿ ಹೊರಗೆ ಹೋಗುವುದು ಸುರಕ್ಷಿತವಲ್ಲದ ಕಾರಣ ಅವರು ಅಲ್ಲಿಂದ ಹೊರಬರಲು ಸಾಧ್ಯವಾಗದೇ ಅಲ್ಲಿಯೇ ಉಳಿದು ಬಿಟ್ಟಿದ್ದಾರೆ. ಅಲ್ಲಿ ಸಿಲುಕಿರುವ ಇತರ ಭಾರತೀಯ ವಿದ್ಯಾರ್ಥಿಗಳೊಂದಿಗೆ ನನ್ನ ಮಗನನ್ನು ರಕ್ಷಿಸುವಂತೆ ನಿಜಾಮಾಬಾದ್‌ನ ಬೋಧನ್‌ನ ಸಲಂಪಾಡ್ ಕ್ಯಾಂಪ್ ಗ್ರಾಮದಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ರಜಿಯಾ ಬೇಗಂ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.

  ಮಗನಿಗಾಗಿ 1400 ಕಿಲೋಮೀಟರ್ ಬೈಕ್ ಓಡಿಸಿದ್ದ ಮಹಿಳೆ

  ಮಾರ್ಚ್ 2020ರಲ್ಲಿ, ಕೊರೋನಾ ಲಾಕ್‌ಡೌನ್‌ನಿಂದಾಗಿ ನೆಲ್ಲೂರಿನಲ್ಲಿ ಸಿಲುಕಿಕೊಂಡಿದ್ದ ತನ್ನ ಮಗನನ್ನು ಮನೆಗೆ ಕರೆತರಲು ರಜಿಯಾ ತಮ್ಮ ಸ್ಕೂಟಿಯಲ್ಲಿ 1400 ಕಿಲೋಮೀಟರ್ ಸವಾರಿ ಮಾಡಿ ಮಗನನ್ನು ಮನೆಗೆ ಕರೆತಂದಿದ್ದರು. "ನಾನು ನನ್ನ ಮಗನನ್ನು ಮರಳಿ ಕರೆತರಲು ಬೋಧನ್ ಎಸಿಪಿ ಜೈಪಾಲ್ ರೆಡ್ಡಿ ಅವರನ್ನು ಸಂಪರ್ಕಿಸಿ ನನ್ನ ಪರಿಸ್ಥಿತಿಯನ್ನು ವಿವರಿಸಿದೆ. ಎಸಿಪಿ ತಕ್ಷಣ ನನಗೆ ನೆಲ್ಲೂರಿಗೆ ಪ್ರಯಾಣಿಸಲು ಅನುಮತಿ ಪತ್ರವನ್ನು ನೀಡಿದರು” ಎಂದು ಅವರು ಹೇಳಿದರು. ಮಹಿಳೆ ಮೂರು ದಿನ ಸ್ಕೂಟಿಯಲ್ಲಿ ರಾತ್ರಿ ಹಗಲು ಸಂಚರಿಸುವುದು ಸುಲಭದ ಮಾತಲ್ಲ. ಆದರೆ ನನ್ನ ಮಗನನ್ನು ಕರೆದುಕೊಂಡು ಬರಲೇಬೇಕೆಂಬ ನನ್ನ ನಿರ್ಧಾರ ನನ್ನ ಭಯವನ್ನೆಲ್ಲ ಓಡಿಸಿತು. ಪ್ರಯಾಣದ ಅಗತ್ಯಕ್ಕೆ ರೊಟ್ಟಿಗಳನ್ನು ಕಟ್ಟಿಕೊಂಡು ಹೋಗಿದ್ದೆ ಎನ್ನುತ್ತಾರೆ ಬೇಗಂ.

  ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರಜಿಯಾ 15 ವರ್ಷಗಳ ಹಿಂದೆಯೇ ತಮ್ಮ ಪತಿಯನ್ನು ಕಳೆದುಕೊಂಡಿದ್ದರು. 19 ವರ್ಷದ ನಿಜಾಮುದ್ದೀನ್ ವೈದ್ಯನಾಗುವ ಗುರಿ ಹೊಂದಿದ್ದಾನೆ. ಸದ್ಯ ಉಕ್ರೇನ್‌ನಲ್ಲಿ ಸಿಲುಕಿರುವ ಮಗನಿಗಾಗಿ ರಜಿಯಾ ಹಪಹಪಿಸುತ್ತಿದ್ದಾರೆ.
  Published by:Kavya V
  First published: