ವಿವಾದಿತ ಸ್ವಯಂ ಘೋಷಿತ ಸ್ವಾಮೀಜಿ (Swami) ನಿತ್ಯಾನಂದ (Nithyananda) ಮತ್ತೆ ಸುದ್ದಿಯಾಗಿದ್ದಾರೆ. ಹೌದು, ಒಂದಲ್ಲಾ ಒಂದು ಕಾರಣದಿಂದ ಸುದ್ದಿಯಾಗುತ್ತಿದ್ದ ನಿತ್ಯಾನಂದ ಅವರು ಈ ಬಾರಿ ಸತ್ತು ಹೋಗಿದ್ದಾರೆ ಎಂಬ ಸುಳ್ಳು ವದಂತಿಗಳು (Fake News) ಹರಡಿದ್ದವು. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿದ್ದೇ ತಡ ಎಲ್ಲಡೆ ಸಖತ್ ವೈರಲ್ ಆಗಿದೆ. ಇದನ್ನು ತಿಳಿದ ನಿತ್ಯಾನಂದ ಸ್ವಾಮಿ ಅವರು ಫೇಸ್‌ಬುಕ್ (Facebook) ಮೂಲಕ ಸುಳ್ಳು ವದಂತಿಗಳಿಗೆ ತೆರೆಎಳೆದಿದ್ದಾರೆ. ಅಲ್ಲದೇ ‘ಕೈಲಾಸ್ ಅವತಾರ್ ಕ್ಲಿಕ್ಸ್‘ ಎಂಬ ಫೇಸ್‌ಬುಕ್ ಪೇಜ್ ನಲ್ಲಿ ಸವಿಸ್ತಾರವಾಗಿ ಬರೆದುಕೊಂಡಿದ್ದು, ತಾನು ಎಲ್ಲಿ ಇರುವುದಾಗಿ ಹಾಗೂ ಏನು ಮಾಡುತ್ತಿರುವುದಾಗಿ ನಿತ್ಯಾನಂದ ಸ್ವಾಮಿ ತಿಳಿಸಿದ್ದಾರೆ. ಸದ್ಯ ನಿತ್ಯಾನಂದ ಅವರು ಸಮಾಧಿಯಲ್ಲಿದ್ದಾರಂತೆ. ಹೌದು, ಅವರು ಸಮಾಧಿಯಿಂದ ಫೇಸ್‌ಬುಕ್ ಮೂಲಕ ಈ ವಿಷಯವನ್ನು ಬರೆದುಕೊಂಡಿದ್ದಾರೆ.
ಸಾವಿನ ವದಂತಿ ಕುರಿತು ಫೇಸ್‌ಬುಕ್ ನಲ್ಲಿ ಸ್ಪಷ್ಟನೆ:
ಇನ್ನು, ಕೈಲಾಸದ ನಿತ್ಯನಂದ ಸ್ವಾಮಿಗಳಿಗೆ ಅನಾರೋಗ್ಯವಾಗಿದ್ದು, ಮೃತಪಟ್ಟಿದ್ದಾರೆ ಎಂದು ವಿರೋಧಿಗಳು ಸುಳ್ಳು ವದಂತಿಯನ್ನು ಹರಡಿಸಿದ್ದರು. ಇದನ್ನು ತಿಳಿದ ನಿತ್ಯಾನಂದ ಫೇಸ್‌ಬುಕ್ ಮೂಲಕ ತಮ್ಮ ಭಕ್ತರಿಗೆ ಸ್ಪಷ್ಟ ಸಂದೇಶವನ್ನು ತಲುಪಿಸಿದ್ದಾರೆ. ಫೇಸ್‌ಬುಕ್ ನಲ್ಲಿ ಬರೆದುಕೊಂಡಿರುವ ನಿತ್ಯಾನಂದ ಅವರು, ತಾನು ಮೃತಪಟ್ಟಿಲ್ಲ ಹಾಗೂ ಸಮಾಧಿಯಲ್ಲಿರುವುದಾಗಿ ತಿಳಿಸಿದ್ದಾರೆ.
ನಿತ್ಯಾನಂದ ಅವರ ಫೇಸ್‌ಬುಕ್ ಸಂದೇಶದಲ್ಲಿ ಏನಿದೆ?:
ಫೇಸ್‌ಬುಕ್ ನಲ್ಲಿ ಬರೆದುಕೊಂಡಿರುವ ನಿತ್ಯಾನಂದ ಸ್ವಾಮಿಗಳು, ತಾನು ಸತ್ತಿಲ್ಲ. ಇನ್ನೂ ಜೀವಂತವಾಗಿ ಹಾಗೂ ಆರೋಗ್ಯವಾಗಿದ್ದೇನೆ. ನನ್ನ ವಿರೋಧಿಗಳು ಈ ರೀತಿಯ ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾರೆ. ನಾನು ಎಲ್ಲಿಗೂ ಓಡಿಯೂ ಹೋಗಿಲ್ಲ. ನಾನು ನನ್ನ ಕೈಲಾಸದಲ್ಲಿ ಇದ್ದೇನೆ. ನಾನು ಸದ್ಯ ಸಮಾಧಿಯಲ್ಲಿರುವುದಾಗಿ ನನ್ನ ಭಕ್ತಾಧಿಗಳಿಗೆ ತಿಳಸಲು ಬಯಸುತ್ತೇನೆ. ಅಲ್ಲದೇ ನನಗೆ ನಿಮ್ಮ ಮುಂದೆ ಬಂದು ಮಾತನಾಡಲು ಅಥವಾ ಸತ್ಸಂಗ ನಡೆಸಲು ಇನ್ನೂ ಸ್ವಲ್ಪ ಸಮಯಬೇಕು.
ಇದನ್ನೂ ಓದಿ: Baglamukhi Siddhapeeth: ಚುನಾವಣಾ ಗೆಲುವಿಗೆ ತಾಯಿ ಮೊರೆ ಹೋಗಿದ್ದರು ಇಂದಿರಾಗಾಂಧಿ
ಜೊತೆಗೆ ಕೈಲಾಸದ ಸ್ಥಳಗಳು ಹಾಗೂ ವೈಬ್ ಗಳು ಚಿತ್ತಸ್ಥಿಯಲ್ಲಿದೆ. ಇದರ ಕುರಿತು ಅನುಮಾನ ಇರುವವರು ಬೇಕಿದ್ದರೆ ತಿರುಮಣ್ಣಾಮಲೈ ಅರುಣಗಿರಿಯ ಯೋಗೆಶ್ವರ ಸಮಾಧಿಗೆ ಹೋಗಿ ದೀಪ ಬೇಳಗಿಸಲಿ. ಆಗ ನಾನು ಅವರಿಗೆ ಸ್ಪಷ್ಟವಾಗಿ ಗೋಚರಿಸುತ್ತೇನೆ. ಅಲ್ಲದೇ ಈ ಕೆಳಗೆ ನೀಡಿರುವ ಫೋಟೋಗಳು ಸುಳ್ಳು ಎನ್ನುವವರು ಸಹ ದೀಪ ಬೆಳಗಿಸಲಿ ಎಂದಿದ್ದಾರೆ.
ಇನ್ನು, ನನ್ನೊಂದಿಗೆ 27 ವೈದ್ಯರು ಮತ್ತು ಭಕ್ತರು ಇದ್ದಾರೆ. ಅವರು ಸೂಪರ್ ಕಾನ್ಶ್ಯಿಯಸ್ನೆಸ್ ಕುರಿತು ಸಂಶೋಧನೆ ಮಾಡುತ್ತಿದ್ದಾರೆ. ಅಲ್ಲದೇ ನನ್ನ ನಿತ್ಯ ಶಿವಪೂಜೆ ಮಾತ್ರ ನಿಯಮಿತವಾಗಿ ನಡೆಯುತ್ತಿದ್ದು, ನನ್ನ ಉಪಹಾರ ಮತ್ತು ಮಲಗುವುದು ಆರಂಭವಾಗಿಲ್ಲ. ಇನ್ನು, ನಿಮ್ಮ ಕಾಮೆಂಟ್ ಗಳಿಗೆ ನಾನು ಎಂದಿಗೂ ಪ್ರತಿಕ್ರೀಯೆ ನೀಡುತ್ತೇನೆ. ಆದರೆ ನನಗೆ ಯಾವುದೇ ಆನಾರೋಗ್ಯವಾಗಿಲ್ಲ. ನಾನು ಆರೋಗ್ಯವಾಗಿದ್ದೇನೆ. ನನಗೆ ಅನಾರೋಗ್ಯವಾಗಿದೆ ಎಂದು ನನ್ನ ಗುಣಮುಖಕ್ಕಾಗಿ ಹಾರೈಸಿದ ಎಲ್ಲರಿಗೂ ಧನ್ಯವಾದಗಳು. ನಾನು ನಿಮ್ಮೆಲ್ಲರನ್ನೂ ಪ್ರಾಮಾಣಿಕವಾಗಿ ಪ್ರೀತಿಸುತ್ತೇನೆ ಎಂದು ಫೇಸ್‌ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಸಮಾಧಿಯಲ್ಲಿರುವ ನಿತ್ಯಾನಂದ:
ಇನ್ನು, ತಾನು ಸಮಾಧಿಯಲ್ಲಿರುವುದಾಗಿ ಅಂದರೆ ಸೂಪರ್ ಕಾನ್ಶ್ಯಿಯಸ್ನೆಸ್ ನಲ್ಲಿರುವುದಾಗಿ ತಿಳಸಿದ್ದಾರೆ. ಒಟ್ಟಿನಲ್ಲಿ ಈ ಮೂಲಕ ನಿತ್ಯಾನಂದ ಅವರು ಎಲ್ಲಿಗೂ ಓಡಿ ಹೋಗಿಲ್ಲ. ಹಾಗೂ ಸತ್ತು ಹೋಗಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Nithyananda: ಕೈಲಾಸದಲ್ಲಿ ಕಳ್ಳಾಟ ಆಡ್ತಿದ್ದಾನಾ ಸ್ವಾಮಿ ನಿತ್ಯಾನಂದ? ಇಮೇಲ್ ಮೂಲಕವೇ ಶಿಷ್ಯೆಯಿಂದ ದೂರು!
ಕೈಲಾಸದಲ್ಲಿ ಲೈಂಗಿಕ ಕಿರುಕುಳ:
ಇನ್ನು, ಕೆಲ ದಿನಗಳ ಹಿಂದೆ ಸ್ವಾಮಿ ನಿತ್ಯಾನಂದ ಹಾಗೂ ಆತನ ಅನುಯಾಯಿಗಳ ವಿರುದ್ಧ ಸಾರಾ ಲಾಂದ್ರಿ ಆರೋಪ ಮಾಡಿದ್ದರು. ಕೈಲಾಸದಲ್ಲಿ ನಿತ್ಯಾನಂದ ಹಾಗೂ ಆತನ ಟೀಂ ತನ್ನದೇ ಶಿಷ್ಯರಿಗೆ ಲೈಂಗಿಕ ಕಿರುಕುಳ ನೀಡುತ್ತಾ ಇದ್ದಾರೆ ಅಂತ ಸಾರಾ ಲಾಂದ್ರಿ ಗಂಭೀರ ಆರೋಪ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ