HOME » NEWS » National-international » NITISH KUMAR WILL TAKE OATH ON NOVEMNBER 16 AS A BIHAR CHIEF MINISTER SESR

Nitish Kumar: ನ.16ರಂದು ಆರನೇ ಬಾರಿ ಸಿಎಂ ಆಗಿ ನಿತೀಶ್​ ಕುಮಾರ್​ ಪ್ರಮಾಣವಚನ

Nitish Kumar: ಆರನೇ ಬಾರಿ ಸಿಎಂ ಆಗುತ್ತಿರುವ ಅವರು ರಾಜ್ಯದಲ್ಲಿ ದೀರ್ಘಾವಧಿ ಕಾಲ ಮುಖ್ಯಮಂತ್ರಿಯಾದ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ

news18-kannada
Updated:November 12, 2020, 6:48 PM IST
Nitish Kumar: ನ.16ರಂದು ಆರನೇ ಬಾರಿ ಸಿಎಂ ಆಗಿ ನಿತೀಶ್​ ಕುಮಾರ್​ ಪ್ರಮಾಣವಚನ
ನಿತೀಶ್​ ಕುಮಾರ್​.
  • Share this:
ಪಾಟ್ನಾ (ನ.12): ಎನ್​ಡಿಎ ಸರ್ಕಾರದ ಬೆಂಬಲದೊಂದಿಗೆ ನಿತೀಶ್​ ಕುಮಾರ್​ ಮತ್ತೊಮ್ಮೆ ಬಿಹಾರದ ಮುಖ್ಯಮಂತ್ರಿ ಪದವಿ ಅಲಂಕರಿಸುತ್ತಿದ್ದಾರೆ. ಆರನೇ ಬಾರಿ ಸಿಎಂ ಆಗುತ್ತಿರುವ ಅವರು ರಾಜ್ಯದಲ್ಲಿ ದೀರ್ಘಾವಧಿ ಕಾಲ ಮುಖ್ಯಮಂತ್ರಿಯಾದ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ. ಬಿಹಾರ ಚುನಾವಣೆಯಲ್ಲಿ ಜೆಡಿಯುಗಿಂತ ಬಿಜೆಪಿ ಮುನ್ನಡೆ ಸಾಧಿಸಿದ್ದರೂ, ಚುನಾವಣಾ ಪೂರ್ವದಲ್ಲಿ ಮಾಡಿಕೊಂಡ ಮೈತ್ರಿಯಂತೆ ಎನ್​ಡಿಎ ನಿತೀಶ್​ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುತ್ತಿದೆ. ಈ ಹಿನ್ನಲೆ ದೀಪಾವಳಿ ಹಬ್ಬದ ಸಂದರ್ಭದಲ್ಲಿಯೇ ಅಂದರೆ ನ.16ರ ಸೋಮವಾರದಂದು ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇದಕ್ಕೂ ಮುನ್ನ ಈ ಅವಧಿಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ರಾಜ್ಯಪಾಲರಿಗೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆರನೇ ಬಾರಿ ಮುಖ್ಯಮಂತ್ರಿಯಾಗುತ್ತಿರುವ ನಿತೀಶ್​ ಕುಮಾರ್​ ತಮ್ಮ 35 ವರ್ಷದ ರಾಜಕೀಯ ಜೀವನದಲ್ಲಿ ಒಮ್ಮೆ ಕೂಡ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿಲ್ಲ. 2000ರಲ್ಲಿ ಬಹುಮತವಿಲ್ಲದೇ ಮೊದಲ ಬಾರಿ ಮುಖ್ಯಮಂತ್ರಿಯಾದ ಅವರು ಎಂಟು ದಿನಗಳಲ್ಲಿಯೇ ರಾಜೀನಾಮೆ ನೀಡಿದರು. ಇದಾದ ಬಳಿಕ 2005ರಲ್ಲಿ ಬಿಜೆಪಿ ಮೈತ್ರಿಯೊಂದಿಗೆ ಎನ್​ಡಿಎ ಸರ್ಕಾರದಲ್ಲಿ ಎರಡನೇ ಬಾರಿ ಪೂರ್ಣ ಪ್ರಮಾಣದ ಸಿಎಂ ಆಗಿ ಕಾರ್ಯನಿರ್ವಹಿಸಿದರು. ಈ ವೇಳೆ ಕೂಡ ಅವರು ಚುನಾವಣೆ ಎದುರಿಸದೇ ಪದವಿ ಪಡೆದಿದ್ದರು. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಅವರು ಸಂವಿಧಾನದ 164 (4)ನೇ ವಿಧಿ ಅನ್ವಯ ಮೇಲ್ಮನೆಗೆ ನಾಮ ನಿರ್ದೇಶನಗೊಂಡು ಸಿಎಂ ಸ್ಥಾನ ಭದ್ರಪಡಿಸಿಕೊಂಡರು.
2014ರಲ್ಲಿ ಲೋಕಸಭೆಯಲ್ಲಿ ಜೆಡಿಯು ಸೋಲಿನ ಹೊಣೆ ಹೊತ್ತು ಕೆಳಗಿಳಿದ ಅವರು ಒಂದು ವರ್ಷದಲ್ಲಿಯೇ ಮತ್ತೆ ಸಿಎಂ ಆದರು. 2015ರಲ್ಲಿ ಜೆಡಿಯು, ಆರ್​ಜೆಡಿ ಮತ್ತು ಕಾಂಗ್ರೆಸ್​ ಮಹಾ ಬಂಧನದಲ್ಲಿ ಚುನಾವಣೆ ಗೆದ್ದು ಮುಖ್ಯಮಂತ್ರಿಯಾದರು. ಇದಾದ ಬಳಿಕ 2017ರಲ್ಲಿ ಬಿಜೆಪಿ ಜೊತೆ ಮೈತ್ರಿಯೊಂದಿಗೆ ಮತ್ತೆ ಮುಖ್ಯಮಂತ್ರಿ ಗದ್ದುಗೆ ಏರಿದರು. ಈಗ ಆರನೇ ಬಾರಿ ಸಿಎಂ ಆಗಿ ಆಯ್ಕೆಯಾಗಿದ್ದಾರೆ.ಇದನ್ನು ಓದಿ: ಬಿಹಾರದಲ್ಲಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿದ ಬಿಜೆಪಿ : ತೇಜಸ್ವಿ ಯಾದವ್

ಈ ಬಾರಿ ತಮ್ಮ ಗೆಲುವಿನ ಸ್ಥಾನ ಕುಗ್ಗಿದ ಹಿನ್ನಲೆ ನಿತೀಶ್​ ಕುಮಾರ್​​ ಮುಖ್ಯಮಂತ್ರಿಯಾಗುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದವು. ಬಿಜೆಪಿ ನಿತೀಶ್​ ಅವರನ್ನು ಮುಖ್ಯಮಂತ್ರಿ ಮಾಡುವುದಿಲ್ಲ ಎಂಬ ಸುದ್ದಿ ಕೂಡ ಹಬ್ಬಿದ್ದವು. ಈ ಬಗ್ಗೆ ಸ್ವತಃ  ನಿತೀಶ್​ ಕುಮಾರ್​ ಅವರಲ್ಲಿಯೂ ಕಳವಳ ಉಂಟಾಗಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರೊಂದಿಗೆ ಚರ್ಚೆ ನಡೆಸಿದರು.

ಈ ಬಗ್ಗೆ ಸ್ಪಷ್ಟಣೆ ನೀಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್​, ಬಿಹಾರ ಬಿಜೆಪಿ ಮುಖ್ಯಸ್ಥ ಸಂಜಯ್​ ಜೈಸ್ವಾಲ್​ ನಿತೀಶ್​ ಕುಮಾರ್​ ಅವರೇ ನಮ್ಮ ಮುಖ್ಯಮಂತ್ರಿ. ಎನ್​ಡಿಎ ರಚನೆ ಮಾಡಿದ ಸಂದರ್ಭದಲ್ಲಿಯೇ ನಾವು ಇದನ್ನು ನಿರ್ಧರಿಸಿದ್ದೇವು. ಕೊಟ್ಟ ಮಾತಿನಂತೆ ಅವರೇ ಸಿಎಂ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಚುನಾವಣೆ ಗೆಲುವಿನ ಬಳಿಕ ನಾಡಿನ ಜನರಿಗೆ ಕೃತಜ್ಞತೆ ಸಲ್ಲಿಸಿದ ಅವರು, ತಮಗೆ ಸಹಕಾರ ನೀಡಿದ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ತಿಳಿಸಿ ಟ್ವೀಟ್​ ಮಾಡಿದ್ದರು.
Published by: Seema R
First published: November 12, 2020, 5:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories