Bihar Politics: ನಿತೀಶ್ ಕುಮಾರ್ vs ತೇಜಸ್ವಿ ಯಾದವ್: ಬಿಹಾರದ ಸರ್ಕಾರದಲ್ಲಿ ಯಾರು ಬಲಶಾಲಿ?

ಬಿಹಾರದ ನೂತನ ಸರ್ಕಾರದಲ್ಲಿ ಯಾರು ಬಲಶಾಲಿ

ಬಿಹಾರದ ನೂತನ ಸರ್ಕಾರದಲ್ಲಿ ಯಾರು ಬಲಶಾಲಿ

ಬಿಹಾರದ ಜನಸಾಮಾನ್ಯರಲ್ಲಿ ಈ ಇಬ್ಬರು ಘಟಾನುಘಟಿ ನಾಯಕರಲ್ಲಿ ಯಾರು ಹೆಚ್ಚು ಶಕ್ತಿವಂತರು ಅಥವಾ ಬಲಶಾಲಿ ಎಂಬುದರ ಬಗ್ಗೆ ಚರ್ಚೆ ನಡೆಯಲಾರಂಭಿಸಿದೆ

  • Share this:

ಇತ್ತೀಚಿಗಷ್ಟೇ ಬಿಹಾರ ರಾಜಕೀಯ (Bihar Politics) ವಲಯದಲ್ಲಿ ತೀವ್ರತರವಾದ ತಿರುವೊಂದು ಕಾಣಿಸಿಕೊಂಡು ಯಾರೂ ನಿರೀಕ್ಷಿಸಿರದಂತೆ ಥಟ್ಟನೆ ನಿತೀಶ್ ಕುಮಾರ್ ಅವರು ತಾವು ಮಾಡಿಕೊಂಡಿದ್ದ ಬಿಜೆಪಿಯೊಂದಿಗಿನ (BJP) ಮೈತ್ರಿಯನ್ನು ಕೊನೆಗೊಳಿಸಿ ಮತ್ತೆ ಆರ್ಜೆಡಿಯೊಂದಿಗೆ (RJD) ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಆಡಳಿತದ ಚುಕ್ಕಾಣಿ ಹಿಡಿದಿರುವುದು ಎಲ್ಲರಿಗೂ ಗೊತ್ತೆ ಇದೆ. ಪ್ರಸ್ತುತ ನಿತೀಶ್ ಅವರ ಈ ಮಹಾಘಟಬಂಧನದ ಸರ್ಕಾರದಲ್ಲಿ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರ ಮಗ ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿದ್ದಾರೆ. ನಿತೀಶ್ ಕುಮಾರ್ ಅವರು (Nitish Kumar) ಮುಖ್ಯಮಂತ್ರಿಯಾಗಿ ಪ್ರಧಾನ ಆಡಳಿತ ವ್ಯವಸ್ಥೆ ಹಾಗೂ ಗೃಹ ಇಲಾಖೆಯನ್ನು ತಮ್ಮಲ್ಲೇ ಇಟ್ಟುಕೊಂಡಿದ್ದರೆ ತೇಜಸ್ವಿ ಯಾದವ್ ಅವರಿಗೆ ಆರೋಗ್ಯ ಮತ್ತು ರಸ್ತೆ ನಿರ್ಮಾಣ ಇಲಾಖೆಗಳ ಅಧಿಕಾರವನ್ನು ನೀಡಲಾಗಿದೆ.


ಇಬ್ಬರು ಘಟಾನುಘಟಿ ನಾಯಕರಲ್ಲಿ ಯಾರು ಹೆಚ್ಚು ಶಕ್ತಿವಂತರು?
ಈಗ ಬಿಹಾರದ ಜನಸಾಮಾನ್ಯರಲ್ಲಿ ಈ ಇಬ್ಬರು ಘಟಾನುಘಟಿ ನಾಯಕರಲ್ಲಿ ಯಾರು ಹೆಚ್ಚು ಶಕ್ತಿವಂತರು ಅಥವಾ ಬಲಶಾಲಿ ಎಂಬುದರ ಬಗ್ಗೆ ಚರ್ಚೆ ನಡೆಯಲಾರಂಭಿಸಿದೆ ಎಂದು ಹೇಳಬಹುದಾಗಿದೆ. ಆದಾಗ್ಯೂ, ಈಗಷ್ಟೇ ಹೊಸದಾಗಿ ರೂಪಗೊಂಡ ಈ ಸರ್ಕಾರದಲ್ಲಿ ಅಧಿಕ ಶಾಸಕರ ಸ್ಥಾನಗಳು ಆರ್​ಜೆಡಿಯ ಹೊಂದಿರುವುದರಿಂದಲೂ ಸಹ ಈ ರೀತಿಯ ಚರ್ಚೆ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ ಎಂದರೆ ತಪ್ಪಾಗಲಾರದು. ಬನ್ನಿ, ಹಾಗಾದರೆ ಈ ಬಗ್ಗೆ ಒಂದು ಒಳನೋಟವನ್ನು ಈ ಲೇಖನದ ಮೂಲಕ ತಿಳಿಯೋಣ.


ಪ್ರಸ್ತುತ ಆಡಳಿತಕ್ಕೆ ಬಂದಿರುವ ಈ ಮಹಾಘಟಬಂಧನದ ಹೊಸ ಸರ್ಕಾರದಲ್ಲಿ ಆರ್ಜೆಡಿ 79 ಶಾಸಕರ ಬಲವನ್ನು ಹೊಂದಿದ್ದು ಮೇಲ್ನೋಟದಲ್ಲಿ ಆರ್​ಜೆಡಿಯೇ ಬಲಶಾಲಿಯಾಗಿರುವುದನ್ನು ಇದು ತೋರಿಸುತ್ತದೆ ಎಂದು ಹೇಳಬಹುದು. ಅಲ್ಲದೆ, ಆರ್​ಜೆಡಿಯ ಹಲವು ಶಾಸಕರಿಗೆ ನೀಡಲಾಗಿರುವ ವಿವಿಧ ಸಚಿವ ಸ್ಥಾನಗಳನ್ನು ಅವಲೋಕಿಸಿದರೆ ಪ್ರಸ್ತುತ ಸರ್ಕಾರದಲ್ಲಿ ಆರ್​ಜೆಡಿಯೇ ಹೆಚ್ಚು ಬಲಶಾಲಿ ಆಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ, ಬನ್ನಿ, ಇದನ್ನು ಮಂತ್ರಿ ಸ್ಥಾನಗಳ ಹಣಕಾಸು ಸಾಮರ್ಥ್ಯದ ಮೂಲಕ ತಿಳಿಯಲು ಪ್ರಯತ್ನಿಸೋಣ.


ಮಂತ್ರಿ ಸ್ಥಾನಗಳ ಹಣಕಾಸು ಸಾಮರ್ಥ್ಯ
ಪ್ರಸ್ತುತ ಬಿಹಾರದ ಈ ಹೊಸ ಸರ್ಕಾರದಲ್ಲಿ ತೇಜಸ್ವಿ ಯಾದವ್ ಸೇರಿದಂತೆ ಆರ್​ಜೆಡಿಯ ಹದಿನೇಳು ಶಾಸಕರು ವಿವಿಧ ಖಾತೆಗಳನ್ನು ಹೊಂದಿದ್ದರೆ ನಿತೀಶ್ ಕುಮಾರ್ ಅವರ ಜೆಡಿಯು ಹದಿಮೂರು ಖಾತೆಗಳನ್ನು ಹೊಂದಿದೆ. ಆರ್ಜೆಡಿಗೆ ಹೋಗಿರುವ ಒಟ್ಟಾರೆ ಮಂತ್ರಾಲಯಗಳ ಬಜೆಟ್ 99305.61 ಕೋಟಿಗಳಾಗಿದ್ದರೆ ಜೆಡಿಯು ಬಳಿ ಇರುವ ಖಾತೆಗಳ ಬಜೆಟ್ ಮೊತ್ತ 68902.8 ಕೋಟಿಗಳು.


ತೇಜಸ್ವಿ ವರ್ಸಸ್ ನಿತೀಶ್ ಕುಮಾರ್
ಬಿಹಾರದ ಪ್ರಸ್ತುತ ಸರ್ಕಾರದಲ್ಲಿ ನಿತೀಶ್ ಕುಮಾರ್ ಅವರು ಐದು ಇಲಾಖೆಗಳನ್ನು ತಮ್ಮ ಅಧೀನದಲ್ಲಿ ಇರಿಸಿಕೊಂಡಿದ್ದಾರೆ ಹಾಗೂ ಅವುಗಳೆಂದರೆ, ಪ್ರಧಾನ ಆಡಳಿತ ವ್ಯವಸ್ಥೆ, ಗೃಹ ಇಲಾಖೆ, ಕ್ಯಾಬಿನೆಟ್ ಸೆಕ್ರೆಟ್ರಿಯಾಟ್, ಮಾನಿಟರಿಂಗ್ ಮತ್ತು ಇಲೆಕ್ಷನ್ ಇಲಾಖೆ. ಈ ಎಲ್ಲ ಇಲಾಖೆಗಳ ಬಜೆಟ್ ಮೊತ್ತವು 16027.32 ಕೋಟಿಗಳಾಗಿವೆ. ಇನ್ನೊಂದೆಡೆ ಆರ್ಜೆಡಿಯ ತೇಜಸ್ವಿ ಯಾದವ್ ಅವರು ಆರೋಗ್ಯ, ರಸ್ತೆ ನಿರ್ಮಾಣ, ನಗರಾಭಿವೃದ್ಧಿ ಮತ್ತು ಗ್ರಾಮೀಣ ಕೆಲಸಗಳ ಇಲಾಖೆ ಎಂಬ ನಾಲ್ಕು ಮಂತ್ರಾಲಯಗಳನ್ನು ಹೊಂದಿದ್ದು ಇವುಗಳ ಒಟ್ಟಾರೆ ಬಜೆಟ್ 40741. 32 ಕೋಟಿಗಳಾಗಿವೆ.


ಇದನ್ನೂ ಓದಿ:  Mathura: ಜನ್ಮಾಷ್ಟಮಿಯಂದು ಮಥುರಾದ ಬಂಕೆ ಬಿಹಾರಿ ದೇವಸ್ಥಾನದಲ್ಲಿ ಕಾಲ್ತುಳಿತ, 2 ಭಕ್ತರು ಸಾವು


ತಜ್ಞರು ಹೇಳುವಂತೆ ತೇಜಸ್ವಿ ಅವರ ಆರೋಗ್ಯ ಇಲಾಖೆಯೊಂದರ ಬಜೆಟ್ಟೇ ಮುಖ್ಯಮಂತ್ರಿಗಳ ಬಳಿ ಇರುವ ಎಲ್ಲ ಆಡಳಿತಗಳ ಬಜೆಟ್ಟಿಗೆ ಹೆಚ್ಚು ಕಡಿಮೆ ಸಮನಾಗಿದೆಯಂತೆ. ಅಲ್ಲದೆ ಈ ಸರ್ಕಾರದ ವತಿಯಿಂದ ನಡೆಯುತ್ತಿರುವ ಯೋಜನೆಗಳ ಪೈಕಿ ಆರ್​ಜೆಡಿ ಪಾಲು 59% ರಷ್ಟಾಗಿದ್ದರೆ ಜೆಡಿಯು ಪಾಲು 36% ರಷ್ಟಿದೆ. ಇನ್ನುಳಿದಂತೆ ಪಾಲು ಮಿಕ್ಕ ಇತರೆ ಪಕ್ಷಗಳು ಹೊಂದಿವೆ. ಇದನ್ನು ಇನ್ನಷ್ಟು ವಿಶ್ಲೇಷಣೆ ಮಾಡಿದಾಗ ತೇಜಸ್ವಿ ಅವರು ಒಬ್ಬರೇ ಚಾಲ್ತಿಯಲ್ಲಿರುವ ಸರ್ಕಾರಿ ಯೋಜನೆಗಳ ಪೈಕಿ 24% ರಷ್ಟು ಪಾಲನ್ನು ತಮ್ಮ ಇಲಾಖೆಗಳ ಮೂಲಕ ಹೊಂದಿದ್ದಾರೆ.


ನಿತೀಶ್ ಸಂಪುಟದಲ್ಲಿ ಸ್ಥಾನ ಪಡೆದುಕೊಂಡ ತೇಜ್ ಪ್ರತಾಪ್
ಇನ್ನು ಲಾಲು ಪ್ರಸಾದ್ ಯಾದವ್ ಅವರ ಇನ್ನೊಬ್ಬ ಮಗನಾದ ತೇಜ್ ಪ್ರತಾಪ್ ಸಹ ನಿತೀಶ್ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಈ ಹಿಂದೆ ಅವರು 2015 ರಲ್ಲಿಯೂ ಮಂತ್ರಿ ಸ್ಥಾನ ಪಡೆದಿದ್ದು ಆಗ ಅವರು ತಮ್ಮ ಸಹೋದರ ತೇಜಸ್ವಿ ಅವರು ನಿರ್ವಹಿಸುತ್ತಿರುವ ಇಲಾಖೆಗಳನ್ನು ನಿರ್ವಹಿಸುತ್ತಿದ್ದರು. ಹಾಗಾಗಿ ಅವರು ಈ ಬಾರಿಯೂ ತಮಗೆ ಅದೆ ಇಲಾಖೆಗಳು ಬೇಕೆಂದು ಬಯಸಿದ್ದರು. ಆದರೆ ಆ ಇಲಾಖೆಗಳು ಸಿಗದೆ ಸದ್ಯ ತೇಜ್ ಪ್ರತಾಪ್ ಯಾದವ್ ಅವರ ಅಧೀನದಲ್ಲಿ ಅರಣ್ಯ ಇಲಾಖೆ, ಪರಿಸರ ಮತ್ತು ಹವಾಮಾನ ಇಲಾಖೆಗಳನ್ನು ನೀಡಲಾಗಿದೆ. ಈ ಇಲಾಖೆಗಳ ಬಜೆಟ್ ಮಿಕ್ಕೆಲ್ಲ ಇಲಾಖೆಗಳಿಂದ ಅಲ್ಪವಾಗಿದ್ದು ಇದರ ಮೊತ್ತ ಕೇವಲ 662.85 ಕೋಟಿ ರೂಪಾಯಿಗಳಷ್ಟಿದೆ.


ಇದನ್ನೂ ಓದಿ:  U.U. Lalit: ಭಾರತದ 49ನೇ ಮುಖ್ಯ ನ್ಯಾಯಮೂರ್ತಿ ಯು.ಯು ಲಲಿತ್ ಅವರ ಬಗ್ಗೆ ನಿಮಗೆಷ್ಟು ಗೊತ್ತು?


ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಲಾಲು ಅವರ ಇಬ್ಬರು ಪುತ್ರರು ಸದ್ಯ ಬಿಹಾರದ ಹೊಸ ಸರ್ಕಾರದಲ್ಲಿ ಮಂತ್ರಿ ಸ್ಥಾನಗಳಲ್ಲಿದ್ದು ಅವರಿಬ್ಬರ ಸ್ಥಾನಗಳ ಬಜೆಟ್ ಅನ್ನು ಒಟ್ಟಾರೆಯಾಗಿ ನೋಡಿದರೆ ಅದು 41404.17 ಕೋಟಿ ರೂಪಾಯಿಗಳಷ್ಟಾಗುತ್ತದೆ. ಹಾಗಾಗಿ ಇಲಾಖೆಗಳ ಹಣಕಾಸು ಸಾಮರ್ಥ್ಯದ ಅನುಸಾರ ಇದನ್ನು ನೋಡಿದರೆ ಸದ್ಯ ಬಿಹಾರದಲ್ಲಿ ನಿತೀಶ್ ಅವರು ಮುಖ್ಯಮಂತ್ರಿಯ ಚುಕ್ಕಾಣಿ ಹಿಡಿದಿದ್ದರೂ ಸಹ ಲಾಲು ಅವರ ಮಕ್ಕಳು ತುಲನಾತ್ಮಕವಾಗಿ ಹೆಚ್ಚು ಪ್ರಭಾವಿ ಹಾಗೂ ಶಕ್ತಿಶಾಲಿಗಳಾಗಿರುವುದನ್ನು ಗಮನಿಸಬಹುದಾಗಿದೆ.

top videos
    First published: