ಬಿಹಾರ: ದೇಶದ ಅತ್ಯುತ್ತಮ ಮುಖ್ಯಮಂತ್ರಿಗಳಲ್ಲಿ (Best CM) ಒಬ್ಬರು ಎನಿಸಿಕೊಂಡಿದ್ದ ಬಿಹಾರ ಮುಖ್ಯಮಂತ್ರಿ (Bihar CM) ನಿತೀಶ್ ಕುಮಾರ್ (Nitish Kumar) ತಮ್ಮ ಸ್ಥಾನಕ್ಕೆ ರಾಜೀನಾಮೆ (Resign) ನೀಡುತ್ತಾರಾ? ಹೀಗೊಂದು ಚರ್ಚೆ ದೇಶದ ರಾಜಕೀಯ ವಲಯದಲ್ಲಿ ಶುರುವಾಗಿದೆ. ಕಳೆದ ಕೆಲವು ದಿನಗಳಿಂದ ನಿತೀಶ್ ಕುಮಾರ್ ರಾಜೀನಾಮೆ ನೀಡಬಹುದು ಮತ್ತು ರಾಜ್ಯಸಭೆ (Rajyasabha) ಅಥವಾ ಕೇಂದ್ರ ಸರ್ಕಾರದ (Central Government) ಪ್ರಮುಖ ಜವಾಬ್ದಾರಿಯನ್ನು ಅವರಿಗೆ ವಹಿಸಬಹುದು ಎಂಬ ಊಹಾಪೋಹಗಳಿವೆ. ಇದರ ಬೆನ್ನಲ್ಲೇ ಬಿಹಾರ ರಾಜಕೀಯದಲ್ಲಿ ಸಂಚಲನ ಮೂಡಿತ್ತು. ಆದರೆ ಪಕ್ಷದ ಮುಖಂಡರು ಈ ಸುದ್ದಿಯನ್ನು ವದಂತಿ ಎಂದು ಕರೆದಿದ್ದರು. ಇದೀಗ ಜೆಡಿಯು (JDU) ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್ (Lallan Singh) ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಇದೀಗ ಬಿಹಾರ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕೇಂದ್ರದ ಆಡಳಿತದಲ್ಲಿ ಭಾಗಿಯಾಗ್ತಾರಾ ನಿತೀಶ್ ಕುಮಾರ್?
ನಿತೀಶ್ ಕುಮಾರ್ ಕೇಂದ್ರ ಸರ್ಕಾರದ ಆಡಳಿತಕ್ಕೆ ಹೋಗುತ್ತಾರೆ ಎಂಬ ಊಹಾಪೋಹ ಕೇಳಿ ಬಂದಿತ್ತು. ಲಲನ್ ಸಿಂಗ್ ಟ್ವೀಟ್ ಮೂಲಕ ಬಿಹಾರ ರಾಜಕೀಯದಲ್ಲಿ ಸಸ್ಪೆನ್ಸ್ ಹೆಚ್ಚಿಸಿದ್ದಾರೆ. ಇದರೊಂದಿಗೆ ಅವರು ತಮ್ಮ ಟ್ವೀಟ್ನಲ್ಲಿ ವಿಡಿಯೋವೊಂದನ್ನೂ ಹಂಚಿಕೊಂಡಿದ್ದಾರೆ.
ಲಲನ್ ಸಿಂಗ್ ಸರಣಿ ಟ್ವೀಟ್
ಕೈ ತಪ್ಪಿದವರಿಗೆ ನಿತೀಶ್ ಕುಮಾರ್ ಅವರಂತಹ ಚುಕ್ಕಾಣಿ ಸಿಗುವುದಿಲ್ಲ ಎಂದು ಲಾಲನ್ ಸಿಂಗ್ ತಮ್ಮ ಮೊದಲ ಟ್ವೀಟ್ ನಲ್ಲಿ ಬರೆದಿದ್ದಾರೆ. ಮತ್ತೊಂದು ಟ್ವೀಟ್ನಲ್ಲಿ, “ನಿತೀಶ್ ಕುಮಾರ್ ಅವರಷ್ಟು ಜ್ಞಾನವುಳ್ಳ ಅಂತಹ ನಾಯಕನನ್ನು ನೀವು ಎಲ್ಲಿಯೂ ಕಾಣುವುದಿಲ್ಲ” ಎಂದು ಬರೆದಿದ್ದಾರೆ.
ಕೆಲವೆಡೆ ನಿತೀಶ್ ದೆಹಲಿ ಭೇಟಿ ಕುರಿತು ಕೇಳಿದ ಪ್ರಶ್ನೆಗೆ ನಿತೀಶ್ ಕುಮಾರ್ ಅವರು ದೇಶದಾದ್ಯಂತ ಫೇಮಸ್ ಆಗಿದ್ದಾರೆ. ಅವರ ಕಾರ್ಯವೈಖರಿಯನ್ನು ಬೇರೆ ರಾಜ್ಯಗಳ ಜನರೂ ಮೆಚ್ಚುತ್ತಿದ್ದಾರೆ. ಮಣಿಪುರದಂತಹ ಈಶಾನ್ಯ ರಾಜ್ಯದ ವಿಧಾನಸಭೆಯಲ್ಲಿ ಜೆಡಿಯು ಕೂಡ ತನ್ನ ಅಸ್ತಿತ್ವವನ್ನು ಸಾರಿದ್ದು ನಿತೀಶ್ ಕುಮಾರ್ ಅವರ ಜನಪ್ರಿಯತೆ ಎಂದು ಲಲ್ಲನ್ ಸಿಂಗ್ ಹೇಳಿದ್ದಾರೆ. ಲಲ್ಲನ್ ಸಿಂಗ್ ತಮ್ಮ ಟ್ವೀಟ್ನಲ್ಲಿ ಚೈತ್ರ ನವರಾತ್ರಿ ಮತ್ತು ರಂಜಾನ್ ಸಂದರ್ಭದಲ್ಲಿ ಜನರಿಗೆ ಶುಭಾಶಯ ಕೋರಿದ್ದಾರೆ.
"छूट गया जो हाथ से तो पतवार नहीं मिलेगा,
नीतीश कुमार के जैसा जांनिसार नहीं मिलेगा ।"
— Rajiv Ranjan (Lalan) Singh (@LalanSingh_1) April 2, 2022
ಬಿಹಾರ ರಾಜಕೀಯದಲ್ಲಿ ಬಿಸಿ ಬಿಸಿ ಚರ್ಚೆ
ಬಿಹಾರ್ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಬಹುದು ಹಾಗು ಕೇಂದ್ರದಲ್ಲಿ ಅವರಿಗೆ ಮಹತ್ವದ ಹುದ್ದೆ ಸಿಗಲಿದೆ ಎಂಬ ಸುದ್ದಿಯೂ ಬಿಹಾರ್ ರಾಜಕೀಯದಲ್ಲಿ ಹರಿದಾಡುತ್ತಿದೆ.
ಬಿಜೆಪಿ ನಾಯಕರು ಹೇಳುವುದೇನು?
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಒಮ್ಮೆಯೂ ರಾಜ್ಯಸಭೆಗೆ ಹೋಗಲಿಲ್ಲ ಎಂಬ ಪ್ರಸ್ತಾಪ ಕಳೆದ ವಾರ ಚರ್ಚೆಯಾಗಿತ್ತು. ಆದರೆ ಬಿಹಾರದಲ್ಲಿ ಅಧಿಕಾರ ಬದಲಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಯು ನಡುವೆ ಇದುವರೆಗೆ ಯಾವುದೇ ಚರ್ಚೆ ನಡೆದಿಲ್ಲ. ನಿತೀಶ್ ಅವರು ಸುದ್ದಿಗಾರರೊಂದಿಗಿನ ಅನೌಪಚಾರಿಕ ಚರ್ಚೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳುತ್ತವೆ. ಪಕ್ಷದ ಮುಂದೆ ಈ ವಿಚಾರವಾಗಿ ಈವರೆಗೆ ಏನೂ ಮಾತನಾಡಿಲ್ಲ. ಒಂದು ವೇಳೆ ನಿತೀಶ್ ಬಿಜೆಪಿಯ ಮುಂದೆ ಈ ಬಗ್ಗೆ ಮಾತನಾಡಿದರೆ ರಾಜ್ಯ ರಾಜಕೀಯದಲ್ಲಿ ಆಗಬಹುದಾದ ಬದಲಾವಣೆಯ ಸೂತ್ರವನ್ನು ಚರ್ಚಿಸಲಾಗುವುದು ಅಂತ ಬಿಜೆಪಿ ನಾಯಕರು ಹೇಳಿದ್ದಾರೆ.
2020 ರಲ್ಲಿ ನಡೆದುದ್ದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ರವರ ಜೆಡಿಯುಗೆ ಕೇವಲ 43 ಸ್ಥಾನಗಳು ಮತ್ತು ಬಿಜೆಪಿಗೆ 74 ಸ್ಥಾನಗಳು ಸಿಕ್ಕಿದ್ದವು. ಅದೇ ಸಮಯದಲ್ಲಿ, ಎನ್ಡಿಎ ಮೈತ್ರಿಕೂಟದ ಇನ್ನೂ ಎರಡು ಮೈತ್ರಿ ಪಕ್ಷಗಳಾದ ಹಮ್ ಮತ್ತು ವಿಐಪಿ ಸಹ 4-4 ಸ್ಥಾನಗಳನ್ನು ಗೆದ್ದಿದ್ದವು. ಆದರೆ ಇದೆಲ್ಲದರ ಹೊರತಾಗಿಯೂ ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅಧಿಕಾರ ವಹಿಸಿಕೊಂಡಿದ್ದರು.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ