• Home
  • »
  • News
  • »
  • national-international
  • »
  • Bihar Politics: ಬಿಜೆಪಿ ಸಂಪರ್ಕದಲ್ಲಿ ಸಿಎಂ ನಿತೀಶ್ ಕುಮಾರ್: ಬಾಂಬ್ ಸಿಡಿಸಿದ ಪ್ರಶಾಂತ್ ಕಿಶೋರ್

Bihar Politics: ಬಿಜೆಪಿ ಸಂಪರ್ಕದಲ್ಲಿ ಸಿಎಂ ನಿತೀಶ್ ಕುಮಾರ್: ಬಾಂಬ್ ಸಿಡಿಸಿದ ಪ್ರಶಾಂತ್ ಕಿಶೋರ್

ನಿತೀಶ್ ಕುಮಾರ್ ಮತ್ತು ಪ್ರಶಾಂತ್ ಕಿಶೋರ್

ನಿತೀಶ್ ಕುಮಾರ್ ಮತ್ತು ಪ್ರಶಾಂತ್ ಕಿಶೋರ್

Prashant Kishor: ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಜೆಡಿಯು ಸಂಸದ ಹಾಗೂ ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಮೂಲಕ ಬಿಜೆಪಿ ಜತೆ ಮಾತುಕತೆಗೆ ದಾರಿ ತೆರೆದಿದ್ದಾರೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ

  • Share this:

ಪಾಟ್ನಾ(ಅ.19): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Bihar Chief Minister Nitish Kumar) ಅವರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಬುಧವಾರ ಹೇಳಿದ್ದಾರೆ. ಪರಿಸ್ಥಿತಿ ಬದಲಾದರೆ ಅವರು ಮತ್ತೆ ಆ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಬಹುದು ಎಂದಿದ್ದಾರೆ. ಆದರೆ ನಿತೀಶ್ ಕುಮಾರ್ ಅವರ ಪಕ್ಷ ಜನತಾ ದಳ (ಯು) ಅವರ ಹೇಳಿಕೆಯನ್ನು ತಳ್ಳಿಹಾಕಿದೆ. ಅಲ್ಲದೇ ಇದು ಸತ್ಯಕ್ಕೆ ದೂರವಾದ ಮಾತು. ಇಂತಹ ಹೇಳಿಕೆ ಮೂಲಕ ಗೊಂದಲ ಮೂಡಿಸುವ ಯತ್ನ ನಡೆಯುತ್ತಿದೆ ಎಂದಿದೆ. ಕಿಶೋರ್ ಈ ದಿನಗಳಲ್ಲಿ ಬಿಹಾರದಲ್ಲಿ ಪಾದಯಾತ್ರೆ (Padyatra) ಮಾಡುತ್ತಿದ್ದಾರೆ. ಅವರ ಭೇಟಿ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಡುವ ಮೊದಲ ಹೆಜ್ಜೆ ಎನ್ನಲಾಗುತ್ತಿದೆ.


ಇದನ್ನೂ ಓದಿ: CBI Raid: ಲಾಲು ಪ್ರಸಾದ್ ಯಾದವ್​ಗೆ ಸಂಬಂಧಿಸಿದ 17 ಸ್ಥಳಗಳಲ್ಲಿ ಸಿಬಿಐ ದಾಳಿ


ಸಭಾಪತಿ ಹರಿವಂಶ್ ಮೂಲಕ ಬಿಜೆಪಿ ಜೊತೆ ಸಂಪರ್ಕ


ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಜೆಡಿಯು ಸಂಸದ ಹಾಗೂ ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಮೂಲಕ ಬಿಜೆಪಿ ಜತೆ ಮಾತುಕತೆಗೆ ದಾರಿ ತೆರೆದಿದ್ದಾರೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಲು ಹರಿವಂಶ್ ನಿರಾಕರಿಸಿದ್ದಾರೆ. ಆದಾಗ್ಯೂ, ಅವರ ಪಕ್ಷವು ಈ ಹೇಳಿಕೆಯನ್ನು ತಿರಸ್ಕರಿಸಿದೆ ಹಾಗೂ ಕುಮಾರ್ ಮತ್ತೆ ಬಿಜೆಪಿಯೊಂದಿಗೆ ಕೈಜೋಡಿಸುವುದಿಲ್ಲ ಎಂದು ತಿಳಿಸಿದೆ.


ಸ್ಪಷ್ಟನೆ ಕೊಟ್ಟರೂ ಉಪಯೋಗವಿಲ್ಲ


ಈ ಬಗ್ಗೆ ಹೇಳಿಕೆ ನೀಡಿದ್ದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋತ್ ನಿತೀಶ್ ಕುಮಾರ್ ಅವರು ಬಿಜೆಪಿ ವಿರುದ್ಧ ರಾಷ್ಟ್ರೀಯ ಮೈತ್ರಿಕೂಟವನ್ನು ರೂಪಿಸಲು ತಮ್ಮ ಶಕ್ತಿಮೀರಿ ಪ್ರಯತ್ನಿಸುತ್ತಿದ್ದಾರೆ ಎಂದು ಯೋಚಿಸುತ್ತಿರುವವರಿಗೆ ಅವರು ಬಿಜೆಪಿಯೊಂದಿಗೆ ಹಾದಿಯನ್ನು ತೆರೆದಿದ್ದಾರೆ ಎಂದು ತಿಳಿದರೆ ಆಶ್ಚರ್ಯವಾಗುತ್ತದೆ . ಅವರು ತಮ್ಮ ಪಕ್ಷದ ಸಂಸದ ಮತ್ತು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ಜಿ ಮೂಲಕ ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ದೂರಿದ್ದಾರೆ.
ಹರಿವಂಶ್ ತನ್ನ ಸ್ಥಾನಕ್ಕೆ ಯಾಕೆ ರಾಜೀನಾಮೆ ನೀಡಲಿಲ್ಲ?


ಜೆಡಿಯು ಬಿಜೆಪಿಯಿಂದ ದೂರ ಸರಿದಿದೆ, ಆದರೂ ಹರಿವಂಶ್ ಅವರನ್ನು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೇಳದಿರುವುದೇ ಇದಕ್ಕೆ ಸಾಕ್ಷಿ. ಸಂದರ್ಭ ಬಂದಾಗಲೆಲ್ಲಾ ಬಿಜೆಪಿಗೆ ಹಿಂತಿರುಗಿ ಕೆಲಸ ಮಾಡಬಹುದು ಎಂಬುದನ್ನು ಜನರು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕಿಶೋರ್ ಅವರನ್ನು ಜೆಡಿಯುವನ್ನು ತರಾಟೆಗೆ ತೆಗೆದುಕೊಂಡರು.


ಪಕ್ಷದ ವಕ್ತಾರ ಕೆಸಿ ತ್ಯಾಗಿ, ಕುಮಾರ್ ಅವರು ತಮ್ಮ ಜೀವನದಲ್ಲಿ ಇನ್ನು ಮುಂದೆ ಬಿಜೆಪಿಯೊಂದಿಗೆ ಕೈಜೋಡಿಸುವುದಿಲ್ಲ ಎಂದು ಸಾರ್ವಜನಿಕವಾಗಿ ಘೋಷಿಸಿದ್ದಾರೆ ಎಂದಿದ್ದಾರೆ. ಈ ಬಗ್ಗೆ ಮಾತನಾಡಿದ ತ್ಯಾಗಿ, 'ನಾವು ಅವರ ಹೇಳಿಕೆಯನ್ನು ನಿರಾಕರಿಸುತ್ತೇವೆ. ಕುಮಾರ್ ಅವರು 50 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದರೆ, ಕಿಶೋರ್ ಅವರು ಆರು ತಿಂಗಳ ಹಿಂದೆ ಬಂದಿದ್ದಾರೆ. ಕಿಶೋರ್ ಗೊಂದಲ ಮೂಡಿಸಲು ಇಂತಹ ತಪ್ಪು ಹೇಳಿಕೆಗಳನ್ನು ನೀಡಿದ್ದಾರೆ ಎಂದಿದ್ದಾರೆ.


ಇದನ್ನೂ ಓದಿ: Canada Parliament: ಕೆನಡಾ ಪಾರ್ಲಿಮೆಂಟ್​ನಲ್ಲಿ ಕಸ್ತೂರಿ ಕನ್ನಡ! ಇದು ಭಾವುಕ ಕ್ಷಣ


ಈ ಕಾರಣದಿಂದ ನಿತೀಶ್​ ಬೆಂಬಲಕ್ಕೆ ಕತ್ತರಿ


ಕಿಶೋರ್ ಅಕ್ಟೋಬರ್ 2 ರಂದು ಪಶ್ಚಿಮ ಚಂಪಾರಣ್‌ನ ಭಿತಿಹರ್ವಾದಲ್ಲಿರುವ ಗಾಂಧಿ ಆಶ್ರಮದಿಂದ ತಮ್ಮ ಪಾದಯಾತ್ರೆಯನ್ನು ಪ್ರಾರಂಭಿಸಿದ್ದಾರೆ. ಮುಂದಿನ 12-15 ತಿಂಗಳಲ್ಲಿ 3,500 ಕಿ.ಮೀ ಪ್ರಯಾಣಿಸಿ ವ್ಯವಸ್ಥೆಯಲ್ಲಿನ ‘ಬದಲಾವಣೆ’ಗಾಗಿ ಜನತೆಯನ್ನು ಬೆಂಬಲಿಸಲಿದ್ದಾರೆ. ಈ ಮೊದಲು ಸುಮಾರು 18 ತಿಂಗಳ ಕಾಲ ಪ್ರಶಾಂತ್ ಕಿಶೋರ್ ಜೆಡಿಯುನಲ್ಲಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆಯಂತಹ ವಿವಾದಾತ್ಮಕ ನಡೆಗಳಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಕ್ಕಾಗಿ ಅವರು ಕುಮಾರ್ ಅವರನ್ನು ಕಟುವಾಗಿ ಟೀಕಿಸಿದ್ದರು. ಇದಾದ ನಂತರ 2020ರಲ್ಲಿ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಕುಮಾರ್ ಆಗ ಬಿಜೆಪಿಯ ಮಿತ್ರರಾಗಿದ್ದರು.

Published by:Precilla Olivia Dias
First published: