• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಮುಖ್ಯಮಂತ್ರಿ ಕುರ್ಚಿಗೆ ಅಂಟಿಕೊಂಡಿಲ್ಲ; ಈ ಬಗ್ಗೆ ಎನ್​ಡಿಎ ತೀರ್ಮಾನ ಅಂತಿಮ; ನಿತೀಶ್​ ಕುಮಾರ್​

ಮುಖ್ಯಮಂತ್ರಿ ಕುರ್ಚಿಗೆ ಅಂಟಿಕೊಂಡಿಲ್ಲ; ಈ ಬಗ್ಗೆ ಎನ್​ಡಿಎ ತೀರ್ಮಾನ ಅಂತಿಮ; ನಿತೀಶ್​ ಕುಮಾರ್​

 ನಿತೀಶ್‌ ಕುಮಾರ್‌.

ನಿತೀಶ್‌ ಕುಮಾರ್‌.

ಎನ್​ಡಿಎ ಮೈತ್ರಿಗೆ ನಾವು ಒಳಪಟ್ಟಿದ್ದು, ಮಿತ್ರ ಪಕ್ಷಗಳ ನಿರ್ಧಾರಕ್ಕೆ ಬದ್ಧವಾಗಿರುತ್ತೇವೆ. ಮುಖ್ಯಮಂತ್ರಿ ಸ್ಥಾನವೇ ಬೇಕು ಎಂದು ಕೇಳಿಲ್ಲ.

  • Share this:

    ಪಾಟ್ನಾ (ನ.12):  ಬಿಹಾರ ಚುನಾವಣೆಯಲ್ಲಿ ಜೆಡಿಯುಗಿಂತ ಬಿಜೆಪಿ ಬಲ ಹೆಚ್ಚಿದ್ದು, ನಿತೀಶ್​ ಮುಖ್ಯಮಂತ್ರಿ ಸ್ಥಾನ ಪಡೆಯುವುದು ಸುಲಭವಲ್ಲ ಎಂಬ ಮಾತು ಕೇಳಿಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ಮುಖ್ಯಮಂತ್ರಿ ಕುರ್ಚಿಗೆ ನಾನು ಅಂಟಿಕೊಂಡಿಲ್ಲ. ಮುಖ್ಯಮಂತ್ರಿಯಾಗಬೇಕು ಎಂಬ ಯಾವುದೇ ಹಕ್ಕನ್ನು ನಾನು ಪ್ರತಿಪಾದಿಸುವುದಿಲ್ಲ. ಎನ್​ಡಿಎ ಮೈತ್ರಿಗೆ ನಾವು ಒಳಪಟ್ಟಿದ್ದು, ಮಿತ್ರ ಪಕ್ಷಗಳ ನಿರ್ಧಾರಕ್ಕೆ ಬದ್ಧವಾಗಿರುತ್ತೇವೆ. ಮುಖ್ಯಮಂತ್ರಿ ಸ್ಥಾನವೇ ಬೇಕು ಎಂದು ಕೇಳಿಲ್ಲ. ಜನರು ಎನ್​ಡಿಎ ಮೈತ್ರಿಕೂಟಕ್ಕೆ ಬಹುಮತ ನೀಡಿತ್ತು. ನಾವು ಸರ್ಕಾರ ರಚಿಸುತ್ತೇವೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಚುನಾವಣಾ ಫಲಿತಾಂಶದ ಬಳಿಕ ಮೊದಲ ಬಾರಿ ಮಾಧ್ಯಮದ ಮುಂದೆ ಮಾತನಾಡಿದ ಅವರು, ಚಿರಾಗ್​ ಪಾಸ್ವಾನ್​ ಅವರ ಲೋಕ್​ ಜನಶಕ್ತಿ ಪಕ್ಷ ಜೆಡಿಯು ಸ್ಥಾನಗೆಲ್ಲುವ ತಂತ್ರಕ್ಕೆ ಭಾರೀ ಪೆಟ್ಟು ನೀಡಿ, ಪಕ್ಷಕ್ಕೆ ಹಾನಿ ಮಾಡಿತು ಎಂದು ಅವರು ಒಪ್ಪಿಕೊಂಡರು.



    ಇದೇ ವೇಳೆ ರಾಜ್ಯದಲ್ಲಿ ತಮಗೆ ಹಾನಿ ಮಾಡಿರುವ ಎಲ್​ಜೆಪಿಯೊಂದಿಗೆ ಎಲ್ಲಾ ಸಂಬಂಧಗಳನ್ನು ಬೇರೆ ಮಾಡಬೇಕಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಇದು ಬಿಜೆಪಿಯ ನಿರ್ಧಾರ ಎಂದರು. ಕಾರಣ ಎಲ್​ಜೆಪಿ ಕೇಂದ್ರದಲ್ಲಿ ಬಿಜೆಪಿಯೊಂದಿಗೆ ಮೈತ್ರಿಹೊಂದಿದ್ದು, ರಾಜ್ಯದಲ್ಲಿ ಯಾವ ನೀತಿ ಕೈಗೊಳ್ಳಬಹುದು ಎಂಬ ಕುತೂಹಲ ಮೂಡಿದೆ.


    ಜೆಡಿಯಿ ಕಡಿಮೆ ಸ್ಥಾನಗಳನ್ನು ಗೆದ್ದ ಬಗ್ಗೆ ಎಲ್​ಜೆಪಿ ದೂಷಿಸುತ್ತಿದೆ, ಅಲ್ಲದೇ ಎಲ್​ಜೆಪಿ ಜೆಡಿಯುಗೆ ಮತ ಕಡಿಮೆಗೊಳಿಸಿ ಪಕ್ಷದ ಭವಿಷ್ಯವನ್ನು ಹಾನಿ ಮಾಡಿದೆ ಎಂಬ ಆರೋಪಿಸಲಾಗಿದೆ. ಈ ಹಿನ್ನಲೆ ಎಲ್​ಜೆಪಿ ವಿರುದ್ಧ ನಿತೀಶ್​​ ಕ್ರಮ ಕೈಗೊಳ್ಳಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಎನ್​ಡಿಎಯಲ್ಲಿ ಎಲ್​ಜೆಪಿಯನ್ನು ಉಳಿಸಿಕೊಳ್ಳಬೇಕೆ ಬೇಡವೇ ಎಂದು ನಿರ್ಧರಿಸುವುದು ಬಿಜೆಪಿ ಎಂದರು.


    ನಾವು ಚುನಾವಣೆಯಲ್ಲಿ ಎನ್​ಡಿಎ ಪರವಾಗಿ ಪ್ರಚಾರ ಮಾಡಿದೆವು. ಕೆಲವು ಕಡೆ ಎಲ್​ಜೆಪಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದೆ, ನಮ್ಮ ಮತಗಳನ್ನು ಕಡಿಮೆ ಮಾಡಿದವು. ಎಲ್​ಜೆಪಿ ನಮ್ಮನ್ನು ಸೋಲಿಸಲು ನಡೆಸಿದ ಪ್ರಯತ್ನ ಎಂಬುದು ಇದು ಸ್ಪಷ್ಟವಾಗಿದೆ ಎಂದು ಪರೋಕ್ಷವಾಗಿ ತಿಳಿಸಿದರು. ಅಲ್ಲದೇ ಇದೇ ಮಾಧ್ಯಮಗಳು ವಿಶ್ಲೇಷಣೆ ನಡೆಸಿದೆ ಎಂದರು.

    Published by:Seema R
    First published: