Nitin Gadkari: ನಿತಿನ್ ಗಡ್ಕರಿಗೆ ಕಾಂಗ್ರೆಸ್​ನಿಂದ ಆಹ್ವಾನ! ಕೇಂದ್ರ ಸಚಿವರ ಪ್ರತ್ಯುತ್ತರ ಹೀಗಿತ್ತು

ಕೇಂದ್ರ ಸಚಿವ ನಿತಿನ್ ಗಡ್ಕರಿ, ಒಬ್ಬ ವ್ಯಕ್ತಿಯು ಯುದ್ಧದಲ್ಲಿ ಸೋತಾಗ ಅವನು ನಿಜಕ್ಕೂ ಸೋಲುವುದಿಲ್ಲ. ಆದರೆ ಅವನು ತನ್ನ ಹೋರಾಟವನ್ನೆ ತ್ಯಜಿಸಿದಾಗ ನಿಜಕ್ಕೂ ಸೋಲುತ್ತಾನೆ ಎಂದು ತಿಳಿಸಿದ್ದಾರೆ.

ನಿತಿನ್ ಗಡ್ಕರಿ

ನಿತಿನ್ ಗಡ್ಕರಿ

 • Share this:
  ದೆಹಲಿ: ಇತ್ತೀಚಿಗಷ್ಟೇ ಬಿಜೆಪಿ ಸಂಸದೀಯ ಮಂಡಳಿಯಿಂದ ಹೊರಬಿದ್ದಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ತಾವು ಕಾಂಗ್ರೆಸ್​ಗೆ (Congress) ಸೇರುವ ಕುರಿತು ಬಂದಿದ್ದ ಆಹ್ವಾನವೊಂದರ ಕುರಿತು ಘಟನೆ ತೆರೆದಿಟ್ಟಿದ್ದಾರೆ.​ ತಮಗೆ ಕಾಂಗ್ರೆಸ್​ ಪಕ್ಷ ಸೇರುವಂತೆ ಬಂದಿದ್ದ ಆಹ್ವಾನದ ಕುರಿತು ಪ್ರತಿಕ್ರಿಯಿಸಿದ ಅವರು, ತಾವು ಬಾವಿಯಲ್ಲಿ ಬೇಕಾದರೂ ಮುಳುಗುತ್ತೇನೆ, ಆದರೆ ಕಾಂಗ್ರೆಸ್​ಗೆ ಮಾತ್ರ ಸೇರುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾಗಿ ತಿಳಿಸಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಶನಿವಾರ ವಾಣಿಜ್ಯೋದ್ಯಮಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಒಬ್ಬ ವ್ಯಕ್ತಿಯು ಯುದ್ಧದಲ್ಲಿ ಸೋತಾಗ ಅವನು ನಿಜಕ್ಕೂ ಸೋಲುವುದಿಲ್ಲ. ಆದರೆ ಅವನು ತನ್ನ ಹೋರಾಟವನ್ನೆ ತ್ಯಜಿಸಿದಾಗ ನಿಜಕ್ಕೂ ಸೋಲುತ್ತಾನೆ ಎಂದು ತಿಳಿಸಿದ್ದಾರೆ.

  ವ್ಯಾಪಾರ, ಸಾಮಾಜಿಕ ಕೆಲಸ ಅಥವಾ ರಾಜಕೀಯದಲ್ಲಿ ಯಾರಿಗಾದರೂ ಮಾನವ ಸಂಬಂಧಗಳು ದೊಡ್ಡ ಶಕ್ತಿ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

  ಯಾರನ್ನೂ ಬಳಸಿ ಎಸೆಯಬಾರದು
  ಆದ್ದರಿಂದ, ಯಾರೂ ಯಾರನ್ನೂ ಬಳಸಿ ಎಸೆಯಬಾರದು. ಅದು ಒಳ್ಳೆಯ ದಿನಗಳು ಅಥವಾ ಕೆಟ್ಟ ದಿನಗಳೇ ಆಗಿರಲಿ. ಒಮ್ಮೆ ನೀವು ಯಾರ ಕೈಯನ್ನಾದರೂ ಹಿಡಿದರೆ, ಯಾವಾಗಲೂ ಅವರನ್ನು ಹಿಡಿದುಕೊಳ್ಳಿ. ಯಾವುದೇ ಸಂದರ್ಭದಲ್ಲೂ ಅವರ ಕೈಬಿಡಬೇಡಿ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

  ಕಾಂಗ್ರೆಸ್​ಗೆ ಇನ್ನೊಂದು ಹಿನ್ನಡೆ
  ಕಾಂಗ್ರೆಸ್‍ಗೆ ಹಿನ್ನಡೆ ಮೇಲೆ ಹಿನ್ನಡೆ ಆಗುತ್ತಿದೆ. ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಹಿರಿಯ ನಾಯಕ ಮತ್ತು ಮಾಜಿ ರಾಜ್ಯಸಭಾ ಸಂಸದ ಎಂಎ ಖಾನ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಹಿರಿಯರೊಂದಿಗೆ ಹೇಗೆ ವರ್ತಿಸಬೇಕು ಎಂದು ರಾಹುಲ್ ಗಾಂಧಿಗೆತಿಳಿದಿಲ್ಲ ಎಂದು ವಾಗ್ದಾಳಿ ನಡೆಸಿದರು. ತೆಲಂಗಾಣದಲ್ಲಿ ಮಾತನಾಡಿದ ಎಂ.ಎ.ಖಾನ್ ಅವರು, ರಾಹುಲ್ ಗಾಂಧಿಯನ್ನು ಪಕ್ಷದ ಸಮಿತಿಯ ಉಪಾಧ್ಯಕ್ಷರನ್ನಾಗಿ ನೇಮಿಸಿದ ನಂತರ ಹಲವು ವಿಷಯಗಳು ಇಳಿಮುಖವಾಗಲು ಪ್ರಾರಂಭವಾದವು. ಅವರ ಕ್ರಮಗಳು ಕಾಂಗ್ರೆಸ್‍ನ "ಅಧಃಪತನಕ್ಕೆ" ಕಾರಣವಾಗಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  ನಾನು ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ್ದೇನೆ
  ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯಸಭಾ ಮಾಜಿ ಸಂಸದ ಎಂ.ಎ.ಖಾನ್ ಅವರು, "ನಾನು ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ್ದೇನೆ. ಪಕ್ಷದ ಸಮಿತಿಯ ಉಪಾಧ್ಯಕ್ಷ ಸ್ಥಾನ ರಾಹುಲ್ ಗಾಂಧಿ ನಿಭಾಯಿಸಿದ ನಂತರ, ಹಲವು ವಿಷಯಗಳು ಕೆಳಕ್ಕೆ ಹೋಗಲಾರಂಭಿಸಿದವು.

  ಇದನ್ನೂ ಓದಿ: Pakistan Floods 2022: ಟೊಮ್ಯಾಟೊ ಕೆಜಿಗೆ 500, ಈರುಳ್ಳಿ 400 ರೂಪಾಯಿ! ಪ್ಲೀಸ್, ಸಹಾಯ ಮಾಡಿ ಎಂದ ಪಾಕ್

  ರಾಹುಲ್ ಗಾಂಧಿ ತಮ್ಮದೇ ಆದ ವಿಭಿನ್ನ ಚಿಂತನೆಯನ್ನು ಹೊಂದಿದ್ದಾರೆ. ಬ್ಲಾಕ್ ಮಟ್ಟದಿಂದ ಬೂತ್ ಮಟ್ಟಕ್ಕೆ, ಅದು ಯಾವುದೇ ಸದಸ್ಯರೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿದ್ದಾರೆ.

  ಗುಲಾಂ ನಬಿ ಆಜಾದ್ ರಾಜೀನಾಮೆ
  ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು, ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

  ಕಾಂಗ್ರೆಸ್ ತನ್ನ 'ಭಾರತ್ ಜೋಡೋ ಯಾತ್ರೆ'ಗೆ ಸಜ್ಜಾಗುತ್ತಿರುವ ಸಮಯದಲ್ಲಿ, ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಸೆಪ್ಟೆಂಬರ್ 7 ರಂದು ಕನ್ಯಾ ಕುಮಾರಿಯಿಂದ 148 ದಿನಗಳ ಪಾದಯಾತ್ರೆ ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ. ರಾಷ್ಟ್ರವನ್ನು ಮತ್ತೆ ಒಂದುಗೂಡಿಸುವ ಗುರಿಯೊಂದಿಗೆ, ಪಕ್ಷವು ತನ್ನ ನಾಯಕರ ಚಾತುರ್ಯವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ.

  ಇದನ್ನೂ ಓದಿ:  Shocking News: ಛೇ! ಬೆಕ್ಕಿನ ಕೂಗಿಗೆ ಅಮಾಯಕ ಬಲಿ! ದಾರುಣ ಘಟನೆ ಬಯಲಿಗೆ

  ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮ ರಾಜೀನಾಮೆಯನ್ನು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಳುಹಿಸಿದ್ದಾರೆ. ತಮ್ಮ ರಾಜೀನಾಮೆ ಪತ್ರದಲ್ಲಿ ಆಜಾದ್ ಅವರು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿದ್ದಾರೆ ಹಾಗೂ ಪಕ್ಷದ ದುಸ್ಥಿತಿಗೆ ನೇರವಾಗಿ ಅವರನ್ನು ದೂಷಿಸಿದ್ದಾರೆ.
  Published by:guruganesh bhat
  First published: