ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ; ಆಸ್ಪತ್ರೆಗೆ ರವಾನೆ

G Hareeshkumar | news18india
Updated:December 7, 2018, 4:02 PM IST
ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ; ಆಸ್ಪತ್ರೆಗೆ ರವಾನೆ
ಕುಸಿದು ಬೀಳುತ್ತಿರುವ ಕೇಂದ್ರ ಸಚಿವ ನಿತಿನ್​ ಗಡ್ಕರಿ
G Hareeshkumar | news18india
Updated: December 7, 2018, 4:02 PM IST
ಮಹಾರಾಷ್ಟ್ರ( 07) : ಕೇಂದ್ರ ಸಚಿವ ನಿತಿನ್ ಗಡ್ಕರಿ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿಯ ಅಹಮದ್​​ನಗರದಲ್ಲಿರುವ ಮಹಾತ್ಮ ಪುಲೆ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೇಂದ್ರ ಸಚಿವರು ಕುಳಿತ ಸ್ಥಳದಿಂದ ಕುಸಿದು ಬಿದ್ದಿದ್ದಾರೆ. ಸಕ್ಕರೆ ಅಂಶ ಕಡಿಮೆಯಾಗಿದ್ದರಿಂದ ಕುಸಿದು ಬಿದ್ದಿದ್ದಾರೆ.

ಕಾರ್ಯಕ್ರಮದ ಆರಂಭದಲ್ಲಿ ರಾಷ್ಟ್ರಗೀತೆಗೆ ವಂದನೆ ಸಲ್ಲಿಸಲು ಎದ್ದು ನಿಂತಿದ್ದ ಗಡ್ಕರಿ ಕೆಲ ಹೊತ್ತಿನ ನಂತರ ಕುಸಿದಿದ್ದಾರೆ. ಕಾರ್ಯಕ್ರಮದಲ್ಲಿ ಹಾಜರಿದ್ದ ಇತರೆ ಗಣ್ಯರು ಮತ್ತು ಪೊಲೀಸ್​ ಸಿಬ್ಬಂದಿ ಗಡ್ಕರಿ ಕುಸಿಯುವುದನ್ನು ಕಂಡ ನಂತರ ತಕ್ಷಣ ಹಿಡಿದುಕೊಳ್ಳಲು ಮುಂದಾಗಿದ್ದಾರೆ.

ದೇಹದಲ್ಲಿನ ಸಕ್ಕರೆ ಅಂಶ ಕಡಿಮೆಯಾಗಿದ್ದ ಕಾರಣ (ಲೋ ಶುಗರ್) ಅವರು ನಿತ್ರಾಣಗೊಂಡಿದ್ದಾರೆ ಎಂದು ಅವರ ಪರೀಕ್ಷೆ ನಡೆಸಿದ ವೈದ್ಯಕೀಯ ತಂಡ ಹೇಳಿದೆ. ಸಧ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ. ನಿಮ್ಮೆಲ್ಲರ ಹಾರೈಕೆಗಳಿಗೆ ಧನ್ಯವಾದ ಎಂದು ಹೇಳಿದ್ದಾರೆ.

First published:December 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...