ದೇಶ ನಿಮ್ಮ ಕೈಯಲ್ಲಿ ಸುರಕ್ಷಿತವಾಗಿದೆ: ರಿಲಯನ್ಸ್​ ಸಂಸ್ಥೆಯಿಂದ ಸಶಸ್ತ್ರ ಪಡೆಗೆ ವಿಶೇಷ ಗೌರವ

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ನಿತಾ ಅಂಬಾನಿ ನಮ್ಮ ತಾಯಿನಾಡು ನಿಮ್ಮ ಕೈಯಲ್ಲಿ ಸುರಕ್ಷಿತವಾಗಿದ್ದು, ಹೀಗಾಗಿ ನಾವೆಲ್ಲ ಇಂದು ನಿರ್ಭೀತಿಯಿಂದ ಇದ್ದೇವೆ. ಈ ನಗರ ಮತ್ತು ರಾಷ್ಟ್ರದ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವವರು ನಮ್ಮ ಸಂಭ್ರಮದಲ್ಲಿ ಸೇರಿರುವುದು ತುಂಬಾ ಸಂತಸ ನೀಡಿದೆ.

zahir | news18
Updated:March 12, 2019, 10:16 PM IST
ದೇಶ ನಿಮ್ಮ ಕೈಯಲ್ಲಿ ಸುರಕ್ಷಿತವಾಗಿದೆ: ರಿಲಯನ್ಸ್​ ಸಂಸ್ಥೆಯಿಂದ ಸಶಸ್ತ್ರ ಪಡೆಗೆ ವಿಶೇಷ ಗೌರವ
ನೀತಾ ಅಂಬಾನಿ
  • News18
  • Last Updated: March 12, 2019, 10:16 PM IST
  • Share this:
ದೇಶದ ಜನರ ಸೇವೆಗೆ ಸದಾ ಸನ್ನದ್ಧರಾಗಿರುವ ಭಾರತೀಯ ಯೋಧರಿಗೆ ಹಾಗೂ ಪೊಲೀಸ್​ ಪಡೆಗಳಿಗೆ ರಿಲಯನ್ಸ್​ ಇಂಡಸ್ಟ್ರೀಸ್ ಮಂಗಳವಾರ ವಿಶೇಷ ಗೌರವ ಸಲ್ಲಿಸಿದೆ. ಆಕಾಶ್ ಅಂಬಾನಿ- ಶ್ಲೋಕಾ ಮದುವೆ ಸಮಾರಂಭದ ಪ್ರಯುಕ್ತ ಇಂದು ಸಶಸ್ತ್ರ ಪಡೆಗಳನ್ನು ಮತ್ತು ಅವರ ಕುಟುಂಬವನ್ನು ಧೀರೂಭಾಯಿ ಅಂಬಾನಿ ಸ್ಕ್ವೇರ್​ಗೆ ಆಹ್ವಾನಿಸಲಾಗಿತ್ತು. ಅಲ್ಲದೆ ಈ ಸಂದರ್ಭದಲ್ಲಿ ಸಂಗೀತ ರಸಸಂಜೆ, ಬೆಳಕಿನ ದೀಪಗಳ ಪ್ರದರ್ಶನ, ಕಾರಂಜಿ ನೃತ್ಯ ಸೇರಿದಂತೆ ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ.

ಇದರೊಂದಿಗೆ ಆಕಾಶ್​ ಅಂಬಾನಿ-ಶ್ಲೋಕಾ ವಿವಾಹ ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದ ರಾಸ್​ಲೀಲಾ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಯಿತು. ಇದರಲ್ಲಿ ದೇಶ ವಿದೇಶದ 150ಕ್ಕಿಂತ ಕಲಾವಿದರು ಭಾಗವಹಿಸಿದ್ದರು. ಇವರು ಅತ್ಯುದ್ಭುತವಾದ ಭಗವಾನ್ ಕೃಷ್ಣ, ರಾಧೆ ಮತ್ತು ವೃಂದಾವನ ಗೋಪಿಕಾರ ರಾಸ್​ಲೀಲಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಅತಿಥಿಗಳನ್ನು ಮನರಂಜಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ನಿತಾ ಅಂಬಾನಿ ' ನಮ್ಮ ತಾಯಿನಾಡು ನಿಮ್ಮ ಕೈಯಲ್ಲಿ ಸುರಕ್ಷಿತವಾಗಿದ್ದು, ಹೀಗಾಗಿ ನಾವೆಲ್ಲ ಇಂದು ನಿರ್ಭೀತಿಯಿಂದ ಇದ್ದೇವೆ. ಈ ನಗರ ಮತ್ತು ರಾಷ್ಟ್ರದ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವವರು ನಮ್ಮ ಸಂಭ್ರಮದಲ್ಲಿ ಸೇರಿರುವುದು ತುಂಬಾ ಸಂತಸ ನೀಡಿದೆ. ಇದು ನಮ್ಮ ಕುಟುಂಬಕ್ಕೆ ಒಂದು ಭಾವನಾತ್ಮಕ ಮತ್ತು ಆಹ್ಲಾದಕರ ಸಂದರ್ಭವಾಗಿದ್ದು, ಪ್ರತಿನಿತ್ಯ ನಮ್ಮನ್ನು ಹೆಮ್ಮೆಪಡುವಂತೆ ಮಾಡುವ ನಿಮಗೆ ಕೃತಜ್ಞರಾಗಿದ್ದೇವೆ. ಅಲ್ಲದೆ ನಿಮ್ಮೆಲ್ಲರ ಆಶೀರ್ವಾದ ನವದಂಪತಿಗಳಾದ ಆಕಾಶ್ ಮತ್ತು ಶ್ಲೋಕಾ ಮೇಲಿರಲಿ ಎಂದು ತಿಳಿಸಿದರು.

ಧೀರೂಭಾಯಿ ಅಂಬಾನಿ ಚೌಕವು ಮುಂಬೈನ ಜಿಯೋ ವರ್ಲ್ಡ್ ಸೆಂಟರ್​ನ ಭಾಗವಾಗಿದ್ದು, ಅತಿದೊಡ್ಡ ಹಾಗೂ ಅತ್ಯುತ್ತಮ ಜಾಗತಿಕ ಸಮಾವೇಶ ಸವಲತ್ತು-ಸೌಲಭ್ಯಗಳನ್ನು ಭಾರತದಲ್ಲಿ ಹೊಂದುವ ಉದ್ದೇಶದಿಂದ, ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಮುಂಬಯಿ ಮೆಟ್ರೋಪಾಲಿಟನ್ ರೀಜನ್ ಡೆವೆಲಪ್ಮೆಂಟ್ ಅಥಾರಿಟಿ ಜಂಟಿಯಾಗಿ ಇದನ್ನು ಅಭಿವೃದ್ಧಿಪಡಿಸಿದೆ.

ಇಲ್ಲಿ 45 ಅಡಿ ಎತ್ತರದಲ್ಲಿ ಚಿಮ್ಮುವಂತಹ ಕಾರಂಜಿಗಳನ್ನು ನಿರ್ಮಿಸಲಾಗಿದ್ದು, ಇದಕ್ಕಾಗಿ 600 ಎಲ್​ಇಡಿ ದೀಪಗಳನ್ನು ಬಳಸಲಾಗಿದೆ. ಅಲ್ಲದೆ 392 ನೀರಿನ ನಳಿಕೆಗಳು ಈ ಅಧ್ಬುತ ಕಾರಂಜಿಯಲ್ಲಿ ಒಳಗೊಂಡಿದೆ. ಇದು ಮುಂದಿನ ದಿನಗಳಲ್ಲಿ ಮುಂಬೈ ನಗರದ ಹೊಸ ಆಕರ್ಷಣೆ ಕೇಂದ್ರ ಬಿಂದುವಾಗುವ ನಿರೀಕ್ಷೆಯಿದೆ.

ಸುಮಾರು 2000 ಸೌಲಭ್ಯವಂಚಿತ ಮಕ್ಕಳನ್ನು, ಧೀರೂಭಾಯಿ ಅಂಬಾನಿ ಚೌಕದಲ್ಲಿ ಮನಸೂರೆಗೊಳ್ಳುವ ಸಂಗೀತ ಕಾರಂಜಿ ಪ್ರದರ್ಶನಕ್ಕಾಗಿ ಆಹ್ವಾನಿಸಿ ಈ ಹಿಂದೆ ಇದನ್ನು ಅಂಬಾನಿ ಕುಟುಂಬ ಉದ್ಘಾಟಿಸಿರುವುದು ವಿಶೇಷವಾಗಿತ್ತು. ಅಲ್ಲದೆ ಮುಖೇಶ್ ಅಂಬಾನಿ ದಂಪತಿ ತಮ್ಮ ಮಗ ಆಕಾಶ್ ವಿವಾಹವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದೆ. ಈ ಮದುವೆ ಸಮಾರಂಭದ ಪ್ರಯುಕ್ತ ಅನೇಕ ಅನಾಥಾಶ್ರಮ ಮತ್ತು ವೃದ್ಧಾಪ್ಯರಿಗೆ, ನಗರ ಕಾರ್ಮಿಕರನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸಿ ಸತ್ಕರಿಸಿದರು.
First published:March 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ