HOME » NEWS » National-international » NITA AMBANI URGES ALL RELIANCE EMPLOYEES TO REGISTER FOR COVID 19 VACCINATION SNVS

Nita Ambani - ಎಲ್ಲಾ ಸಿಬ್ಬಂದಿವರ್ಗ ಮತ್ತವರ ಕುಟುಂಬದವರ ಕೋವಿಡ್ ಲಸಿಕೆ ವೆಚ್ಚ ಭರಿಸುತ್ತಿದೆ ರಿಲಾಯನ್ಸ್

ಭಾರತ ಸರ್ಕಾರದ ಕೋವಿಡ್-19 ಲಸಿಕಾ ಯೋಜನೆಗೆ ಕುಟುಂಬ ಸದಸ್ಯರ ಹೆಸರು ನೊಂದಾಯಿಸಿ ಎಂದು ರಿಲಾಯನ್ಸ್ ಗ್ರೂಪ್ ಕಂಪನಿಗಳ ಎಲ್ಲಾ ಉದ್ಯೋಗಿಗಳಿಗೆ ನೀತಾ ಅಂಬಾನಿ ಕರೆ ನೀಡಿದ್ದಾರೆ. ಲಸಿಕೆಯ ಎಲ್ಲಾ ವೆಚ್ಚವನ್ನೂ ಕಂಪನಿಯೇ ಭರಿಸುತ್ತದೆ ಎಂದೂ ಅವರು ತಿಳಿಸಿದ್ಧಾರೆ.

news18-kannada
Updated:March 5, 2021, 8:57 AM IST
Nita Ambani - ಎಲ್ಲಾ ಸಿಬ್ಬಂದಿವರ್ಗ ಮತ್ತವರ ಕುಟುಂಬದವರ ಕೋವಿಡ್ ಲಸಿಕೆ ವೆಚ್ಚ ಭರಿಸುತ್ತಿದೆ ರಿಲಾಯನ್ಸ್
ನೀತಾ ಅಂಬಾನಿ
  • Share this:
ಮುಂಬೈ(ಮಾ. 05): ರಿಲಾಯನ್ಸ್ ಇಂಡಸ್ಟ್ರೀಸ್ (Reliance Industries) ಸಂಸ್ಥೆ ತನ್ನ ಸಮೂಹ ಕಂಪನಿಗಳ ಎಲ್ಲಾ ಉದ್ಯೋಗಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಕೋವಿಡ್ ಲಸಿಕಾ ವೆಚ್ಚವನ್ನು (Covid-19 Vaccination Cost) ಭರಿಸುತ್ತಿದೆ. ಸರ್ಕಾರದ ಕೋವಿಡ್ ಲಸಿಕಾ ಯೋಜನೆಗೆ ರಿಲಾಯನ್ಸ್ ಉದ್ಯೋಗಿಗಳು ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಹೆಸರುಗಳನ್ನ ನೊಂದಾಯಿಸುವಂತೆ ರಿಲಾಯನ್ಸ್ ಫೌಂಡೇಶನ್​ನ (Reliance Foundation) ಮುಖ್ಯಸ್ಥೆ ನೀತಾ ಅಂಬಾನಿ (Nita Ambani) ತಿಳಿಸಿ ಎಲ್ಲರಿಗೂ ಮೇಲ್ ಕಳುಹಿಸಿದ್ದಾರೆ. ಹಾಗೆಯೇ, ತಮ್ಮ ಉದ್ಯೋಗಿ, ಅವರ ಸಂಗಾತಿ, ಪೋಷಕರು ಮತ್ತು ಮಕ್ಕಳ ವ್ಯಾಕ್ಸಿನೇಶನ್ ವೆಚ್ಚವನ್ನೂ ಕಂಪನಿ ಭರಿಸುವುದಾಗಿ ನೀತಾ ಮುಕೇಶ್ ಅಂಬಾನಿ ಇ-ಮೇಲ್​ನಲ್ಲಿ ಸ್ಪಷ್ಟಪಡಿಸಿದ್ದಾರೆ.

“ರಿಲಾಯನ್ಸ್ ಫ್ಯಾಮಿಲಿ ಡೇ 2020ರ ಸಂದೇಶದಲ್ಲಿ, ಭಾರತದಲ್ಲಿ ಮಾನ್ಯ ಪಡೆದ ಯಾವುದಾದರೂ ಕೋವಿಡ್-19 ಲಸಿಕೆ ಲಭ್ಯವಾದ ಕೂಡಲೇ ರಿಲಾಯನ್ಸ್​ನ ಎಲ್ಲಾ ಉದ್ಯೋಗಿಗಳು ಮತ್ತು ಕುಟುಂಬ ಸದಸ್ಯರಿಗೆ ಲಸಿಕೆ ಹಾಕಿಸುತ್ತೇವೆಂದು ನಾನು ಮತ್ತು ಮುಕೇಶ್ ವಾಗ್ದಾನ ನೀಡಿದ್ದೆವು. ನಾವು ಆ ಮಾತಿಗೆ ಬದ್ಧರಾಗಿದ್ದೇವೆ..” ಎಂದು ನೀತಾ ಅಂಬಾನಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Reliance-Future Deal - ರಿಲಾಯನ್ಸ್-ಫ್ಯೂಚರ್ ಒಪ್ಪಂದಕ್ಕೆ ತಡೆ ಬೇಡ: ವರ್ತಕರ ಸಂಘದಿಂದ ಅಮೇಜಾನ್ ಮುಖ್ಯಸ್ಥರಿಗೆ ಒತ್ತಾಯ

“… ನಾವು ಭರವಸೆ ನೀಡಿದಂತೆ ನಿಮ್ಮ ಹಾಗೂ ನಿಮ್ಮ ಸಂಗಾತಿ, ತಂದೆ-ತಾಯಿ ಹಾಗೂ ಮಕ್ಕಳ ವ್ಯಾಕ್ಸಿನೇಶನ್ ಕಾರ್ಯದ ಸಂಪೂರ್ಣ ವೆಚ್ಚವನ್ನ ರಿಲಾಯನ್ಸ್ ಭರಿಸುತ್ತದೆ. ನಿಮ್ಮ ಮತ್ತು ನಿಮ್ಮ ಕುಟುಂಬದ ಸುರಕ್ಷತೆ ನಮ್ಮ ಹೊಣೆಗಾರಿಕೆಯಾಗಿದೆ. ನಮ್ಮ ಪ್ರೀತಿಪಾತ್ರರ ಆರೋಗ್ಯ ಮತ್ತು ಸಂತೋಷವನ್ನು ಖಾತ್ರಿಪಡಿಸುವುದು ಕೌಟುಂಬಿಕತೆ ಎಂಬುದು ನನ್ನ ಮತ್ತು ಮುಕೇಶ್ ಭಾವನೆ” ಎಂದು ಹೇಳಿರುವ ನೀತಾ ಎಂ. ಅಂಬಾನಿ, ನಿಮ್ಮಲ್ಲರ ಬೆಂಬಲದಿಂದ ನಾವು ಈ ಕೊರೋನಾ ಸಾಂಕ್ರಾಮಿಕ ರೋಗವನ್ನ ಹಿಂದಿಕ್ಕುತ್ತೇವೆ. ಅಲ್ಲಿಯವರೆಗೆ ಕೊರೋನಾ ವಿರುದ್ಧದ ಹೋರಾಟದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಿ. ಕೋವಿಡ್ ಸುರಕ್ಷತೆ ಮತ್ತು ಸ್ವಚ್ಛತೆ ಇತ್ಯಾದಿ ಮುಂಜಾಗ್ರತೆ ಕ್ರಮಗಳನ್ನ ಅನುಸರಿಸುವುದನ್ನು ಮುಂದುವರಿಸಿ. ಈ ಒಗ್ಗಟ್ಟಿನ ಹೋರಾಟದ ಕೊನೆಯ ಹಂತದಲ್ಲಿ ನಾವಿದ್ದೇವೆ. ನಾವೆಲ್ಲರೂ ಒಟ್ಟಿಗೆ ಗೆಲ್ಲಬೇಕು ಎಂದು ಕರೆ ನೀಡಿದ್ದಾರೆ.

ರಿಲಾಯನ್ಸ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಲಸಿಕೆ ವೆಚ್ಚವಷ್ಟೇ ಅಲ್ಲ ಕೊರೋನಾ ಚಿಕಿತ್ಸಾ ವೆಚ್ಚವನ್ನೂ ಭರಿಸುತ್ತಿದೆ. ರಿಲಾಯನ್ಸ್ ಇಂಡಸ್ಟ್ರೀಸ್ ಗ್ರೂಪ್ ಕಂಪನಿಗಳಲ್ಲಿ ಸುಮಾರು 6 ಲಕ್ಷ ಉದ್ಯೋಗಿಗಳಿದ್ಧಾರೆ. ಅವರ ನೊಂದಾಯಿತ ಕುಟುಂಬ ಸದಸ್ಯರ ಸಂಖ್ಯೆಯನ್ನೂ ಸೇರಿಸಿದರೆ 19 ಲಕ್ಷ ಮಂದಿಯಾಗುತ್ತಾರೆ. ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ ಇಷ್ಟೂ ಮಂದಿಯ ಚಿಕಿತ್ಸೆ ಮತ್ತು ಲಸಿಕಾ ವೆಚ್ಚವನ್ನ ಕಂಪನಿಯೇ ಭರಿಸುತ್ತಿರುವುದು ಗಮನಾರ್ಹ.
Published by: Vijayasarthy SN
First published: March 5, 2021, 8:48 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories