• Home
  • »
  • News
  • »
  • national-international
  • »
  • NMACC: ಇದು ಭಾರತದ ಅದ್ಭುತ ಪರಂಪರೆಯ ಅನಾವರಣ; ಕಲ್ಚರಲ್ ಸೆಂಟರ್ ಬಗ್ಗೆ ನೀತಾ ಮುಕೇಶ್ ಅಂಬಾನಿ ಮನದಾಳ

NMACC: ಇದು ಭಾರತದ ಅದ್ಭುತ ಪರಂಪರೆಯ ಅನಾವರಣ; ಕಲ್ಚರಲ್ ಸೆಂಟರ್ ಬಗ್ಗೆ ನೀತಾ ಮುಕೇಶ್ ಅಂಬಾನಿ ಮನದಾಳ

ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್

ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್

ಸಮಾಜಸೇವೆಯಲ್ಲಿ ಮುಂದಿರುವ ರಿಲಯನ್ಸ್ ಫೌಂಡೇಶನ್, ಈಗ ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಲು ಮುಂದಾಗಿದೆ. ಇದರ ಭಾಗವಾಗಿಯೇ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ನಿರ್ಮಾಣವಾಗಿದೆ. ಈ ಬಗ್ಗೆ ಖುದ್ದು ನೀತಾ ಅಂಬಾನಿಯವರೇ ಮಾತನಾಡಿದ್ದಾರೆ.

  • News18 Kannada
  • Last Updated :
  • Mumbai, India
  • Share this:

ಮುಂಬೈ: ಉದ್ಯಮದ ಮೂಲಕ ಅಸಂಖ್ಯಾತ ಜನರಿಗೆ ಉದ್ಯೋಗ ನೀಡಿರುವ ರಿಲಯನ್ಸ್ ಇಂಡಸ್ಟ್ರೀಸ್ (Reliance Industries), ಸಮಾಜಸೇವೆಯಲ್ಲೂ (social service) ಸದಾ ಮುಂದಿದೆ. ಇದೀಗ ಕಲೆ ಮತ್ತು ಸಾಂಸ್ಕೃತಿಕ ಲೋಕಕ್ಕೂ (art and culture) ಕೊಡುಗೆ ನೀಡಲು ರಿಲಯನ್ಸ್ ಗ್ರೂಪ್ ಮುಂದಾಗಿದೆ. ಉದ್ಯಮಿ ಮುಕೇಶ್ ಅಂಬಾನಿಯವರ (Mukesh Ambani) ಪತ್ನಿ ನೀತಾ ಮುಕೇಶ್ ಅಂಬಾನಿ (Nita Mukesh Ambani) ಅವರ ದೂರದೃಷ್ಟಿಯಿಂದ ಮುಂಬೈನಲ್ಲಿ (Mumbai) ಬೃಹತ್ ಸಾಂಸ್ಕೃತಿಕ ಕಲಾ ಕೇಂದ್ರ ತಲೆ ಎತ್ತಿದೆ. ‘ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ (NMACC)’ ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (BKC) ನಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ (Jio World Centre) ನಿರ್ಮಾಣವಾಗಿದೆ. ಭಾರತದ ಕಲೆ ಮತ್ತು ಸಂಸ್ಕೃತಿಯನ್ನು ಜಗತ್ತಿಗೆ ಪ್ರದರ್ಶಿಸಲು ಮತ್ತು ಜಗತ್ತನ್ನು ಭಾರತಕ್ಕೆ ತರಲು ಹೆಚ್ಚು ಬೇಡಿಕೆಯಿರುವ ಸ್ಥಳವಾಗಿ ಈ ಕೇಂದ್ರ ಹೊರಹೊಮ್ಮಲಿದ್ದು, 2023ರ ಮಾರ್ಚ್‌ 31ರಂದು ಲೋಕಾರ್ಪಣೆಗೊಳ್ಳಲಿದೆ.


ಈ ಸಾಂಸ್ಕೃತಿಕ ಕೇಂದ್ರ ಹೇಗಿರಲಿದೆ?


ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಬಗ್ಗೆ ಇದರ ರೂವಾರಿ ನೀತಾ ಮುಕೇಶ್ ಅಂಬಾನಿ ಅವರೇ ಮಾತನಾಡಿದ್ದಾರೆ. ಇದನ್ನು 'ಭಾರತದ ಅದ್ಭುತ ಪರಂಪರೆ, ಸಂಪ್ರದಾಯಗಳು ಮತ್ತು ಪರಂಪರೆಗೆ ಗೌರವ ನೀಡುವ ಪ್ರಯತ್ನ' ಎಂದು ಅವರು ಬಣ್ಣಿಸಿದ್ದಾರೆ. ಇದು ಕಲಾ ಪ್ರದರ್ಶಕರು ಮತ್ತು ಸಂದರ್ಶಕರಿಗೆ ನಿಜವಾದ ಅಂತರ್ಗತ ಕೇಂದ್ರ ಎಂದು ಕರೆದಿದ್ದಾರೆ. ಕನಸುಗಾರರು ಮತ್ತು ರಚನೆಕಾರರಿಗೆ ಇದು ಅತ್ಯುತ್ತಮ ಸ್ಥಾನವಾಗಲಿದ್ದು, ವಿಶ್ವ ದರ್ಜೆಯ ಮೂಲಸೌಕರ್ಯದೊಂದಿಗೆ ಕಲೆಗಳನ್ನು ಎಲ್ಲರೂ ಆಸ್ವಾದಿಸುವಂತೆ ಮಾಡುವುದೇ ನಮ್ಮ ಗುರಿ ಎಂದಿದ್ದಾರೆ.


“ಭಾರತೀಯ ಕಲೆ-ಸಂಸ್ಕೃತಿ ರಕ್ಷಣೆಯೇ ನಮ್ಮ ಬದ್ಧತೆ”


'ಭಾರತೀಯ ಕಲೆಗಳನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಕೊಡುಗೆಗಳನ್ನು ನೀಡುವುದೇ ನಮ್ಮ ಬದ್ಧತೆ' ಅಂತ ನೀತಾ ಅಂಬಾನಿ ಹೇಳಿದ್ದಾರೆ. "ನಮ್ಮ ಈ ಕಲ್ಚರಲ್ ಸೆಂಟರ್ ಪ್ರತಿಭಾವಂತರನ್ನು ಪೋಷಿಸುತ್ತವೆ ಮತ್ತು ಕಲೆಗಾರರಿಗೆ ಸ್ಫೂರ್ತಿ ನೀಡುತ್ತವೆ. ಇದರ ಜೊತೆ ಜೊತೆಗೆ ಭಾರತ ಮತ್ತು ಪ್ರಪಂಚದಾದ್ಯಂತದ ಜನರನ್ನು ಒಟ್ಟುಗೂಡಿಸುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ನೀತಾ ಅಂಬಾನಿ ಅಭಿಪ್ರಾಯಪಟ್ಟಿದ್ದಾರೆ.


ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್


ಇದನ್ನೂ ಓದಿ: Forbes 100 Richest Indians: ಫೋರ್ಬ್ಸ್ 100 ಶ್ರೀಮಂತ ಭಾರತೀಯರ ಪಟ್ಟಿ ರಿಲೀಸ್, ಮುಕೇಶ್ ಅಂಬಾನಿ ಸೇರಿ ಹಲವರಿಗೆ ಸ್ಥಾನ


ನೀತಾ ಅಂಬಾನಿಯವರ ಕನಸಿನ ಯೋಜನೆ


ಸಮಾಜಸೇವೆಯಲ್ಲಿ ಮುಂದಿರುವ ರಿಲಯನ್ಸ್ ಫೌಂಡೇಶನ್, ಈಗ ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಲು ಮುಂದಾಗಿದೆ. ಇದರ ಭಾಗವಾಗಿಯೇ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ನಿರ್ಮಾಣವಾಗಿದೆ. NMACC ಯು ಅಮೆರಿಕಾ ಅಥವಾ ಯೂರೋಪ್‌ನಂತಹ ಪ್ರದೇಶಗಳಲ್ಲಿ ಲಭ್ಯವಿರುವುದಕ್ಕಿಂತ ಉತ್ತಮವಾದ ವೇದಿಕೆಯಾಗಿದೆ. ಭಾರತೀಯ ಸ್ಥಳೀಯ ಕಲೆ, ಕಲಾವಿದರು, ಪ್ರದರ್ಶಕರು ಮತ್ತು ರಚನೆಕಾರರಿಗೆ ಭಾರತದಲ್ಲಿ ಅಂತರರಾಷ್ಟ್ರೀಯ ತಾಣವನ್ನು ರಚಿಸಲು ಈ ವೇದಿಕೆ ಸೂಕ್ತವಾಗಿದೆ. ಇದು ನೀತಾ ಅಂಬಾನಿಯವರ ಕನಸಿನ ಯೋಜನೆಯಾಗಿದೆ.


ಭವ್ಯ ವೇದಿಕೆ


ನೀತಾ ಅಂಬಾನಿ ಕಲ್ಚರಲ್ ಸೆಂಟರ್ ಹೇಗಿದೆ ಗೊತ್ತಾ?


‘ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ (NMACC)’ ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ನಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಿರ್ಮಾಣವಾಗಿದೆ. ನಾಲ್ಕು ಅಂತಸ್ತಿನ NMACC ಕಟ್ಟಡ 16000 ಚದರ ಅಡಿ ಉದ್ದೇಶಿತ ಪ್ರದರ್ಶನ ಸ್ಥಳ ಮತ್ತು ಮೂರು ಚಿತ್ರಮಂದಿರಗಳನ್ನು ಹೊಂದಿರುತ್ತದೆ. ಇವುಗಳಲ್ಲಿ ಅತಿ ದೊಡ್ಡದಾದ 2,000 ಆಸನಗಳ ಗ್ರ್ಯಾಂಡ್ ಥಿಯೇಟರ್, 8,400 Swarovski ಸ್ಫಟಿಕಗಳೊಂದಿಗೆ ಅಸಾಮಾನ್ಯ ಮತ್ತು ವಿಶಿಷ್ಟವಾದ ಕಮಲದ ರಚನೆಯನ್ನು ಒಳಗೊಂಡಿದೆ.


ವಿಶ್ವದರ್ಜೆಯ ಥಿಯೇಟರ್


ಇದನ್ನೂ ಓದಿ: Mukesh Ambani: ಉದ್ಯಮಿ ಮುಖೇಶ್‌ ಅಂಬಾನಿಯ ʼಆಂಟಿಲಿಯಾʼ ಮನೆ ಹೇಗಿದೆ ಗೊತ್ತಾ? ಭವ್ಯ ಬಂಗಲೆ ಬಗ್ಗೆ ಇಲ್ಲಿದೆ ಮಾಹಿತಿ


ತಾಯಿ ಬಗ್ಗೆ ಇಶಾ ಅಂಬಾನಿ ಹೆಮ್ಮೆಯ ಮಾತು


“ನನ್ನ ತಾಯಿ ನೀತಾ ಅಂಬಾನಿ ಒಬ್ಬ ಲೋಕೋಪಕಾರಿ, ಶಿಕ್ಷಣತಜ್ಞ, ಉದ್ಯಮಿ...ಆದರೆ ಅವಳ ಅಂತರಂಗದಲ್ಲಿ ಅವರ ಪ್ರಬಲ ಗುರುತೆಂದರೆ ನೃತ್ಯಪಟು ಅಂತ ಪುತ್ರಿ ಇಶಾ ಅಂಬಾನಿ ಹೇಳಿದ್ದಾರೆ. 50 ವರ್ಷಗಳಿಗೂ ಹೆಚ್ಚು ಕಾಲ ಅವರು ಪ್ರತಿದಿನ ನೃತ್ಯ ಮಾಡುತ್ತಿದ್ದಾರೆ.


ಕಲ್ಚರಲ್ ಸೆಂಟರ್ ರೂವಾರಿ ಶ್ರೀಮತಿ ನೀತಾ ಅಂಬಾನಿ


ಅವರು ತನ್ನ ಕಲೆಗಾಗಿ ಸಮಯವನ್ನು ಮೀಸಲಿಡುವುದನ್ನು ನಾನು ನೋಡಿದ್ದೇನೆ. ಕಲೆಯ ಮೇಲಿನ ಅವರ ಉತ್ಸಾಹವು ಅಪ್ರತಿಮವಾಗಿದೆ. ಮತ್ತು ಅವರು ಯಾವಾಗಲೂ ಭಾರತದ ಪರಂಪರೆ ಮತ್ತು ಸಂಸ್ಕೃತಿಗೆ ಮೀಸಲಾದ ಮಹಾ ವೇದಿಕೆ ನಿರ್ಮಾಣ ಅವರ ಕನಸಾಗಿತ್ತು. ಅವರ ಕನಸು ನನಸಾಗಿಸಲು ಕಳೆದ ಕೆಲವು ವರ್ಷಗಳಿಂದ, ನನ್ನ ತಾಯಿ ಮತ್ತು ನಾನು ನಮ್ಮ ತಂಡಗಳೊಂದಿಗೆ ಅವಿರತವಾಗಿ ಕೆಲಸ ಮಾಡಿದ್ದೇವೆ ಅಂತ ಹೇಳಿದ್ದಾರೆ.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು