ಭಾರತದ ಕ್ರೀಡಾ ಕ್ಷೇತ್ರಕ್ಕೆ ನೀತಾ ಅಂಬಾನಿಯ ಕೊಡುಗೆ ಏನು?

ನೀತಾ ಅಂಬಾನಿ ಅವರು ಕ್ರೀಡೆಯ ಅಭಿವೃದ್ಧಿ ವಿಚಾರದಲ್ಲಿ ಬಹಳಷ್ಟು ಆಸಕ್ತರಿದ್ದಾರೆ. ಶಾಲೆಯ ಪಠ್ಯದಲ್ಲಿ ಕ್ರೀಡೆಗೆ ಒತ್ತುಕೊಡಬೇಕೆಂದು ಅವರು ಕರೆ ನೀಡಿದ್ದಾರೆ. ರಿಲಾಯನ್ಸ್ ಫೌಂಡೇಶನ್ ಯೂತ್ ಸ್ಪೋರ್ಟ್ಸ್ ಮೂಲಕ ದೇಶಾದ್ಯಂತ 5 ಸಾವಿರ ಶಿಕ್ಷಣ ಸಂಸ್ಥೆಗಳಲ್ಲಿ ಇವತ್ತು ಕ್ರೀಡೆಗೆ ಉತ್ತೇಜನ ಸಿಗುತ್ತಿರಲು ನೀತಾ ಅವರ ಪಾತ್ರವೂ ಇದೆ ಎನ್ನಲಾಗಿದೆ.

news18
Updated:October 8, 2019, 6:32 PM IST
ಭಾರತದ ಕ್ರೀಡಾ ಕ್ಷೇತ್ರಕ್ಕೆ ನೀತಾ ಅಂಬಾನಿಯ ಕೊಡುಗೆ ಏನು?
ಶಾಲಾ ಮಕ್ಕಳೊಂದಿಗೆ ನೀತಾ ಅಂಬಾನಿ
  • News18
  • Last Updated: October 8, 2019, 6:32 PM IST
  • Share this:
ರಿಲಾಯನ್ಸ್ ಫೌಂಡೇಶನ್ ಸಂಸ್ಥೆ ಬಹಳಷ್ಟು ವರ್ಷಗಳಿಂದ ಭಾರತದ ಕ್ರೀಡಾ ಕ್ಷೇತ್ರದಲ್ಲಿ ಜೋಡಿಸಿಕೊಂಡಿದೆ. ಫೌಂಡೇಶನ್​ನ ಮುಖ್ಯಸ್ಥೆಯಾಗಿ ಹಾಗೂ ರಿಲಾಯನ್ಸ್ ಇಂಡಸ್ಟ್ರೀಸ್ ಎಂಬ ಬೃಹತ್ ಸಂಸ್ಥೆಯ ನಿರ್ದೇಶಕಿಯಾಗಿ ನೀತಾ ಅಂಬಾನಿ ಅವರಿಂದ ಕ್ರೀಡಾ ಕ್ಷೇತ್ರಕ್ಕೆ ಸಿಕ್ಕಿರುವ ಕೊಡುವೆ ಮಹತ್ವವಾದುದು. ಭಾರತದಲ್ಲಿ ರಿಲಾಯನ್ಸ್ ತೊಡಗಿಸಿಕೊಂಡಿರುವ ಹಲವು ಕ್ರೀಡೆಗಳಲ್ಲಿ ಫುಟ್ಬಾಲ್ ಮತ್ತು ಬ್ಯಾಸ್ಕೆಟ್​ಬಾಲ್ ಕೂಡ ಸೇರಿವೆ. ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾ ಟೂರ್ನಿಗಳಲ್ಲೊಂದೆನಿಸಿದ ಎನ್​ಬಿಎ ಬ್ಯಾಸ್ಕೆಟ್​ಬಾಲ್ ಭಾರತದಲ್ಲಿ ಜನಪ್ರಿಯವಾಗುತ್ತಿರಲು ರಿಲಾಯನ್ಸ್ ಫೌಂಡೇಶನ್​ನ ಪ್ರಯತ್ನ ಗಣನೀಯವಾದುದು.

ಅಮೆರಿಕದ ಎನ್​ಬಿಎ ಸಂಸ್ಥೆಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿರುವ ರಿಲಾಯನ್ಸ್ ಫೌಂಡೇಶನ್ ಜೂನಿಯರ್ ಎನ್​ಬಿಎ ಪ್ರೋಗ್ರಾಮ್ ಹಮ್ಮಿಕೊಂಡಿದೆ. ಕ್ರಿಕೆಟ್ ಅತ್ಯಂತ ಜನಪ್ರಿಯವಿರುವ ಭಾರತದಲ್ಲಿ ಬ್ಯಾಸ್ಕೆಟ್​ಬಾಲ್ ಕ್ರೀಡೆಯನ್ನು ಒಂದಷ್ಟು ಮಟ್ಟಕ್ಕೆ ಪ್ರಜ್ವಲಿಸುವಂತೆ ಮಾಡಿದೆ. 20 ರಾಜ್ಯಗಳ 34 ನಗರಗಳಲ್ಲಿ ಇಂದು 1.1 ಕೋಟಿ ಮಕ್ಕಳು ಜೂನಿಯರ್ ಎನ್​ಬಿಎ ಪ್ರೋಗ್ರಾಮ್ ಅಡಿ ತರಬೇತಿ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಲಂಡನ್​ನಲ್ಲಿ “ಕ್ರೀಡಾ ವ್ಯವಹಾರಗಳ ಶೃಂಗಸಭೆ”; ಇದರ ಉದ್ದೇಶವೇನು ಗೊತ್ತಾ ...?

ಕಳೆದ ವಾರವಷ್ಟೇ ಅಮೆರಿಕದ ಎನ್​ಬಿಎ ತಂಡಗಳಾದ ಇಂಡಿಯಾನಾ ಪೇಸರ್ಸ್ ಮತ್ತು ಸ್ಯಾಕ್ರಮೆಂಟೋ ಕಿಂಗ್ಸ್ ಭಾರತದಲ್ಲಿ ಪ್ರದರ್ಶನ ಪಂದ್ಯಗಳನ್ನ ಆಡಿದ್ದವು. ಇದನ್ನ ಆಯೋಜಿಸಿದ ಶ್ರೇಯಸ್ಸು ರಿಲಾಯನ್ಸ್ ಫೌಂಡೇಶನ್​ಗೆ ಸೇರಬೇಕು. ಈ ಪಂದ್ಯಗಳನ್ನು ಜಿಯೋ ಟಿವಿ ಆ್ಯಪ್​ನಲ್ಲಿ ಲೈವ್ ಆಗಿ ಸ್ಟ್ರೀಮ್ ಮಾಡಲಾಗಿತ್ತು.

ನೀತಾ ಅಂಬಾನಿ ಅವರು ಕ್ರೀಡೆಯ ಅಭಿವೃದ್ಧಿ ವಿಚಾರದಲ್ಲಿ ಬಹಳಷ್ಟು ಆಸಕ್ತರಿದ್ದಾರೆ. ಶಾಲೆಯ ಪಠ್ಯದಲ್ಲಿ ಕ್ರೀಡೆಗೆ ಒತ್ತುಕೊಡಬೇಕೆಂದು ಅವರು ಕರೆ ನೀಡಿದ್ದಾರೆ. ರಿಲಾಯನ್ಸ್ ಫೌಂಡೇಶನ್ ಯೂತ್ ಸ್ಪೋರ್ಟ್ಸ್ ಮೂಲಕ ದೇಶಾದ್ಯಂತ 5 ಸಾವಿರ ಶಿಕ್ಷಣ ಸಂಸ್ಥೆಗಳಲ್ಲಿ ಇವತ್ತು ಕ್ರೀಡೆಗೆ ಉತ್ತೇಜನ ಸಿಗುತ್ತಿರಲು ನೀತಾ ಅವರ ಪಾತ್ರವೂ ಇದೆ ಎನ್ನಲಾಗಿದೆ.

ಇದನ್ನೂ ಓದಿ: JIO TV | ಭಾರತದಲ್ಲಿ ಎನ್​ಬಿಎ ಗೇಮ್ಸ್ ಹೊಸ ಇತಿಹಾಸ; ಜಿಯೋ ಟಿವಿಯಲ್ಲಿ ಲೈವ್ ವೀಕ್ಷಿಸಿ

2016ರಲ್ಲಿ ನೀತಾ ಅಂಬಾನಿ ಅವರು ಅಂತಾರಾಷ್ಟ್ರೀಯ ಒಲಿಂಪಿಕ್ ಕಮಿಟಿಗೆ ಆಯ್ಕೆಯಾಗಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ರಿಲಾಯನ್ಸ್ ಸಂಸ್ಥೆಯೇ ನಿರ್ವಹಿಸುವ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ ಅಧ್ಯಕ್ಷೆಯಾಗಿಯೂ ಅವರು ಕಾರ್ಯನಿರ್ವಹಿಸುತ್ತಿದ್ಧಾರೆ. ಐಪಿಎಲ್​ನ ಪ್ರಮುಖ ಭಾಗವಾಗಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಮಾಲೀಕರೂ ಅವರಾಗಿದ್ದಾರೆ.ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: October 8, 2019, 6:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading