Nisith Pramanik: ಅಂದು ಪ್ರೈಮರಿ ಸ್ಕೂಲ್​ ಶಿಕ್ಷಕ ಇಂದು ಕೇಂದ್ರ ಸಚಿವ; ಮೋದಿ ಸಂಪುಟ ಸೇರಿದ ಕಿರಿಯ ಸಚಿವ ಈತ

ಬಿಜೆಪಿಯಲ್ಲಿ ಮೊದಲ ಬಾರಿ ಸಂಸದರಾಗಿ ಆಯ್ಕೆಯಾಗಿರುವ ನಿಸಿತ್​ ಮೊಟ್ಟ ಮೊದಲ ಬಾರಿಗೆಯೇ ಕೇಂದ್ರದಲ್ಲಿ ಸಚಿವ ಸ್ಥಾನ ಪಡೆಯುವಲ್ಲಿ ಕೂಡ ಯಶಸ್ವಿಯಾಗಿದ್ದಾರೆ.

ಬಿಜೆಪಿಯಲ್ಲಿ ಮೊದಲ ಬಾರಿ ಸಂಸದರಾಗಿ ಆಯ್ಕೆಯಾಗಿರುವ ನಿಸಿತ್​ ಮೊಟ್ಟ ಮೊದಲ ಬಾರಿಗೆಯೇ ಕೇಂದ್ರದಲ್ಲಿ ಸಚಿವ ಸ್ಥಾನ ಪಡೆಯುವಲ್ಲಿ ಕೂಡ ಯಶಸ್ವಿಯಾಗಿದ್ದಾರೆ.

ಬಿಜೆಪಿಯಲ್ಲಿ ಮೊದಲ ಬಾರಿ ಸಂಸದರಾಗಿ ಆಯ್ಕೆಯಾಗಿರುವ ನಿಸಿತ್​ ಮೊಟ್ಟ ಮೊದಲ ಬಾರಿಗೆಯೇ ಕೇಂದ್ರದಲ್ಲಿ ಸಚಿವ ಸ್ಥಾನ ಪಡೆಯುವಲ್ಲಿ ಕೂಡ ಯಶಸ್ವಿಯಾಗಿದ್ದಾರೆ.

 • Share this:
  ನವದೆಹಲಿ (ಜು. 7): ಮೋದಿ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಕಾರ್ಯ ಇಂದು ನಡೆದಿದ್ದು, 43 ಹೊಸ ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇದರಲ್ಲಿ ಅತ್ಯಂತ ಕಿರಿಯ ಸಚಿವರಾಗಿ ಸಂಪುಟ ಸೇರಿರುವವರು ಪಶ್ಚಿಮ ಬಂಗಾಳದ 35 ವರ್ಷದ ನಿಸಿತ್​ ಪ್ರಮಾಣಿಕ್​. ತೃಣಮೂಲ ಕಾಂಗ್ರೆಸ್​ನಲ್ಲಿದ್ದ ನಿಸಿತ್​ 2019ರಲ್ಲಿ ಬಿಜೆಪಿಗೆ ಸೇರುವ ಮೂಲಕ ಪಶ್ಚಿಮ ಬಂಗಾಳದ ಕೊಚ್​ ಬೆಹಾರ್​ ನಲ್ಲಿ ಕಣಕ್ಕೆ ಇಳಿದಿದ್ದರು. ಬಿಜೆಪಿಯಲ್ಲಿ ಮೊದಲ ಬಾರಿ ಸಂಸದರಾಗಿ ಆಯ್ಕೆಯಾಗಿರುವ ನಿಸಿತ್​ ಮೊಟ್ಟ ಮೊದಲ ಬಾರಿಗೆಯೇ ಕೇಂದ್ರದಲ್ಲಿ ಸಚಿವ ಸ್ಥಾನ ಪಡೆಯುವಲ್ಲಿ ಕೂಡ ಯಶಸ್ವಿಯಾಗಿದ್ದಾರೆ. 2019 ರ ಲೋಕಸಭಾ ಚುನಾವಣೆಯಲ್ಲಿ ಸುಮಾರು 54,000 ಮತಗಳ ಅಂತರದಿಂದ ಕೂಚ್ ಬೆಹಾರ್‌ನಿಂದ ಪ್ರಬಲ ಟಿಎಂಸಿ ಅಭ್ಯರ್ಥಿ ಪರೇಶ್ ಚಂದ್ರ ಅಧಿಕಾರಿಯನ್ನು ಸೋಲಿಸಿ ನಿಸಿತ್ ಬಿಜೆಪಿ ಕೇಂದ್ರ ನಾಯಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

  ಇನ್ನು ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ರಚಿಸಲು ವಿಫಲವಾದರೂ, ರಾಜ್ಯದಲ್ಲಿ 77 ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಇದಕ್ಕೆ ಶಾಂತನು ಠಾಕೂರ್​, ನಿಸಿತ್​, ಪ್ರಮಾಣಿಕ್​, ಡಾ. ಸುಭಾಷ್​ ಸರ್ಕಾರ್​ ಮತ್ತು ಜಾನ್​ ಬರ್ಲ್ ಪ್ರಮುಖ ಪಾತ್ರ ವಹಿಸಿದ್ದರು.

  ವಿಧಾನಸಭಾ ಕಣಕ್ಕೂ ಇಳಿದಿದ್ದ ನಿಸಿತ್​
  2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದ ನಿಸಿತ್​ ಪಶ್ಚಿಮ ಬಂಗಾಳದಲ್ಲಿ ವರ್ಚಸ್ಸು ಹೊಂದಿದ್ದ ಯುವ ನಾಯಕ ಆಗಿ ಗುರುತಿಸಿಕೊಂಡಿದ್ದಾರೆ. ಇದೇ ಹಿನ್ನಲೆ ಸಂಸದರಾಗಿದ್ದರೂ ಅವರನ್ನು ಬಿಜೆಪಿ ವಿಧಾನಸಭಾ ಚುನಾವಣಾ ಕಣಕ್ಕೆ ಇಳಿಸಿತ್ತು. ದಿನ್​ಹಟಾ ಕ್ಷೇತ್ರದಿಂದ ಅವರು ಚುನಾವಣೆಗೆ ಸ್ಪರ್ಧಿಸಿದ್ದರು.

  ಕೊಚ್​ ಬೆಹರ್​ನ ಮೊದಲ ಕೇಂದ್ರ ಸಚಿವ ಎಂಬ ಹೆಗ್ಗಳಿಕೆಯನ್ನು ನಿಸಿತ್​ ಹೊಂದಿದ್ದಾರೆ. ನೂತನ ಸಂಪುಟದಲ್ಲಿ ಬಹುತೇಕ ಹೊಸ ಸಂಸದರು 50 ವರ್ಷದ ಆಸುಪಾಸಿನಲ್ಲಿದ್ದು, ನಿಸಿತ್​ ಮಾತ್ರ ಯುವ ಸಚಿವನಾಗಿದ್ದಾರೆ. ಬಿಸಿಎ ಪದವೀಧರರಾಗಿರುವ ನಿಸಿತ್​ ಪ್ರಾಥಮಿಕ ಶಾಲೆಯಲ್ಲಿ ಕಂಪ್ಯೂಟರ್​ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ್ದರು.

  ಪಶ್ಚಿಮ ಬಂಗಾಳದಲ್ಲಿ ರಾಜ್​ಬೋನ್ಶಿ, ಕಮತಾಪುರಿಯು ಮತ್ತು ಇತರೆ ಬುಡಕಟ್ಟು ಸಮುದಾಯಗಳು ತಮಗೆ ಪ್ರಾತಿನಿಧ್ಯವನ್ನು ನೀಡುವಂತೆ ದೀರ್ಘ ಕಾಲದಿಂದ ಒತ್ತಾಯಿಸಿಕೊಂಡು ಬರುತ್ತಿದೆ. ಇಂತಹ ಸಂದರ್ಭದಲ್ಲಿ ಉತ್ತರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತಂತ್ರವನ್ನು ಹಿಡಿದಿಡುವಲ್ಲಿ ನಿಸಿತ್​ ಪ್ರಮುಖ ಪಾತ್ರವನ್ನು ವಹಿಸಲಿದ್ದಾರೆ ಎಂಬ ಲೆಕ್ಕಾಚಾರ ಕೂಡ ಇದೆ.

  ಇದನ್ನು ಓದಿ: ಸಚಿವ ಸ್ಥಾನ ಸಿಗುತ್ತಿದ್ದಂತೆ ಹಳೆಯ ಟ್ವೀಟ್​ಗಳನ್ನು ಡಿಲೀಟ್​ ಮಾಡಿದ ಶೋಭಾ ಕರಂದ್ಲಾಜೆ

  ಈ ಬಾರಿ ಹೆಚ್ಚಿನ ಸಂಖ್ಯೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಜನಾಂಗ ಪ್ರತಿನಿಧಿಸುವ ಸಂಸದರು ಸೇರಿದಂತೆ 43 ಹೊಸ ಮುಖಗಳು ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಸಂಪುಟ ಸೇರಿದ್ದಾರೆ. ಇದನ್ನು ಈ ಮೊದಲಿಗಿಂಲೂ ಅತ್ಯಂತ ಯುವ ಹಾಗೂ ಉತ್ಸಾಹಿ, ಹೊಸಾ ಮುಖಗಳನ್ನು ಹೊಂದಿದ ಸಂಪುಟ ಎಂದು ಕರೆಯಲಾಗಿದೆ.

  ಸಂಪುಟ ಪುನರ್ ರಚನೆ ನಂತರ ಪರಿಶಿಷ್ಟ ಸಮುದಾಯದಿಂದ 12 ಸದಸ್ಯರು ಮತ್ತು ಪರಿಶಿಷ್ಟ ಪಂಗಡದಿಂದ 8 ಸದಸ್ಯರು ಸಂಪುಟ ಸೇರಲಿದ್ದಾರೆ. ಕ್ಯಾಬಿನೆಟ್ ವಿಸ್ತರಣೆಯ ನಂತರ, ಮೋದಿ ಸರ್ಕಾರ 27 ಒಬಿಸಿ ನಾಯಕರು ಇದ್ದಾರೆ ಎನ್ನಲಾಗಿದೆ. ಅದರಲ್ಲಿ ಐವರು ಕ್ಯಾಬಿನೆಟ್ ನಲ್ಲಿರುತ್ತಾರೆ. ಮಿಕ್ಕ ಸಚಿವರ ಕಾರ್ಯವೈಖರಿ,ಸಾಮರ್ಥ್ಯ ಆಧರಿಸಿ ಮುಂಬಡ್ತಿ ಅಥವಾ ಹಿಂಬಡ್ತಿ ನೀಡಲಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:Seema R
  First published: