Sushma ChakreSushma Chakre
|
news18-kannada Updated:December 8, 2020, 9:50 AM IST
ಪೈಲಟ್ ನಿಶಾಂತ್ ಸಿಂಗ್
ನವದೆಹಲಿ (ಡಿ. 8): ಭಾರತೀಯ ನೌಕಾಪಡೆಯ ಮಿಗ್-29ಕೆ ಯುದ್ಧ ವಿಮಾನ ನ. 26ರಂದು ಅರಬ್ಬಿ ಸಮುದ್ರದಲ್ಲಿ ಪತನಗೊಂಡಿತ್ತು. ಈ ದುರಂತದಲ್ಲಿ ಓರ್ವ ಪೈಲಟ್ಪವಾಡವೆಂಬಂತೆ ಬಚಾವಾಗಿದ್ದರು. ಆದರೆ, ಇನ್ನೋರ್ವ ಪೈಲಟ್ ನಾಪತ್ತೆಯಾಗಿದ್ದರು. ಅವರ ಸುಳಿವಿಗಾಗಿ ತೀವ್ರ ಶೋಧ ನಡೆಸಲಾಗಿತ್ತು. ಆ ದುರಂತ ನಡೆದು 11 ದಿನಗಳ ಬಳಿಕ ಮಿಗ್-29ಕೆ ಯುದ್ಧ ವಿಮಾನದ ಪೈಲಟ್ ಲೆಫ್ಟಿನೆಂಟ್ ಕಮಾಂಡರ್ ನಿಶಾಂತ್ ಸಿಂಗ್ ಅವರ ಮೃತದೇಹ ಪತ್ತೆಯಾಗಿದೆ. ಗೋವಾ ಸಮುದ್ರದ ಆಳದಲ್ಲಿ ಸೋಮವಾರ ಅವರ ಶವ ಪತ್ತೆಯಾಗಿದೆ.
ಈ ಕುರಿತು ವಾಯುಪಡೆ ಮಾಹಿತಿ ನೀಡಿದ್ದು, ನವೆಂಬರ್ 2ರಂದು ಸಂಜೆ ಮಿಗ್-29ಕೆ ಯುದ್ಧ ವಿಮಾನ ಅರಬ್ಬಿ ಸಮುದ್ರದ ಮೇಲೆ ಪತನಗೊಂಡಿತ್ತು. ಈ ವೇಳೆ ಪೈಲಟ್ ಲೆಫ್ಟಿನೆಂಟ್ ಕಮಾಂಡರ್ ನಿಶಾಂತ್ ಸಿಂಗ್ ಕೆಳಗೆ ಬಿದ್ದಿದ್ದರು. ಆದರೆ, ಅವರ ಸಹ ಪೈಲಟ್ ವಿಮಾನ ಪತನಕ್ಕೂ ಮೊದಲೇ ಕೆಳಗೆ ಹಾರಿದ್ದರಿಂದ ಬಚಾವಾಗಿದ್ದರು. 11 ದಿನಗಳಾದರೂ ನಿಶಾಂತ್ ಸಿಂಗ್ ಅವರ ಮೃತದೇಹ ಪತ್ತೆಯಾಗಿರಲಿಲ್ಲ. ನಿನ್ನೆ ಗೋವಾದ ಕರಾವಳಿಯಲ್ಲಿ ಅವರ ಶವ ಪತ್ತೆಯಾಗಿದೆ.

ಪೈಲಟ್ ನಿಶಾಂತ್ ಸಿಂಗ್
ಕಳೆದ 12 ತಿಂಗಳಲ್ಲಿ ಮಿಗ್ -29ಕೆ ಯುದ್ಧವಿಮಾನ ಪತನಕ್ಕೀಡಾದ 3ನೇ ಪ್ರಕರಣ ಇದಾಗಿದೆ. ಮೇ 8ರಂದು ಪಂಜಾಬ್ನ ಜಲಂಧರ್ನಲ್ಲಿ ಕೂಡ ಮಿಗ್ 29 ಪತನಗೊಂಡಿತ್ತು. ರಷ್ಯಾ ಮೂಲದ ಅವಳಿ ಆಸನಗಳ ತರಬೇತಿ ನಿರತ ಮಿಗ್-29ಕೆ ಯುದ್ಧ ವಿಮಾನವು ಐಎನ್ಎಸ್ ವಿಕ್ರಮಾದಿತ್ಯ ಡೆಕ್ನಿಂದ ಹೊರಟು, ಅರಬ್ಬಿ ಸಮುದ್ರದಲ್ಲಿ ಮುಳುಗಿತ್ತು.
ಮೃತ ನಿಶಾಂತ್ ಸಿಂಗ್ ಕಳೆದ ಮೇ ತಿಂಗಳಲ್ಲಿ ಮದುವೆಯಾಗಿದ್ದರು. ಕೆಲವು ದಿನಗಳ ಹಿಂದೆ ಮಿಗ್-29ಕೆ ಯುದ್ಧವಿಮಾನದ ಲ್ಯಾಂಡಿಂಗ್ ಗೇರ್, ಟರ್ಬೋ ಚಾರ್ಜರ್, ಟ್ಯಾಂಕರ್ಗಳ ಅವಶೇಷಗಳು ಸಮುದ್ರದಡಿ ಪತ್ತೆಯಾಗಿದ್ದವು. ಆದರೆ, ನಿಶಾಂತ್ ಸಿಂಗ್ ಮೃತದೇಹ ಮಾತ್ರ ಸಿಕ್ಕಿರಲಿಲ್ಲ. ವಿಮಾನ ಪತನವಾಗಿ 11 ದಿನಗಳ ಬಳಿ ಅವರ ಮೃತದೇಹ ಸಿಕ್ಕಿದೆ.
Published by:
Sushma Chakre
First published:
December 8, 2020, 9:50 AM IST