'ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ' ಎಂಬ ಇಮ್ರಾನ್ ಹೇಳಿಕೆ ಹಿಂದೆ ಕಾಂಗ್ರೆಸ್ ಕೈವಾಡ ಶಂಕೆ; ಸಚಿವೆ ನಿರ್ಮಲಾ ಸೀತಾರಾಮನ್

lok sabha elections 2019 : ಇಮ್ರಾನ್​ ಖಾನ್. “ಅಭಿಪ್ರಾಯಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್​ ಪಕ್ಷದ ನಾಯಕರು ಮೋದಿಗೆ ಮತಹಾಕಿದರೆ ಪಾಕಿಸ್ತಾನಕ್ಕೆ ಮತಹಾಕಿದಂತೆ” ಎಂದು ಪ್ರಧಾನಿ ಮೋದಿ ವಿರುದ್ಧ ರಾಷ್ಟ್ರಾದ್ಯಂತ ವ್ಯಾಪಕ ಪ್ರಚಾರ ನಡೆಸಿದ್ದರು.

MAshok Kumar | news18
Updated:April 17, 2019, 1:37 PM IST
'ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ' ಎಂಬ ಇಮ್ರಾನ್ ಹೇಳಿಕೆ ಹಿಂದೆ ಕಾಂಗ್ರೆಸ್ ಕೈವಾಡ ಶಂಕೆ; ಸಚಿವೆ ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್​
MAshok Kumar | news18
Updated: April 17, 2019, 1:37 PM IST
ನವದೆಹಲಿ (ಏ.17) : ಭಾರತದಲ್ಲಿ ಮತ್ತೆ ನರೇಂದ್ರ ಮೋದಿ ಗೆಲ್ಲಬೇಕು ಎಂಬ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ಹಿಂದೆ ಕಾಂಗ್ರೆಸ್​ ಕೈವಾಡವಿರುವ ಬಗ್ಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಶಂಕೆ ವ್ಯಕ್ತಪಡಿಸಿದ್ದಾರೆ.

ಬುಧವಾರ ಎಎನ್​ಐ ಸುದ್ದಿ ಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, “ಕೆಲವರು ಇಂತಹ ಹೇಳಿಕೆಯನ್ನು ಯಾವ ಕಾರಣಕ್ಕಾಗಿ ನಿಡುತ್ತಿದ್ದಾರೆ ಎಂಬ ಕುರಿತು ನನಗೆ ಗೊತ್ತಿಲ್ಲ. ಆದರೆ ಇದು ಮೋದಿಯನ್ನು ಎರಡನೇ ಬಾರಿ ಪ್ರಧಾನಿಯನ್ನಾಗಲು ಬಿಡಬಾರದು ಎಂದುಕೊಂಡಿರುವವರು ಮಾಡುತ್ತಿರುವ ಕುತಂತ್ರ ಎಂಬುದು ಮಾತ್ರ ಸ್ಪಷ್ಟವಾಗಿದೆ.

ಇದನ್ನೂ ಓದಿ : ಬಿಜೆಪಿ ಗೆಲುವು ಸಾಧಿಸಿದರೆ ಮಾತ್ರ ಜಮ್ಮು- ಕಾಶ್ಮೀರದ ಶಾಂತಿ ಮಾತುಕತೆ ಸಾಧ್ಯ :  ಇಮ್ರಾನ್ ಖಾನ್

ಏಕೆಂದರೆ ಕಾಂಗ್ರೆಸ್​ನ ಹಲವಾರು ನಾಯಕರು ಈಗಲೂ ಪಾಕಿಸ್ತಾನಕ್ಕೆ ತೆರಳುತ್ತಾರೆ. ಅಲ್ಲಿನ ನಾಯಕರನ್ನು ಭೇಟಿ ಮಾಡಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಲು ಸಹಾಯ ಕೋರುತ್ತಿದ್ದಾರೆ. ಇಂತಹ ಹೇಳಿಕೆಗಳು ಸಹ ಕಾಂಗ್ರೆಸ್ ಪಕ್ಷದ ಯೋಜನೆಯಾಗಿರುವ ಸಾಧ್ಯತೆ ಇದೆ. ಇಂತವರಿಗೆ ಏನು ಮಾಡುವುದು ಎಂದು ನನಗೆ ಪ್ರಾಮಾಣಿಕವಾಗಿ ಗೊತ್ತಿಲ್ಲ” ಎಂದು ಸೀತಾರಾಮನ್ ಕಾಂಗ್ರೆಸ್​ ವಿರುದ್ಧ ಗುಮಾನಿ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಅಂತಾರಾಷ್ಟ್ರೀಯ ಪತ್ರಕರ್ತರು ಆಯೋಜಿಸಿದ್ದ ಸಂದರ್ಶನದಲ್ಲಿ ಭಾರತದ ಚುನಾವಣೆ ಬಗ್ಗೆ ಮಾತನಾಡಿದ್ದ ಇಮ್ರಾನ್​ ಖಾನ್​, “ಭಾರತದಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್​ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದರೆ, ಅವರು ಪಾಕಿಸ್ತಾನದ ಜೊತೆ ಮಾತುಕತೆ ಬರಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಮಾತುಕತೆಯ ಮೂಲಕ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಲು ಭಾರತದಲ್ಲಿ ಮತ್ತೊಮ್ಮೆ ಬಿಜೆಪಿ ಗೆಲುವು ಸಾಧಿಸಿ ನರೇಂದ್ರ ಮೋದಿ ಅಧಿಕಾರಕ್ಕೆ ಬರಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ : Lok Sabha Election 2019 | 'ಪಾಕ್ ಪ್ರಧಾನಿ ಇಮ್ರಾನ್​ ಖಾನ್ ಹೇಳಿಕೆ ನಿಜವಾಗಲು ಬಿಡಬೇಡಿ'; ಮತದಾರರಿಗೆ ಒವೈಸಿ ಮನವಿ
Loading...

ಇಮ್ರಾನ್​ ಖಾನ್. “ಅಭಿಪ್ರಾಯಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್​ ಪಕ್ಷದ ನಾಯಕರು ಮೋದಿಗೆ ಮತಹಾಕಿದರೆ ಪಾಕಿಸ್ತಾನಕ್ಕೆ ಮತಹಾಕಿದಂತೆ” ಎಂದು ಪ್ರಧಾನಿ ಮೋದಿ ವಿರುದ್ಧ ರಾಷ್ಟ್ರಾದ್ಯಂತ ವ್ಯಾಪಕ ಪ್ರಚಾರ ನಡೆಸಿದ್ದರು.

ತರೂರ್​ ಭೇಟಿ ಮಾಡಿದ್ದ ಸೀತಾರಾಮನ್ : ಕಾಂಗ್ರೆಸ್ ಪಕ್ಷದ ನಾಯಕ ಶಶಿ ತರೂರ್ ಸೋಮವಾರ (ಏ.15) ಕೇರಳದ ಥಂಪನೂರ್​ನ ಸುಪ್ರಸಿದ್ಧ ಗಾಂಧಾರಿ ಅಮ್ಮನ್ ದೇವಾಲಯದಲ್ಲಿ ತುಲಾಭಾರ ಸೇವೆ ಮಾಡುವಾಗ ತಲೆಮೇಲೆ ತಕ್ಕಡಿ ಬಿದ್ದು ಗಂಭೀರ ಗಾಯಕ್ಕೊಳಗಾಗಿದ್ದರು. ಕೂಡಲೆ ಪಕ್ಕದ ಸರ್ಕಾರಿ ಆಸ್ಪತ್ರೆಯಲ್ಲಿ ಅವರನ್ನು ದಾಖಲಿಸಿ ತಲೆಯಲ್ಲಿ 8 ಕಡೆ ಹೊಲಿಗೆ ಹಾಕಲಾಗಿತ್ತು.

ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಶಶಿ ತರೂರ್ ಅವರನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಆಸ್ಪತ್ರೆಗೆ ತೆರಳಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ಆದರೆ, ಸಚಿವೆಯ ಈ ಭೇಟಿ ಸ್ವತಃ ಬಿಜೆಪಿಯವರಿಗೂ ತಿಳಿದಿರಲಿಲ್ಲ. ಈ ಕುರಿತು ಹೇಳಿಕೆ ನೀಡಿರುವ ನಿರ್ಮಲಾ ಸೀತಾರಾಮನ್, “ಶಶಿ ತರೂರ್​ಗೆ ಪೆಟ್ಟಾಗಿ ಆಸ್ಪತ್ರೆಗೆ ಸೇರಿದ್ದಾರೆ ಎಂಬ ಮಾಹಿತಿ ನನಗೆ ತಿಳಿಯಿತು. ಹೀಗಾಗಿ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗ ಮಧ್ಯೆ ಅವರನ್ನು ಭೇಟಿ ಮಾಡಿದೆ. ಈ ವಿಚಾರ ಪಕ್ಷಕ್ಕಾಗಲಿ ಅಥವಾ ಇನ್ಯಾವುದೇ ನಾಯಕರಿಗೆ ನಾನು ತಿಳಿಸಿರಲಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

First published:April 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626