news18-kannada Updated:February 1, 2021, 1:10 PM IST
ನಿರ್ಮಲಾ ಸೀತಾರಾಮನ್
ನವ ದೆಹಲಿ (ಫೆಬ್ರವರಿ 01); ಇಂದು ಅಧಿವೇಶನದಲ್ಲಿ ತನ್ನ ಎರಡನೇ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉತ್ತಮ ಮತ್ತು ಮಾದರಿ ದೇಶ ಹೇಗಿರಬೇಕು? ಎಂದು ತಿಳಿಸಲು ತಮಿಳಿನ ಪ್ರಾಚೀನ ಕವಿ ತಿರುವಳ್ಳುವರ್ ಅವರ ತಿರುಕ್ಕುರಳ್ ಅನ್ನು ಬಳಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಬಜೆಟ್ ಮೇಲಿನ ಭಾಷಣದ ವೇಳೆ ಎಲ್ಲಾ ಕ್ಷೇತ್ರಗಳಲ್ಲೂ ಪ್ರಧಾನಿ ನರೇಂದ್ರ ಮೋದಿಯವರ ಯಶಸ್ಸನ್ನು ಎತ್ತಿ ತೋರಿಸಿದ ಸೀತಾರಾಮನ್, "ತಿರುವಳ್ಳುವರ್ ಉತ್ತಮ ದೇಶದ ಐದು ಪ್ರಮುಖ ಆಭರಣಗಳನ್ನು ತಮ್ಮ ಬರಹಗಳಲ್ಲಿ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಕಾರ್ಯಕ್ರಮದ ಮೂಲಕ ಅದನ್ನು ಸಾಕಾರಪಡಿಸುತ್ತಿದ್ದಾರೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ತಿರುಕ್ಕುರಳ್ 738ನೇ ಅಧ್ಯಾಯವನ್ನು ಉಲ್ಲೇಖಿಸಿರುವ ನಿರ್ಮಾಲಾ ಸೀತಾರಾಮನ್, "ಪಿನಿಯನ್ಮೈ ಸೆಲ್ವಂ ವಿಲಾವಿನ್ಪಮ್ ಎಮಾಮ್ ಅನಿಯೆನ್ಪಾ ನಾಟ್ಟಿವ್ ವೈಂಧು" ಎಂದು ಉಲ್ಲೇಖಿಸಿದ್ದಾರೆ. ಇದರರ್ಥ ಆರೋಗ್ಯ, ಫಲವತ್ತತೆ, ಸಂತೋಷ, ಭದ್ರತೆ ಮತ್ತು ಸಂಪತ್ತು ಯಾವುದೇ ಮಾದರಿ ದೇಶದ ಐದು ಆಭರಣಗಳು ಎಂದು ಉಲ್ಲೇಖಿಸಿದ್ದಾರೆ. ಈ ಮೂಲಕ ತನ್ನ ರಾಜ್ಯದ ಜನರನ್ನು ಸಂತುಷ್ಟಗೊಳಿಸಲು ಮುಂದಾಗಿದ್ದಾರೆ.
ಅಸಲಿಗೆ ಅರ್ಥ ಸಚಿವೆ ತನ್ನ ತಮಿಳುನಾಡಿನ ಸಂಪರ್ಕವನ್ನು ಸದನದಲ್ಲಿ ಉಲ್ಲೇಖಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದಿನ ಚೊಚ್ಚಲ ಬಜೆಟ್ ಮಂಡನೆ ವೇಳೆಯೂ ಅವರು ತಮಿಳುನಾಡಿನ ಪ್ರಮುಖ ಗ್ರಂಥಗಳನ್ನು ಪ್ರಸ್ತಾಪಿಸಿದ್ದರು.
ಈ ಪೂರ್ವ-ಐತಿಹಾಸಿಕ ಸಂಕಲನದಲ್ಲಿ (ತರುಕ್ಕುರಳ್ ಅನ್ನು ಕ್ರಿ.ಪೂ 1 ನೇ ಶತಮಾನ ಮತ್ತು ಕ್ರಿ.ಪೂ 3 ನೇ ಶತಮಾನದ ನಡುವೆ ಅಥವಾ 2,000 ವರ್ಷಗಳ ಹಿಂದೆ ಬರೆಯಲ್ಪಟ್ಟಿದೆ ಎಂದು ನಂಬಲಾಗಿದೆ) ಯುದ್ಧ, ನೀತಿ, ನೈತಿಕತೆಯಂತಹ ವಿವಿಧ ವಿಷಯಗಳ ಕುರಿತು ಚೋಳ, ಚೇರ ಮತ್ತು ಪಾಂಡ್ಯ ಪ್ರಭುತ್ವದ ರಾಜರಿಗೆ ನೀಡಿದ ಸಲಹೆಯನ್ನು ವಿವರಿಸಲಾಗಿದೆ.
ನಿರ್ಮಲಾ ಸೀತಾರಾಮನ್ ಉಲ್ಲೇಖಿಸಿರುವ ಪದ್ಯ;- 'ಯಾನೈ ಪುಗುಂದ ನೀಲಂ' (ಆನೆ ಪ್ರವೇಶಿಸುವ ಕ್ಷೇತ್ರ) ಎಂದು ಹೇಳುವ ಮೂಲಕ ಪಾಂಡ್ಯ ರಾಜ ಅರಿವುಡೈ ನಂಬಿಗೆ ನೀಡಿದ ತೆರಿಗೆಯ ಸಲಹೆಯಾಗಿದೆ.
ಇದನ್ನೂ ಓದಿ: Union Budget 2021; ಸರ್ಕಾರಿ ಶಿಕ್ಷಣ ಸಂಸ್ಥೆಗಳ ಆರ್ಥಿಕ ಪುನಶ್ಚೇತನಕ್ಕೆ ಕ್ರಮ; ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ!
"ಒಂದು ಸಣ್ಣ ತುಂಡು ಭೂಮಿಯಿಂದ ಕೊಯ್ಲು ಮಾಡುವ ಭತ್ತದಿಂದ ಕೆಲವು ಪೌಂಡ್ ಅಕ್ಕಿ ಆನೆಗೆ ಸಾಕಾಗುತ್ತದೆ. ಆದರೆ, ಆನೆ ಸ್ವತಃ ಹೊಲಕ್ಕೆ ಪ್ರವೇಶಿಸಿ ತಿನ್ನಲು ಪ್ರಾರಂಭಿಸಿದರೆ? ಅದು ತಿನ್ನುವುದಕ್ಕಿಂತ ಚದುರಿಸುವುದೇ ಅಧಿಕವಾಗಿರುತ್ತದೆ" ಎಂಬುದು ಈ ಪದ್ಯದ ಸಾರಾಂಶ. ಈ ಪದ್ಯವನ್ನು ಓದುವ ಮೂಲಕ ತಮ್ಮ ತೆರಿಗೆ ನೀತಿಯನ್ನು ಸಚಿವೆ ಸೀತಾರಾಮನ್ ಸಮರ್ಥಿಸಿಕೊಂಡಿದ್ದಾರೆ.
ಸೀತಾರಾಮನ್ ನೇರ ತೆರಿಗೆಗೆ ಮಾಡಿದ ಉಲ್ಲೇಖ ಇದಾಗಿದ್ದು, ಕೇಂದ್ರವು ಭತ್ತದ ಗದ್ದೆಯಲ್ಲಿ ಆನೆಯಂತೆ ಆಗುವುದಿಲ್ಲ, ಅಗತ್ಯಕ್ಕಿಂತ ಹೆಚ್ಚಿನದನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
Published by:
MAshok Kumar
First published:
February 1, 2021, 1:09 PM IST