Union Budget 2022: ಬಜೆಟ್ ಮಂಡನೆ ವೇಳೆ ಮಹಾಭಾರತ ಶ್ಲೋಕ ಉಲ್ಲೇಖಿಸಿದ ಹಣಕಾಸು ಸಚಿವರು; ಏನಿದರ ಅರ್ಥ?

ನೇರ ತೆರಿಗೆ ಕುರಿತು ಪ್ರಸ್ತಾಪದ ಸಂದರ್ಭದಲ್ಲಿ ಅವರು ಉಲ್ಲೇಖಿಸಿದ ಶ್ಲೋಕ ಅನೇಕರ ಗಮನ ಸೆಳೆಯಿತು.

@News18 Creative

@News18 Creative

  • Share this:
    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಕೇಂದ್ರ ಬಜೆಟ್ (Union Budget) ಮಂಡಿಸುವ ವೇಳೆ ಮಹಾಭಾರತದ ಶ್ಲೋಕವನ್ನು ಉಲ್ಲೇಖಿಸಿ ಎಲ್ಲರ ಗಮನ ಸೆಳೆದರು. ಕೇಂದ್ರ ಸರ್ಕಾರವು ನೇರ ತೆರಿಗೆ ಕುರಿತು  ಪ್ರಸ್ತಾಪದ ಸಂದರ್ಭದಲ್ಲಿ ಅವರು ಹೇಳಿದ ಶ್ಲೋಕ ಅನೇಕರ ಸೆಳೆಯಿತು. ಸಂಸ್ಕೃತ ಮಹಾಕಾವ್ಯವಾದ ಮಹಾಭಾರತದ ಶಾಂತಿ ಪರ್ವ ಅಧ್ಯಾಯದಿಂದ ಶ್ಲೋಕವನ್ನು ಉಲ್ಲೇಖಿಸಿ ಮಾತನಾಡಿದ ಹಣಕಾಸು ಸಚಿವರು ಸಮಯದ ನಿರ್ಬಂಧಗಳ ಕುರಿತು ತಿಳಿಸಿದರು. ಈ ಸಂಸ್ಕೃತ ಶ್ಲೋಕದ ಇಂಗ್ಲಿಷ್ ಅನುವಾದವನ್ನು ಅವರು ಬಜೆಟ್​ ಭಾಷಣದ ವೇಳೆ ಪ್ರಸ್ತಾಪಿಸಿದರು.

    ದೇಶದ ಅಭಿವೃದ್ಧಿಯಲ್ಲಿ ಕೊಡುಗೆ ನೀಡಿದ ದೇಶದ ಎಲ್ಲಾ ತೆರಿಗೆದಾರರಿಗೆ ಧನ್ಯವಾದಗಳನ್ನು ಅರ್ಪಿಸಿದ ಅವರು ಸರ್ಕಾರಕ್ಕೆ ಅಗತ್ಯ ಸಮಯದಲ್ಲಿ ನಾಗರಿಕರಿಗೆ ಸಹಾಯ ಮಾಡುವಲ್ಲಿ ಮಾಡಿ ಬಲಪಡಿಸಿದ್ದಾರೆ ಎಂದು ತಿಳಿಸಿದರು.

    ಶ್ಲೋಕದ ಅನುವಾದ
    ರಾಜನು ಯಾವುದೇ ಸಡಿಲಿಕೆಯನ್ನು ತೊರದ ಮೂಲಕ, ಧರ್ಮಕ್ಕೆ ಅನುಗುಣವಾಗಿ ರಾಜ್ಯವನ್ನು ಆಳುವ ಮೂಲಕ, ಧರ್ಮಕ್ಕೆ ಅನುಗುಣವಾಗಿ ತೆರಿಗೆಗಳನ್ನು ಸಂಗ್ರಹಿಸುತ್ತಾನೆ. ಆ ಮೂಲಕ ಜನರ ಕಲ್ಯಾಣಕ್ಕಾಗಿ ವ್ಯವಸ್ಥೆಗಳನ್ನು ಮಾಡಬೇಕು ಎಂಬುದು ಈ ಶ್ಲೋಕದ ಅರ್ಧವಾಗಿದೆ.

    ಏನಿದು ಶ್ಲೋಕ
    ಈ ಶ್ಲೋಕವನ್ನು ಮಹಾಭಾರತ ಮಹಾಕಾವ್ಯದ ಹದಿನೆಂಟು ಪುಸ್ತಕಗಳ ಹನ್ನೆರಡನೆಯದು ಆದ ಶಾಂತಿ ಪರ್ವ ಅಥವಾ ಶಾಂತಿಯ ಪುಸ್ತಕದಿಂದ ಎರವಲು ಪಡೆಯಲಾಗಿದೆ. ಇದು ಸಾಮಾನ್ಯವಾಗಿ ಮೂರು ಉಪ-ಪುಸ್ತಕಗಳು ಮತ್ತು 365 ಅಧ್ಯಾಯಗಳನ್ನು ಹೊಂದಿದೆ. 18 ಮಹಾಕಾವ್ಯದಲ್ಲಿ ಇದು ಉದ್ದದಾಗಿದೆ
    ಯುದ್ಧವು ಮುಗಿದ ನಂತರ ಯುಧಿಷ್ಠಿರನು ಪಾಂಡವ ರಾಜ್ಯವನ್ನು ಸ್ವಾಧೀನಪಡಿಸಿಕೊಂಡ ನಂತರ ಈ ಕಥೆಯು ಪ್ರಾರಂಭವಾಗುತ್ತದೆ.

    ಇದನ್ನು ಓದಿ: ಆದಾಯ ತೆರಿಗೆ ಸಲ್ಲಿಸುವ ಜನರಿಗೆ ಬಿಗ್ ರಿಲೀಫ್ ನೀಡಿದ ವಿತ್ತ ಸಚಿವರು

    ಭೀಷ್ಮ ಮತ್ತು ಇತರ ಋಷಿಗಳ ಸಲಹೆಯಂತೆ ಶಾಂತಿ ಪರ್ವವು ಆಡಳಿತಗಾರನ ಕರ್ತವ್ಯಗಳು, ಧರ್ಮ ಮತ್ತು ಉತ್ತಮ ಆಡಳಿತವನ್ನು ತಿಳಿಸುತ್ತದೆ. ಪರ್ವವು ಅನೇಕ ಸಾಂಕೇತಿಕ ಕಥೆಗಳನ್ನು ಒಳಗೊಂಡಿದೆ, ಉದಾಹರಣೆಗೆ ಹಸಿವು ಮತ್ತು ಸಸ್ಯಾಹಾರಿ ವಿಶ್ವಾಮಿತ್ರ ಕ್ಷಾಮದ ಸಮಯದಲ್ಲಿ ಮಾಂಸವನ್ನು ಕದಿಯುವುದು, ಹಾಗೆಯೇ "ಕೋಳಿ ಮತ್ತು ಪಾರಿವಾಳಗಳಂತಹ ನೀತಿಕಥೆಗಳನ್ನು ಹೊಂದಿದೆ.

    ಕಳೆದ ಬಾರಿ ಟ್ಯಾಗೋರ್​ ಪದಗಳನ್ನು ಉಲ್ಲೇಖಿಸಿದ ಸಚಿವರು
    ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ದ್ವಿಪದಿಗಳನ್ನು ಓದಿದ್ದು ಇದೇ ಮೊದಲಲ್ಲ. ತನ್ನ ಕೊನೆಯ ಬಜೆಟ್ ಭಾಷಣದಲ್ಲಿ, ಅವರು ಪೌರಾಣಿಕ ಕವಿಗಳನ್ನು ಅವರ ಪದ್ಯಗಳನ್ನು ಓದಿದ್ದರು. ಸೀತಾರಾಮನ್ ರವೀಂದ್ರನಾಥ ಟ್ಯಾಗೋರ್ ಅವರ ದ್ವಿಪದಿಯನ್ನು ಉಲ್ಲೇಖಿಸಿದ್ದರು.

    ಇದನ್ನು ಓದಿ: ಮಹಿಳಾ ಸಬಲೀಕರಣಕ್ಕೆ ಒತ್ತು; ಬಜೆಟ್ ನಲ್ಲಿ ಮಹಿಳೆಯರಿಗೆ ಏನು ಲಾಭ-ನಷ್ಟ?

    ತೆರಿಗೆಗೆ ಸಂಬಂಧಿಸಿದ ಶ್ಲೋಕ
    ಭಾರತವು ಮಹಾಭಾರತದಂತಹ ಪ್ರಾಚೀನ ಗ್ರಂಥಗಳಿಂದ ಬುದ್ಧಿವಂತಿಕೆಯನ್ನು ಪಡೆಯುವ ಮೂಲಕ ಪ್ರಗತಿಯ ಹಾದಿಯಲ್ಲಿ ಮುಂದುವರಿಯುತ್ತದೆ ಎಂದು ಸೀತಾರಾಮನ್ ಹೇಳಿದರು. 2022-23ರ ಕೇಂದ್ರ ಬಜೆಟ್‌ನಲ್ಲಿನ ಪ್ರಸ್ತಾವನೆಗಳು ಸ್ಥಿರ ಮತ್ತು ಊಹಿಸಬಹುದಾದ ತೆರಿಗೆ ಆಡಳಿತ ದ ಸರ್ಕಾರದ ಘೋಷಿತ ನೀತಿಯನ್ನು ಮುಂದುವರೆಸಿಕೊಂಡು ಹೆಚ್ಚಿನ ಸುಧಾರಣೆಗಳನ್ನು ತರಲು ಉದ್ದೇಶಿಸಿದೆ ಎಂದರು.
    ನೇರ ತೆರಿಗೆಗಳ ಮುಂಭಾಗದ ಪ್ರಸ್ತಾವನೆಗಳು ವಿಶ್ವಾಸಾರ್ಹ ತೆರಿಗೆ ಆಡಳಿತವನ್ನು ಸ್ಥಾಪಿಸುವ ಸರ್ಕಾರದ ದೃಷ್ಟಿಯನ್ನು ಮುಂದಕ್ಕೆ ತೆಗೆದುಕೊಂಡು ಹೋಗಲಿದೆ. ಇದು ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸುತ್ತದೆ, ತೆರಿಗೆದಾರರಿಂದ ಸ್ವಯಂಪ್ರೇರಿತ ಅನುಸರಣೆಯನ್ನು ಉತ್ತೇಜಿಸುತ್ತದೆ. ದಾವೆಗಳನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದರು.

    ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ
    ಸ್ಥಿರ ಮತ್ತು ಊಹಿಸಬಹುದಾದ ತೆರಿಗೆ ಆಡಳಿತ ನೀತಿಗಳ ಮೂಲಕ ಈ ಬಾರಿ ಆದಾಯ ತೆರಿಗೆ ದರಗಳು ಮತ್ತು ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆಗಳನ್ನು ಸರ್ಕಾರ ಪ್ರಸ್ತಾಪಿಸಿಲ್ಲ. ಆದಾಗ್ಯೂ, ಸಂಬಂಧಿತ ಮೌಲ್ಯಮಾಪನ ವರ್ಷದ ಅಂತ್ಯದಿಂದ ಎರಡು ವರ್ಷಗಳಲ್ಲಿ ಹೆಚ್ಚುವರಿ ತೆರಿಗೆ ಪಾವತಿಯ ಮೇಲೆ ನವೀಕರಿಸಿ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಲು ತೆರಿಗೆದಾರರಿಗೆ ಅವಕಾಶ ನೀಡುವ ಹೊಸ ನಿಬಂಧನೆಯನ್ನು ಸರ್ಕಾರ ಪ್ರಸ್ತಾಪಿಸಿದೆ.
    Published by:Seema R
    First published: