ನವದೆಹಲಿ(ಮೇ 14): ಇವತ್ತು ನಿರ್ಮಲಾ ಸೀತಾರಾಮನ್ ಅವರು ಎರಡನೇ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ ವೇತನ ತಾರತಮ್ಯ ನೀಗಿಸುವ ಕುರಿತು ಸರ್ಕಾರಕ್ಕಿರುವ ಆಸಕ್ತಿಯನ್ನು ವ್ಯಕ್ತಪಡಿಸಿದರು. ಸಾರ್ವತ್ರಿಕ ಕನಿಷ್ಠ ವೇತನ ಪದ್ಧತಿ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ ಎಂದು ಹಣಕಾಸು ಸಚಿವೆ ತಿಳಿಸಿದರು.
ನ್ಯಾಷನಲ್ ಫ್ಲೋರ್ ವೇಜ್ ಯೋಜನೆಯ ಚಿಂತನೆ ಸರ್ಕಾರಕ್ಕಿದೆ. ದೇಶಾದ್ಯಂತ ವಿವಿಧ ರೀತಿಯ ವೇತನ ಕ್ರಮ ಇದೆ. ಒಂದೇ ಪ್ರದೇಶದಲ್ಲೇ ವೈಭಿನ್ಯತೆ ಇದೆ. ಇದನ್ನು ನೀಗಿಸಿ ಎಲ್ಲರಿಗೂ ಸಮಾನ ಕನಿಷ್ಠ ವೇತನ ಪದ್ಧತಿಯನ್ನು ಜಾರಿಗೆ ತರಲಾಗುತ್ತದೆ. ಕನಿಷ್ಠ ವೇತನ ರೂಪಿಸಲು ಸರಳ ವಿಧಾನ ಅಳವಡಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಕಂಪನಿಗಳು ನೌಕರರನ್ನು ನೇಮಕ ಮಾಡುವಾಗ ನೇಮಕಾತಿ ಪತ್ರ ಕಡ್ಡಾಯಗೊಳಿಸುವುದು ಎಂದೂ ಅವರು ಹೇಳಿದರು. ಕಾರ್ಮಿಕರಿಗೆ ಅಗತ್ಯ ಇದ್ದೆಡೆ ಮರುಕೌಶಲ್ಯ ತರಬೇತಿ ಕೊಡಲಾಗುವುದು ಎಂದು ಅವರು ತಿಳಿಸಿದರು.
ಇದನ್ನೂ ಓದಿ: ರಸ್ತೆ ಬದಿ ವ್ಯಾಪಾರಿಗಳು, ವಲಸೆ ಕಾರ್ಮಿಕರು, ಸಣ್ಣ ರೈತರಿಗೆ ವಿಶೇಷ ಸವಲತ್ತು; ಸಚಿವೆ ನಿರ್ಮಲಾ ಸೀತಾರಾಮನ್
ಇನ್ನು, ವಲಸಿಗ ಕಾರ್ಮಿಕರ ವೇತನ ಹೆಚ್ಚಳದ ಬಗ್ಗೆಯೂ ಅವರು ಬೆಳಕು ಚೆಲ್ಲಿದರು. ತಮ್ಮ ತಮ್ಮ ಮನೆಗಳಿಗೆ ವಾಪಸ್ ಹೋಗಿರುವ ವಲಸಿಗ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಕೆಲಸ ಕೊಡಲಾಗುವುದು. ಅವರ ವೇತನವನ್ನೂ ಹೆಚ್ಚಳ ಮಾಡಲಾಗುತ್ತದೆ. ಈ ಯೋಜನೆಗೆ ಕೇಂದ್ರ ಸರ್ಕಾರ 10 ಸಾವಿರ ಕೋಟಿ ರೂ ನೀಡುತ್ತದೆ ಎಂದು ಹಣಕಾಸು ಸಚಿವರು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ