• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Nirmala Sitharaman: ಬಜೆಟ್ ಮಂಡನೆಗೆ ಸಜ್ಜಾಗ್ತಿದ್ದಾರೆ ನಿರ್ಮಲಾ ಸೀತಾರಾಮನ್, ಸಂಪ್ರದಾಯದಂತೆ ಹಲ್ವಾ ತಯಾರಿಸಿ ಹಂಚಿದ ಸಚಿವೆ

Nirmala Sitharaman: ಬಜೆಟ್ ಮಂಡನೆಗೆ ಸಜ್ಜಾಗ್ತಿದ್ದಾರೆ ನಿರ್ಮಲಾ ಸೀತಾರಾಮನ್, ಸಂಪ್ರದಾಯದಂತೆ ಹಲ್ವಾ ತಯಾರಿಸಿ ಹಂಚಿದ ಸಚಿವೆ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಹಲ್ವಾ ಸಮಾರಂಭದಲ್ಲಿ ನಿರ್ಮಲಾ ಸೀತಾರಾಮನ್ ಜೊತೆಗೆ ರಾಜ್ಯ ಖಾತೆ ಸಚಿವರಾದ ಭಾಗವತ್ ಕರದ್ ಮತ್ತು ಪಂಕಜ್ ಚೌಧರಿ ಸೇರಿದಂತೆ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

  • Share this:

Nirmala Sitharaman
ಕೇಂದ್ರ ಸರ್ಕಾರದ ಬಜೆಟ್ ಮಂಡನೆಗೂ ಮುನ್ನ ಕೆಲವು ವರ್ಷಗಳಿಂದ ಹಣಕಾಸು ಇಲಾಖೆ ಅಲ್ವಾ ಸಮಾರಂಭವನ್ನು ಆಯೋಜಿಸಿಕೊಂಡು ಬರುತ್ತಿದೆ. ಅದರಂತೆ ಕೇಂದ್ರ ಬಜೆಟ್ ಅನ್ನು ಘೋಷಿಸುವ ಮುನ್ನ ಇಂದು ಹಲ್ವಾ ಸಮಾರಂಭವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಡೆಸಿಕೊಟ್ಟರು.


Nirmala Sitharaman
ಹಲ್ವಾ ಸಮಾರಂಭದಲ್ಲಿ ನಿರ್ಮಲಾ ಸೀತಾರಾಮನ್ ಜೊತೆಗೆ ರಾಜ್ಯ ಖಾತೆ ಸಚಿವರಾದ ಭಾಗವತ್ ಕರದ್ ಮತ್ತು ಪಂಕಜ್ ಚೌಧರಿ ಸೇರಿದಂತೆ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.


Nirmala Sitharaman
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿನ ಹಣಕಾಸು ಸಚಿವಾಲಯದ ಉತ್ತರ ಬ್ಲಾಕ್ ಆವರಣದಲ್ಲಿ ಹಲ್ವಾ ಸಮಾರಂಭ ನಡೆಯಿತು. ಪ್ರತಿ ವರ್ಷ ಬಜೆಟ್ ಪ್ರಕ್ರಿಯೆ ಅಂತಿಮಗೊಳಿಸುವಿಕೆ ಪ್ರಾರಂಭಕ್ಕೂ ಮುನ್ನ ಸಾಂಪ್ರದಾಯಿಕವಾಗಿ ಹಲ್ವಾ ಸಮಾರಂಭವನ್ನು ನಡೆಸಲಾಗುತ್ತದೆ.


Nirmala Sitharaman
ಹಿಂದಿನ ಎರಡು ಬಜೆಟ್ಗಳಂತೆ 2023-24 ರ ಕೇಂದ್ರ ಮುಂಗಡ ಪತ್ರ ಕೂಡ ಕಾಗದರಹಿತ ರೂಪದಲ್ಲಿರಲಿದೆ. 2023ರ ಫೆಬ್ರವರಿ 1ರಂದು 2023-24ರ ಕೇಂದ್ರ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿದ್ದಾರೆ.


Nirmala Sitharaman
ಈ ಹಿಂದೆ ಕೋವಿಡ್ ಇದ್ದ ಕಾರಣ ಕಳೆದ ವರ್ಷ ಹಲ್ವಾ ಸಮಾರಂಭವನ್ನು ಮೊಟಕುಗೊಳಿಸಿ ಕೆಲವು ಮುಖ್ಯ ಸಿಬ್ಬಂದಿಗೆ ಮಾತ್ರ ಸಿಹಿಯನ್ನು ವಿತರಿಸಲಾಗಿತ್ತು. ಆದರೆ ಈ ಬಾರಿ ಕೋವಿಡ್ ಪ್ರಕರಣಗಳು ತೀವ್ರ ಕಡಿಮೆ ಇರುವ ಹಿನ್ನೆಲೆ ಹಲ್ವಾ ಸಮಾರಂಭವನ್ನು ನಡೆಸಲಾಯಿತು.


Nirmala Sitharaman
ಹಲ್ವಾ ಸಮಾರಂಭದ ಇತಿಹಾಸದ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯಿಲ್ಲ ಅಥವಾ ಹಿನ್ನಲೆಯಿಲ್ಲ. ಆದರೆ ಶುಭಕಾರ್ಯಕ್ಕೂ ಮುನ್ನ ಸಿಹಿ ಹಂಚುವ ಸಂಪ್ರದಾಯದಂತೆ ಈ ಸಂಪ್ರದಾಯವೂ ನಡೆದುಕೊಂಡು ಬಂದಿದೆ.


ಹಣಕಾಸು ಇಲಾಖೆ ಪ್ರಕಾರ ಸಿಬ್ಬಂದಿ ಬಜೆಟ್ ಪ್ರತಿ ಮುದ್ರಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಕಾರ್ಯಕ್ರಮವನ್ನು ಹಲ್ವಾ ಸಮಾರಂಭ ಎಂಬುದಾಗಿದೆ.

Published by:Monika N
First published: