ವಿಶ್ವದ ಶಕ್ತಿಶಾಲಿ ಪ್ರಭಾವಿ ಮಹಿಳೆಯ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದೆ. ಇನ್ನು ಈ ಪಟ್ಟಿಯಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಕೂಡ ಸ್ಥಾನ ಪಡೆದಿದೆ. ಇನ್ನು ಈ ಪಟ್ಟಿಯಲ್ಲಿ ಕಮಲಾ ಹ್ಯಾರಿಸ್, ಬಯೋಕಾನ್ ಸಂಸ್ಥಾಪಕ ಕಿರಣ್ ಮಂಜುಂದಾರ್ ಶಾ ಹಾಗೂ ಎಚ್ಸಿಎಲ್ ಎಂಟರ್ಪ್ರೈಸನ ಸಿಇಒ ರೋಶ್ನಿ ನಾಡರ್ ಮಲ್ಹೋತ್ರಾ ಸೇರಿದಂತೆ 100 ವಿಶ್ವದ ಶಕ್ತಿಶಾಲಿ ಮಹಿಳೆಯರಲ್ಲಿ ಫೋರ್ಬ್ಸ್ ಸ್ಥಾನ ಪಡೆದಿದ್ದಾರೆ. ಇನ್ನು ಜರ್ಮಲ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಮಾರ್ಕೆಲ್ 10ನೇ ಸ್ಥಾನ ಪಡೆದಿದ್ದಾರೆ. ಕಳೆದ ಬಾರಿ ಕೂಡ ಜರ್ಮನ್ ಚಾನ್ಸೆಲರ್ ಏಂಜೆಲಾ 10ನೇ ಸ್ಥಾನದಲ್ಲಿದ್ದಾರೆ. ಫೋರ್ಬ್ಸ್ 17ನೇ ವಾರ್ಷಿಕ ಪಟ್ಟಿಯಲ್ಲಿ 30 ದೇಶದ ಸುಮಾರು ನಾಲ್ಕು ತಲೆಮಾರುಗಳ ಮಹಿಳೆಯರು ಸ್ಥಾನ ಪಡೆದಿದ್ದಾರೆ.
ಇನ್ನು ಈ ಪಟ್ಟಿಯಲ್ಲಿ 10 ದೇಶದ ಮುಖ್ಯಸ್ಥರು, 38 ಸಿಇಒಗಳು ಮತ್ತು ಐದು ಮನರಂಜನಾ ಕ್ಷೇತ್ರದ ಮಹಿಳೆಯರು ಕೂಡ ಸ್ಥಾನ ಪಡೆದಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ವಿವಿಧ ವಯೋಮಾನದ, ವಿವಿಧ ದೇಶದ ಹಾಗೂ ವಯಸ್ಸಿನ ಅಂತರದ ಹಾಗೂ ಉದ್ಯೋಗದಲ್ಲಿ ವಿಭಿನ್ನತೆ ಸಾಧಿಸಿರುವ ಮಹಿಳೆಯರಿದ್ದು, ಅವರೆಲ್ಲಾ 2020ರ ಸವಾಲುಗಳನ್ನು ಎದುರಿಸಲು ತಮ್ಮ ವೇದಿಕೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಲ್ಲಿ ಒಂದಾಗಿದ್ದಾರೆ ಎಂದು ಫೋರ್ಬ್ಸ್ ತಿಳಿಸಿದೆ.
ಇನ್ನು ಈ ಪಟ್ಟಿಯಲ್ಲಿ ಸೀತಾರಾಮನ್ 41ನೇ ಸ್ಥಾನ ಗಳಿಸಿದರೆ ನಾಡರ್ ಮಲ್ಹೋತ್ರಾ 55ನೇ ಸ್ಥಾನ ಪಡೆದಿದ್ದಾರೆ. ಸ್ವಗಳಿಕೆಯಿಂದ ಭಾರತದ ಶ್ರೀಮಂತ ಮಹಿಳೆಯಾಗಿ ಗುರುತಿಸಿಕೊಂಡಿರುವ ಮಜುಂದಾರ್ ಶಾ 68ನೇ ಸ್ಥಾನ ಪಡೆದಿದ್ದಾರೆ. ಲ್ಯಾಂಡ್ ಮಾರ್ಕ್ ಗ್ರೂಪ್ನ ಅಧ್ಯಕ್ಷೆ ರೇಣುಕಾ ಜಗ್ತಿಯಾನಿ 98ನೇ ಸ್ಥಾನ ಪಡೆದಿದ್ದಾರೆ.
ಕಳೆದ ಹತ್ತು ವರ್ಷಗಳಿಂದಲೂ ಮರ್ಕೆಲ್ ಮೊದಲ ಸ್ಥಾನ ಕಾಯ್ದುಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಯೂರೋಪಿನ ನಾಯಕಿಯಾಗಿ ಅವರು ಬಿಂಬಿತರಾಗಿದ್ದಾರೆ.
ಇದನ್ನು ಓದಿ: ಬಗೆಹರಿಯದ ರೈತರ ಬಿಕ್ಕಟ್ಟು; ಅಮಿತ್ ಶಾ ಮಾತುಕತೆ ವಿಫಲ; ಇಂದಿನ ಸಭೆ ಬಹಿಷ್ಕಾರ
ಕೋವಿಡ್-19 ಹಿನ್ನಲೆ ಪರಿಣಾಮಕಾರಿ ಕಾರ್ಯದ ಫಲವಾಗಿ ಈ ಬಾರಿ ಹಲವಾರು ಮಹಿಳೆಯರು ಜಾಗತಿಕ ಪ್ರಶಂಸೆಯನ್ನು ಪಡೆದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಕಟ್ಟುನಿಟ್ಟಾದ ಲಾಕ್ಡೌನ್ ಮತ್ತು ಕ್ಯಾರೆಂಟೈನ್ ನಿಯಮವನ್ನು ಜಾರಿಗೆ ತರುವ ಮೂಲಕ ದೇಶವನ್ನು ಕೋವಿಡ್ನ ಎರಡನೇ ಅಲೆಯಿಂದ ರಕ್ಷಿಸಿದ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆನಾ 32ನೇ ಸ್ಥಾನ ಪಡೆದಿದ್ದಾರೆ.
ತೈವಾನ್ನಲ್ಲಿ ಸೋಂಕು ಪತ್ತೆ ಹಚ್ಚಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ ತ್ಸೈ ಇಂಗ್-ವೆನ್ ಕೂಡ 37ನೇ ಸ್ಥಾನ ಪಡೆದಿದ್ದಾರೆ. ಇನ್ನು ಈ ಬಾರಿ ಈ ಫೋರ್ಬ್ಸ್ ಪಟ್ಟಿಯಲ್ಲಿ 17 ಮಂದಿ ಹೊಸಬರು ಸ್ಥಾನ ಪಡೆದಿದ್ದಾರೆ. ಇವರೆಲ್ಲಾ ಕೋವಿಡ್ ಸಾಂಕ್ರಮಿಕವನ್ನು ಸಮರ್ಥವಾಗಿ ನಿಭಾಯಿಸಿ ಮನ್ನಣೆ ಪಡೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ