ನಿರ್ಭಯಾ ಪ್ರಕರಣ: ಇಂದೂ ಅಪರಾಧಿಗಳ ನೇಣುಶಿಕ್ಷೆ ಜಾರಿ ಇಲ್ಲ - ಕೋರ್ಟ್ ಆದೇಶ

ಗಲ್ಲುಶಿಕ್ಷೆಯನ್ನು ಮುಂದೂಡುವಂತೆ ದೋಷಿಗಳಾದ ಪವನ್​ ಗುಪ್ತಾ, ವಿನಯ್​ ಕುಮಾರ್​ ಶರ್ಮಾ ಮತ್ತು ಅಕ್ಷಯ್​ ಕುಮಾರ್​​ ನ್ಯಾಯಾಲಯವನ್ನು ಒತ್ತಾಯಿಸಿದ್ದರು. ಅಪರಾಧಿ ವಿನಯ್​ ಕ್ಷಮಾದಾನ ಅರ್ಜಿ ವಿಚಾರಣೆ ಇನ್ನೂ ಸಹ ಬಾಕಿಯಿದೆ ಎಂದು ವಕೀಲ ಎಪಿ ಸಿಂಗ್ ಹೇಳಿದ್ದಾರೆ.

ನಿರ್ಭಯಾ ಅತ್ಯಾಚಾರಿಗಳು

ನಿರ್ಭಯಾ ಅತ್ಯಾಚಾರಿಗಳು

 • Share this:
  ನವದೆಹಲಿ(ಜ.31): ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ನಾಲ್ವರು ದೋಷಿಗಳಿಗೆ ನಾಳೆ ನಿಗದಿಯಾಗಿದ್ದ ಗಲ್ಲುಶಿಕ್ಷೆಯನ್ನು ಮುಂದೂಡಲಾಗಿದೆ. ಫೆಬ್ರವರಿ 1 ಬೆಳಗ್ಗೆ 6 ಗಂಟೆಗೆ ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ದಿನಾಂಕ ನಿಗದಿ ಮಾಡಲಾಗಿತ್ತು.  ಅಪರಾಧಿಗಳು ತಮಗೆ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ತಡೆಯಲು ಯತ್ನಿಸಿದ ಬಳಿಕ ದೆಹಲಿ ಕೋರ್ಟ್​​ ದೋಷಿಗಳ ಡೆತ್​ ವಾರೆಂಟ್​​ನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

  ನಾಲ್ವರು ದೋಷಿಗಳ ಗಲ್ಲುಶಿಕ್ಷೆ ಮುಂದೂಡಲಾಗಿದ್ದು, ಇನ್ನೂ ಸಹ ಹೊಸ ದಿನಾಂಕ ನಿಗದಿಯಾಗಿಲ್ಲ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಶುಕ್ರವಾರ ತಿಹಾರ್ ಜೈಲಿನ ಅಧಿಕಾರಿಗಳು ಮತ್ತು ಅಪರಾಧಿಗಳ ಪರ ವಕೀಲರ ವಾದಗಳನ್ನು ಆಲಿಸಿದ್ದರು. ಮರಣದಂಡನೆ ತಡೆಹಿಡಿದಿದ್ದ ಮೂರು ಅಪರಾಧಿಗಳ ಅರ್ಜಿಯನ್ನು ಪ್ರಶ್ನಿಸಿ, ತಿಹಾರ್ ಜೈಲಿನ ಅಧಿಕಾರಿಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಒಬ್ಬ ಅಪರಾಧಿಯ ಕ್ಷಮಾದಾನ ಅರ್ಜಿ ಮಾತ್ರ ಬಾಕಿ ಉಳಿದಿದೆ ಮತ್ತು ಇತರರನ್ನು ಗಲ್ಲಿಗೇರಿಸಬಹುದಾಗಿದೆ ಎಂದು ಹೇಳಲಾಗಿತ್ತು.

  ಅಮಿತ್ ಶಾ-ಬಿಎಸ್​ವೈ ಭೇಟಿ ಮುಕ್ತಾಯ; 11 ಶಾಸಕರ ಪೈಕಿ 10 ಮಂದಿಗೆ ಸಚಿವ ಸ್ಥಾನ

  ಆದರೆ ಅಪರಾಧಿಗಳ ಪರ ವಕೀಲರು ಜೈಲು ಅಧಿಕಾರಿಗಳ ಮಾತಿಗೆ ಒಪ್ಪಲಿಲ್ಲ. ಒಬ್ಬ ಅಪರಾಧಿಯ ಕ್ಷಮಾದಾನ ಮನವಿ ಬಾಕಿ ಇರುವಾಗ, ಇತರರನ್ನು ಗಲ್ಲಿಗೇರಿಸಲಾಗುವುದಿಲ್ಲ ಎಂಬ ನಿಯಮ ಇದೆ ಎಂದು ಹೇಳಿದ್ದರು.

  ಗಲ್ಲುಶಿಕ್ಷೆಯನ್ನು ಮುಂದೂಡುವಂತೆ ದೋಷಿಗಳಾದ ಪವನ್​ ಗುಪ್ತಾ, ವಿನಯ್​ ಕುಮಾರ್​ ಶರ್ಮಾ ಮತ್ತು ಅಕ್ಷಯ್​ ಕುಮಾರ್​​ ನ್ಯಾಯಾಲಯವನ್ನು ಒತ್ತಾಯಿಸಿದ್ದರು. ಅಪರಾಧಿ ವಿನಯ್​ ಕ್ಷಮಾದಾನ ಅರ್ಜಿ ವಿಚಾರಣೆ ಇನ್ನೂ ಸಹ ಬಾಕಿಯಿದೆ ಎಂದು ವಕೀಲ ಎಪಿ ಸಿಂಗ್ ಹೇಳಿದ್ದಾರೆ.

  ಗಲ್ಲುಶಿಕ್ಷೆಗೆ ಗುರಿಯಾಗಿರುವ ನಾಲ್ಕನೇ ದೋಷಿ ಮುಕೇಶ್​ ಕುಮಾರ್​​ ಸಲ್ಲಿಸಿದ್ದ ಕ್ಷಮಾಪಣಾ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಜನವರಿ 17ರಂದು ​​ತಿರಸ್ಕರಿಸಿದ್ದರು.

  ಕುಡಿಯುವ ನೀರು, ಇ-ಸ್ಕೂಟರ್, 2 ರೂಗೆ ಗೋಧಿ ಹಿಟ್ಟು: ದೆಹಲಿ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯ ಹೈಲೈಟ್ಸ್
  First published: